ಆಯ್ದ ಗಾದೆಮಾತುಗಳು : (೧೧-೨೦)
ನಾವು ತಿಳಿಯದ ಎಷ್ಟೋ ಗಾದೆ ಮಾತುಗಳು ಇರುತ್ತವೆ. ಈ ಗಾದೆಗಳಲ್ಲಿ ಹೊಸ ವಿಚಾರಗಳು , ಹೊಸ ನುಡಿಗಟ್ಟುಗಳು ಸಂಪದ ಓದುಗರಿಗೆ ಸಿಕ್ಕಾವು ಎಂಬ ಆಸೆಯಿಂದ ಕಂತುಗಳಲ್ಲಿ ನನಗೆ ವಿಶಿಷ್ಟವೆನಿಸಿದ ಗಾದೆಮಾತುಗಳನ್ನು ಇಲ್ಲಿ ಕಂತುಗಳಲ್ಲಿ ಕೊಡುತ್ತಿದ್ದೇನೆ.
೧೧. ಅಂಟು ತಪ್ಪಿದರೆ ನಂಟು ತಪ್ಪೀತೆ? ( ಬಳಕೆ ತಪ್ಪಿದರೂ ನೆಂಟತನ ತಪ್ಪುವದಿಲ್ಲ)
೧೨. ಅಂಬಲಿ ಕುಡಿದರೂ ಇಂಬಾಗಿ ಕುಡಿಯಬೇಕು .
೧೩. ಅಗಸನಿಗೊಂದು ಎದ್ದ ಕಲ್ಲು , ಪೂಜಾರಿಗೊಂದು ಬಿದ್ದ ಕಲ್ಲು.
೧೪. ಅಚ್ಚಕ್ಕಿ ಇದ್ದಾಗ ನುಚ್ಚಕ್ಕಿ ಹಂಗೇನು?
೧೫. ಅಜ್ಜಿಗೆ ಅರಿವೆ ಚಿಂತೆ ; ಮೊಮ್ಮಗಳಿಗೆ ಮಿಂಡನ ಚಿಂತೆ.
೧೬. ಅಜ್ಜಿಗೆ ಮೊಮ್ಮಗ ಕೆಮ್ಮಲು ಕಲಿಸಿದನಂತೆ
೧೭. ಅಡಿಗೆ ಬಲ್ಲವನ ಹೆಂಡತಿಯಾಗಬಾರದು ; ಕೆಲಸ ಬಲ್ಲವನ ಆಳಾಗಬಾರದು.
೧೮. ಅತ್ತೆ ಒಡೆದ ಪಾತ್ರೆಗೆ ಬೆಲೆಯಿಲ್ಲ .
೧೯. ಅತ್ತೆ ಸತ್ತು ಆರು ತಿಂಗಳಿಗೆ ಸೊಸೆ ಕಣ್ಣಲ್ಲಿ ನೀರು ಬಂತು. (ಅತ್ತೆ ಒಳ್ಳೆಯ ಗುಣ ಅರಿವಾಯಿತು ಎಂದರ್ಥ).
೨೦.ಅಧಿಕಾರಕ್ಕೆ ತಕ್ಕ ಬುದ್ಧಿಯಿಲ್ಲ ; ಸಂಬಳಕ್ಕೆ ತಕ್ಕ ದುಡಿಮೆಯಿಲ್ಲ; ( ಸರಕಾರೀ ಅಧಿಕಾರಿಗಳ ಕುರಿತು?)
೨೦. ಅಮ್ಮನವರು ಪಟ್ಟಕ್ಕೆ ಬಂದಾಗ ಅಯ್ಯನವರು ಕೈಲಾಸಕ್ಕೆ ಹೋದರು . ( ಮುದುಕನೊಡನೆ ಎಳೆ ಯುವತಿಯ ಮದುವೆಯ ಫಲ.)