ವಿಧ: ಬ್ಲಾಗ್ ಬರಹ
January 11, 2006
ಅನೇಕ ಕನ್ನಡಿಗರಿಗೆ ಕನ್ನಡವು ಕೇವಲ ಮನೆಯ ಭಾಷೆ, ಇದಕ್ಕಿಂತ ದೊಡ್ಡ ಭಾಷೆಗಳು ಇವೆ. ಅವು ಬಂದಾಗ ಕನ್ನಡಕ್ಕೆ ಮನ್ನಣೆ ಕೊಡಬಾರದು ಅಂತ ಭಾವನೆ. ಕನ್ನಡ ಒಂದು ರಾಷ್ಟ್ರಭಾಷೆ ಅಂತ ಅನೇಕ ಕನ್ನಡಿಗರಿಗೆ ತಿಳಿದಿಲ್ಲ.
ನಮಗೆ ಪರ ಊರಿನಿಂದ ಬಂದರೆ ಹೆಚ್ಚು,ಅದೇ ನಮ್ಮ ರಾಜ್ಯದಲ್ಲಿ ಅದು ಇದ್ದರು ನಾವು ಅದಕ್ಕೆ ಮರ್ಯಾದೆ ಕೊಡುವದಿಲ್ಲ, ಅದು ಸಿನೆಮಾ ಅಗಿರಬಹುದು,ನಟ-ನಟಿ, ಪುಸ್ತಕ,ಸಾಹಿತ್ಯ ಅಥಾವ ದೇವರುಗಳು. ನಮಗೆ ಎಲ್ಲಾ ಬೇರೆ ಕಡೆಯಿಂದ ಆಮದು ಆಗಬೇಕು. ಇದರಿಂದ ನಮ್ಮ ಸಂಸ್ಕ್ರುತಿ ಯಾವ ತರಹ ಮೇಲೆ ಧಾಳಿ…
ವಿಧ: ಚರ್ಚೆಯ ವಿಷಯ
January 11, 2006
ಈ ಬಾರಿಯ ಪಂಪ ಪ್ರಶಸ್ತಿಗೆ [kn:ಎಸ್. ಎಲ್. ಭೈರಪ್ಪ|ಎಸ್ ಎಲ್ ಭೈರಪ್ಪನವರು] ಆಯ್ಕೆಯಾಗಿದ್ದಾರೆ. ಪ್ರಜಾವಾಣಿಯಲ್ಲಿ [:http://prajavani.net/jan112006/4075920060111.php|ಇದರ ಬಗ್ಗೆ ಬಂದ ಸುದ್ದಿ ನೋಡಿ].
ವಿಧ: ಬ್ಲಾಗ್ ಬರಹ
January 10, 2006
ದಾಟ್ಸ್ ಕನ್ನಡದಲ್ಲಿ ರವಿ ಬೆಳಗೆರೆಯವರ ಕಾಲಂ ಇದೆ. ಇತ್ತೀಚೆಗಿನ ಲೇಖನ [http://thatskannada.indiainfo.com/column/ravibelagere/090106muslim.html|ಓದಿ]. ರವಿ ಬೆಳಗೆರೆಯವರ ಎಲ್ಲ ಲೇಖನಗಳಿಗೆ ನನ್ನ ಸಹಮತವಿಲ್ಲದಿದ್ದರೂ ಈ ಲೇಖನಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಅವರ ಲೇಖನದ ಧಾಟಿಯಲ್ಲೇ ನಾನು ಮತ್ತು ಒಂದೆರಡು ಸ್ನೇಹಿತರು, ಲೇಖಕರು ಮಾತನಾಡಿಕೊಂಡಿದ್ದೆವು. ಇದೇ ಧಾಟಿಯ ಪತ್ರವೊಂದನ್ನು ವಾಚಕರವಾಣಿಗೆ ಬರೆದು ಕಳುಹಿಸಬೇಕು ಎಂದೂ ಅಂದುಕೊಂಡಿದ್ದೆವು.
ಸಿಗೋಣ,
ಪವನಜ
[http://www.…
ವಿಧ: ಚರ್ಚೆಯ ವಿಷಯ
January 10, 2006
ಕುವೆಂಪು ಅವರ ಗೀತೆ "ತೆರೆದಿದೆ ಮನೆ ಓ ಬಾ ಅತಿಥಿ" ಈ ಹಾಡಿನಲ್ಲಿ ಎರಡು ಪದಗಳು ನಮಗೆ ಆಸಕ್ತಿ, ಕುತೂಹಲವನ್ನುಂಟು ಮಾಡಿದೆ.ಕುತೂಹಲದ ಪರಿಹಾರಕ್ಕಾಗಿ ಈ ಪ್ರಯತ್ನ :)
ನೇಸರುದಯದೊಳು ಬಹಿಯಾ ಬಾತಿಂಗಳಂದದಲಿ ಬಹಿಯಾ ಬಾ
ಪ್ರಶ್ನೆ:೧. ಇದು 'ಬಹೆಯಾ' ನೋ? ಅಥವಾ 'ಬಹೆಯಾ' ನೋ? ಅಥವಾ ಮತ್ತಾವುದಾದರು ಪದವೆ?೨. ಆ ಪದದ ಅರ್ಥವೇನು?
ಮುಂದಿನದು:ಬೇಸರವಿದಕೂ ಸರಿಸುವ ಹೊಸ ಬಾಳಉಸಿರಾಗಿ ಬಾ ಬಾ ಬಾ
ಪ್ರಶ್ನೆ:೧. ಇದು 'ಬೇಸರವಿದಕೂ' ನೋ? ಅಥವಾ 'ಬೇಸರವಿದನೂ' ನೋ? ಅಥವಾ ಮತ್ತಾವುದಾದರು ಪದವೆ?೨. ಆ ಸಾಲಿನ…
ವಿಧ: Basic page
January 09, 2006
ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ...
***** ಭಾಗ ೧.
ನನ್ನ ಹೆಸರು ಸೂರ್ಯ ಶರ್ಮ. ಈ ಕತೆಯ ಪ್ರಾರಂಭದ ಕಾಲದಲ್ಲಿ ನಾನು ಕರ್ನಾಟ್ಟ ದೇಶದ ವಾತಾಪಿ ನಗರಿಯಲ್ಲಿ ವಾಸವಾಗಿದ್ದೆ. ನಮ್ಮ ತಾತ ಮುತ್ತಾತಂದಿರು ವೈದಿಕ ಬ್ರಾಹ್ಮಣರಾಗಿದ್ದರಂತೆ. ಚಾಳುಕ್ಯ ವಂಶದ ಪುಲಿಕೇಶಿಯು ಕದಂಬರನ್ನು ಅವರ ರಾಜಧಾನಿಯಾದ ವೈಜಯಂತಿ ನಗರಿಯಲ್ಲಿ ಸೋಲಿಸಿ ಚಾಳುಕ್ಯ ಅರಸುತನವನ್ನು ಸ್ಥಾಪಿಸಿದ್ದನ್ನು ನಮ್ಮ ಅಜ್ಜ ಪ್ರತ್ಯಕ್ಷವಾಗಿ ಕಂಡಿದ್ದರೆಂದು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ಹೇಳಿದ್ದ ನೆನಪು. ನಮ್ಮ ಅಜ್ಜ ಕೊನೆಯ…
ವಿಧ: Basic page
January 09, 2006
*****ಭಾಗ ೨
ಭಟರು ನನ್ನನ್ನು ಸರಪಣಿಗಳಿಂದ ಕಟ್ಟಿ ಹಾಕಿ ಒಂದು ಕತ್ತಲೆ ಕಾರಾಗ್ರಹಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿದರು. ಆ ಕಾರಾಗ್ರಹದಲ್ಲಿ ಎಷ್ಟು ಹೊತ್ತು ಕಳೆಯಿತೋ ಎನೋ ಒಂದೂ ಹೇಳಲಾರೆ. ಆ ಕತ್ತಲೆ ಕೋಣೇಯಲ್ಲಿ ಹಗಲಿಲ್ಲ, ರಾತ್ರಿಯಿಲ್ಲ. ಮೂಷಕಗಳು ಎಲ್ಲೆಡೆ ಓಡಾಡುತ್ತಿದ್ದವು. ವ್ಯಾಘ್ರ ಮಾಡಿದ ಗಾಯಗಳಿಂದ ಪೀಢೆ ಹೆಚ್ಚಾಗಿತ್ತು. ಊಟವೇನೋ ಮಾಡಿದ್ದೇ ನೆನಪಿಲ್ಲ. ನನ್ನ ಯೋಜನೆಗಳು, ಸ್ವಪ್ನಗಳು ಭಂಗವಾದವೆಂದುಕೊಳ್ಳುತ್ತ ಅದೃಷ್ಟದೇವಿಯನ್ನು ದೂರತೊಡಗಿದೆ.
ಕೊನೆಗೊಮ್ಮೆ ಭಟರು ಬಂದು ನನ್ನ…
ವಿಧ: Basic page
January 09, 2006
***** ಭಾಗ ೩.
ಮರುದಿನ ಏನಾಯಿತೆಂಬುದು ನಾನು ಊಹಿಸಬಲ್ಲನಾಗಿದ್ದೆ. ನನಗೆ ಮರಣ ದಂಡನೆ ವಿಧಿಸಲಾಗಿರುವುದಾಗಿ ಡಂಗೂರ ಸಾರಿರಬೇಕು. ನೆರೆಹೊರೆಯವರೆಲ್ಲ ನಾನಿನ್ನು ಬದುಕಿಲ್ಲ ಎಂದುಕೊಂಡಿರಬೇಕು. ಅಮ್ಮ ನಮ್ಮ ತಂದೆ.... "ಒಹ್! ಹೇಗಾದರೂ ಮನೆಗೆ ನನ್ನ ನಿಜ ಸಂಗತಿಯ ಬಗ್ಗೆ ಸಂದೇಶ ತಲುಪಿಸಬೇಕು" ನನಗೆ ನಾನೇ ಹೇಳಿಕೊಂಡೆ. ನನಗೆ ಮರಣದಂಡನೆ ವಿಧಿಸಲಿಲ್ಲವಾದರೂ ನನ್ನನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ನನ್ನ ಕಾತರ ಹೆಚ್ಚಾಗತೊಡಗಿತು. ನಾನು ರಾಜ, ಮಹಾಮಂತ್ರಿಗಳೊಡನೆ ಮಾತನಾಡಿದ್ದು ಕನಸೋ ನನಸೋ ಎಂದು…
ವಿಧ: Basic page
January 09, 2006
*****ಭಾಗ ೪
ನಾನು ವಾತಾಪಿನಗರವನ್ನು ಸೇರಿದಾಗ ಸಂಜೆಯಾಗಿತ್ತು. ಊರಿನಾಚೆ ಸ್ವಲ್ಪ ದೂರದಲ್ಲಿ ಒಂದು ಸ್ಥಳದಲ್ಲಿ ನಿಂತು, ಕುದುರೆಗೆ ನೀರು, ಹುರುಳಿ ಕೊಟ್ಟೆ. ನಾನೂ ಬೆಳಗಿನಿಂದ ಏನೂ ತಿಂದಿರಲಿಲ್ಲ, ಹೊಟ್ಟೆ ಹಸಿದಿತ್ತು ಆದರೆ ತಿನ್ನಲೇನು ಸಿಕ್ಕಲಿಲ್ಲ. ಇನ್ನೂ ಪೂರ್ಣ ಕತ್ತಲೆಯಾಗಿರಲಿಲ್ಲ. ನಾನು ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗಲು ಸ್ವಲ್ಪ ಸಮಯವಿತ್ತು. ಮನೆಗೆ ಹೋಗೋಣವೋ ಬೇಡವೋ ಎಂದು ಸುಮಾರು ಹೊತ್ತು ಯೋಚನೆ ಮಾಡಿದೆ. ನಾನು ಎಲ್ಲರ ಪಾಲಿಗೆ ಸತ್ತು ಹೋಗಿದ್ದೆ. ನಾನು ಕಳುಹಿಸಿದ ಓಲೆ ಮನೆ…
ವಿಧ: Basic page
January 09, 2006
***** ಭಾಗ ೫
ಇಷ್ಟು ಹೊತ್ತಿಗೆ ಗುಪ್ತ ಸಂದರ್ಶನ ಸ್ಥಳಕ್ಕೆ ಹೋಗುವ ಸಮಯವಾಗಿತ್ತು. ಊರಾಚೆ ಪಾಳುಬಿದ್ದ ಗುಡಿಯ ಬಳಿ ಹೋದೆ. ಎಲ್ಲೆಡೆ ಊರ್ಣನಾಭಗಳು ಬಲೆ ಕಟ್ಟಿ ಬಾಗಿಲ ಅಡ್ಡಕ್ಕೆ ಕಲ್ಲಿನ ಸ್ಥಂಭವೊಂದು ಬಿದ್ದಿತು. ಕುದುರೆಯ ಜೀನು ಬಿಚ್ಚಿ ಅದನ್ನು ತಿರುಗಿಸಿ ಅದರ ಬೆನ್ನ ಮೇಲೆ ಎರಡು ಏಟು ಕೊಟ್ಟೆ. ಕುದುರೆ ಲಾಯಕ್ಕೆ ಓಡಿತು. ನಾನು ಕೆಲ ಕ್ಷಣಗಳ ಕಾಲ ಮರೆಯಲ್ಲಿ ಕಾಯುತ್ತಿದ್ದೆ. ಎಲ್ಲವೂ ನಿಶ್ಯಬ್ಧವೆನೆಸಿದಮೇಲೆ ನಿಧಾನವಾಗಿ ಎದ್ದು ಬಾಗಿಲ ಅಡ್ಡಕ್ಕೆ ಬಿದ್ದ ಸ್ಥಂಭದಿಂದ ನುಸಿದು ಗುಡಿಯೊಳಗೆ…
ವಿಧ: Basic page
January 09, 2006
*****ಭಾಗ ೬
ಅಂದು ಅಲ್ಲೇ ಮಲಗಿದ್ದೆ. ನನಗೀಗ ಮಲಗಲು ಹೆಚ್ಚು ಸಿದ್ಧತೆ ಬೇಕಾಗಿರಲಿಲ್ಲ. ಎಲ್ಲಿಯಂದರಲ್ಲಿ, ಮಲಗುವ ಸಾಮರ್ಥ್ಯ ಬೆಳೆಸಿಕೊಂಡಿದ್ದೆ. ಆದರೆ ಮಲಗಿದಾಗಲೂ ಒಂದು ಕಣ್ಣು ತೆರೆದೇ ಮಲಗಿರುತ್ತಿದ್ದೆ. ಮಾರನೆಯ ದಿನ ಬೆಳಗ್ಗೆ ಎದ್ದು ಹೊರಡಲು ಸಿದ್ಧನಾಗಿ ಕುಳಿತೆ. ನಾನೆಂದೂ ಅಂತಹ ಪ್ರಯಾಣ ಮಾಡಿದವನಲ್ಲ. ಏನೇನು ಸಿದ್ಧತೆಗಳು ಬೇಕೆಂದು ನನಗೆ ತಿಳಿದಿರಲಿಲ್ಲ. ಎಲ್ಲವೂ ಬೇರೆಯಾರಾದರೂ ಮಾಡಬಹುದು, ಇಲ್ಲವಾದರೆ ಹೇಗೋ ಅನುಸರಿಸಿಕೊಂಡು ಹೋಗೋಣವೆಂದು ಹಾಗೇ ಹೊರಡಲು ಸಿದ್ಧನಾದೆ.
ಯಾರಿಗೂ…