ವಿಧ: Basic page
February 24, 2006
ಪುಸ್ತಕಗಳನ್ನು ಓದುವ/ಇಟ್ಟುಕೊಳ್ಳುವ ಬಗ್ಗೆ ಇಲ್ಲಿ ಹಿಂದೊಮ್ಮೆ ಚರ್ಚೆ ಶುರುವಾಗಿತ್ತು . ನಾನು ಆಗ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ ; ಏಕೆಂದರೆ ನಾನೂ ಆ ಬಗ್ಗೆಯೇ ವಿಚಾರ ಮಾಡುತ್ತಿದ್ದೆ, ಏನೊಂದೂ ತೀರ್ಮಾನಕ್ಕೆ ಬಂದಿರಲಿಲ್ಲ ;
ನಾನೂ ಎಷ್ಟೋ ಪುಸ್ತಕ ಕೊಳ್ಳುತ್ತಿದ್ದೆ, ಕೊಳ್ಳುತ್ತ ಬಂದಿದ್ದೇನೆ. ಇನ್ನು ಮುಂದೆ ಕೊಳ್ಳುವ ಬಗ್ಗೆ ವಿಚಾರ ಮಾಡುತ್ತಿದ್ದೇನೆ.
ಆದರೆ ಅನೇಕ ಒಳ್ಳೆಯ ಪುಸ್ತಕ ನನ್ನ ಹತ್ತಿರ ಸಂಗ್ರಹವಾಗಿವೆ , ಮಾಸ್ತಿ , ಪಿ. ಲಂಕೇಶ್ , ಜಯಂತ ಕಾಯ್ಕಿಣಿ ಅವರ ಪುಸ್ತಕಗಳು…
ವಿಧ: ಬ್ಲಾಗ್ ಬರಹ
February 24, 2006
ನಿಮಗೆ ಕವಿ ಬೇಂದ್ರೆ ಗೊತ್ತು , ನಾಟಕಕಾರ ಬೇಂದ್ರೆ ಗೊತ್ತೆ? ಹೌದು, ಅವರು ಅನೇಕ ನಾಟಕಗಳನ್ನು ಕೂಡ ಬರೆದಿದ್ದಾರೆ. ಅವರು ಒಂದು ನಾಟಕ 'ಜಾತ್ರೆ'ಯ ಕಿರು ಪರಿಚಯ ಇಲ್ಲಿದೆ .
'ಜಾತ್ರೆ ಸುಳ್ಳಿನ ಕೋಟೆಯ ಕುರಿತಾದ ಒಂದು ವಿಡಂಬನೆ. ಇಲ್ಲಿ ಒಬ್ಬ ಪಾಳೇಗಾರ ಊರಲ್ಲಿ ಪ್ಲೇಗ್ ಬಂದರೂ ನಡೆಯಲಿರುವ ಜಾತ್ರೆ ತಪ್ಪಿಸಲು ಸಿದ್ಧನಿಲ್ಲ. ಜನ ಸತ್ತರೆ ಸಾಯಲಿ, ಬೊಕ್ಕಸಕ್ಕೆ ಬರುವ ಆದಾಯ ತಪ್ಪಬಾರದು . ಎಂಬ ಹಠ ಅವನದು . ಊರಲ್ಲಿ ಪ್ಲೇಗ್ ಇಲ್ಲ ಎಂದು ಡಂಗುರ ಸಾರಿಸುತ್ತಾನೆ . ಜನ ಪ್ಲೇಗ್ ನ ಹೆಸರು…
ವಿಧ: Basic page
February 24, 2006
25. ಕಾವ್ಯ , ಶಾಸ್ತ್ರ , ವಿನೋದಗಳಲ್ಲಿ ಧೀಮಂತರು ಸಮಯ ಕಳೆದರೆ , ಮೂರ್ಖರು ಹಗಲು ರಾತ್ರಿಗಳನ್ನು ಜೂಜು , ಕಲಹ, ಮದ್ಯಪಾನಗಳಲ್ಲಿ ಕಳೆಯುವರು.
ಕಾವ್ಯ ಶಾಸ್ತ್ರ ವಿವಾದೇನ ಕಾಲೋ ಗಚ್ಛತಿ ಧೀಮತಾಂ |
ಮೂರ್ಖಾಣಾಂ ತು ದಿವಾ ರಾತ್ರೌ ದ್ಯೂತೇನ ಕಲಹೇನ ವಾ ||
26. ಹನಿ ಹನಿಯಾಗಿ ಕೊಡವು ನೀರಿನಿಂದ ತುಂಬುವಂತೆ , ವಿದ್ಯೆ , ಧರ್ಮ , ಮತ್ತು ಸಂಪತ್ತನ್ನು ಕ್ರಮೇಣ ಗಳಿಸಬೇಕು.
ಜಲಬಿಂದು ನಿಪಾತೇನ ಕ್ರಮಶ: ಪೂರ್ಯತೇ ಘಟ:
ಸ ಹೇತು: ಸರ್ವ ವಿದ್ಯಾನಾಂ ಧರ್ಮಸ್ಯ ಚ ಧನಸ್ಯ ಚ ||
27. ಒಳ್ಳೆಯ…
ವಿಧ: Basic page
February 24, 2006
ಒಂದು ಊರು . ಊರಿನ ಬಹುತೇಕ ಜನ ಹತ್ತಿರದ ಚರ್ಮ ಹದ ಮಾಡುವ ಕಾರಖಾನೆಯಲ್ಲಿ ಕೆಲಸ ಮಾಡುತ್ತಿದ್ದರು . ಕಡಿಮೆ ಸಂಬಳ . ಅನಾರೋಗ್ಯಕರ ವಾತಾವರಣ. ಬೆಳಿಗ್ಗೆ ಎದ್ದ ಕೂಡಲೇ ಟಿಪಿ಼ನ್ ಕ್ಯಾರಿಯರ್ ತೆಗೆದುಕೊಂಡು ಹೋಗಿ ದಿನವೆಲ್ಲಾ ಕಷ್ಟಪಟ್ಟು ದುಡಿಯುತ್ತಿದ್ದರು .
ಆ ಊರಿನಲ್ಲಿ ಒಬ್ಬ ಕಳ್ಳನಿದ್ದ . ಆದರೆ ಆತ ನಿಯತ್ತಿನ ಮನುಷ್ಯ. ತನ್ನ ಊರಿನಲ್ಲಿ ಕಳ್ಳತನ ಮಾಡುತ್ತಿರಲಿಲ್ಲ . ಪರಊರುಗಳಲ್ಲಿ ಕಳ್ಳತನ ಮಾಡಿಕೊಂಡಿದ್ದ . ಇತರರಿಗೆ ತಾನೊಬ್ಬ ಸೇಲ್ಸ್ ಮನ್ ಎಂದು ಹೇಳಿದ್ದ . ವರ್‍ಷಕ್ಕೊಮ್ಮೆ ತನ್ನ…
ವಿಧ: Basic page
February 24, 2006
(ಶ್ರೀ ಪು.ಲ.ದೇಶಪಾಂಡೆಯವರು ಮರಾಠಿಯ ಪ್ರಖ್ಯಾತ ಹಾಸ್ಯ ಸಾಹಿತಿ . ಅವರ ಲೇಖನಗಳ ಅನುವಾದ ಸಂಗ್ರಹವೊಂದು ಕನ್ನಡದಲ್ಲಿ ಪ್ರಕಟವಾಗಿದೆ. ಈಗ ಅದು ನನ್ನ ಹತ್ತಿರ ಇಲ್ಲ; ಆದರೆ ಅಲ್ಲಿನ ಒಂದು ಲೇಖನ ನಿಮ್ಮ ಸಂತೋಷಕ್ಕಾಗಿ ಇಲ್ಲಿದೆ.)
ಜಾಲ್ಮೀಕಿಯ ರಾಮಾಯಣ
------------------
ಪೀಠಿಕೆ.
ಕಾಲ ಬದಲಾಗುತ್ತಿದೆ. ಅದರೊಂದಿಗೆ ಎಲ್ಲರೂ ಬದಲಾಗಬೇಕು. ಪ್ರಾಚೀನ ಸಾಹಿತ್ಯವೂ ಬದಲಾಗಬೇಕು. ಏಕೆಂದರೆ ಅದು ಪ್ರತಿಗಾಮಿ ಸಾಹಿತ್ಯವಾಗಿದೆ. ನಿಜವನ್ನು ಮಾತಾಡುವ ಹರಿಶ್ಚಂದ್ರನಂತಹವರು ಅಲ್ಲಿ ಬರುತ್ತಾರೆ .…
ವಿಧ: ಬ್ಲಾಗ್ ಬರಹ
February 24, 2006
ಬಂದೆನರಿಯದೆ ಧರೆಗೆ ಅರಿಯದೇ ಹೊರಡುವೆನು
ಬಾಳ್ವೆನರಿಯದ ಬಾಳ ಇರುವಶ್ಟು
ದಿನ ಆಕರ್ಶಿಪ ಕೇಂದ್ರ
ಬಾಳನರಿಯುವ ತುಡಿತವೋ ಪಂಡಿತ ಪುತ್ರ||
---ನನಗರಿವಿಲ್ಲದೆಯೇ ಈ ಭೂಮಿಗೆ ಬಂದೆ,ಇಲ್ಲಿಂದ ಹೊರಡುವಾಗಲೂ ತಿಲಿಯುವುದಿಲ್ಲ , ಇರುವಶ್ಟು ದಿನ ಯಾವ ಕಾರಣ ನಮ್ಮನ್ನು ಹಿಡಿದಿರುತ್ತದೆ ಅಂದರೆ.....ಈ ಬಾಳನ್ನು ಅರಿಯುವ ತುಡಿತವಶ್ಟೆ......
ವಿಧ: Basic page
February 23, 2006
"ಭಾರತ ತನ್ನ ಎಲ್ಲಾ ಪರಮಾಣು ಕಾರ್ಯಕ್ರಮಗಳನ್ನೂ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ(ಐ ಎ ಇ ಎ)ಸುರಕ್ಷಿತಾ ಕ್ರಮಗಳಿಗೆ ಒಳಪಡಿಸಬೇಕು"
ಎಂದು ಅಮೆರಿಕಾ ಅಧ್ಯಕ್ಷ ಜಾರ್ಜ್ ಬುಶ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಎ ಬಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಿಂದಲೂ ಪರಮಾಣು ಒಪ್ಪಂದದ ಮಾತುಗಳು ಕೇಳಿ ಬರುತ್ತಿದೆ.
ಕಳೆದ ವರ್ಷ ಜೂನ್ ನಲ್ಲಿ ಪ್ರಧಾನಿ ಮನಮೊಹನ್ ಸಿಂಘ್ ಮತ್ತು ಬುಷ್ ನಡುವೆ ಪ್ರಸ್ತಾಪವಾಗಿದ್ದ ಪರಮಾಣು
ಒಪ್ಪಂದದ ಮಾತುಗಳು ಇಂದು ಅಮೆರಿಕಾದ ಈ ಷರತ್ತಿನಿಂದ ಯೋಚಿಸುವಂತೆ…
ವಿಧ: Basic page
February 23, 2006
ಸ್ವಗತ : ತಿರುಗ ಹೋಗೋಣು ಬಾರೋ ಶ್ರೀಕಾ ( http://sampada.net/node/1053) ಮತ್ತು ತೆರೆಯೋ ಬ್ರೌಸರ್ರು - ( http://sampada.net/node/1176) ಮಾದರಿಯಲ್ಲಿ ಇನ್ನೊಂದು ಹಾಡುಗಬ್ಬ! ; ಹೂಗಳನ್ನು ಪೋಣಿಸಿ ಹೂವಿನ ಮಾಲೆ ಕಟ್ಟಿದ ಹಾಗೆ , ಶಬ್ದ ಜೋಡಿಸಿ ಸ್ವಸಂತೋಷಕ್ಕೆ ಕಟ್ಟಿ ಹಾಡಿಕೊಂಡ ಹಾಡು .)
ಈಗಾಗಲೇ ಕೇಳಿರದಿದ್ದರೆ , 'ಹುಣ್ಣಿಮೆ' ಧ್ವನಿಸುರುಳಿಯಲ್ಲಿರುವ 'ಹೇಳೆ ಸಖಿ ಹೇಳೇ' ಕೇಳಿದರೆ ಒಳ್ಳೆಯದು.
www.udbhava.com ನಲ್ಲಿ "Hele Sakhi Hele" ಎಂದು ಹುಡುಕಿ ಕೇಳಿರಿ.…
ವಿಧ: ಚರ್ಚೆಯ ವಿಷಯ
February 23, 2006
ಭಾರತ ಹಾಗು ಪಾಕ್ ಸ್ನೇಹ ಸೇತುವಾಗಿ ಬಸ್ ಸಂಚಾರ ಆರಂಭವಾಯ್ತು. ಇದು ಸಮಂಜಸ ನಿರ್ಧಾರ,ಒಳ್ಳೆಯ ಬೆಳವಣಿಗೆ.ಆದರೆ ಅದರ ಬೆನ್ನಹಿಂದೇ ಪ್ರಾರಂಬಿಸಿದ ರೈಲು ಸಂಚಾರ ಉತ್ತಮ ನಿರ್ಧಾರವೆಂದು ಅನಿಸುತ್ತಿಲ್ಲ.ಭಾರತ ಪಾಕ್ ಒಂದೇ ಬೀಜದ ಕುಡಿಗಳು,ಹಿಡಿ ಭೂಮಿಗಾಗಿ ಕಿತ್ತಾಡತ್ತಿದ್ದ ಅಣ್ಣ ತಮ್ಮಂದಿರು.ಇಲ್ಲಿ ಭ್ರಾತ್ರುತ್ವದ ಪ್ರೀತಿಯಾಗಲಿ ಮಾನವೀಯತೆಯ ಮಾತುಗಳಾಗಲೀ ಮರೆವ ಕ್ಷಣಗಳೇ ಜಾಸ್ತಿ.ಊಸರವಳ್ಳಿಗೆ ಅದಾವ ಬಣ್ಣ?
ನಮ್ಮಲ್ಲಿ ರಕ್ಶಣಾ ವ್ಯವಸ್ಥೆ ಅಷ್ಟೊಂದು ಸುಬಧ್ರವಾಗಿದೆಯೇ?ಅಲ್ಲಲ್ಲಿ ಕಂಡುಬರುವ ಗಲಬೆ…
ವಿಧ: Basic page
February 23, 2006
ಬಂದು ಹೋದವರು ನನ್ನ ಹಾದಿಯಲಿ ಬಹಳವಲ್ಲ
ಆದರೂ ನನ್ನಿಂದ ಅವರ ಲೆಕ್ಕ ಇಡಲಾಗಲಿಲ್ಲ
ನಿನ್ನೆಯ ಆಗುಹೋಗುಗಳು ಇಂದು ನೆನಪಿಲ್ಲ
ಮುಖ್ಯ ಘಟನೆಗಳ ಮಾತ್ರ ನಾ ಮರೆಯೋಲ್ಲ
ಸುಭಿಕ್ಷ ಕಾಲದಲಿ ಹಿಂದೆ ಇದ್ದವರು ನೂರು
ದುರ್ಭಾಗ್ಯ ಬರಲು ಉಳಿದವರು ಮೂರೇ ಮೂರು
ಕಾಸಿಲ್ಲದೇ ಕೈಲಾಸ ತೋರಿದವರು ಕಡಿಮೆ ಏನಿಇಲ್ಲ
ಮರೆಯಲಾರದ ಪಾಠ ಕಲಿಸಿದವರಿವರೇ ಅಲ್ಲ?
ಮುಳುಗುತಿರಲು ಆಶಯದ ಆಸರೆಯ ತೋರಿದವರೊಬ್ಬರು
ತೆವಳುತ್ತಿದ್ದವಗೆ ನಡೆಯಲು ಕಲಿಸಿದವರಿನ್ನೊಬ್ಬರು
ಮೆಟ್ಟಿಲ ಮೇಲೆ ಕುಳ್ಳಿರಿಸಿ ಮೇಲೆ ಹತ್ತಿಸಿದವರೊಬ್ಬರು…