ಬದಲಾಗಲಿದೆ 'ಸಂಪದ' - ನಿಮ್ಮ ಸಲಹೆಗಳನ್ನಾಧರಿಸಿ!
ಸಂಪದದಲ್ಲಿ ಸದ್ಯದಲ್ಲೇ ಸಾಕಷ್ಟು ಬದಲಾವಣೆಗಳು ಆಗಬೇಕಿವೆಯೆಂದು ನಿರ್ಧರಿಸಿ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ಸಂಪದದ ಹೊಸ ಆವೃತ್ತಿ ಸದ್ಯದಲ್ಲೇ - ಇನ್ನಷ್ಟು ಚೊಕ್ಕವಾಗಿರುವ ಇಂಟರ್ಫೇಸ್ ನೊಂದಿಗೆ, ಬಳಕೆಗೆ ಇನ್ನಷ್ಟು ಸುಲಭವಾಗಿರುವಂತೆ ಹೊಸ ಆಕರದೊಂದಿಗೆ ಲಭ್ಯವಾಗಲಿದೆ. ಈ ಮಾರ್ಪಾಡುಗಳನ್ನು ಮಾಡುವಾಗ ಸಂಪದದ ಎಲ್ಲ ಸದಸ್ಯರಿಂದಲೂ ಒಂದಷ್ಟು feedback ಬರಲಿ ಅಂತ ಇಲ್ಲಿ ಬರೆಯುತ್ತಿದ್ದೇನೆ.
ಸಂಪದದಲ್ಲಿ ಏನೆಲ್ಲ ಮಾರ್ಪಾಡುಗಳು ಬಯಸುವಿರಿ, ಏನೇನು ಹೊಸ ಫೀಚರ್ ಗಳನ್ನ ಕಾಣಲು ಬಯಸುತ್ತೀರಿ ಎಂಬುದನ್ನ ಚಿಕ್ಕದಾಗಿ ಚೊಕ್ಕವಾಗಿ ಒಂದೆರಡು ಲೈನುಗಳಲ್ಲಿರಿಸಿ ತಪ್ಪದೆ ಕಾಮೆಂಟ್ ಹಾಕಿ. ಎಲ್ಲರಿಗೂ ಒಪ್ಪಿಗೆಯಾಗುವ ಹೊಸ ಸವಲತ್ತುಗಳನ್ನ ಸಂಪದದಲ್ಲಿ ಅಳವಡಿಸೋದಕ್ಕೆ ಪ್ರಯತ್ನ ಮಾಡುವೆವು.
ಸದ್ಯಕ್ಕೆ ಬಂದಿರುವ ಕೆಲವು ಸಲಹೆಗಳು ಇಂತಿವೆ:
೧) ಇಂಟರ್ಫೇಸ್ ಆಕಾ ಡಿಸೈನ್ ಸುಂದರಗೊಳಿಸಿ, ಕಲರ್ ಪುಲ್ ಮಾಡಿ ಅಂತ ಬಹಳ ಜನರಿಂದ ಅಹವಾಲು ಬಂದಿತ್ತು.
೨) ಬ್ಲಾಗುಗಳನ್ನ ಹೆಚ್ಚು individualistic ಮಾಡಿ ಅಂತ ಕೆಲವರು ಕೇಳಿಕೊಂಡಿದ್ದರು. ಸ್ವಂತದ ಬ್ಲಾಗಿನಂತೆ ಮಾಡಿಕೊಡಿ ಎಂದು ವಿಜ್ಞಾಪನೆಯಾಗಿತ್ತು.
೩) ಬರಹ ಎನ್ಕೋಡಿಂಗ್ ನಲ್ಲೂ ಸಂಪದವನ್ನು ಹಾಕಿ. ಹಳೆಯ ಕಾಲದ ಆಪರೇಟಿಂಗ್ ಸಿಸ್ಟಮ್ ಇಟ್ಟುಕೊಂಡವರಿಗೆ ಓದುವ ಅವಕಾಶ ಮಾಡಿಕೊಡಿ ಎಂದು ಕೆಲವರು ಕೇಳಿದ್ದರು.
ನಿಮ್ಮ ಸಲಹೆಗಳು ಬರಲಿ, ಕಾಮೆಂಟ್ಸ್ ಕುಟ್ಟಿ(ಟೈಪಿಸಿ)! :)
Comments
ಸ್ಪೆಲ್ ಚೆಕ್ ಅಳವಡಿಸಬಹುದೆ?
ಪೋಸ್ಟುಗಳನ್ನು save ಮಾಡಲಾಗುವಂತೆ ಮಾಡಬಹುದೆ?
In reply to ಪೋಸ್ಟುಗಳನ್ನು save ಮಾಡಲಾಗುವಂತೆ ಮಾಡಬಹುದೆ? by gvmt
ಇನ್ನಷ್ಟು ಸಲಹೆಗಳು ಬರಲಿ
buddy list
ಇದೇ ಚೆನ್ನಾಗಿದೆ
In reply to ಇದೇ ಚೆನ್ನಾಗಿದೆ by tvsrinivas41
ಗಿಫ್ಟ್ ಕೊಡೋಣ
ಟಿಪ್ಪಣಿ ಬಿಡುವಾಗ ಯೂನಿಕೋಡ್ ಕನ್ವರ್ಟರ್
In reply to ಟಿಪ್ಪಣಿ ಬಿಡುವಾಗ ಯೂನಿಕೋಡ್ ಕನ್ವರ್ಟರ್ by vvdooshaka
ಧನ್ಯವಾದಗಳು
ನನ್ನ ಸಲಹೆಗಳು