ಎಲ್ಲ ಪುಟಗಳು

ಲೇಖಕರು: vathsa
ವಿಧ: ಚರ್ಚೆಯ ವಿಷಯ
December 15, 2005
namaskara ella sadysarige. sampada kannadigarige ondu adbutha seva sallisthaa idde. antharjaaladalli kannadavannu raraji sutidhe
ಲೇಖಕರು: hpn
ವಿಧ: ಬ್ಲಾಗ್ ಬರಹ
December 14, 2005
ಮೊನ್ನೆ ಮೊನ್ನೆ ಹೊಸ ಫೈರ್ ಫಾಕ್ಸ್ ಹೊರಬಂದದ್ದೇ ತಡ, ಹೊಸತಾದ ಯರ್ರಾಭಿರ್ರೀ ಫಾಸ್ಟ್ ಇರೋ ಫೈರ್ ಫಾಕ್ಸ್ ನೋಡಿ ಒಂದೆಡೆ ಖುಷಿಯಾದ್ರೆ, ಪ್ಯಾಂಗೋ ಎನೇಬಲ್ ಈ ಸಲಾನೂ ಮಾಡ್ಲಿಲ್ವಲ್ಲ ಅನ್ನೋ ಬೇಜಾರು ಇನ್ನೊಂದೆಡೆ. ಪ್ಯಾಂಗೋ ಎನೇಬಲ್ ಮಾಡಿದ ಫೈರ್ ಫಾಕ್ಸ್ ಮಾತ್ರ ಕನ್ನಡವನ್ನ ಸರಿಯಾಗಿ ತೋರಿಸತ್ತೆ! ಮಾಮೂಲಿನಂತೆ  ಉಬುಂಟು, ಫೆಡೋರಾ, ಮ್ಯಾಂಡ್ರಿವ ಇವುಗಳೊಡನೆ ಬರುವ ಫೈರ್ ಫಾಕ್ಸಿನಲ್ಲಿ ಪ್ಯಾಂಗೋ ಎನೇಬಲ್ ಆಗಿಯೇ ಬರತ್ತೆ... ಆದರೆ ಅವುಗಳನ್ನ ನೋಡಿಕೊಳ್ಳೋರು ತಮ್ಮ ತಮ್ಮ ವಿತರಣೆಗಳಲ್ಲಿ ಹೊಸ…
ಲೇಖಕರು: karthik
ವಿಧ: ಬ್ಲಾಗ್ ಬರಹ
December 14, 2005
ಇವತ್ತು ಯಾಕೊ school ನಲ್ಲಿ ಕಲಿತ (ಬಾಯಿಪಾಠ ಮಾಡಿದ?) ಪಂಪನ ಈ ಪದ್ಯ ತುಂಬ ನೆನಪಿಗೆ ಬರ್ತಾ ಇತ್ತು. ಇದು ಮರೆತು ಹೊಗೊ ಅಷ್ಟರಲ್ಲಿ ಬರೆಯೋಣ ಅನ್ನುಸ್ತು ಅದಕ್ಕೆ ಈ ಪ್ರಯತ್ನ. ಇದು ನನಗೆ ನೆನಪಿರುವ ಹಾಗೆ ಬರೆದದ್ದು. ಆದ್ದರಿಂದ ಮೂಲ ಪದ್ಯಕ್ಕೂ ಇದಕ್ಕೂ ತುಂಬ ವ್ಯತ್ಯಾಸಗಳಿರುತ್ತವೆ. ತಿಳಿದವರು ಸರಿಪಡಿಸ ಬೇಕಾಗಿ ವಿನಂತಿ. (ok enough of disclaimers :)) (ಪಂಪನ ಕ್ಷಮೆ ಕೋರುತ್ತಾ.......) ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಿಂಪಿನಿಂಪುಗಳ್ಗಾಗರಮಾದ ಮಾನಸರೆ ಮಾನಸರಂತವರಾಗಿ…
ಲೇಖಕರು: olnswamy
ವಿಧ: Basic page
December 14, 2005
ನಿನ್ನೆ ರಾತ್ರಿ ನನ್ನ ತಂಗಿ ಫೋನು ಮಾಡಿದ್ದಳು. ಅವಳ ಮಗಳಿಗೆ, ಆರನೆಯ ಕ್ಲಾಸು ಓದುತ್ತಿರುವವಳು, ಮರುದಿನ ಕನ್ನಡ ಟೆಸ್ಟು ಇತ್ತಂತೆ. ಅದರಲ್ಲಿ ಒಂದು ಪ್ರಶ್ನೆಗೆ ಉತ್ತರ ಹೊಳೆಯದೆ ಫೋನು ಮಾಡಿದ್ದಳು. ಪ್ರಶ್ನೆ ಇದು: "ದೀನ' ಎಂಬುದಕ್ಕೆ ವಿರುದ್ಧಾರ್ಥ ಪದ ಬರೆಯಿರಿ. ದೀನ ಎಂಬ ಪದಕ್ಕೆ ವಿರುದ್ಧಾರ್ಥ ಪದ ಇಲ್ಲಮ್ಮ ಎಂದು ಹೇಳಿದರೆ ಪುಸ್ತಕದಲ್ಲಿ ಕೇಳಿದ್ದಾರಲ್ಲ ಅನ್ನುವ ಪ್ರಶ್ನೆ ಅವಳಿಂದ ಬಂದಿತು. ಪುಸ್ತಕದಲ್ಲಿ, ಅದರಲ್ಲೂ ಪಠ್ಯ ಪುಸ್ತಕದಲ್ಲಿ ಇರುವುದೆಲ್ಲ ಸತ್ಯ ಎಂಬ ಭ್ರಮೆ ನಮಗೆ ಹೋಗಿಲ್ಲ.…
ಲೇಖಕರು: gvmt
ವಿಧ: ಬ್ಲಾಗ್ ಬರಹ
December 13, 2005
[ ಕನ್ನಡ ಗ್ರಹದ ಓದುಗರಲ್ಲಿ ಕ್ಷಮೆ ಕೋರುತ್ತ, ಹಾಡಿದ್ದೆ ಹಾಡುವ ಕಿಸುಬಾಯಿ ದಾಸನ ಹಾಗೆ ಹಿಂದೆ ಬರೆದು ಬೇರಲ್ಲಿ ಹಾಕಿದ್ದನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ - ವೆಂ. ] ಬೋಳುತಲೆಯ ಪುರುಷನೊಬ್ಬ ತಲೆಗೆ ಬಿಸಿಲು ತಾಗಲು ತಾಳೆಮರದ ಬುಡದಲ್ಲಿನ ನೆರಳಿನಲ್ಲಿ ನಿಲ್ಲಲು ಬೀಳಲೊಂದು ದೊಡ್ಡ ಹಣ್ಣು ತಲೆಯು ಒಡೆದು ಸತ್ತನು; ಹಾಳು ವಿಧಿಯು ಬೆನ್ನುಹಿಡಿದು ಹೋದಲ್ಲೆಲ್ಲ ಬರುವುದು. ಭರ್ತೃಹರಿಯ 'ಖಲ್ವಾಟೋ ದಿವಸೇಶ್ವರಸ್ಯ ಕಿರಣೈಃ ...'ದ ಅನುವಾದ; ಎಲ್ಲಿಯೊ ಓದಿದ ನೆನಪು; ಮಿತ್ರರ 'ಛಂದೋಮಿತ್ರ'…
ಲೇಖಕರು: srikanth
ವಿಧ: Basic page
December 13, 2005
“ಒಂದೂರಲ್ಲಿ ಓಂದು ಬಾವಿ ಇತ್ತಂತೆ ,ಅದರಲ್ಲಿ ಒಂದು ಕಪ್ಪೆ ಇತ್ತಂತೆ, ಅದು ಬಾವಿನೇ ಲೋಕ ಅಂತ ಅನ್ಕೋಂಡಿತ್ತಂತೆ” ಎಂದು ನೀವು ನಿಮ್ಮ ಅಜ್ಜ-ಅಜ್ಜಿ ಬಾಯಲ್ಲಿ ಕೂಪ ಮಂಡೂಕದ ಕಥೆಯನ್ನು ಕೇಳಿರಬಹುದು. ವಿಭಕ್ತ ಕುಟುಂಬದಲ್ಲಿ ಬೆಳೆದಿದ್ದರೆ, ಶಾಲೆಯಲ್ಲೋ, ಪುಸ್ತಕದಲ್ಲೋ ಓದಿರಬಹುದು ಅಥವ ಕೇಳಿರಬಹುದು. ಮೇಲಿನ ಮಾತಿಗೆ ನಾನು ಅಪವಾದವೆಂದೇ ಹೇಳಬೇಕು.ನನ್ನ ಅಜ್ಜ “ದಿನಾಲು ಬ್ಯಾಂಕಿನ ಪಾಸ್ ಬುಕ್ ನ್ನನ್ನು ಆಗಾಗ ತೆಗೆದು ನೋಡುತ್ತಿದ್ದರೆ ಹಣವು ವೃದ್ಧಿಸುತ್ತದೆ “ ಎಂದು ನಂಬಿದ್ದರೋ ಏನೋ,…
ಲೇಖಕರು: tvsrinivas41
ವಿಧ: Basic page
December 12, 2005
ಇಲ್ಲಿ ಬಂದಾಗ ತಿಳಿದಿದ್ದೆ ಹಾದಿಯೇ ಇಲ್ಲದ ಬಟ್ಟ ಬಯಲು ಅಮ್ಮ ತೋರಿಸಿದ ಹಾದಿ ತುಳಿದೆ ಇದೊಂದೇ ಹಾದಿ ಎಂದು ತಿಳಿದೆ ಅಪ್ಪ ಒಂದು ಹಾದಿ ತೋರಿಸೇ ಅಣ್ಣ ಅಕ್ಕಂದಿರ ಬೇರೆ ಬೇರೆ ವರಸೆ ಮುಂದೆ ತಿಳಿಯಿತು ಅಂದಾಗಿದ್ದೆ ನಾನೊಂದು ಕೂಪ ಮಂಡೂಕ ದಿನ ದಿನಕೂ ದಿಗಂತದೆಡೆಗೇ ನೋಟ ಕಣ್ಣು ಕೀಳದೇ ಒಂದೇ ಸಮನೆ ಓಟ ಹೆಜ್ಜೆ ಹೆಜ್ಜೆಯಲೂ ಸಿಗುವ ಕಂದಕ ಕಾಣದಂತೆ ಹಿಂದೆ ಓಡುವುದೇ ಅದರ ಕಾಯಕ ನೇರ ಹಾದಿಯಲ್ಲೊಮ್ಮೆ ಓಟ ಕವಲು ಹಾದಿಯಲ್ಲೊಮ್ಮೆ ಓಟ ಬಟ್ಟ ಬಯಲೆಂದು ತಿಳಿದ ಜಾಗದಲ್ಲಿ ಎಲ್ಲೆಲ್ಲಿ ನೋಡಿದರೂ ಒಂದೊಂದು…
ಲೇಖಕರು: benglurhuduga
ವಿಧ: ಬ್ಲಾಗ್ ಬರಹ
December 12, 2005
ಆದರೂ ಯಾವುದೂ ವತತ-ಆಕಶರ ಸವಿೆಗೆ ಬರುವಿಲಲ. ಯಾವಿಗಾದರೂ ಗೊವಿದದರೆ ಸವಲಪ ಸಹಾಯಾ ಮಾವಿ, ದಯವಿಟುಟ! ಅಯಯೊ 25 ಪದಹಳು ಬೇಕು ಅನತ ಹೇಳತತೇ. ಯನತಹದದು ಮಾರಾಯ ಇದು? ಈಗಾದರು ಅಶಟು ಆತೇನಪಪಾ? ಶಿವ! ಶವ! ಇನನೂ ಆಗಿಲಲ! ಯಾಕಪಪ ನನ ಪರಾಣ ಹಿನಡತಈರ? ಈಗ?
ಲೇಖಕರು: benglurhuduga
ವಿಧ: ಬ್ಲಾಗ್ ಬರಹ
December 12, 2005
Ivattu nanna modalane kannada blog puta shuru madiddene. Hopefully idu channaige kaanuttade! Iduvaregu naanu blogger nalli blog madutiddenu. Sampadada yella category inna arthavagilla. Adakke yavdoo beda antha haakiddene!  
ಲೇಖಕರು: muralihr
ವಿಧ: Basic page
December 12, 2005
ಧೂಮಕೇತು ಎಷ್ಟೋ ಮರಾ, ಎಷ್ಟೋ ಥರಾ ಇತ್ತೂ ಊರಲ್ಲಿ. ಎಷ್ಟೋ ಹೂವು, ಎಷ್ಟೋ ಬಣ್ಣಾ ಅದರಾ ಬೇರಲ್ಲಿ ಒ೦ದೇ ಮ೦ತ್ರ ಒ೦ದೇ ತ೦ತ್ರ ಎ೦ದರು ಕೇಳಲ್ಲಿ !ಕುಣಿಯಲ್ಲಿ!ಕುಣಿಯಲ್ಲಿ ಒ೦ದೇ ಹಾಡು ಒ೦ದೇ ರಾಗ ಹಾಡ್ತಾರೆ ಕುಣಿಯಲ್ಲಿ !ಕುಣಿಯಲ್ಲಿ!ಕುಣಿಯಲ್ಲಿ ಒ೦ದೇ ಬೀಜ ಒ೦ದೇ ಹಣ್ಣು ರುಚಿಸುವುದೇ ತಿನ್ನಲ್ಲಿ ? ತಿನ್ನಲ್ಲಿ ? ತಿನ್ನಲ್ಲಿ ? ಒ೦ದೇ ಹಕ್ಕಿ ಒ೦ದೇ ಗಾನ ಧೂಮಕೇತು ಗಗನದಲ್ಲಿ ! ಧೂಮಕೇತು ! ಧೂಮಕೇತು