ವಿಧ: Basic page
December 25, 2005
ಪ್ರೀತಿ ಇರುವಲ್ಲಿ ಯಾವ ಕರ್ತವ್ಯವೂ ಇರುವುದಿಲ್ಲ. ನಿಮ್ಮ ಹೆಂಡತಿಯ ಬಗ್ಗೆ ನಿಮ್ಮಲ್ಲಿ ಪ್ರೀತಿ ಇದ್ದರೆ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನಿಮ್ಮ ಆಸ್ತಿ, ನಿಮ್ಮ ಸಮಸ್ಯೆ, ನಿಮ್ಮ ಕಳವಳ, ನಿಮ್ಮ ಸಂತೋಷ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನೀವು ಆಳುವ ಯಜಮಾನ, ಆಕೆ ಆಳಿಸಿಕೊಳ್ಳುವ ಸೇವಕಿಯಾಗಿರುವುದಿಲ್ಲ. ನೀವು ಗಂಡಸು, ಆಕೆ ನಿಮ್ಮ ವಂಶೋದ್ಧಾರಕನನ್ನು ಹೆರುವ ಹೆಣ್ಣು ಯಂತ್ರ ಆಗಿರುವುದಿಲ್ಲ. ನಿಮ್ಮ ಸಂತೋಷಕ್ಕೆ ಆಕೆಯನ್ನು ಬಳಸಿಕೊಂಡು ಆಮೇಲೆ ಬೇಡವೆಂದು ಆಕೆಯನ್ನು…
ವಿಧ: ಬ್ಲಾಗ್ ಬರಹ
December 24, 2005
ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು [http://www.prajavani.net/nov232005/35373200501123.php|ಮುಂದಿಟ್ಟರು]. ಅದಕ್ಕೆ ಪ್ರತಿಕ್ರಿಯೆಯಾಗಿ [http://www.prajavani.net/dec142005/37588200501214.php|ಚ. ಹ. ರಘುನಾಥ] ಅವರು ಸದ್ಯಕ್ಕೆ ಅನುವಾದದ ತಂತ್ರಾಂಶ ತುಂಬ ದೂರದ ಕನಸು. ಅತೀ ಅಗತ್ಯವಾಗಿ ಆಗಬೇಕಾದ ಇತರೆ ಕೆಲಸಗಳೇ ಬಾಕಿ ಇವೆ ಎಂದು ಬರೆದರು. ಈ…
ವಿಧ: ಬ್ಲಾಗ್ ಬರಹ
December 24, 2005
ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ | ಶ್ರೀದತ್ತಾಸ್ಮಾನ್‍ಪಾಹಿ ದೇವಾದಿದೇವ ||
ಭಾವಗ್ರಾಹ್ಯ ಕ್ಲೇಷಹಾರಿನ್‍ಸುಕೀರ್ತೆ | ಘೋರಾತ್‍ಕಷ್ಟಾದ್‍ಉದ್ಧರಾಸ್ಮಾನ್‍ನಮಸ್ತೆ || ೧ ||
ತ್ವಂ ನೊ ಮಾತಾ ತ್ವಂ ಪಿತಾಪ್ತೊಽಧಿಪಸ್ತ್ವಂ | ತ್ರಾತಾ ಯೋಗಕ್ಷೇಮಕೃತ್‍ಸದ್ಗುರುಸ್ತ್ವಮ್ |
ತ್ವಂ ಸರ್ವಸ್ವಂ ನೊಽಪ್ರಭೊ ವಿಶ್ವಮೂರ್ತೆ | ಘೋರಾತ್ಕಷ್ಟಾದುದ್ಧಾರಾಸ್ಮಾನ್ನಮಸ್ತೆ || ೨ ||
ಪಾಪಂ ತಾಪಂ ವ್ಯಾಧಿಮಾಧಿಂ ಚ ದೈನ್ಯಂ | ಭೀತಿಂ ಕ್ಲೇಷಂ ತ್ವಂ ಹರಾಶುತ್ವದನ್ಯಂ ||
ತ್ರಾತಾರಂ ನೋ ವೀಕ್ಷ್ಯ ಈಶಾಸ್ತಜೂರ್ತೆ |…
ವಿಧ: Basic page
December 24, 2005
ಮಾಗಿಯ ಛಳಿಯ ಹೊದಿಕೆಯ ಆಪ್ಯಾಯಮಾನತೆ
ಅಲಾರಾಂ ಹೊಡೆತವ ನಿಲಿಸ ಹೋಗೆ ತಣ್ಣನೆ ಅನುಭವ
ತೆರೆದ ಕಿಟಕಿಯ ಹೊರಗೆ ಮಂಜಿನ ಮುಸುಕು
ಮಡದಿ ಇತ್ತ ಸುಡು ಬಿಸಿ ಕಾಫಿಯ ಹಬೆ
ತಣ್ಣನೆಯ ಕಲ್ಲಿನ ಬಚ್ಚಲಲಿ
ಸುಡು ಬಿಸಿ ನೀರಿನ ಅಭಿಷೇಕ
ತಣ್ಣಗೆ ಕುಳಿತಿಹ ಸಾಲಿಗ್ರಾಮಕೆ
ಬಿಸಿ ಬಿಸಿ ಧೂಪ ದೀಪಗಳಾರತಿ
ಬೆಚ್ಚನೆಯ ಕೈ ತಯಾರಿಸಿ
ತಣ್ಣನೆ ಡಬ್ಬಿಗೆ ಹಾಕಿದ
ಬಿಸಿ ಬಿಸಿ ಅವರೆಕಾಳು ಉಪ್ಪಿಟ್ಟು
ಮನೆ ಬಿಡಲು ಮನದಲೇಕೋ ತಣ್ಣನೆ ಅನುಭವ
ದೂರದಿ ಸ್ನೇಹಿತನ ಕರೆ ಕೇಳಿಯೇ
ಮನದಲಿ ಬಿಸಿ ಬಿಸಿ ಅನುಭವ
ಛಳಿಯ ಲೆಕ್ಕಿಸದೆ…
ವಿಧ: ಬ್ಲಾಗ್ ಬರಹ
December 24, 2005
ಒಂದರ ಹಿಂದೆ ಒಂದರಂತೆ ಕಂಪ್ಯೂಟರಿನಲ್ಲಿ ಏನೋ ಕೆಲಸ ಹಚ್ಚಿಕೊಂಡು ಬೆಳಿಗ್ಗೆಯಿಂದ ಸಮಯಹೋದದ್ದೇ ತಿಳಿಯಲಿಲ್ಲ. ಸ್ವಲ್ಪ ಪೆಂಡಿಂಗ್ ಕೆಲಸಗಳು ಮುಗಿದವು, ಆದರೆ ಓದಿದ್ದು ಮಾತ್ರ ಸೊನ್ನೆ.
ಮೊನ್ನೆ ಮೊನ್ನೆ, ನನ್ನ Homepageನ ಡೇಟಬೇಸ್ ಬ್ಯಾಕಪ್ ತೆಗೆಯುವಾಗ [:http://www.hpnadig.net/blog/index.php/archives/2005/12/18/unicode-on-mysql-messed-up-ups-gone-dud/|ಒಂದಷ್ಟು ಹೆಚ್ಚು ಕಡಿಮೆಯಾಗಿ] ಇಡಿಯ ತಾಣದ ಯೂನಿಕೋಡ್ ನಲ್ಲಿರುವ ಮಾಹಿತಿ ಗಬ್ಬೆದ್ದುಹೋಯ್ತು. ಇವತ್ತು…
ವಿಧ: Basic page
December 23, 2005
ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿ ಮತ್ತು ಅಲ್ಲಿನ ಜೂನಿಯರ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾರೆ. ಜೀವಶಾಸ್ತ್ರ ಅವರ ಅಧ್ಯಯನ ವಿಷಯ. ಒಟ್ಟು ಹದಿಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಜೊತೆಗೇ ಆನಂದಕಂದ ಗ್ರಂಥಮಾಲೆಯನ್ನು ನಡೆಸುತ್ತಿದ್ದಾರೆ.…
ವಿಧ: Basic page
December 23, 2005
ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ. ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಕಷ್ಟದ ಕೆಲಸ. ಈ ಕೆಲಸ ಏಕಾಂತದಲ್ಲಿ, ಲೋಕದಿಂದ ದೂರವಾಗಿದ್ದು ಒಂಟಿತನದಲ್ಲಿ ಸಾಧಿಸಬಹುದಾದ ಕೆಲಸವಲ್ಲ. ನಮ್ಮನ್ನು ನಾವು ತಿಳಿಯುವುದು ಮುಖ್ಯ. ಆದರೆ ಅದಕ್ಕಾಗಿ ನಾವು ಸಂಬಂಧಗಳನ್ನೆಲ್ಲ ಕಡಿದುಕೊಳ್ಳಬೇಕಾಗಿಲ್ಲ. ಒಂಟಿಯಾಗಿದ್ದು, ಏಕಾಂತದಲ್ಲಿದ್ದು ಅಥವಾ ಮನಶ್ಶಾಸ್ತ್ರಜ್ಞರನ್ನು ಕಂಡು, ಆಚಾರ್ಯರ ದರ್ಶನ ಪಡೆದು, ಅಥವಾ…
ವಿಧ: Basic page
December 23, 2005
ನೀನಲ್ಲದನ್ಯದೈವವುಂಟೆಂಬವನ ಬಾಯ
ಕೆನ್ನೆವಾರೆ ಸೀಳಿದಲ್ಲದೆ ಎನ್ನ ಮುನಿಸು ಹೋಗದಯ್ಯಾ
ಎನ್ನ ಕೋಪವಡಗದಯ್ಯಾ
ಎನ್ನ ಬಿನ್ನಪವನವಧರಿಸು ಕೂಡಲಸಂಗಮದೇವಾ (ವಚನ ಸಂಖ್ಯೆ ೭೫೨, ಬಸವಣ್ಣನವರ ಷಟ್ಸ್ಥಲ ವಚನಗಳು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆ)
ಇದು ಬಸವಣ್ಣನ ಒಂದು ವಚನ. ಕೂಡಲಸಂಗಮನಲ್ಲದೆ ಬೇರೆಯ ದೇವರು ಉಂಟು ಎಂಬುವಾತನ ಬಾಯನ್ನು ಕೆನ್ನೆಯೆಲ್ಲ ಹರಿದುಹೋಗುವಂತೆ ಸೀಳುವವರೆಗೆ ನನ್ನ ಮುನಿಸು ಹೋಗದು, ನನ್ನ ಕೋಪ ತಣಿಯದು. ನನ್ನ ಬಿನ್ನಹವನ್ನು ಕೇಳು ಎಂಬುದು ವಚನದ ಅರ್ಥ.
ವಚನದ ಅರ್ಥದಲ್ಲಿ…
ವಿಧ: Basic page
December 23, 2005
ಕಳಿಂಗದ ಮೇಲಿನ ವಿಜಯದ ಸುದ್ದಿಯನ್ನು ಅಶೋಕನಿಗೆ ತಿಳಿಸಲು ಓಲೆಗಾರರು ಕುದುರೆಗಳಲ್ಲಿ ಹೊರಟರು. ಈ ಸುದ್ದಿಯನ್ನು ಮೊದಲು ತಿಳಿಸಿ ಬಹುಮಾನ ಪಡೆಯಬೇಕೆಂಬ ಹವಣಿಕೆಯಲ್ಲಿ ಸ್ಪರ್ಧೆಯೇ ಏರ್ಪಟ್ಟು ಅಶೋಕನಿಗೆ ಬೇಗ ವಿಜಯದ ಸುದ್ದಿ ತಲುಪಿತು. ಅದನ್ನು ಕೇಳಿದೊಡನೆ ಆಕಾಶದೆಡೆಗೆ ತಲೆಯೆತ್ತಿ ದೇವರನ್ನು ನೆನೆಯಲಿಲ್ಲ, ಬದಲಿಗೆ ಅದೇ ಶಾಂತ ಭಾವವು ಮುಂದುವರೆದು ಮುಖದಲ್ಲಿ ಸಣ್ಣ ನಗೆ ಹೊಮ್ಮಿತು. ಅಷ್ಟು ದೊಡ್ಡ ವಿಜಯ ಸಾಧಿಸಿದ ಸಂತೋಷವು, ಒಂದು ಸಣ್ಣ ನಗೆಯಲ್ಲಿ ವ್ಯಕ್ತವಾಗಿ, ಕ್ಷಣದಲ್ಲಿ ಮಾಯವಾದುದನ್ನು…
ವಿಧ: Basic page
December 23, 2005
ನೆತ್ತಿಯ ಮೇಲೆ ಕೈಯಿಟ್ಟು ದೂರ ದಿಗಂತದೆಡೆಗೆ ಕಣ್ಣು ಹಾಯಿಸಿದಾಗ , ನದಿಯ ಅಲೆಯೊಂದು ಮಂದಗತಿಯಲ್ಲಿ ಸಾಗಿಬರುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪ ಎತ್ತರಕ್ಕೆ ಏರಿ ಸೂಕ್ಷ್ಮವಾಗಿ ಗಮನಿಸಿದರೆ, ಆನೆಗಳು, ಕುದುರೆಗಳು ಮತ್ತು ಮನುಷ್ಯರು ಸಾಗರೋಪಾದಿಯಾಗಿ ಜೊತೆಗೂಡಿ ಬರುತ್ತಿರುವುದು ಕಾಣುತ್ತಿತ್ತು. ನಿಸ್ಸಂಶಯವಾಗಿ ಅದು ಮೌರ್ಯ ಸಾಮ್ರಾಜ್ಯದ ಸೈನ್ಯವಾಗಿತ್ತು.
ಆ ಅಲೆಯನ್ನು ಕಂಡ…