ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: Basic page
March 11, 2006
ಮನದಲ್ಲಿ ಅದ್ವೈತ ದ್ವೈತಗಳ ದ್ವಂದ್ವ ತಾಕಲಾಟದಿ ಸಿಲುಕಿಹ ನಾ ಹುಲು ಮಾನವ ಜಾತದಿಂದ ಅದ್ವೈತ ನಂಬಿದವ ಜೀವನಾನುಭವದಿಂದ ದ್ವೈತ ನಂಬುತಿರುವ ಒಂದಕೆ ಒಂದು ಸೇರದೇ ಎರಡಾಗುವುದೇ ಎರಡರಲಿ ಒಂದರ ಅಂಶ ಸಂಕಲನವಾಗಿಲ್ಲವೇ ಆತ್ಮ ಪರಮಾತ್ಮದಲಿ ಲೀನವಾಗದೇ ಮುಕುತಿ ದೊರೆಯುವುದೇ ಮನಸು ಹೃದಯ ಸೇರದೇ ವ್ಯಕ್ತಿ ಪೂರ್ಣನಾಗುವನೇ ಕಹಿಯ ರುಚಿಸದೇ ಸಿಹಿಯ ಮರ್ಮ ತಿಳಿಯುವುದೇ ತಪ್ಪುಗಳಿಲ್ಲದೇ ಒಪ್ಪುಗಳ ನಿರ್ಧರಿಸಲಾಗುವುದೇ ನರಕವಿಲ್ಲದ ನಾಕ ಯಾವುದಾದು ಹೇಳಿ ನೌಕರನಿಲ್ಲದೇ ಮಾಲಿಕನಾಗನು ನೀ ತಿಳಿ ಹೆಣ್ಣು ಗಂಡುಗಳ…
ಲೇಖಕರು: suchara
ವಿಧ: Basic page
March 10, 2006
ಈ ಕವನಕ್ಕೆ ಸ್ವಲ್ಪ ಪೀಠಿಕೆ ಬೇಕು. ನಾನು ಇದನ್ನು ಬರೆದದ್ದು ೨೦೦೦ ದ ಡಾಟ್ ಕಾಮ್ ಗುಳ್ಳೆ ಒಡೆದ ಸಮಯದಲ್ಲಿ. ಜಾವವನ್ನು ನಂಬಿ ಅಮೇರಿಕಾಕ್ಕೆ ಹಾರಿದ್ದ ಅನೇಕರು ಕೆಲಸ ಕಳೆದುಕೊಂದು ಕಷ್ಟ ಪಡುತ್ತಿದ್ದ ಕಾಲವದು. ಈಗ ಓದಿ. ಕೆಳಗಡೆ, ಕೆಲವು ಪ್ರಯೋಗಗಳ ಅರ್ಥ ಕೊಟ್ಠಿದ್ದೇನೆ. ಬೆಳಗಿನ ಜಾವದ ಕನಸು ============== ಬೆಳಗಿನ ಜಾವದ ಕನಸು ನನಸಾಗುವುದಂತೆ ಆದರೆ, ಜಾವ ಬೆಳಗುವ ಕನಸು ? "ಬೆಳ್ಳಗಿರುವುದೆಲ್ಲ ಹಾಲಲ್ಲ" "ಇ ಇರುವುದೆಲ್ಲ ಕಾಮ್ಯವಲ್ಲ" ಚುಕ್ಕೆಯ ಕಾಮಕ್ಕೆ ಮರುಳಾಗಿ ಹಾರಿದರು ಎಲ್ಲೆ…
ಲೇಖಕರು: shreekant.mishrikoti
ವಿಧ: Basic page
March 10, 2006
ಗಾದೆಮಾತುಗಳು ಜನರ ಅನುಭವದ ಸಾರ ಸಂಗ್ರಹ. 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು' ಎಂಬ ಗಾದೆಯೇ ಗಾದೆಗಳ ಮಹತ್ವವನ್ನು ನೋಡುತ್ತದೆ. ಸಾಮಾನ್ಯ ಜನರ ನಡುವೆ ಬಳಕೆಯಲ್ಲಿರುವ ಈ ಮಾತುಗಳಲ್ಲಿ ಜೀವನಾನುಭವ ಅಷ್ಟೇ ಅಲ್ಲದೇ ಕಾವ್ಯ ಗುಣವನ್ನೂ ಅಲ್ಲಲ್ಲಿ ಕಾಣಬಹುದು. ನಾನು ಇಲ್ಲಿ ಕೊಡುತ್ತಿರುವ ಗಾದೆಮಾತುಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ಆರಿಸಿದ್ದೇನೆ. ೧. ಅಂಗಾಲಿಗೆ ತ್ರಾಣವಿದ್ದರೆ ಬಂಗಾಲಕ್ಕೆ ಹೋಗಬಹುದು. ೨. ಅಂಗಡಿ ಮಾರಿ ಗೊಂಗಡಿ ಹೊದ್ದ ಹಾಗೆ. ೩. ಅಂಗಾಲಿಗೆ ಹೇಸಿಕೆಯಿಲ್ಲ , ಕರುಳಿಗೆ…
ಲೇಖಕರು: shreekant.mishrikoti
ವಿಧ: Basic page
March 10, 2006
೩೪. ಶಾಸ್ತ್ರ ಜ್ಞಾನ ಅಪಾರವಾದದ್ದು , ನಮ್ಮ ಆಯುಷ್ಯ ಬಹಳ ಕಡಿಮೆ , ಅದರಲ್ಲಿ ವಿಘ್ನಗಳೂ ಬಹಳ . ಆದ್ದರಿಂದ ನಾವು ಹಾಲೂ ನೀರೂ ಬೆರೆತಿರುವಲ್ಲಿ ಹಂಸವು ನೀರನ್ನು ಬಿಟ್ಟು ಹಾಲನ್ನಷ್ಟೇ ಕುಡಿಯುವಂತೆ ಮುಖ್ಯವಾದದ್ದನ್ನು ಸ್ವೀಕರಿಸಬೇಕು , ಮುಖ್ಯವಲ್ಲದ್ದನ್ನು ಬಿಟ್ಟು ಬಿಡಬೇಕು. ಮೂಲ :- ಅನಂತಪಾರಂ ಕಿಲ ಶಬ್ದ ಶಾಸ್ತ್ರಂ ಸ್ವಲ್ಪಂ ತಥಾಯು: ಬಹವಶ್ಚ ವಿಘ್ನಾ: | ಸಾರಂ ತತೋ ಗ್ರ್‍ಆಹ್ಯಮಪಾಸ್ಯಫಲ್ಗು ಹಂಸೋ ಯಥಾ ಕ್ಷೀರಮಿವ ಅಂಬುಮಧ್ಯಾತ್ || ೩೫. ಶ್ರುತಿಗಳು , ಸ್ಮೃತಿಗಳು ಬೇರೆ ಬೇರೆಯಾಗಿ…
ಲೇಖಕರು: shreekant.mishrikoti
ವಿಧ: Basic page
March 10, 2006
'ಚಿನ್ನಾರಿ ಮುತ್ತ' ಚಿತ್ರದ ಹಾಡುಗಳು ( ' ಎಷ್ಟೊಂದ್ ಜನ ಯಾರು ನಮ್ಮೋರು? , ಹೇಗಿದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ, ಚಂದ್ರ ನಿಂಗೆ ಕರುಣೆ ಇರ್ಲಿ ) ಕೇಳಿರಬಹುದು . ಅವುಗಳನ್ನು ಬರೆದವರು ಶ್ರೀ ಎಚ್.ಎಸ್.ವೆಂಕಟೇಶಮೂರ್ತಿ ಅವರು . ಈಗ ಅವರ ಮೂವತ್ತು ವರ್ಷಗಳ ಕಾವ್ಯ ಈಗ 'ಮೂವತ್ತು ಮಳೆಗಾಲ' ಎಂಬ ಹೆಸರಿನಲ್ಲಿ ಮೂರು ಭಾಗಗಳಲ್ಲಿ ಪ್ರಕಟವಾಗಿದೆ. (ಪ್ರಕಾಶಕರು - 'ಸಂವಾದ', ಮಲ್ಲಾಡಿಹಳ್ಳಿ-೫೭೭೫೩೧ , ಚಿತ್ರದುರ್ಗ ಜಿಲ್ಲೆ. ) ಪ್ರತಿಯೊಂದು ಸಂಪುಟದ ಬೆಲೆ : ೨೫೦ ರೂಪಾಯಿಗಳು.…
ಲೇಖಕರು: suchara
ವಿಧ: Basic page
March 10, 2006
ಸುಚರ ಅವರ ಕೆಟ್ಟದಾಗಿದ್ದ ಕವನವನ್ನ (ಅವರ ಪ್ರಕಾರ), ಇನ್ನಷ್ಟು ವಿರೂಪಗೊಳಿಸಿ ಹಾಕಿದ್ದೇವೆ. =============== ಈಗಿನ ಮದುವೆಗಳಲ್ಲಾಗುವ ಸಾಮಾನ್ಯ ಅನುಭವ. ನಿಮ್ಮೆಲ್ಲರ ಅನುಭವವು ಹೀಗೆ ಇರಬಹುದು ಎಂದು ಅಂದು ಕೊಂಡಿದ್ದೇನೆ. ಮದುವೆಗೆ ಹೋಗಿದ್ದೆ ನಾನು =============== ಮದುವೆಗೆ ಹೋಗಿದ್ದೆ ನಾನು ಹೆಣ್ಣು ಗಂಡು ನೋಡಲೆಂದು ಆದರೆ ಕಾಣಿಸಿದ್ದು ವಿಡಿಯೋದವನ ಗೂನು ಬೆನ್ನು ಕೇಳಿಸಿದ್ದು ಕ್ಯಾಮೆರಾದವನ instruction'ನ್ನು -ಸುಚರ
ಲೇಖಕರು: sinchanabhat
ವಿಧ: Basic page
March 10, 2006
ನನ್ನ ಕಾರು ಚಿಕ್ಕದು ಆ ಲಾರಿಗಿಂತಾ ಮಾರಿಬಿಡಲಾ ಅಂತಾ ಒಟ್ಟಿನಲಿ ತಿಳಿಯಬೇಕು ಅವಳಿಗೆ ನಾ ಬುದ್ದಿವಂತಾ...:) ----------------------------------------------------------------------ಒಮ್ಮೆ ಹೋಗಿ ನೋಡಿದೆ ಅ ಕೊಳದ ಬಳಿಗೆ ತಿಳಿದುಹೋಯಿತು ನನಗೆ ಆ ರಾತ್ರಿ ಇಳಿದಿದ್ದಾನೆ ಚಂದ್ರ ಧರೆಗೆ ಏನುಕಾದಿದೆಯೋ ನನಗೆ ನನ್ನವಳು ಪ್ರೀತಿಸುತ್ತಾಳೆ ಅವನ ಒಳಗೊಳಗೆ... ---------------------------------------------------------------------- ಈಗ ಹೀಗೆ ತೂರುತ್ತಾ ಹೋದರೆ…
ಲೇಖಕರು: hpn
ವಿಧ: ಬ್ಲಾಗ್ ಬರಹ
March 10, 2006
ಮುಂಚೆ: (ಪುಟ್ಟವನಾಗಿದ್ದಾಗ) 4:30 PM - ಸಾಯಂಕಾಲ 8:00 PM - ರಾತ್ರಿ 10:00 PM - ತೀರ ಲೇಟು (ಅಷ್ಟು ಹೊತ್ತಾದ ಮೇಲೂ ಎದ್ದಿದ್ರೆ ಅಪ್ಪ ಬೈತಿದ್ರು - 'ಹೋಗಿ ಮಲಕ್ಕೋ, ಹೊತ್ತು ಗೊತ್ತು ಏನೂ ಇಲ್ಲ, ಬೆಳಿಗ್ಗೆ ಬೇಗ ಏಳಬೇಕು!' ಅಂತ) ಆಮೇಲೆ: (ಶಾಲೆಯಲ್ಲಿ ಓದುತ್ತಿದ್ದಾಗ) 6:30 PM - ಸಾಯಂಕಾಲ 10:00 PM - ರಾತ್ರಿ 12:00 PM - ಇಷ್ಟೊತ್ತಿಗೆ ದೆವ್ವ ಬರುತ್ತದೆ ಎಂದು ಟಿವೀಲಿ ಬರುತ್ತಿದ್ದ ಸಿನಿಮಾಗಳು ಹೆದರಿಸುತ್ತಿದ್ದುದರಿಂದ ಈ‌ ಟೈಮಿಗಿಂತ ಹೆಚ್ಚು ಹೊತ್ತು ಎಚ್ಚರವಿದ್ದದ್ದು ಕಡಿಮೆ.…
ಲೇಖಕರು: sinchanabhat
ವಿಧ: ಬ್ಲಾಗ್ ಬರಹ
March 09, 2006
ಈಗಷ್ಟೇ ಬಂದಿದ್ದ ಮೇಲ್ ನಿಂದ "ಲೋಕ ಪರಿತ್ರಾಣ" ಎನ್ನುವ ಯುವಜನರ ಹೊಂಗನಸಿನ ಕೂಸಿನ ಬಗ್ಗೆ ತಿಳಿಯಿತು. ಇದು ಪ್ರತಿಯೊಬ್ಬ ಯುವಜನರೂ ಕೈ ಜೋಡಿಸಲೇ ಬೇಕಾದಂತ ವಿಷಯವೆನಿಸಿತು. ಹಿಂದು ಪತ್ರ್ರಿಕೆಯಲ್ಲಿ ಬಂದಿದ್ದ ಅವರ ಸಂದರ್ಶನವನ್ನು ಸಂಪದದ ಮಿತ್ರರೊಡನೆ ಹಂಚಿಕೊಳ್ಳುತ್ತಿದ್ದೇನೆ.ದಯವಿಟ್ಟು ಈ ಕೆಳಗಿನ ವೆಬ್ ಪೇಜನ್ನು ನೋಡಿ.  http://www.hindu.com/2006/03/03/stories/2006030315510300.htm  :  
ಲೇಖಕರು: Satyaprakash.H.K.
ವಿಧ: ಬ್ಲಾಗ್ ಬರಹ
March 09, 2006
ಬೂಸಾ(ಫೈಬರ್) ೨೮-೧೦-೨೦೦೫ ಬೂಸಾ ತಿನ್ನಿರಿ, ಎಂದೆಂದಿಗೂ ಡಾಕ್ಟರರಿಗೆ ಸುರಿಯದೆ ಆರೋಗ್ಯವಾಗಿರಿ. ಕೆಂಪು ಅಕ್ಕಿಯ ಬೂಸಾ ದೇಹಕ್ಕೆ ಮತ್ತು ಮನಸ್ಸಿಗೆ ತುಂಬಾ ತುಂಬಾ ಒಳ್ಳೆಯದು. ಇದರಲ್ಲಿ ಹೇರಳವಾಗಿ ಜೀವಸತ್ವ(ನ್ಯೂಟ್ರಿಶನ್) ಗಳಿವೆ. ಅತ್ಯಧಿಕ ಪೌಷ್ಟಿಕಾಂಶಗಳು ಇವೆ. ನೀವು ಇದನ್ನು ತಿನ್ನುವುದರಿಂದ ನಿಮಗೆ ಕುದುರೆಗಿರುವಷ್ಟು ಬಲ, ಆನೆಗಿರುವಷ್ಟು ಬಲ ಬರುತ್ತದೆ. ಮೆದುಳು ಚುರುಕಾಗುತ್ತದೆ. ದೇಹದಲ್ಲಿ ಸೇರಿರುವ ಟಾಕ್ಸಿನ್(ವಿಷ) ಒಂದೇ ದಿನದಲ್ಲಿ ಹೊರದೂಡಲ್ಪಡುತ್ತದೆ.…