ವಿಧ: Basic page
February 06, 2006
ಸುಪ್ರಸಿದ್ಧ ಝೆನ್ ಗುರುವೊಬ್ಬ ರಾಜನ ಅರಮನೆಯ ಬಳಿಗೆ ಬಂದ. ಸೀದಾ ರಾಜನ ಬಳಿಗೆ ಹೋದ.
ಸಭೆಯಲ್ಲಿ ಕುಳಿತಿದ್ದ ರಾಜ ಅವನನ್ನು ಗುರುತಿಸಿದ. "ಏನು ಬೇಕಾಗಿತ್ತು?" ಎಂದು ಕೇಳಿದ.
"ಈ ಛತ್ರದಲ್ಲಿ ಇವತ್ತು ರಾತ್ರಿ ಉಳಿಯಬೇಕು" ಅಂದ ಗುರು.
"ಇದು ನನ್ನ ಅರಮನೆ, ಛತ್ರವಲ್ಲ" ಎಂದ ರಾಜ.
"ನಿನಗಿಂತ ಮೊದಲು ಯಾರಿದ್ದರು ಇಲ್ಲಿ?"
"ನನ್ನ ತಂದೆ. ಈಗ ಅವರು ತೀರಿ ಹೋಗಿದ್ದಾರೆ."
"ಅವರಿಗಿಂತ ಮೊದಲು?"
"ನನ್ನ ತಾತ ಇಲ್ಲಿದ್ದರು. ಅವರೂ ಈಗಿಲ್ಲ."
"ಎಲ್ಲರೂ ಕೊಂಚ ಕಾಲ ಇದ್ದು ಹೋಗುವ ಈ ಜಾಗ…
ವಿಧ: Basic page
February 06, 2006
ಮನಸ್ಸೆಲ್ಲ ಕಸಿವಿಸಿ ತುಂಬಿದ್ದ, ದಿಗಭ್ರಾಂತನಂತಿದ್ದ ಒಬ್ಬಾತ ಝೆನ್ ಗುರುವಿನ ಬಳಿಗೆ ಬಂದ. "ನಾನು ಹತಾಶ, ಹುಚ್ಚು ಹಿಡಿದಿದೆ ಅನ್ನಿಸುತ್ತದೆ. ನಾನು ಯಾರೆಂದು ತಿಳಿಯುತ್ತಿಲ್ಲ. ದಯವಿಟ್ಟು ನನ್ನ ಸತ್ಯ ಸ್ವರೂಪವನ್ನು ತಿಳಿಸಿ" ಎಂದು ಕೋರಿದ.
ಗುರು ಅವನತ್ತ ಕಣ್ಣೆತ್ತಿಯೂ ನೋಡಲಿಲ್ಲ. ಉತ್ತರವನ್ನೂ ಕೊಡಲಿಲ್ಲ.
ಬಂದಾತ ಬೇಡಿದ, ಗೋಗರೆದ, ಅಂಗಲಾಚಿದ.
ಗುರು ಮಾತ್ರ ಮೌನಿ.
ಕೊನೆಗೊಮ್ಮೆ ಹತಾಶನಾಗಿ ವಾಪಸ್ಸು ಹೋಗಲು ಹಿಂದಿರುಗಿದ ಆ ಮನುಷ್ಯ.
ಆಗ ಗುರು ತಟ್ಟನೆ ಆ ಮನುಷ್ಯನ…
ವಿಧ: Basic page
February 06, 2006
ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?"
ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"
[ಕುವೆಂಪು ಕವಿತೆಯೊಂದರ ಕೊನೆಯ ಸಾಲುಗಳು: "ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ"]
ವಿಧ: ಬ್ಲಾಗ್ ಬರಹ
February 06, 2006
೧೯೮೪ ರ ಅಕ್ಟೋಬರ್ ೩೧ನೇ ತಾರ್‍ಈಖು, ಸಿ.ಎ.ಐ.ಐ.ಬಿ ಪರೀಕ್ಷೆಯಿದ್ದಿತು. ಮನೆಯ ಎದುರೇ ಇದ್ದ ನಾಷ್ಯನಲ್ ಕಾಲೇಜಿಗೆ ಹೋಗಿ ಪರೀಕ್ಷೆಯನ್ನು ಬರೆಯಬೇಕಿತ್ತು. ನಾಲ್ಕೈದು ದಿನಗಳ ಹಿಂದೆಯಷ್ಟೇ ಹಲ್ಲಿಗೆ ಸಿಲ್ವರ್ ತುಂಬಿಸಿದ್ದ ಸಮಯ. ಆಗ ನನಗೆ ಸ್ವಲ್ಪ ಜ್ವರವಿದ್ದಿತ್ತು. ಅಂದು ಪರೀಕ್ಷೆ ಇದ್ದುದರಿಂದ ಹೋಗಲೇ ಬೇಕಿತ್ತು. ಏನನ್ನೂ ತಿನ್ನಲು ಮನಸ್ಸಿರಲಿಲ್ಲ. ಅಷ್ಟು ಹೊತ್ತಿಗೆ ಸ್ನೇಹಿತ ರಾಘವೇಂದ್ರ (ಕಾಲೇಜಿನಿಂದ ಸ್ನೇಹಿತನಾಗಿದ್ದು ಒಟ್ಟಿಗೇ ಬ್ಯಾಂಕು ಸೇರಿದವನು), ಅವರ ತಾಯಿ…
ವಿಧ: Basic page
February 06, 2006
ತುಂಟತನ ಹಾಸ್ಯಗಳೆಲ್ಲ ಮುಗಿದಿತ್ತು ಮುಕ್ತಾಯ ಸನಿಹವಾದಂತಿತ್ತು...
ಆಗಿರುವುದೇನು?! ಮೊನ್ನೆಯ ತನಕ ನಾನು ನಾನಾಗಿದ್ದೆ.
ಓಡುವಮನಸಿನೊಡನೆ ಆಡುತ್ತಾ ಹುಡುಗಾಟದ ಕ್ಷಣಗಳನ್ನು ಕಳೆಯುತ್ತಿದ್ದೆ.
ಆಡುವ ಮಾತುಗಳಿಗೆ ಅರ್ಥವಿರಲಿಲ್ಲ. ಕಾಣುವ ಕನಸುಗಳಿಗೆ ಎಲ್ಲೆಯಿರಲಿಲ್ಲ. ದುಮ್ಮಿಕ್ಕುವ ಅಲೆಯೊಡನೆ ಅಲೆಯಾಗಿ ಸಂಭ್ರಮಿಸುತ್ತಿದ್ದೆ,ಆಗಸವ ಚುಂಬಿಸುವ ಸಾಗರನ ದೂರಕ್ಕೆ ಕಣ್ಣೋಟವನ್ನು ಸ್ಪರ್ಶಿಸುತ್ತಿದ್ದೆ.ಹೊಂಗಿರಣಗಳ ಹೊಳಪಿನಲ್ಲಿ ತಂಗಾಳಿಯ ತಂಪಿನಲ್ಲಿ ಮರಳಿಗೆ ಮೈಯ್ಯೊಡ್ಡಿ ಮಲಗುತ್ತಿದ್ದೆ.…
ವಿಧ: Basic page
February 06, 2006
ಭಾವನೆ
ಇದೇನಿದು ಹೊಸ ಪರಿ
ಪ್ರೀತಿಯಲ್ಲ, ಪ್ರೇಮವಲ್ಲ
ಪ್ರಣಯವಂತೂ ಇಲ್ಲಿ ಸಲ್ಲ||
ಸ್ನೇಹಿತನೆನಲು ತುಂಬು ಪರಿಚಯವಿಲ್ಲ
ಒಡನಾಡಿಯೆನಲು ಜೊತೆಗೂಡಿ ನಡೆದಿಲ್ಲ
ಆತ್ಮೀಯನೆನಲು ಅಂತರಾತ್ಮವ ನೀ ತಟ್ಟಿಲ್ಲ||
ನಿನ ನೋಡುವ ತವಕ, ತಳಮಳಗಳಿಲ್ಲದಿಲ್ಲ
ತಪ್ತಮನದ ಸುಪ್ತಭಾವನೆಗಳಲ್ಲಿ
ತರಂಗಗಳ ಬಡಿದೆಬ್ಬಿಸಿದೆಯಲ್ಲ!!
ಅರ್ಥವಾಗದ ಮನದ ಈ ತಲ್ಲಣದ
ಸೆಳೆತವ, ಮೋಡಿಯ, ಆಕರ್ಷಣೆಯ
ಏನೆಂದು ಕರೆಯಲಿ, ಏನಿದೆಂದು ಹೆಸರಿಸಲಿ?
ವಿಧ: Basic page
February 05, 2006
ಬರುವಾಗ ನಾ ಏನ ತರಲಿಲ್ಲ
ಹೋಗುವಾಗ ನಾ ಏನ ಒಯ್ಯುವದಿಲ್ಲ
ಅಲ್ಲಿ ನಿನಗೇನೂ ಕೊಡಲಾಗುವುದಿಲ್ಲ
ಆದರೂ ನೀ ಎನ್ನ ಹಿಂದೆ ಬರುವೆಯಾ?
ನನ್ನದೇನಿಲ್ಲವೆಂದು ತಿಳಿದವ ನಾ
ಅದಕಾಗಿಯೇ ಬಂದದೆಲ್ಲವನ್ನೂ
ಇರದವರಿಗೆ ನಾ ಕೊಡುತಿರುವೆ
ಅದಕಾಗಿ ನೀನೇಕೆ ಹಪಹಪಿಸುವೆ
ಉಣಲು ಕೊಡುತಿಹ ಆ ದೈವ
ಉಡಲು ಕೊಡುತಿಹ ಈ ನನ್ನ ದೇವ
ಎಲ್ಲ ನಡೆಯುತಿಹುದು ದೈವ ಸಂಕಲ್ಪದಂತೆ
ಇನ್ನೇಕೆ ಬೇಕು ನನಗೆ ಮನೆಯ ಚಿಂತೆ
ಇಲ್ಲದವರೇ ಬನ್ನಿ ನೀವೇ ನನ್ನ ಅತಿಥಿ
ಇಂದು ನನಗಿದೆ ಕೊಡುವ ಸ್ಥಿತಿ
ನಾಳೆ ಏನಾಗುವುದೋ ನನ್ನ ಗತಿ
ಅದ ಚಿಂತಿಸಲು…
ವಿಧ: Basic page
February 05, 2006
ಮುಸ್ಸಂಜೆ ಮಬ್ಬಿನಲಿ
ಕಚಗುಳಿಯನೀನಿಟ್ಟು
ಪಿಸುಮಾತನೊಂದ ನುಡಿದೆ!
ನನ್ನ ಸೋಕಿದೆ ಬಿಗಿದು
ತಬ್ಬಿದೆ ಕಣ್ಣಿಗೆಲ್ಲೂಕಾಣದೆ
ಕಣ್ಣಚುಂಬಿಸಿ ಮೌನ ಬಿಂಬಿಸಿ
ಹ್ರುದಯವನ್ನೇ ಕಲುಕಿದೆ
ಮುಂಗುರುಳ ಹಾರಿಸಿ ಕೊರಳ
ಸವರಿಸಿ ಎನ್ನೊಳಗೆ ನೀ ಸೇರಿದೆ
ಏನೂ ಅರಿಯದ ನನ್ನನೆಳೆದು
ದೂರತೀರಕೆ ಸಾಗಿದೆ
ನನ್ನನೆಳೆದಿಹ ಕೈಯ್ಯ ಜಾಡನು
ಮನವು ಅರಸುತ ಸೋತಿದೆ
ತಂಪನೀಯುವ ಇದರಭಾವವು
ಹುಚ್ಹು ಮೋಹಕವೆನಿಸಿದೆ
ಏನಿದೇನಿದು ಮಿಂಚುಸಂಚಲಿ
ಹೊರಳಿಹೋಗುವ ಕನಸ್ಗಳೋ
ಮರಲಿ ಹೋಗದೆ ಹೊರಳಿ ನೋಡಿದೆ
ನಿನ್ನ ಬರುವನು ಹಿಡುಕಿದೆ…
ವಿಧ: ಬ್ಲಾಗ್ ಬರಹ
February 05, 2006
ಇದು ನಿಜವೇ?
ಇಂದು ಕನ್ನಡಪ್ರಭದ ಅಂತರ್ಜಾಲ ಪ್ರತಿಯನ್ನು ಓದುತ್ತಿರುವಾಗ ಒಂದು ವಿಚಿತ್ರ ಕಾಣಿಸಿತು. ಯಡಿಯೂರಪ್ಪನವರ ಚಿತ್ರಗಳನ್ನು ಬೇಕೆಂದೇ ಮಾರ್ಪಡಿಸಲಾಗಿದೆಯೇ? ಕೆಲವು ಚಿತ್ರಗಳಲ್ಲ್ಲಿ ಅವರ ಮೀಸೆಯನ್ನು ಅರ್ಧ ಬೋಳಿಸಲಾಗಿದೆ. ಅದೂ ಕೆಲವೊಮ್ಮೆ ಬಲ ಅರ್ಧ, ಕೆಲವೊಮ್ಮೆ ಎಡ ಅರ್ಧ!
ಇದು ಅವರು ಅಂಬೇಡ್ಕರ್ ಚಿತ್ರಕ್ಕೆ ಮಾಡಿದ ಅಗೌರವಕ್ಕೆ ಪ್ರತ್ಯುತ್ತರವೇ? ಇದು ನಿಜವೇ ಆದರೆ ಕನ್ನಡಪ್ರಭದ ಈ ನಡೆ ಎಷ್ಟು ಸರಿ?
ಚಿತ್ರಗಳ ಕೊಂಡಿ ಇಲ್ಲಿದೆ.
ಹತ್ತನೇ ಮತ್ತು ಹದಿನೈದನೆಯ ಚಿತ್ರಗಳನ್ನು ನೋಡಿ
ವಿಧ: Basic page
February 04, 2006
ಓಂ ಭದ್ರಂ ಕರ್ಣೇಭಿಶೃಣುಯಾಮ ದೇವಾ:|
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾ:|
ಸ್ಥಿರೈರಂಗೈಸ್ತುಷ್ಟುವಾಗ್ಂಸಸ್ತನೂಭಿ:|
ವ್ಯಶೇಮ ದೇವಹಿತಂ ಯದಾಯು:|
ಸ್ವಸ್ತಿ ನ ಇಂದ್ರೋ ವೃದ್ಧಶ್ರವಾ:|
ಸ್ವಸ್ತಿ ನ: ಪೂಷಾ ವಿಶ್ವವೇದಾ:|
ಸ್ವಸ್ತಿನಸ್ತಾರ್ಕ್ಷ್ಯೋ ಅರಿಷ್ಟನೇಮಿ:|
ಸ್ವಸ್ತಿನೋ ಬೃಹಸ್ಪತಿರ್ದಧಾತು|
ಓಂ ಶಾಂತಿ: ಶಾಂತಿ: ಶಾಂತಿ:||
ಇಂದು ರಥ ಸಪ್ತಮಿ. ಮಾರ್ಗಶೀರ್ಷ ಮಾಸ ಶುಕ್ಲಪಕ್ಷದ ಏಳನೆಯದಿನ. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ…