ಎಲ್ಲ ಪುಟಗಳು

ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
February 09, 2006
೧೯೮೫ರಲ್ಲಿ ಕ್ಯಾಷ್ ಡಿಪಾರ್ಟ್‍ಮೆಂಟಿನಿಂದ ಜನರಲ್ ಸೈಡ್‍ಗೆ ಪೋಸ್ಟ್ ಮಾಡಿದ್ದರು. ಅಲ್ಲಿ ಪಬ್ಲಿಕ್ ಡೆಟ್ ಆಫೀಸ್ ಎನ್ನುವಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಲವನ್ನು ತೆಗೆದುಕೊಳ್ಳಲು ಮತ್ತು ಅದರ ಲೆಕ್ಕಾಚಾರದ ಬಗ್ಗೆ ಕೆಲಸ ಮಾಡುವ ವಿಭಾಗ ಇದು. ನನಗೇನೂ ಅಂತಹ ಘನಂದಾರಿ ಕೆಲಸ ಕೊಟ್ಟಿರಲಿಲ್ಲ. ನಾನು ಮಾಡುತ್ತಿದ್ದುದು ಕ್ಲರಿಕಲ್ ಕೆಲಸ. ಮೊದಲಿಗೆ ವಿಭಾಗದ ಬಗ್ಗೆ ತಿಳಿದುಕೊಳ್ಳಲು ತರಬೇತಿ ಕೊಡುವರು. ಇದಕ್ಕಾಗಿ ಚೆನ್ನೈಗೆ ಕಳುಹಿಸಿದ್ದರು…
ಲೇಖಕರು: Gurudatta N S
ವಿಧ: Basic page
February 09, 2006
ಅವ ಇದ್ದ ದೂರದೂರು ಅಮೇರಿಕದಲ್ಲಿ! ಸತ್ತು ಬಿತ್ತು ಇಲ್ಲಿ ಅವನ ನೆಚ್ಚಿನ ನಾಯಿ! ಸುದ್ಧಿ ಮುಟ್ಟಿತು ಫೋನಲಿ ಹರಿದು ಬಂತು ನೀರು ಕಣ್ಣಲಿ ನೆಚ್ಚಿನ ನಾಯಿ, ಮುದ್ದಿನ ನಾಯಿ ಅಕ್ಕರೆಯೊಂದಿಗೆ 'ಹಚ್' ನಾಯಿಯಂತೆ ಅವನೊಂದಿಗೆ ಊರು ಸುತ್ತುತ್ತಿದ್ದ ನಾಯಿ! ಈ ನಾಯಿ ನೆನಪಿಗಾಗೇ.. ಈ ಊರಿನಿಂದ ಆ ಊರಿಗೆ ಹೋಗುವಾಗ 'ಹಚ್' ಫೋನನ್ನೇ ಕೊಂಡಿದ್ದ! ಕೆಲವು ದಿನ ಕಳೆದಿತ್ತು... ಅಮ್ಮ- ಅಪ್ಪ ನ ನೆನಪು ಕಾಡಿತ್ತು.. ಆ ಊರಿಂದಾ ಈ ನಾಡಿಗೆ ಬಂದು ಸೇರಿದ್ದ... ಮನೆ ಮಂದಿ ಜೊತೆ ಸೇರಿ ಹರಟುತ್ತಿರೆ ತಟ್ಟೆಂದು…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
February 09, 2006
ಭಾಗ - ೬ ೧೯೮೪ರ ಡಿಸೆಂಬರ್ ವೇಳೆಗೆ ನನಗೆ ಎಲ್.ಎಫ್.ಸಿ. (ಲೀವ್ ಫೇರ್ ಕನ್ಸೆಷನ್) ತೆಗೆದುಕೊಳ್ಳುವ ಅವಕಾಶ ಸಿಕ್ಕಿತ್ತು. ಅಂದರೆ ಎಲ್.ಎಫ್.ಸಿ ಯಲ್ಲಿ ಬ್ಯಾಂಕಿನ ಹಣದಲ್ಲಿ ರಜೆಯ ಮೇಲೆ ಬೇರೆ ಊರಿಗೆ ರೈಲಿನಲ್ಲಿ ಹವಾನಿಯಂತ್ರಿತ ಅಥವಾ ಮೊದಲ ದರ್ಜೆಯಲ್ಲಿ ಬೇರೆ ಊರಿಗೆ ಹೋಗಿ ಬರಬಹುದು. ಮೊದಲ ಅವಕಾಶ ಸಿಕ್ಕಿದಾಗ ದೂರದೂರಿಗೆ ಹೋಗುವುದೆಂದರೆ, ನನಗೆ ಮೊದಲು ತೋಚಿದ್ದು ಮುಂಬೈಗೆ ಹೋಗೋಣ ಅಂತ. ಏಕೆಂದರೆ ಅಲ್ಲಿ ಆಗ ನನ್ನಣ್ಣ ಕೆಲಸ ಮಾಡುತ್ತಿದ್ದ. ಅಲ್ಲಿಯವರೆವಿಗೆ ನಾನು ಕರ್ನಾಟಕ ಬಿಟ್ಟು ಆಚೆ…
ಲೇಖಕರು: pqrshanth
ವಿಧ: ಬ್ಲಾಗ್ ಬರಹ
February 08, 2006
ಎಲ್ಲಿ ಹೋದಿರಿ ಅಂದಿನ ದಿನಗಳೆ ನೆನಪುಗಳನು ಬಿತ್ತಿ, ಮನದಲಿ ಸವಿ ನೆನಪುಗಳನು ಬಿತ್ತಿ ಹೊಂಗೆಯ ನೆರಳಲಿ ಗೋಲಿಯ ಆಡುತ ಕಾಲಕಳೆವ ಬನ್ನಿ ಹುಣಿಸೆಯ ಕೊಂಬೆಗೆ ಹಗ್ಗವ ಕಟ್ಟಿ ಜೋಕಾಲೆಯಾಡುವ ಬನ್ನಿ ಮೂಡಣ ಬಾನಲಿ ಸೂರ್ಯನ ಜೊತೆಗೆ ಮೇಲೇರುವ ಬನ್ನಿ ತುಂಬಿದ ಕೆರೆಗೆ ಕಲ್ಲನು ಎಸೆಯುತ ಮುಸ್ಸಂಜೆ ಸವಿಯ ಬನ್ನಿ ಚಂದಿರನಿಲ್ಲದ ಬಾನಂಗಳದಲ್ಲಿ ತಾರೆಗಳೆಣಿಸುವ ಬನ್ನಿ ತಿಂಗಳ ಬೆಳಕಲಿ ಕೈತುತ್ತನು ತಿನ್ನುತ ಹರಟೆ ಹೊಡೆವ ಬನ್ನಿ ತೋಟಕೆ ನುಗ್ಗಿ ಬಾವಿಗೆ ಧುಮುಕಿ ಈಜು ಕಲಿವ ಬನ್ನಿ ಮಾವಿನ ಮರಕೆ ಕಲ್ಲನು…
ಲೇಖಕರು: sinchanabhat
ವಿಧ: Basic page
February 08, 2006
ಭಾವ ಗಂಗೆಯಲಿ ಬಂದ ಜೀವ ತರಂಗವಿದು ಹುಟ್ಟು ಸಾವುಗಳೊಳಗೆ ಬದುಕಬೇಕು ಬಾಳ ಪುಟಗಳ ತಿರುವಿ ನೋಡಬೇಕು.. ನಾವು ಈ ಭುವಿಯಲ್ಲಿ ಹುಟ್ಟಿದ್ದೇವೆ ಅಂದರೆ ಭುವಿಯಂತೆ, ನಾವು ಚಲಿಸಬೇಕು.ಪ್ರಕೃತಿಯ ಚಲನದಲ್ಲಿ ಚಲನವಾಗಿ ನಡೆಯಬೇಕು ಆಗಲೇ ಹುಟ್ಟಿಗೊಂದು ಅರ್ಥ.ಈ ಬದುಕೆಂಬುದು ನಮ್ಮ ಕೈಯ್ಯಲ್ಲಿರುವ ವರ. ಸಿಕ್ಕಿರುವುದು ಮೂರು ದಿನಗಳ ವರವಾದರೂ ನೂರು ದಿನದಂತೆ ಬದುಕಿ ತೋರಿಸುವುದು ನಿಜವಾದಕಲೆ. ಇಲ್ಲಿ ನಾವು ಸುಖ ದುಃಖಗಳೊಡನೆ ಪಯಣಿಸಬೇಕು. ಆದರೆ ಸುಖವೆಂಬುದು ಭ್ರಮೆಯೆಡೆಗೆ ಒಯ್ಯುವ ಮಾಯೆ…
ಲೇಖಕರು: shreekant.mishrikoti
ವಿಧ: Basic page
February 07, 2006
೧೩. ನಿಂದಂತು ನೀತಿನಿಪುಣಾ ಯದಿ ವಾ ಸ್ತುವಂತು | ಲಕ್ಷ್ಮೀ ಸಮಾವಿಶತು ಗಚ್ಛತು ವಾ ಯಥೇಷ್ಟಂ || ಅದೈವ ವಾ ಮರಣಮಸ್ತು ಯುಗಾಂತರೇ ವಾ | ನ್ಯಾಯಾತ್ ಪಥ: ಪ್ರವಿಚಲಂತಿ ಪದಂ ನ ಧೀರ್‍ಆ: || ನೀತಿಶಾಸ್ತ್ರ ಬಲ್ಲವರು ತೆಗಳಲಿ ಅಥವಾ ಹೊಗಳಲಿ , ಸಂಪತ್ತು ಬರಲಿ ಅಥವಾ ಹೋಗಲಿ , ಮರಣವು ಈಗಲೇ ಬರಲಿ ಅಥವಾ ಯುಗಗಳ ನಂತರ ಬರಲಿ , ಧೀರರು ನ್ಯಾಯದ ದಾರಿಯಿಂದ ಸ್ವಲ್ಪವೂ ವಿಚಲಿತರಾಗುವದಿಲ್ಲ . ೧೪. ಪ್ರಿಯನ್ಯಾಯಾವೃತ್ತಿರ್ಮಲಿನಮಸುಭಂಗೇಪ್ಯಸುಕರಂ | ಮತ್ವಂ ಸತೋನಾಭ್ಯರ್ಥಾ: ಸುಹೃದಪಿ ನಯಾಚ್ಯ: ಕೃಶಧನ…
ಲೇಖಕರು: shreekant.mishrikoti
ವಿಧ: ಪುಸ್ತಕ ವಿಮರ್ಶೆ
February 07, 2006
ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ . ಆದರೆ ಈ ಕಾರಣದಿಂದ ಅವರು ತಮ್ಮ ನಂಬುಗೆಗಳನ್ನು ಬದಲಾಯಿಸಲು ಒಪ್ಪುವದಿಲ್ಲ .ಪವಾಡಗಳನ್ನು ಸಹಜ ಸಂಗತಿಗಳನ್ನಾಗಿ ಇವರು ಮಾರ್ಪಡಿಸಿ ಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯ ಜನರಿಗೆ ರುಚಿಸಿತೇ ತಾವು ಧನ್ಯ; ರುಚಿಸಲಿಲ್ಲ , ದೈವ ತಮಗೆ ಅನುಗ್ರಹಿಸಿದ ಭಾಗ್ಯ ಇಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.ಇಲ್ಲಿ…
ಲೇಖಕರು: shreekant.mishrikoti
ವಿಧ: Basic page
February 07, 2006
ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ . ಆದರೆ ಈ ಕಾರಣದಿಂದ ಅವರು ತಮ್ಮ ನಂಬುಗೆಗಳನ್ನು ಬದಲಾಯಿಸಲು ಒಪ್ಪುವದಿಲ್ಲ .ಪವಾಡಗಳನ್ನು ಸಹಜ ಸಂಗತಿಗಳನ್ನಾಗಿ ಇವರು ಮಾರ್ಪಡಿಸಿ ಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯ ಜನರಿಗೆ ರುಚಿಸಿತೇ ತಾವು ಧನ್ಯ; ರುಚಿಸಲಿಲ್ಲ , ದೈವ ತಮಗೆ ಅನುಗ್ರಹಿಸಿದ ಭಾಗ್ಯ ಇಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.ಇಲ್ಲಿ ಇರುವ…
ಲೇಖಕರು: tvsrinivas41
ವಿಧ: Basic page
February 07, 2006
ಚಾಂದ್ರಾಯಣ ಎಂಬ ಪದವು ಚಂದ್ರನ ಚಲನೆಯ ಹಾದಿ ಎಂಬರ್ಥ ಕೊಡುತ್ತದೆ. ಇದೊಂದು ವ್ರತ. ಕೂರ್ಮ ಪುರಾಣದ ಹರಿ ಭಕ್ತಿ ವಿಲಾಸ ೮.೧೫೮,೧೫೯ರಲ್ಲಿ ವಿವರಿಸಿರುವಂತೆ, ದ್ವಿಜರು (ಎರಡು ಬಾರಿ ಜನ್ಮ ತಳೆದವರು - ಅಂದರೆ ಪಕ್ಷಿಗಳು ಮತ್ತು ಬ್ರಾಹ್ಮಣರು ಎಂಬರ್ಥ) ಅಣಬೆ, ಬಾಳೆಯ ಎಲೆ, ಸೂರ್ಯಕಾಂತಿಯ ಎಲೆ, ಈರುಳ್ಳಿ, ಬೆಳ್ಳುಳ್ಳಿ, ಮರದ ರಸ, ನೆಲದ ಕೆಳಗೆ ಬೆಳೆಯುವ ಪದಾರ್ಥಗಳು ಮತ್ತು ಬಿಳಿ ಕುಂಬಳಕಾಯಿಯನ್ನು ತಿನ್ನಬಾರದು. ಇದನ್ನು ತಿಂದರೆ ಅವರು ಅಧಮರಾಗುವರು. ಮನು ಸಂಹಿತೆಯೂ ಇದನ್ನೇ ಹೇಳುತ್ತದೆ.…
ಲೇಖಕರು: vijayaraghavan
ವಿಧ: Basic page
February 06, 2006
ಒಂದು ಹಾದಿ ಸಾಮಾನ್ಯವಾಗಿ ಭಾಷಣಗಳಲ್ಲಿ ಒಂದು ಮಾತು ನಮಗೆ ಕೇಳಿಬರುತ್ತದೆ. ಅದೆಂದರೆ ಹಿಂದೆಂದಿಗಿಂತಲೂ ಇಂದು ಪ್ರಸ್ತುತ ವಿಚಾರವಾದ ಇಂಥದನ್ನು ಕುರಿತು ಚಿಂತಿಸುವುದು ಅಗತ್ಯವೆಂದು ನನಗೆ ತೋರಿಬಂದಿದೆ ಎನ್ನುವುದು. ಯಾವ ಯಾವುದನ್ನೋ ಕುರಿತು ಮಾತಾಡುವವರು ಅದೇಕೆ ನಿನ್ನೆ ಅದು ಅಷ್ಟೊಂದು ಪ್ರಸ್ತುತವಾಗಿರಲಿಲ್ಲ ಎಂದು ಹೇಳುವುದಿಲ್ಲ. ಅಷ್ಟೇಕೆ, ಈಗಿನ ಮಾತಿನ ಅಗತ್ಯ ಅವರಿಗೆ ಬೀಳದೆ ಇದ್ದಿದ್ದರೆ ಅವರು ಇಂದು ಆಡಿದ ಮಾತನ್ನೂ ಆಡುತ್ತಿರಲಿಲ್ಲ ಎನ್ನುವುದು ಮಾತ್ರ ಸತ್ಯ. ಹೀಗೆ ಮೂರುಕಾಸಿಗೂ…