ಎಲ್ಲ ಪುಟಗಳು

ಲೇಖಕರು: pvravi
ವಿಧ: Basic page
January 09, 2006
***** ಭಾಗ ೧೪ ಸೃಘ್ನ, ಮಾತೀಪುರ, ಬ್ರಹ್ಮಪುರ, ಗೋವಿಶನ, ಅಹಿಕ್ಷೇತ್ರ, ವಿರಸನ ದೇಶಗಳ ಸಂದರ್ಶನದ ನಂತರ ಕಪೀಥ ದೇಶವನ್ನು ತಲುಪಿದೆವು. ನನ್ನ ಮಿತ್ರನಿಗಿಲ್ಲಿ ಸ್ವಲ್ಪ ಸಮಾಧಾನವಾಯಿತು. ಇಲ್ಲಿ ಬೌದ್ಧ ಧರ್ಮ ಅನುಯಾಯಿಗಳು ಹೆಚ್ಚು ಸಂಖ್ಯೆಯಲ್ಲಿದ್ದು ಅವನನ್ನು ಸ್ವಾಗತಿಸಿದರು. ನಮ್ಮ ದೇವಾಲಯಗಳೂ ಸುಮಾರು ಸಂಖ್ಯೆಯಲ್ಲಿದ್ದು, ಈ ಪ್ರದೇಶದ ಇಷ್ಟದೇವ ಮಹೇಶ್ವರನಾಗಿದ್ದ. ಈ ಸ್ಥಳದಲ್ಲಿದ್ದ ಒಂದು ಸುಂದರವಾದ ಸ್ತೂಪದೊಳಗೆ ತಥಾಗಥ ಬುದ್ಧನ ಹಲವಾರು ದಂತಕತೆಗಳು ಕೇಳಿಬಂದವು. ಇವೆಲ್ಲವನ್ನೂ ನನ್ನ…
ಲೇಖಕರು: pvravi
ವಿಧ: Basic page
January 09, 2006
*****ಭಾಗ ೧೫ ಕನ್ಯಾಕುಬ್ಜವನ್ನು ಸೇರಿ ಹಲವು ದಿನಗಳ ಕಾಲ ನಾನು ದೇವಾಲಯವೊಂದರಲ್ಲಿ ತಂಗಿದ್ದು ಆಚೆಯೇ ಬರಲಿಲ್ಲ. ನನ್ನ ಮಿತ್ರ ಬಂದಾಗಲೆಲ್ಲ ಅಸ್ವಸ್ಥನಾಗಿರುವೆ ಎಂದು ಹೇಳಿ ಕಳುಹಿಸಿಬಿಡುತ್ತಿದ್ದೆ. ಸುತ್ತ-ಮುತ್ತಲಿನ ಜನರ ಬಳಿ ನನ್ನನ್ನು ಹುಡುಕಿಕೊಂಡು ಯಾರಾದರೂ ಬಂದಿದ್ದರೇ ಎಂದು ಕೇಳಿ, ನನ್ನ ಮಿತ್ರನನ್ನು ಬಿಟ್ಟು ಯಾರೂ ಬಂದಿಲ್ಲವೆಂದು ಕೇಳಿ ಸ್ವಲ್ಪ ಧೈರ್ಯ ಹೆಚ್ಚಾಯಿತು. ಕೊನೆಗೆ ಆಗೊಮ್ಮೆ ಈಗೊಮ್ಮೆ ಆಚೆ ಬರಲು ಆರಂಭಿಸಿದೆ. ಕನ್ಯಾಕುಬ್ಜ ಪ್ರದೇಶ ಸುಮಾರು ಎರಡು ಸಹಸ್ರ ಕ್ರೋಶಗಳ…
ಲೇಖಕರು: pvravi
ವಿಧ: Basic page
January 09, 2006
*****ಭಾಗ ೧೬ ಹರ್ಷರಾಜನ ಧಾರ್ಮಿಕ ಸಮಾವೇಷದ ಸಮಯವಾಗಿತ್ತು. ಗಜಾರೋಹಣ ಮಾಡುತ್ತ, ನಗಾರಿಗಳ ಬಡಿತ ಹಾಗು ಕಹಳೆಗಳ ನಾದಗಳೊಂದಿಗೆ ಹರ್ಷರಾಜ ಕನ್ಯಾಕುಬ್ಜದ ಬಳಿ ಗಂಗಾ ನದಿಯ ಪಶ್ಚಿಮ ತೀರಕ್ಕೆ ಆಗಮಿಸಿದ. ಅವನ ಆಜ್ಞೆಯ ಮೇರೆಗೆ ಇಪ್ಪತ್ತು ಸಾಮಂತರು ಸುತ್ತ ಮುತ್ತಲಿನ ಪ್ರದೇಶಗಳಿಂದ ಬಂದು ನೆರೆದಿದ್ದರು. ಅವರೊಂದಿಗೆ ಮೂರು ಸಹಸ್ರ ಬ್ರಾಹ್ಮಣರು, ಮೂರು ಸಹಸ್ರ ಬೌದ್ಧ ಶ್ರಮಣರಲ್ಲದೆ ಮೇಧಾವಿಗಳು, ಶ್ರೀಮಂತರು ಮತ್ತಿತರರು ಅಲ್ಲಿಗೆ ಆಗಮಿಸಿದ್ದರು. ಎಲ್ಲರಿಗೂ ತಂಗಲು ಅಲ್ಲಿಯೇ ವಿಹಾರಗಳನ್ನು…
ಲೇಖಕರು: pvravi
ವಿಧ: Basic page
January 09, 2006
*****ಭಾಗ ೧೭ ಕೆಲವೇ ಕ್ಷಣಗಳು ಕಳೆದಿರಬೇಕು; ನನಗೆ ಪುನಃ ಜ್ಞಾನ ಬಂದಾಗ ನಾನಿನ್ನೂ ಅಲ್ಲಿಯೇ ಬಿದ್ದಿದ್ದೆ, ಆದರೆ ನನ್ನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ನನ್ನನ್ನು ಸುತ್ತುವರಿದ ಭಟರು ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಂತಿತ್ತು. ನನಗೂ ಕಣ್ಣು ಬಿಡಲು ಸಾಧ್ಯವಾಗಲಿಲ್ಲ; ಶಿರವು ನೋವಿನಿಂದ ಸಿಡಿದುಹೋಗುತ್ತಿದ್ದಂತಿತ್ತು. ಅಲುಗಾಡದೆ ಹಾಗೆಯೇ ಬಿದ್ದಿದ್ದೆ. ಒರ್ವ ಭಟ ಘರ್ಜಿಸಿದ "ಎಳೆದುಕೊಂಡು ನಡೆಯಿರಿ ಅವನನ್ನು. ಅರಮನೆಯ ಕಾರಾಗೃಹಕ್ಕೆ ತಳ್ಳಿ. ನಾಯಕನು ಅವನನ್ನು ನಾಳೆ…
ಲೇಖಕರು: pvravi
ವಿಧ: Basic page
January 09, 2006
*****ಭಾಗ ೧೮ ಕಾರಾಗೃಹದ ದಾರಿ ಕಲ್ಲು ಬಂಡೆಗಳ ಮೇಲೆ ಹಾಯ್ದು ಹೋಗುತ್ತಿತ್ತು. ಒಂದು ತಿರುವಿನಲ್ಲಿ ಎತ್ತರದ ಕಡಿದಾದ ಬಂಡೆಗಳು; ಬಂಡೆಗಳ ಮೇಲೆ ಒಂದು ಕಟ್ಟಡ ಕಾಣಿಸಿತು. ಕಟ್ಟಡಲ್ಲಿ ಕೆಲವೊಂದು ಬೆಳಕಿಂಡಿಗಳು ಕಾಣಿಸುತ್ತಿದ್ದವು. ಅವೇ ಕಾರಾಗೃಹ ಹಿಂಭಾಗದಲ್ಲಿರುವ ಸೆರೆ ಕೋಣೆಗಳಿರಬೇಕೆಂದು ಊಹಿಸಿದೆ. ಕಾರಾಗೃಹದ ಮುಂದೆ ಕೋಟೆಯಂತಹ ಭದ್ರತೆ. ಒಳಗೆ ಸೇರಿಸಿ ಬಾಗಿಲನ್ನು ಮುಚ್ಚಿದರೆ ಸೊಳ್ಳೆಯೂ ಹೊರ ಹೋಗಲಾರದು! ಈ ದುರ್ಗದಂತಹ ಕಾರಾಗೃಹಕ್ಕೆ ನನ್ನನ್ನು ಕರೆದೊಯ್ದರು. ಕುದುರೆಯಿಂದ ಕೆಳಗಿಳಿಸಿ…
ಲೇಖಕರು: pvravi
ವಿಧ: Basic page
January 09, 2006
*****ಭಾಗ ೧೯ ಅಷ್ಟರಲ್ಲಿ ಅವನು "ಅದು ಹಾಗಿರಲಿ, ನಿನ್ನ ಕತೆಯೇನು" ಎಂದು ನನ್ನನ್ನೇ ಕೇಳಿದ. "ನಾನು ದಕ್ಷಿಣ ದೇಶದವನು. ಮಹಾಚೀನಾ ದೇಶದ ಪ್ರಯಾಣಿಕನೊಬ್ಬನೊಡನೆ ಪ್ರಯಾಣ ಮಾಡುತ್ತಿದ್ದೆ. ಇಂದು ರಾತ್ರಿ ಮಹೇಶ್ವರ ದೇವಾಲಯದ ಜಗುಲಿಯ ಮೇಲೆ ಮಲಗಿದ್ದೆ. ಧಗ್ಗನೆ ಬಂದು ರಾಜಭಟರು ನಾನು ಗೂಢಚಾರನೆಂದು ಹೇಳಿ ನನ್ನನ್ನು ಬಂಧಿಸಿದರು. ನಂತರ ಇಲ್ಲಿಗೆ ಕಳುಹಿಸಿದರು" ಎಂದು ಸಂಕ್ಷಿಪ್ತವಾಗಿ ನನ್ನ ಕತೆ ಹೇಳಿದೆ. ನಾನು ನಿಜವಾಗಿ ಗೂಢಚಾರನಾಗಿದ್ದೆ ಎಂದು ಅವನಿಗೆ ಹೇಳಲಿಲ್ಲ. ನಾನು ಹೇಳಿದ ಕತೆಯನ್ನು…
ಲೇಖಕರು: pvravi
ವಿಧ: Basic page
January 09, 2006
*****ಭಾಗ ೨೦ ಎಲ್ಲವನ್ನೂ ಯೋಚಿಸಿದ್ದ ನಾನು ಗಂಗಾನದಿಯ ಶೀತಲತೆಯನ್ನು ಎಣಿಸಿರಲಿಲ್ಲ. ಗಂಗಾನದಿ ಹಿಮಾಲಯ ಪರ್ವತಗಳಿಂದ ಮಂಜು ಕರಗಿ ನೀರಾಗಿ ಹರಿದು ಬರುವ ನದಿ. ಹಾಗಾಗಿ ನದಿ ಬಹಳ ತಂಪಾಗಿರುವುದು. ರಾತ್ರಿಯ ಚಳಿಯಲ್ಲಿ ಆ ಕೊರೆಯುವ ನೀರಿನಲ್ಲೀಜುವುದೆಂದರೆ ಏನು! ಆದರೂ ಆದಷ್ಟೂ ನೀರಿನೊಳಗೇ ಈಜಿಕೊಂಡು ಸ್ವಲ್ಪ ದೂರ ಹೋದೆ. ನದಿ ವೇಗವಾಗಿ ಹರಿಯುತ್ತಿತ್ತು, ನಾನು ಪ್ರವಾಹದೊಡನೆಯೇ ಈಜುತ್ತಿದ್ದರಿಂದ ಮುಂದೆ ಹೋಗಲು ಹೆಚ್ಚು ಶಕ್ತಿ ಪ್ರಯೋಗ ಮಾಡುವ ಅವಕಾಶವಿರಲಿಲ್ಲ. ನಂತರ ಉಸಿರಾಡಲೆಂದು ಮೇಲೆ ಬಂದು…
ಲೇಖಕರು: muralihr
ವಿಧ: Basic page
January 09, 2006
ನಮ್ಮ ನಾಡಿನ ಹಿರಿಯ ಸಾಹಿತಿಗಳು ಬೆ೦ಗಳೂರ್ ಅನ್ನು ಬೆ೦ಗಳೂರು ಎ೦ದು ಬದಲಾಯಿಸಬೇಕು. ಇದ್ರಿ೦ದ ಕನ್ನಡ ದ ಬೆಳವಣಿಗೆ ಆಗುತ್ತೆ, ಕನ್ನಡ ನುಡಿ ಎಲ್ಲರ ನಾಲಿಗೆ ಮೇಲೆ ಇರುತ್ತೆ ಹಾಗೆ ಹೀಗ ಅ೦ತೆಲ್ಲಾ ನುಡಿದಿದ್ದಾರೆ. ಇದು ಪ್ರಯೋಜನ ವಿಲ್ಲದೆ ಅಕಾರ್ಯ. ಬರಿ ದುಡ್ಡೂ ಖರ್ಚು ಅಷ್ಟೆ. ಹೆ೦ಗೆ ಅ೦ತೀರೋ? 1 ಎಲ್ಲಾ ಸರ್ಕಾರಿ ಕಛೇರಿ ಗಳ ಮೇಲೆ ಮತ್ತೆ ಹೆಸರು ತಿದ್ದಬೇಕು (ಖರ್ಚು - ೨೫ ಲಕ್ಷ) 2 ಆಮೇಲೆ - ನಮ್ಮ ಅ೦ಗಡಿಗಳ ಮೇಲೆ ತಿದ್ದಿಸಬೇಕು. 3 ಬೊ೦ಬಾಯಿ ಮು೦ಬಾಯಿ ಅ೦ತ ಬದಲಾಗಿರುವಿದರಿ೦ದ ಇನ್ನು ಹೆಚ್ಚು…
ವಿಧ: ಬ್ಲಾಗ್ ಬರಹ
January 09, 2006
ಮೊನ್ನೆ ಅಂತರ್ಜಾಲದಲ್ಲಿ ಕಾಲಹರಣ ಮಾಡಬೇಕಾದರೆ ಈ ಕೊಂಡಿ ಸಿಕ್ಕಿತು ನೋಡಿ: ಫ್ರೀಡ್‍ಮನ್ ಬೆಂಗಳೂರಿಗೆ ಬಂದು ಜಾಗತೀಕರಣದ ಬಗ್ಗೆ, ಹಾಗು ಅದರಿಂದ ಬೆಂಗಳೂರಿಗೆ ಯಾವತರಹ ಪರಿಣಾಮವಾಗಿದೆ ಎಂಬುದನ್ನು ಈ documentaryಯಲ್ಲಿ ತೋರಿಸಿದ್ದಾರೆ. ಸುಮಾರು ೪೫ ನಿಮಿಷ ಇದೆ ವೀಡಿಯೋ. ಬ್ರಾಡ್‍ಬ್ಯಾಂಡ್ ಬೇಕಾಗಬಹುದು 
ಲೇಖಕರು: anil_rvce
ವಿಧ: Basic page
January 08, 2006
ಎದ್ದು ಬಂದು ಎದೆಗೆ ಒದ್ದರೆ, ಇದ್ದಿದ್ದು ಇದ್ದಂಗೆ ಹೇಳಿದ್ರಂತೆ ಅರ್ಧ ರಾತ್ರೀಲಿ ಕೊಡೆ ಹಿಡಿದರೆ ಅಲ್ಪನಿಗೆ ಐಶ್ವರ್ಯ ಸಿಕ್ಕಿದಳಂತೆ ಮೀಸೆ ಮಣ್ಣಾದ್ರು ಜಟ್ಟಿ ಕೆಳಗೆ ಬೀಳಲಿಲ್ಲವಂತೆ ಕುಲಾವಿ ಹೊಲಿಸೋಕೆ ಮುಂಚೆ ಕೂಸು ಹುಟ್ತಿಸಿದರು ಬೇವಿನ ಕಾಯಿಗೆ ಹಾಗಲ ಕಾಯಿ ಸಾಕ್ಷಿ ನಮ್ಮ ಮನೆ ಕಾವಲಿ ತೂತಾದರೆ ಎಲ್ಲಾರ ಮನೆ ದೋಸೆ ತೂತು ಚಂಡಾಲ ಶಿಶ್ಯರು ಚೋರ ಗುರು ಪೂಜಾರಿ ವರ ಕೊಟ್ರು ದೇವ್ರು ವರ ಕೊಡ ತುಸು ತಿನ್ನೋದಕ್ಕಿಂತ ಕಸ ತಿನ್ನು ಗಾದೆ ಸುಳ್ಳಾದರೂ ವೇದ ಸುಳ್ಳಾಗದು ನೀರು ಕುಡಿದ ಮೇಲೆ…