ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
January 13, 2006
ಸಂಪದದ ಗೆಳೆಯರಿಗಾಗಿ ಈ ಬಾರಿ ಲಿಂಗದೇವರು ಹಳೆಮನೆಯವರ ಸಂದರ್ಶನ. ಶ್ರೀ ಹಳೆಮನೆಯವರು ೧೯೭೩ರಿಂದ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥೆ, ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಪ್ರಮುಖ ನಾಟಕಕಾರ, ಸಾಂಸ್ಕೃತಿ ಚಿಂತಕ, ಅಂಕಣಕಾರ, ಭಾಷಾ ತಜ್ಞ ಹಳೆಮನೆಯವರು ಈ ಸಂದರ್ಶನದಲ್ಲಿ ೧.ಕನ್ನಡ ಶಾಸ್ತ್ರೀಯ ಭಾಷೆ ೨. ಕನ್ನಡದ ರಂಗಭೂಮಿ ೩. ಅನ್ಯಭಾಷಿಕರಿಗಾಗಿ ಕನ್ನಡ ಕಲಿಸುವ ಕೆಲಸ ೪. ಜಾಗತೀಕರಣ ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ…
ಲೇಖಕರು: sanket
ವಿಧ: ಬ್ಲಾಗ್ ಬರಹ
January 13, 2006
ಕೆಲವು ಸಂಗತಿಗಳು ಮತ್ತೆ ಮತ್ತೆ ಸ್ಫೂರ್ತಿ ತರುತ್ತವೆ ವಸಂತ, ಮೊಗ್ಗು ಮತ್ತೆ ಹುಣ್ಣಿಮೆಯ ಚಂದ್ರ ಅಲೆ, ಮೋಡ ಮತ್ತೆ ಮಧ್ಯಾಹ್ನದ ಮಳೆ ಒಮ್ಮೊಮ್ಮೆ ಅನ್ನಿಸುತ್ತದೆ... ನಾನು ಇನ್ನೂ ಬದುಕಿದ್ದೇನೆ ಸುತ್ತಲಿನ ಸೌಂದರ್ಯವನ್ನು ನೋಡುತ್ತಿದ್ದೇನೆ ನನ್ನಜ್ಜನ ಪಿಸುಮಾತನ್ನು ಈಗಲೂ ಕೇಳಬಲ್ಲೆ 'ಸುಮ್ಮನೆ ನೋಡದಿರು, ಕಂದಾ... ಅನುಭವಿಸು..' ಬಹಳ ಪ್ರಯತ್ನಿಸಿದ್ದೇನೆ ನಾನು ನೋಡದ್ದನ್ನೂ ಅನುಭವಿಸಲು ಆದರೆ ಒಂದನ್ನು ಗಮನಿಸಿ.. ಇದಕ್ಕೆ ಕಾರಣ ನಾನಲ್ಲ... ಇಂಥ ಅಸೂಕ್ಷ್ಮ ಆಟಗಳನ್ನು ಆಡುವುದು ಕಾಲ. ಬೇರೆ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
January 13, 2006
[ಸುಮ್ಮನೆ ಕಣ್ಣಿಗೆ ಕಂಡದ್ದನ್ನು ವಿವರವಾಗಿ ಬರೆಯುವ ಅಭ್ಯಾಸ ಮಾಡಬೇಕು ಅನ್ನಿಸಿತು. ಹೀಗೆ ಇವತ್ತು ಬರೆದೆ. ಯಾವ ಉದ್ದೇಶವೂ ಇಲ್ಲ.ಸುಮ್ಮನೆ ಇನ್ನೊಂದು ಥರ ಬರೆಯುವ ಅಭ್ಯಾಸಕ್ಕೆ ಬರೆದದ್ದು. ಏನನ್ನಿಸುತ್ತದೆ? ಅನ್ನಿಸುವುದಿಲ್ಲವೋ!] ಧನುರ್ಮಾಸದ ಕೊನೆಯ ದಿನ. ಹಾಗಂತ ಗೊತ್ತಾಗಿದ್ದು ನಿನ್ನೆ ದಿನ ಚಂದ್ರ “ನಾಳೆ ಬೆಳಗ್ಗೆ ದೇವಸ್ಥಾನಕ್ಕೆ ಹೋಗಬೇಕು” ಅಂತ ಹೇಳಿ ವಿವರಿಸಿದಾಗ. ಕನ್ನೇಗೌಡನ ಕೊಪ್ಪಲಿನ ಚಂದ್ರಮೌಳಿ ದೇವಸ್ಥಾನದಲ್ಲಿ ಬೆಳಗಿನ ಆರು ಗಂಟೆಗೇ ಹೆಣ್ಣುಮಕ್ಕಳ ಸಂದಣಿ. ಸ್ನಾನ ಮಾಡಿ ಒದ್ದೆ…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 13, 2006
ಪ್ರಸಿದ್ಧ ಕತೆಗಾರ ಯಶವಂತ ಚಿತ್ತಾಲರ ಅವರ 'ಪಯಣ' ಕಥೆಯನ್ನು ಓದಿ ೨೫ ವರ್ಷ ಆದರೂ ನೆನಪು ಚೆನ್ನಾಗಿದೆ. ಇದಕ್ಕೆ ಅದರ ರಹಸ್ಯಮಯತೆ ಕಾರಣ. ಕಥಾನಾಯಕ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮದುವೆಯಾಗಿಲ್ಲ , ಒಬ್ಬಂಟಿ. ಹೀಗಾಗಿ ಕಂಪನಿಯ ಎಲ್ಲ ಪರಊರ್‍ಇನ ಕೆಲಸಕ್ಕೂ ಅವನನ್ನೇ ಕಳಿಸುತ್ತಾರೆ. ಅವನೂ ಯಾವಾಗಲೂ ಸಿದ್ಧನೇ. ಅವನ ಬ್ಯಾಗು ಸದಾಸನ್ನದ್ಧ. ಎಲ್ಲಿಗೆ ಎಂದರೆ ಅಲ್ಲಿಗೆ , ಯಾವಾಗ ಎಂದರೆ ಆವಾಗ. ಹೀಗೇ ಒಂದು ಸಲ ಯಾವುದೋ ಊರು, ಯಾವುದೋ…
ಲೇಖಕರು: muralihr
ವಿಧ: ಬ್ಲಾಗ್ ಬರಹ
January 13, 2006
ಎಷ್ಟೋ ಜನ ಡೀಪ್ thinkers na ಭೇಟಿ ಮಾಡಿದ್ದೇನಿ. ಆದರೆ ಈ thinkಇನ್ಗ್ ಅನ್ನೋದು ಎನು ?? ಈ think ಮಾಡೋ ಮನುಜ ಯಾರು ?? ನಾವು ಯಾಕೆ ಅಷ್ಟೊ೦ದು think ಮಾಡ್ತೀವಿ. thinker ಮತ್ತು thinking thoughts ಬೇರೆಯೇನು ?? ಕೊನೆಗೆ "ನಾನು" ಅನ್ನೋದು ಒ೦ದು thought ಮಾತ್ರವೇನು. ?? ಅಲ್ಲಾ ಅ೦ದರೆ "ನಾನ್ ಯಾರು" ??? ಶಿವೋಹಮ್ಮಾ ?? ಅದೂ ಇಲ್ಲಾ ದಾಸೋಹ೦ ?? ಇಲ್ಲಾ ಅಹ೦ ಬ್ರಹ್ಮಸ್ಮಿ ನೋ ??
ಲೇಖಕರು: Rohit
ವಿಧ: ಚರ್ಚೆಯ ವಿಷಯ
January 13, 2006
http://www.prajavani.net/jan132006/4100020060113.php
ಲೇಖಕರು: pvravi
ವಿಧ: Basic page
January 13, 2006
ನಾನು ಆರ್ಕಿಯಾಲಾಗಿಕಲ್ ಸರ್ವೇ ಆಫ್ ಇಂಡಿಯಾದ ಒಬ್ಬ ವಿಜ್ಞಾನಿ. ಮೂಲತಃ ಕನ್ನಡವನಾದರೂ ಹರಿಯಾಣಾ ರಾಜ್ಯದ ಬಳಿ ಹಳ್ಳಿಯೊಂದರಲ್ಲಿ ಸಂಶೋಧನೆ ನಡೆಯುತ್ತಿದ್ದ ಕಾರಣ ನಾನು ಅಲ್ಲಿಗೆ ಹೋಗಬೇಕಾಗಿ ಬಂದಿತ್ತು. ನಾನು ಅಲ್ಲಿ ಕೆಲಸ ಮಾಡಬೇಕಾಗಿದ್ದ ಕಾಲಕ್ಕೆ ಆ ಹಳ್ಳಿಯ ಬಳಿ ಇದ್ದ ಪ್ರವಾಸಿ ಮಂದಿರದಲ್ಲಿ ನನ್ನ ವಾಸಕ್ಕೆ ಏರ್ಪಾಡು ಮಾಡಲಾಗಿತ್ತು. ಸರಸ್ವತೀ ನಾಗರೀಕತೆ - ಪ್ರಪಂಚವು ಹೆಚ್ಚಾಗಿ ಸಿಂಧು ಕಣಿವೆ ನಾಗರೀಕತೆಯೆಂದೇ ಅರಿತಿದ್ದ - ಮತ್ತು ಆ ಜನಾಂಗದ ಒಂದು ಊರಿನ ಅವಶೇಶಗಳನ್ನು ಅಗಿದು…
ಲೇಖಕರು: hpn
ವಿಧ: ಬ್ಲಾಗ್ ಬರಹ
January 12, 2006
ಒಂದಷ್ಟು ಗೀಚಿದ್ದು ಏನಾದರೂ ಸೀರಿಯಸ್ ಆಗಿ ಬರೆಯೋಣವೆಂದರೆ ಸಮಯವಿಲ್ಲ. ಸಮಯವಿದ್ದಾಗ ಟೈಪ್ ಮಾಡೋಕ್ಕೆ ಸೋಮಾರಿತನ - ಬೇರೆ ಕೆಲಸಕ್ಕೆ ನೆಗೆದು ಬಿಡುವ ಮನಸ್ಸು. ಬರೆದದ್ದು ಕೆಲವು ಅರ್ಧಕ್ಕೇ ನಿಂತು ಕಂಪ್ಯೂಟರಿನಲ್ಲಿ ಹಾಯಾಗಿ ಮಲಗಿವೆ. ಭಾಷಾ ಜ್ಞಾನವೂ ಈ ನಿಟ್ಟಿನಲ್ಲಿ ಒಂದಷ್ಟು ತೊಡಕು - ಬರೆಯಲು ಹೋದರೆ ಪದಗಳೇ ಹೊಳೆಯದು. ಕೊನೆಗೆ ಹಲವು ಬಾರಿ ಬರೆಯೋ 'ಮೂಡು' ಇಲ್ಲದೆ ಏನೂ ಬರೆಯದೆ ಮನಸ್ಸಿನಲ್ಲಿದ್ದದ್ದನ್ನು ನುಂಗಿಕೊಂಡುಬಿಟ್ಟದ್ದೂ ಉಂಟು. ಈ ನಡುವೆ ಒಂದಷ್ಟು randomಆಗಿ ಗೀಚಿದ್ದು (ಅಲ್ಲ…
ಲೇಖಕರು: hpn
ವಿಧ: ಚರ್ಚೆಯ ವಿಷಯ
January 12, 2006
ಬೆಂಗಳೂರಿನಲ್ಲಿ ನಿನ್ನೆಯಿಂದ ಕ್ಲಾಸಿಕ್ ಕನ್ನಡ ಚಲನಚಿತ್ರಗಳ ಫೆಸ್ಟಿವಲ್ ಪ್ರಾರಂಭವಾಗಿದೆ. ಬೆಂಗಳೂರಿನ ಪ್ರೆಸ್ ಕ್ಲಬ್ ಹಾಗೂ ಇನ್ಫರ್ಮೇಶನ್ ಡಿಪಾರ್ಟ್ಮೆಂಟಿನವರು ಇದನ್ನು ನಡೆಸಿಕೊಡುತ್ತಿದ್ದಾರೆ. ೧೬ ಕನ್ನಡ ಸಿನಿಮಾಗಳನ್ನು ವಾರವಿಡಿ ತೋರಿಸಲಾಗುವುದಂತೆ. 'ಸಂಸ್ಕಾರ, 'ಘಟಶ್ರಾದ್ಧ', 'ನಾಂದಿ', 'ಭೂದಾನ', 'ಒಂದಾನೊಂದು ಕಾಲದಲ್ಲಿ' ಚಿತ್ರಗಳ ಪಟ್ಟಿಯಲ್ಲಿರುವ ಕೆಲವು. ಬುಧವಾರ 'ಬಾದಾಮಿ ಹೌಸ್' ನಲ್ಲಿ ಪ್ರಾರಂಭವಾದ ಈ ಫೆಸ್ಟಿವಲ್ ಜನವರಿ ೧೭ರ ವರೆಗೂ ನಡೆಯುತ್ತದೆ. ಈ ಬಗ್ಗೆ [:http://…
ಲೇಖಕರು: olnswamy
ವಿಧ: Basic page
January 12, 2006
ಒಮ್ಮೆ ಮುಲ್ಲಾನ ನಂಟನೊಬ್ಬ ಬಂದಿದ್ದ. ದೂರದ ಹಳ್ಳಿಯಲ್ಲಿದ್ದವನು ಅವನು. ಬರುವಾಗ ಬಾತುಕೋಳಿಯೊಂದನ್ನು ತಂದಿದ್ದ. ಮುಲ್ಲಾಗೆ ಸಂತೋಷವಾಯಿತು. ಬಾತು ಕೋಳಿಯನ್ನು ಬೇಯಿಸಿ ಸಾರು ಮಾಡಿಸಿದ. ಅತಿಥಿಯೊಡನೆ ಖುಷಿಯಾಗಿ ಊಟ ಮಾಡಿದ. ಕೊಂಚ ಹೊತ್ತಿನ ನಂತರ ಇನ್ನೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯ” ಅಂದ. ಮತ್ತೊಬ್ಬ ಬಂದ. “ನಾನು ನಿಮ್ಮ ನಂಟನ ಗೆಳೆಯನ ಗೆಳೆಯ” ಅಂದ. ಹೀಗೇ ಗೆಳೆಯನ ಗೆಳೆಯನ...ಎಂದು ಹೇಳಿಕೊಂಡು ಬರುವವರು ಹೆಚ್ಚಾದರು. ಎಲ್ಲರೂ ಊಟಕ್ಕೆ ಬಂದವರೇ ಹೊರತು ಮುಲ್ಲಾಗೆ ಕೊಡಲು ಏನೂ…