ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
January 12, 2006
ಒಮ್ಮೆ ನಸ್ರುದ್ದೀನ್ ಮುಲ್ಲಾ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದ. ಅಲ್ಲಿ ಭೋಜನದ ಏರ್ಪಾಟು ನಡೆದಿತ್ತು. ಮುಲ್ಲಾ ಸೀದಾ ಹೋಗಿ ಅಲ್ಲಿದ್ದ ಎಲ್ಲಕ್ಕಿಂತ ಚೆಲವಾದ, ಎತ್ತರವಾದ ಕುರ್ಚಿಯ ಮೇಲೆ ಕುಳಿತ. ಕಾವಲುಗಾರರ ಮುಖ್ಯಸ್ಥ ಓಡಿ ಬಂದ. “ಸ್ವಾಮಿ, ಇದು ಮುಖ್ಯ ಅತಿಥಿಗಳಿಗೆ ಮೀಸಲಾದ ಸ್ಥಳ” ಎಂದ. “ಓಹೋ, ನಾನು ಮುಖ್ಯ ಅತಿಥಿಗಿಂತ ದೊಡ್ಡವನು” ಎಂದ ಮುಲ್ಲಾ. “ನೀವು ರಾಯಭಾರಿಗಳೇ?” ಕಾವಲುಗಾರ ಕೇಳಿದ. “ಅದಕ್ಕಿಂತ ಮಿಗಿಲಾದವನು.” “ಹೌದೇ! ಹಾಗಾದರೆ ನೀವು ಮಂತ್ರಿಗಳಿರಬೇಕು?” “ಅಲ್ಲ…
ಲೇಖಕರು: muralihr
ವಿಧ: Basic page
January 11, 2006
ಅಪ್ಪು ಮತ್ತು ಗಣು ಪರಿಚಯ ಈ ನಾಟಕ 'ಅಪ್ಪು ' ಎ೦ಬ ಆನೆಯ ಕಥೆ. ಈ ನಾಟಕ ವಿಷಯ ಒ೦ದು ಪ್ರಾಣಿ ಮಾತ್ರವಲ್ಲಾ. ಪ್ರಾಣಿ ಮತ್ತು ಮನುಷ್ಯನ ಸ೦ಬ೦ಧದ ಬಗ್ಗೆ, ಮನುಷ್ಯನ ಕ್ರೂರತೆ, ಮನುಷ್ಯನ ಆಕಾ೦ಕ್ಷೆ ಹಾಗು ಇವುಗಳಿ೦ದ ಆಗಬಹದಾದ ಪರಿಣಾಮ ಇದರ ಬಗ್ಗೆ ಸೂಕ್ಷ್ಮ ಗಮನವನ್ನು ಹರಿಸಿದ್ದೇನೆ. ಮನುಷ್ಯನ ಸ೦ಬ೦ಧ ಇಲ್ಲೆ ಬಳಕೆಯ ಸ೦ಬ೦ಧ - ಆತನಿಗೆ ಎಲ್ಲವೂ ಬೇಕು ತನ್ನ ಕಾರ್ಯ ಪೂರ್ಣವಾಗುವವರೆಗು ಆಮೇಲೆ ತನಗೆ ಪ್ರಯೊಜಿಕವಾಗದೆ ಇರುವುದು ನಿಷ್ಪ್ರಯೋಜಕ. ಪಾತ್ರಗಳು ************ ಪ್ರಾಣಿ ಪಾತ್ರಗಳು…
ಲೇಖಕರು: tvsrinivas41
ವಿಧ: Basic page
January 11, 2006
ಅಮ್ಮ ಒಬ್ಬಳೇ ಎಲ್ಲರಿಗೂ - ಹಾಗೇ ನನಗೂ ಅವಳ ನೆನೆಯಲು ಸುಖ ಮಿಶ್ರಿತ ದು:ಖ ಅವಳು ಹತ್ತಿರ ಸುಳಿಯೇ ಮನಕಾನಂದ ಜಗದಲಿ ನನಗವಳೇ ಸ್ಫುರದ್ರೂಪಿ ಅಂದದ ದುಂಡು ಮುಖಕೆ ಅಂಟಿನ ಕುಂಕುಮ ಕೆನ್ನೆಗೆ ಸುವಾಸಿತ ಅರಿಶಿನದ ಲೇಪನ ಕೊರಳೆಂದೂ ಕಾಣಲಿಲ್ಲ ಒಂದಪರಂಜಿ ಚಿನ್ನ ಎಂದಿಗೂ ಬಿಟ್ಟುಕೊಡಲಿಲ್ಲ ತನ್ನತನವನ್ನ ಓಂನಾಮ ಕಲಿಸಿದವಳೇ ನೀನಲ್ಲವೇನಮ್ಮ ಕೃಶಕಾಯನಿಗೆ ಹೆಚ್ಚಿನ ಆರೈಕೆ ನೀಡಿದೆಯಮ್ಮ ಕೈತುತ್ತ ನೀಡಿ ಅಮೃತ ಉಣಿಸಿದವಳು ನನ್ನ ಪುಂಡಾಟಿಕೆಯ ಸಹಿಸಿದವಳು ಪೂಜೆಗೆ ಪಾರಿಜಾತ ಹೆಕ್ಕಿ ತರಿಸಿದವಳು ಅದರಲಿ…
ಲೇಖಕರು: ಪ್ರವೀಣ್
ವಿಧ: ಬ್ಲಾಗ್ ಬರಹ
January 11, 2006
ಅನೇಕ ಕನ್ನಡಿಗರಿಗೆ ಕನ್ನಡವು ಕೇವಲ ಮನೆಯ ಭಾಷೆ, ಇದಕ್ಕಿಂತ ದೊಡ್ಡ ಭಾಷೆಗಳು ಇವೆ. ಅವು ಬಂದಾಗ ಕನ್ನಡಕ್ಕೆ ಮನ್ನಣೆ ಕೊಡಬಾರದು ಅಂತ ಭಾವನೆ. ಕನ್ನಡ ಒಂದು ರಾಷ್ಟ್ರಭಾಷೆ ಅಂತ ಅನೇಕ ಕನ್ನಡಿಗರಿಗೆ ತಿಳಿದಿಲ್ಲ. ನಮಗೆ ಪರ ಊರಿನಿಂದ ಬಂದರೆ ಹೆಚ್ಚು,ಅದೇ ನಮ್ಮ ರಾಜ್ಯದಲ್ಲಿ ಅದು ಇದ್ದರು ನಾವು ಅದಕ್ಕೆ ಮರ್ಯಾದೆ ಕೊಡುವದಿಲ್ಲ, ಅದು ಸಿನೆಮಾ ಅಗಿರಬಹುದು,ನಟ-ನಟಿ, ಪುಸ್ತಕ,ಸಾಹಿತ್ಯ ಅಥಾವ ದೇವರುಗಳು. ನಮಗೆ ಎಲ್ಲಾ ಬೇರೆ ಕಡೆಯಿಂದ ಆಮದು ಆಗಬೇಕು. ಇದರಿಂದ ನಮ್ಮ ಸಂಸ್ಕ್ರುತಿ ಯಾವ ತರಹ ಮೇಲೆ ಧಾಳಿ…
ಲೇಖಕರು: hpn
ವಿಧ: ಚರ್ಚೆಯ ವಿಷಯ
January 11, 2006
ಈ ಬಾರಿಯ ಪಂಪ ಪ್ರಶಸ್ತಿಗೆ [kn:ಎಸ್. ಎಲ್. ಭೈರಪ್ಪ|ಎಸ್ ಎಲ್ ಭೈರಪ್ಪನವರು] ಆಯ್ಕೆಯಾಗಿದ್ದಾರೆ. ಪ್ರಜಾವಾಣಿಯಲ್ಲಿ [:http://prajavani.net/jan112006/4075920060111.php|ಇದರ ಬಗ್ಗೆ ಬಂದ ಸುದ್ದಿ ನೋಡಿ].
ಲೇಖಕರು: pavanaja
ವಿಧ: ಬ್ಲಾಗ್ ಬರಹ
January 10, 2006
ದಾಟ್ಸ್ ಕನ್ನಡದಲ್ಲಿ ರವಿ ಬೆಳಗೆರೆಯವರ ಕಾಲಂ ಇದೆ. ಇತ್ತೀಚೆಗಿನ ಲೇಖನ [http://thatskannada.indiainfo.com/column/ravibelagere/090106muslim.html|ಓದಿ]. ರವಿ ಬೆಳಗೆರೆಯವರ ಎಲ್ಲ ಲೇಖನಗಳಿಗೆ ನನ್ನ ಸಹಮತವಿಲ್ಲದಿದ್ದರೂ ಈ ಲೇಖನಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಅವರ ಲೇಖನದ ಧಾಟಿಯಲ್ಲೇ ನಾನು ಮತ್ತು ಒಂದೆರಡು ಸ್ನೇಹಿತರು, ಲೇಖಕರು ಮಾತನಾಡಿಕೊಂಡಿದ್ದೆವು. ಇದೇ ಧಾಟಿಯ ಪತ್ರವೊಂದನ್ನು ವಾಚಕರವಾಣಿಗೆ ಬರೆದು ಕಳುಹಿಸಬೇಕು ಎಂದೂ ಅಂದುಕೊಂಡಿದ್ದೆವು. ಸಿಗೋಣ, ಪವನಜ [http://www.…
ಲೇಖಕರು: mana
ವಿಧ: ಚರ್ಚೆಯ ವಿಷಯ
January 10, 2006
ಕುವೆಂಪು ಅವರ ಗೀತೆ "ತೆರೆದಿದೆ ಮನೆ ಓ ಬಾ ಅತಿಥಿ" ಈ ಹಾಡಿನಲ್ಲಿ ಎರಡು ಪದಗಳು ನಮಗೆ ಆಸಕ್ತಿ, ಕುತೂಹಲವನ್ನುಂಟು ಮಾಡಿದೆ.ಕುತೂಹಲದ ಪರಿಹಾರಕ್ಕಾಗಿ ಈ ಪ್ರಯತ್ನ :) ನೇಸರುದಯದೊಳು ಬಹಿಯಾ ಬಾತಿಂಗಳಂದದಲಿ ಬಹಿಯಾ ಬಾ ಪ್ರಶ್ನೆ:೧. ಇದು 'ಬಹೆಯಾ' ನೋ? ಅಥವಾ 'ಬಹೆಯಾ' ನೋ? ಅಥವಾ ಮತ್ತಾವುದಾದರು ಪದವೆ?೨. ಆ ಪದದ ಅರ್ಥವೇನು? ಮುಂದಿನದು:ಬೇಸರವಿದಕೂ ಸರಿಸುವ ಹೊಸ ಬಾಳಉಸಿರಾಗಿ ಬಾ ಬಾ ಬಾ ಪ್ರಶ್ನೆ:೧. ಇದು 'ಬೇಸರವಿದಕೂ' ನೋ? ಅಥವಾ 'ಬೇಸರವಿದನೂ' ನೋ? ಅಥವಾ ಮತ್ತಾವುದಾದರು ಪದವೆ?೨. ಆ ಸಾಲಿನ…
ಲೇಖಕರು: pvravi
ವಿಧ: Basic page
January 09, 2006
ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... ***** ಭಾಗ ೧. ನನ್ನ ಹೆಸರು ಸೂರ್ಯ ಶರ್ಮ. ಈ ಕತೆಯ ಪ್ರಾರಂಭದ ಕಾಲದಲ್ಲಿ ನಾನು ಕರ್ನಾಟ್ಟ ದೇಶದ ವಾತಾಪಿ ನಗರಿಯಲ್ಲಿ ವಾಸವಾಗಿದ್ದೆ. ನಮ್ಮ ತಾತ ಮುತ್ತಾತಂದಿರು ವೈದಿಕ ಬ್ರಾಹ್ಮಣರಾಗಿದ್ದರಂತೆ. ಚಾಳುಕ್ಯ ವಂಶದ ಪುಲಿಕೇಶಿಯು ಕದಂಬರನ್ನು ಅವರ ರಾಜಧಾನಿಯಾದ ವೈಜಯಂತಿ ನಗರಿಯಲ್ಲಿ ಸೋಲಿಸಿ ಚಾಳುಕ್ಯ ಅರಸುತನವನ್ನು ಸ್ಥಾಪಿಸಿದ್ದನ್ನು ನಮ್ಮ ಅಜ್ಜ ಪ್ರತ್ಯಕ್ಷವಾಗಿ ಕಂಡಿದ್ದರೆಂದು ಚಿಕ್ಕವನಾಗಿದ್ದಾಗ ನಮ್ಮ ಅಜ್ಜಿ ಹೇಳಿದ್ದ ನೆನಪು. ನಮ್ಮ ಅಜ್ಜ ಕೊನೆಯ…
ಲೇಖಕರು: pvravi
ವಿಧ: Basic page
January 09, 2006
*****ಭಾಗ ೨ ಭಟರು ನನ್ನನ್ನು ಸರಪಣಿಗಳಿಂದ ಕಟ್ಟಿ ಹಾಕಿ ಒಂದು ಕತ್ತಲೆ ಕಾರಾಗ್ರಹಕ್ಕೆ ತಳ್ಳಿ ಬಾಗಿಲನ್ನು ಮುಚ್ಚಿದರು. ಆ ಕಾರಾಗ್ರಹದಲ್ಲಿ ಎಷ್ಟು ಹೊತ್ತು ಕಳೆಯಿತೋ ಎನೋ ಒಂದೂ ಹೇಳಲಾರೆ. ಆ ಕತ್ತಲೆ ಕೋಣೇಯಲ್ಲಿ ಹಗಲಿಲ್ಲ, ರಾತ್ರಿಯಿಲ್ಲ. ಮೂಷಕಗಳು ಎಲ್ಲೆಡೆ ಓಡಾಡುತ್ತಿದ್ದವು. ವ್ಯಾಘ್ರ ಮಾಡಿದ ಗಾಯಗಳಿಂದ ಪೀಢೆ ಹೆಚ್ಚಾಗಿತ್ತು. ಊಟವೇನೋ ಮಾಡಿದ್ದೇ ನೆನಪಿಲ್ಲ. ನನ್ನ ಯೋಜನೆಗಳು, ಸ್ವಪ್ನಗಳು ಭಂಗವಾದವೆಂದುಕೊಳ್ಳುತ್ತ ಅದೃಷ್ಟದೇವಿಯನ್ನು ದೂರತೊಡಗಿದೆ. ಕೊನೆಗೊಮ್ಮೆ ಭಟರು ಬಂದು ನನ್ನ…
ಲೇಖಕರು: pvravi
ವಿಧ: Basic page
January 09, 2006
***** ಭಾಗ ೩. ಮರುದಿನ ಏನಾಯಿತೆಂಬುದು ನಾನು ಊಹಿಸಬಲ್ಲನಾಗಿದ್ದೆ. ನನಗೆ ಮರಣ ದಂಡನೆ ವಿಧಿಸಲಾಗಿರುವುದಾಗಿ ಡಂಗೂರ ಸಾರಿರಬೇಕು. ನೆರೆಹೊರೆಯವರೆಲ್ಲ ನಾನಿನ್ನು ಬದುಕಿಲ್ಲ ಎಂದುಕೊಂಡಿರಬೇಕು. ಅಮ್ಮ ನಮ್ಮ ತಂದೆ.... "ಒಹ್! ಹೇಗಾದರೂ ಮನೆಗೆ ನನ್ನ ನಿಜ ಸಂಗತಿಯ ಬಗ್ಗೆ ಸಂದೇಶ ತಲುಪಿಸಬೇಕು" ನನಗೆ ನಾನೇ ಹೇಳಿಕೊಂಡೆ. ನನಗೆ ಮರಣದಂಡನೆ ವಿಧಿಸಲಿಲ್ಲವಾದರೂ ನನ್ನನ್ನು ಕರೆದೊಯ್ಯಲು ಯಾರೂ ಬರಲಿಲ್ಲ. ನನ್ನ ಕಾತರ ಹೆಚ್ಚಾಗತೊಡಗಿತು. ನಾನು ರಾಜ, ಮಹಾಮಂತ್ರಿಗಳೊಡನೆ ಮಾತನಾಡಿದ್ದು ಕನಸೋ ನನಸೋ ಎಂದು…