ಎಲ್ಲ ಪುಟಗಳು

ಲೇಖಕರು: klnsimha
ವಿಧ: ಬ್ಲಾಗ್ ಬರಹ
February 13, 2006
ಕನ್ನಡ ಪ್ರಭ ದಲ್ಲಿನ ಜೋಗಿಯವರ -ಮಾಯಾಲೋಕ ದ ಬಗೆಗಿನ ಲೇಖನ ಓದಿದೆ. ಇತ್ತೀಚೆಗೆ ಕನ್ನಡ ಸಾಹಿತ್ಯಕ್ಕೆ ಸಾಕಷ್ಟು ಗಮನಕೊಡುತ್ತಿರುವ ಕನ್ನಡ ಪ್ರಭದ ಸಾಪ್ತಾಹಿಕ ಪುರುವಣಿಯಲ್ಲಿ ಅದೂ ತೇಜಸ್ವಿಯವರ ಮಹತ್ವಪೂರ್ಣ ಕಾದಂಬರಿ ಬಗ್ಗೆ ಇಂತಹ ಸಾಮನ್ಯ ದರ್ಜೆಯ ಅದೂ ಮುಖಪುಟದಲ್ಲಿ ಪ್ರಕಟವಾಗಿರುವುದು ನೋಡಿ ಬೇಸರವಾಯಿತು.
ಲೇಖಕರು: olnswamy
ವಿಧ: Basic page
February 12, 2006
ಸಂಪದದ ಗೆಳೆಯರಿಗಾಗಿ ಈ ಬಾರಿ ಕನ್ನಡದ ಕವಿ ಡಾ|| ಜಿ ಎಸ್ ಶಿವರುದ್ರಪ್ಪನವರ ಸಂದರ್ಶನ. ತಾವು ಅನೇಕರು ಜಿ ಎಸ್ ಎಸ್ ಅವರ ಎಷ್ಟೋ ಕವಿತೆಗಳನ್ನು ಓದಿದ್ದೀರಿ, ಹಾಡುಗಳನ್ನ ಕೇಳಿದ್ದೀರಿ, ಕನ್ನಡದ ತುಂಬ ಜನ ಪ್ರೀತಿಯನ್ನು ಗಳಿಸಿಕೊಂಡಿರುವ, ನಮ್ಮ ಎಷ್ಟೋ ಭಾವನೆಗಳಿಗೆ ಮಾತನ್ನು ಕೊಟ್ಟಿರುವ ಬಹಳ ಮುಖ್ಯವಾದ ಕವಿ ಅವರು. ಮೊನ್ನೆ ತಾನೆ, ಅಂದರೆ ಫೆಬ್ರುವರಿ ೭ನೇ ತಾರೀಖು ನಮ್ಮ ಜಿ ಎಸ್ ಎಸ್ ಅವರಿಗೆ ೮೦ ವರ್ಷ ತುಂಬಿ, ಈಗ ೮೧ರ ಹರೆಯಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ನಡೆದ ಈ ಸಂದರ್ಶನದಲ್ಲಿ: ೧.…
ಲೇಖಕರು: ಶಿವ
ವಿಧ: ಬ್ಲಾಗ್ ಬರಹ
February 12, 2006
ಇದು ಸಿನೆಮಾ ವಿಮರ್ಶೆ ಮಾಡುವ ಪ್ರಯತ್ನ ಅಲ್ಲ. 'ರಂಗ್ ದೇ ಬಸಂತಿ' ನಾನು ಇತ್ತೇಚೆಗೆ ನೋಡಿದ ಒಂದು ಒಳ್ಳೆಯ ಚಲನಚಿತ್ರ.ಸ್ಯೂ(Sue), ತನ್ನ ಅಜ್ಜನ ಡೈರಿಯನ್ನು ಆಧಾರವಾಗಿಟ್ಟುಕೊಂಡು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಭಾಗವಹಿಸಿದ ಕ್ರಾಂತಿಕಾರಿಗಳ ಕುರಿತು ಸಾಕ್ಶ್ಯಚಿತ್ರ ಮಾಡಲು ಭಾರತಕ್ಕ್ತೆ ಬರುವುದರೊಂದಿಗೆ ಕತೆ ಪ್ರಾರಂಭವಾಗುತ್ತದೆ.ತನ್ನ ಚರಿತ್ರೆಯೊಂದಿಗೆ ಗುರುತಿಸಿಕೊಳ್ಲಲಾಗದ ಗೆಳೆಯರ ಗುಂಪೊಂದು(Products of modern India), ಸಾಕ್ಶ್ಯಚಿತ್ರದಲ್ಲಿ ಅಭಿನಯಿಸುತ್ತಾ, ಭಗತ್ ಸಿಂಗ್,…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
February 12, 2006
ಊರಿಗೆ ಹೋದ ತಕ್ಷಣ ತಿಳಿದ ವಿಷಯವೇನೆಂದರೆ - ೨-೩ ದಿನಗಳ ಹಿಂದೆ ನನ್ನ ತಂದೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ೨೦ ವರ್ಷಗಳ ಹಿಂದೆ ಅಂದರೆ ೧೯೬೪ರಲ್ಲಿ ನನಗಿನ್ನೂ ೪ ವರ್ಷವಾಗಿದ್ದಾಗ ಹೀಗೊಮ್ಮೆ ಆಗಿತ್ತಂತೆ. ಆಗ ಎಡಭಾಗಕ್ಕೆ ಪಾರ್ಶ್ವವಾಯುವಾಗಿ ಅಂಕೋಲಕ್ಕೆ ಹೋಗಿ ನಾಟಿ ವೈದ್ಯರಿಂದ ಔಷೋಧೋಪಚಾರ ಮಾಡಿಸಿ ಸರಿ ಹೋಗಿದ್ದರಂತೆ. ಈಗ ಮತ್ತೆ ಹೀಗಾಗಿದ್ದಾಗ (ಈ ಸಲ ಶರೀರದ ಬಲಭಾಗಕ್ಕೆ ಅಟ್ಯಾಕ್ ಆಗಿತ್ತು), ತಮ್ಮನ್ನು ಅಂಕೋಲಕ್ಕೆ ಕರೆದೊಯ್ಯು ಎಂದು ನನಗೆ ಹೇಳಿದ್ದರು. ಆಸ್ಪತ್ರೆಗೆ…
ಲೇಖಕರು: bhatpp
ವಿಧ: ಚರ್ಚೆಯ ವಿಷಯ
February 12, 2006
ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ ಸೂರ್ಯೋದಯ ಚಂದ್ರೋದಯ ದೇವರ ದಯೆ ಕಾಣೋ .. ಈ ಪದ್ಯ ಬರೆದ ಕವಿ ಯಾರು; ಕುವೆಂಪುರವರೊ ಅಥವಾ ಶಿವರುದ್ರಪ್ಪನವರೊ?
ಲೇಖಕರು: tvsrinivas41
ವಿಧ: Basic page
February 11, 2006
ಈ ದೇಹದಲಿಹ ಆತ್ಮ ನಿನ್ನಲಿಹ ಚಿಂತನೆ ಅವನಲ್ಲಿಹ ಮನ ಅವಳಲ್ಲಿಹ ಗುಣ ಪ್ರಾಣಿಗಳಲಿರುವ ಪ್ರಾಣ ತರುಗಳಲಿರುವ ಶ್ವಾಸೋಚ್ಛ್ವಾಸ ನಿಸರ್ಗದಲಿಹ ಅನವರತ ಸ್ಪಂದನ ಅಚಲ ನೆಲ ನಡುಗಿ ನಲುಗಿಸಿತು ಶಾಂತ ಸಮುದ್ರ ಎದ್ದು ಎದ್ದವರ ಮಲಗಿಸಿತು ತಟಸ್ಥ ಪರ್ವತ ಹೊಗೆಯುಗುಳಿತು ಬೂದಿ ಕಾರಿತು ಕೆಂಡ ಉದುರಿಸಿತು ಅವುಗಳ ಚೇತನ ಸ್ವರೂಪವೂ ಆತ್ಮವೇ? ಗೋರಿಯಲಿ ಮಲಗಿಹ ಶವ ಎದ್ದು ಬಂದೀತೇ? ತಟಸ್ಥನಾಗಿರುವನ ತಟ್ಟಿ ಎಬ್ಬಿಸೀತೇ? ಅಚಲ ಮೇಜು ಗಣಕ ಚಿಂತಿಸೀತೇ ಮುಖಕೆ ಮುಖ ಕೊಟ್ಟು ಸವಾಲೆಸೆದೀತೇ? ಪ್ರಾಣವಿಹೀನ ಶರೀರ…
ಲೇಖಕರು: sinchanabhat
ವಿಧ: Basic page
February 11, 2006
ಮುಳುಗಿದ್ದಾನೆ ಸೂರ್ಯ ಹುಟ್ಟುವುದಿಲ್ಲ ಚಂದ್ರ ಅಮಾವಸ್ಯೆಯ ರಾತ್ರಿ ಅಂಧಕಾರದಲ್ಲಿ ಧರಿತ್ರಿ.. "ಅಬ್ಬಾ ಇದೆಂತಹ ವಿಪರ್ಯಾಸ",ಈ ಭುವಿ ನಗುತ್ತಲೇ ಇದೆ.ಮಲಗಿದವರೆಲ್ಲ ಮಲಗಿದಂತೇ ಇದ್ದಾರೆ..ಆ ಮಲ್ಲಿಗೆಯೊಬ್ಬಳು ಮಾತ್ರ ಘಮಘಮಿಸುತ್ತಿದ್ದಾಳೆ.ಮೊಗ್ಗೊಳಗಿನ ಮಕರಂದ ಎಸಳಿನಾಚೆ ಇಣುಕುತ್ತಿದೆ. ದಿನವೂ ಹೀಗೆ,ಒಂದು ಹೆಚ್ಚು ಒಂದು ಕಡಿಮೆ. ಆ ದೂರದ ಹೆಬ್ಬಂಡೆ ಇಂದು ಪರ್ವತದಂತೆ ಅನಿಸುತ್ತಿಲ್ಲ.ಅಸಲಿಗೆ ಅದಕ್ಕೀ ರಾತ್ರಿ ಅಸ್ತಿತ್ವವೇ ಇಲ್ಲ.ಎಲ್ಲವೂ ಕಪ್ಪು ಕಪ್ಪು,ಬೂದಿಯೂ ಆಗದ ಮಸಿಯಂತೆ,ಏನೂ ಇಲ್ಲ ;…
ಲೇಖಕರು: Gurudatta N S
ವಿಧ: Basic page
February 10, 2006
ಕಂದಾ, ಅಲ್ಲೇನು ಮಾಡುತಿರುವೆ? ನಿದ್ದೆಯೋ..? ಇಲ್ಲಾ ಬುದ್ಧನಂತೆ ವಿಶ್ವಶಾಂತಿಗಾಗಿ ತಪವೋ..? ಕೈಗಳು ನೋವದೇ? ಕಾಲುಗಳ ಉದ್ದ ನೀಡಿ ಒಮ್ಮೆ ಮೈ ಮುರಿಯಬೇಕೆನಿಸದೇ? ಕಣ್ಣು ರೆಪ್ಪೆ ಮುಚ್ಚಿ, ಮುಚ್ಚಿ ಬೋರಾಗದೆ? ಬೋರಾಯ್ತಪ್ಪ ಎಂದು ಕಣ್ತೆರೆದು ಪಿಳಿ ಪಿಳಿ ನೋಡಲು ಬೆಳಕು ಕಾಣಿಪುದೇ..? ಬಲೂನಲಿ ಕುಳಿತು.. ಕುಳಿತು..ಬೆನ್ನು ನೋಯದೇ..? ಗೋಣು ಉಣುಕದೇ? ನೀ ಎಚ್ಚರಗೊಂದಿದ್ದು ಎಂದು? ಕುಳಿತೇ ತೂಕಡಿಸಿ ಗೊರಕೆ ಹೊಡೆದದ್ದು ಎಂದು? ನಿನ್ನ 'ಶೆಡ್ಯುಲ್' ಏನು? ಹೇಗೆ? ನಿನ್ನಮ್ಮನ ಗೊರಕೆ ನಿನ್ನ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
February 09, 2006
೧೯೮೫ರಲ್ಲಿ ಕ್ಯಾಷ್ ಡಿಪಾರ್ಟ್‍ಮೆಂಟಿನಿಂದ ಜನರಲ್ ಸೈಡ್‍ಗೆ ಪೋಸ್ಟ್ ಮಾಡಿದ್ದರು. ಅಲ್ಲಿ ಪಬ್ಲಿಕ್ ಡೆಟ್ ಆಫೀಸ್ ಎನ್ನುವಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಲವನ್ನು ತೆಗೆದುಕೊಳ್ಳಲು ಮತ್ತು ಅದರ ಲೆಕ್ಕಾಚಾರದ ಬಗ್ಗೆ ಕೆಲಸ ಮಾಡುವ ವಿಭಾಗ ಇದು. ನನಗೇನೂ ಅಂತಹ ಘನಂದಾರಿ ಕೆಲಸ ಕೊಟ್ಟಿರಲಿಲ್ಲ. ನಾನು ಮಾಡುತ್ತಿದ್ದುದು ಕ್ಲರಿಕಲ್ ಕೆಲಸ. ಮೊದಲಿಗೆ ವಿಭಾಗದ ಬಗ್ಗೆ ತಿಳಿದುಕೊಳ್ಳಲು ತರಬೇತಿ ಕೊಡುವರು. ಇದಕ್ಕಾಗಿ ಚೆನ್ನೈಗೆ ಕಳುಹಿಸಿದ್ದರು…
ಲೇಖಕರು: Gurudatta N S
ವಿಧ: Basic page
February 09, 2006
ಅವ ಇದ್ದ ದೂರದೂರು ಅಮೇರಿಕದಲ್ಲಿ! ಸತ್ತು ಬಿತ್ತು ಇಲ್ಲಿ ಅವನ ನೆಚ್ಚಿನ ನಾಯಿ! ಸುದ್ಧಿ ಮುಟ್ಟಿತು ಫೋನಲಿ ಹರಿದು ಬಂತು ನೀರು ಕಣ್ಣಲಿ ನೆಚ್ಚಿನ ನಾಯಿ, ಮುದ್ದಿನ ನಾಯಿ ಅಕ್ಕರೆಯೊಂದಿಗೆ 'ಹಚ್' ನಾಯಿಯಂತೆ ಅವನೊಂದಿಗೆ ಊರು ಸುತ್ತುತ್ತಿದ್ದ ನಾಯಿ! ಈ ನಾಯಿ ನೆನಪಿಗಾಗೇ.. ಈ ಊರಿನಿಂದ ಆ ಊರಿಗೆ ಹೋಗುವಾಗ 'ಹಚ್' ಫೋನನ್ನೇ ಕೊಂಡಿದ್ದ! ಕೆಲವು ದಿನ ಕಳೆದಿತ್ತು... ಅಮ್ಮ- ಅಪ್ಪ ನ ನೆನಪು ಕಾಡಿತ್ತು.. ಆ ಊರಿಂದಾ ಈ ನಾಡಿಗೆ ಬಂದು ಸೇರಿದ್ದ... ಮನೆ ಮಂದಿ ಜೊತೆ ಸೇರಿ ಹರಟುತ್ತಿರೆ ತಟ್ಟೆಂದು…