ಎಲ್ಲ ಪುಟಗಳು

ಲೇಖಕರು: Gopinath Rao
ವಿಧ: Basic page
December 06, 2005
ಉಮಾ ಭಾರತಿ ಮೇಲೇರಲು ಹಂತಹಂತ ಕೆಳಗೆಳೆಯಲು ದಾರಿ ಅನಂತ ಇದು ರಾಜಕೀಯ ಅಂತ ಬೇರೆಲ್ಲ ಮತ್ತೆ ಮೊದಲು ಸ್ವಂತ ಒಮ್ಮೆ ಕುರ್ಚಿ ಬಿಟ್ಟರೆ ಮುಷ್ಟಿ ಬಿಟ್ಟುಕೊಟ್ಟರೆ ತಪ್ಪಿರಲಿ ಇಲ್ಲದಿರಲಿ ವಾಪಸಿಲ್ಲ ಒಟ್ಟಾರೆ ಗೊತ್ತಿಲ್ಲ ಹಾಗಾದರೆ ಸಿಕ್ಕ ಸಿಕ್ಕಲ್ಲಿ ಮಹಾಜನಗಳಿರುವಲ್ಲಿ ಸಿಟ್ಟಾದರೆ ನೀವೇ ಪಕ್ಷಕ್ಕೆ ಹೊರೆ! ಇನ್ನು ಕುಳಿತು ಭಜನೆ ಮಾಡಿ ಅಟಲನಾಮ ಪಾಯಸಕ್ಕೆ ಲಾಲ್ ಕೃಷ್ಣ ಸಕ್ಕರೆ! -ಗೋಪೀನಾಥ ರಾವ್ raogopi@yahoo.com
ಲೇಖಕರು: kanda
ವಿಧ: ಬ್ಲಾಗ್ ಬರಹ
December 06, 2005
ಭೋರ್ಗರೆಯುವ ಕಡಲು ಸಿಡಿಲಬ್ಬರದ ಮಳೆ ಮನದಲ್ಲೋಂದು ಸಣ್ಣ ಆಸೆ ತಡೆಯಲು ಸಾಧ್ಯವಿಲ್ಲ ನನ್ನನ್ನು ಈ ಸಣ್ಣಪುಟ್ಟ ಕಡಲು, ಹೆಮ್ಮಳೆ, ಸುಂಟರಗಾಳಿಗಳಿಂದ ಇಂದೇ ಈಗಲೇ ಕಡಲ ತೀರಕ್ಕೆ ಹೋಗುವ ಆಸೆ ಈಗ್ಯಾಕೆ ಕಡಲ ತೀರ ಎಂದರು ದೊಡ್ಡವರು "ಹುಚ್ಚು" ಹಿಡಿದಿದೆ ಎಂದರು ಹೆತ್ತವರು "ಇವರ ಮುಖಾಂತರ ಭುವಿಗೆ ಬಂದವನು ನಾನು, ಇವರಿಂದ ಅಲ್ಲ" ಎಂದು ಹೊರಟೇ ಬಿಟ್ಟೆನು ನಾನು ಮನೆಯಿಂದ ಕಾಲು ಹೊರಗೆ ಇಟ್ಟೊಡನೆ ಕಣ್ಕೊರೆದ ಮಿಂಚು ಬೇರೆಯವರೆಲ್ಲ ಎದೆ ನಡುಗಿಸುವ ಗುಡುಗು ಪ್ರಕೃತಿಯು ನನಗೆ ತೋರಿದ ಅದ್ದೂರಿಯ ಸ್ವಾಗತ…
ಲೇಖಕರು: hpn
ವಿಧ: ಬ್ಲಾಗ್ ಬರಹ
December 05, 2005
'activism' ಅಲ್ಲ, ಬದಲಿಗೆ ಕನ್ನಡದ ಬಳಕೆ, ಸಾಹಿತ್ಯದ ಬೆಳವಣಿಗೆ - ತೆಲುಗು, ತಮಿಳು ಮುಂತಾದ ಭಾಷೆಗಳಿಗಾದಂತೆ ಭಾಷಾ ಬೆಳವಣಿಗೆ, ಮತ್ತು ಓದು ಬರಹಗಳಲ್ಲಿ ಬಳಕೆ! ಹೀಗೆ ಹೇಳುತ್ತಿರುವುದು ನಾನಲ್ಲ. ಎಷ್ಟೋ ದಿನಗಳಿಂದ ಮನಸ್ಸಿನಲ್ಲಿದ್ದದ್ದನ್ನೇ endorse ಮಾಡುವ ಹಾಗೆ [:http://deccanherald.com/deccanherald/dec52005/panorama1734232005124.asp|ಇಂದಿನ ಡೆಕ್ಕನ್ ಹೆರಾಲ್ಡ್ ನಲ್ಲಿ ಮೂಡಿಬಂದ ಲೇಖನದಲ್ಲಿ ಲೇಖಕರೊಬ್ಬರು ಬರೆದದ್ದು]. ಇಂದು ಕನ್ನಡಕ್ಕೆ "ಹೋರಾಟ" ಬೇಕಾಗಿದೆ ಎಂದು…
ಲೇಖಕರು: olnswamy
ವಿಧ: Basic page
December 03, 2005
ಮೂರು ದಿನ, ಕೇವಲ ಮೂರೇ ಮೂರು ದಿನ ಒಂದು ಊರು, ಊರಲ್ಲ, ಉರೇ ದೇಶವಾಗಿರುವ ಊರು ನೋಡಿ ಬಂದು ಅದರ ಬಗ್ಗೆ ಬರೆಯುವುದು ಉದ್ಧಟತನ. ನಿಜ. ಆದರೆ ಆ ಮೂರು ದಿನಗಳ ಹಿಂದೆ ನನ್ನ ಐವತ್ತೆರಡು ವರ್ಷಗಳಿವೆ. ಆ ವರ್ಷಗಳು ತಿದ್ದಿ ರೂಪಿಸಿರುವ ಮನಸ್ಸು ಇದೆ. ಆದ್ದರಿಂದಲೇ ಸಿಂಗಪುರ ಎಂಬ ನಗರ ರಾಷ್ಟ್ರ ನನ್ನಲ್ಲಿ ಪ್ರೇರಿಸಿದ ಸಂಗತಿಗಳನ್ನು , ನೀವೂ ನನ್ನಂಥವರೇ ಎಂದು ನಂಬಿ, ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಒಂದು ಮಾತಿನಲ್ಲಿ ಹೇಳುವುದಾದರೆ ಇಡೀ ಮೈಸೂರನ್ನು ಒಂದು ಸಂತೆ ಎಂದು ಕಲ್ಪಿಸಿಕೊಳ್ಳಿ. ಆ…
ಲೇಖಕರು: srikanth
ವಿಧ: Basic page
December 02, 2005
ಮನದ ಕೊಳದಲ್ಲಿ,ತಿಳಿನೀರ ಶಾಂತತೆಯಿಂದ ನೆನಪಿನ ತಾವರೆಯೊಂದರಳಿ ಪದ್ಯವಾಯಿತಂದು ಚೆಲ್ಲಿತು ಆನಂದದ ಕಂಪನ್ನು ಕೊಳದಲ್ಲೆಲ್ಲಾ ತೂರಿಹರಿಂದು, ಚಿಂತೆಯ ಕಲ್ಲನ್ನು, ತಲ್ಲಣದ ಅಲೆಗಳಲಿ, ನಡುಗುತಿದೆ ಕೊಳವು ಮುದುಡಿದೆ ತಾವರೆಯು, ನಿಂತಿದೇ ಕಂಪು ಅಂದಿನಾ ಪದ್ಯವ ಕಂಡೊಡನೆ, ನೆನಪಿನ ತಾವರೆ ಮತ್ತೆ ಅರಳಿ, ಬೀರುತಿದೆ ಕಂಪನ್ನು ಮತ್ತೆ ಕೊಳದಲ್ಲಿ ಮರಳಿದೆ ತಿಳಿನೀರ ಶಾಂತಿಯು ಮತ್ತೆ ಕೊಳಕ್ಕೆ
ಲೇಖಕರು: olnswamy
ವಿಧ: Basic page
December 02, 2005
ಅಭ್ಯಾಸಗಳು ತೊಟ್ಟಿಲ ಸೊಳ್ಳೆಪರದೆಯಾಗಿ ಕವಿದುಕೊಂಡವು ಗಿಲಕಿಯಾದವು, ಗುಬ್ಬಿಮಾತಾದವು, ಹೊಸ್ತಿಲು ದಾಟಿ ಅಜ್ಜನ ಕೋಲಿನ ಕುದುರೆಗಳಾದವು. ಎಲ್ಲರೂ "ಒಳ್ಳೆಯದೇ ಆಯ್ತಲ್ಲ, ಇನ್ನೇನು, ಬಿಡಿ" ಅಂದರು. ಅಭ್ಯಾಸಗಳು ಗೆಳೆಯರ ಕೈಯಾಗಿ ಭುಜದ ಮೇಲಿಳಿದವು, ಗೋಲಿಗೆ ಗುರಿಯಿಟ್ಟವು, ಇಪ್ಪತ್ತರವರೆಗೆ ಮಗ್ಗಿ ಪಾಂಡಿತ್ಯಗಳಾದವು. "ನಾನು ಹೀರೋ ರಾಜಕುಮಾರ, ಸೆಂಚುರಿ ವೀರ ಗವಾಸ್ಕರ." "ಒಳ್ಳೆಯದು, ಬೆಳೆದು ದೊಡ್ಡವನಾಗು" ಅಂದರು ಮಾಸ್ತರು. ಆಮೇಲೆ, ಹೆಣ್ಣು ಬಂದಳು. ಅಭ್ಯಾಸಗಳು ಹೋಗಿಬಿಟ್ಟವೆ? ಕಟು ಮಧುರ…
ಲೇಖಕರು: malu
ವಿಧ: ಬ್ಲಾಗ್ ಬರಹ
December 01, 2005
ನಾನು ದಿನ ಮನೆಯಿಂದ ಬರುವಾಗ ಕೃಷ್ಣರಾಜಪುರದ ತೂಗು ಸೇತುವೆಯ ಮೇಲೆ ಬರುತ್ತೇನೆ. ಅಲ್ಲಿರುವ ಫಲಕಗಳಲ್ಲಿ ಕರ್ನಾಟಕದ ಬಗ್ಗೆ ವಿವರಗಳನ್ನು ಕೊಟ್ಟಿದ್ದಾರೆ. ಅದು ತುಂಬ ಒಳ್ಳೆಯ ವಿಷಯ. ಆದರೆ ಅಲ್ಲಿ ಕನ್ನಡದ ಕೊಲೆಯಾಗಿದೆ. ಕನ್ನಡದಲ್ಲಿ ಬರೆಯುವಾಗ ರಾಜಗ್ರಹ, ಆದ್ಯತ್ಮ ಎಂದು ಬರೆದಿದ್ದಾರೆ.  ರಾ ಜ ಗೃ ಹ  ಎಂದು ಬರೆಯಲು ಬರದಿದ್ದರೆ ಅಚ್ಚ ಕನ್ನಡದಲ್ಲಿ ಅರಮನೆ ಎಂದು ಬರೆಯಬಹುದಲ್ಲ.
ಲೇಖಕರು: prakashaka
ವಿಧ: Basic page
December 01, 2005
ದಾರಿ ಬಿಡು, ದಾರಿ ಬಿಡು...ಬೆಳ್ಳಂ ಬೆಳಿಗ್ಗೆ ದಾರಿ ಬಿಡುಎಸ್ಸೆಂಸ್ಸಿಗೆ ದಾರಿ ಬಿಡುಹಳೆ ಮೆಸ್ಸೇಜ್‌ಗಳ ಅಳಿಸಿ ಬಿಡುಹೊಸದಕ್ಕೆ ನೀ ದಾರಿ ಬಿಡುಮನಸ್ಸಲ್ಲೊಂದಿಷ್ಟು ನಕ್ಕು ಬಿಡು ಮುಂಜಾನೆ ರಂಗೇರುತ್ತಿದ್ದಂತೆ ಕೋಳಿಗಿಂತಲೂ ಮುಂಚೆಯೇ ನಿಮ್ಮ ಮೊಬೈಲು ಕುಂಯ್‌ಗುಟ್ಟತೊಡಗುತ್ತದೆ. ಹಾಸಿಗೆಯಿಂದೇಳುತ್ತಾ ಕಣ್ಣೊರೆಸಿಕೊಂಡು ಬಾಯಾಕಳಿಸುತ್ತಾ ಮೊಬೈಲು ಗುಂಡಿ ಒತ್ತಲು ರೆಡಿ. ಅಲ್ಲಿ ನೋಡಿದರೆ ಹತ್ತಿಪ್ಪತ್ತು ಗುಡ್ ಮಾರ್ನಿಂಗ್ ಮೆಸ್ಸೇಜುಗಳು.. ಅದಕ್ಕೊಂದು `ಕೋಟ್' ಅಟ್ಯಾಚ್ ಆಗಿರುತ್ತದೆ. ಕೆಲವೊಂದು…
ಲೇಖಕರು: honnung
ವಿಧ: ಬ್ಲಾಗ್ ಬರಹ
November 30, 2005
ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದ್ದಾಗ ಸಿಗರೇಟ್ ಸೇದುವ ಗೆಳೆಯರೊಂದಿಗೆ ಮೊದಲ ಬಾರಿ ಸ್ನೇಹವಾಯಿತು. ಆಗ ಈ ಧೂಮಪಾನಿಗಳು ಮಾಡುವ ಎಲ್ಲ ಚಟುವಟಿಕೆಗಳನ್ನು ಕುತೂಹಲದಿಂದ ನೋಡುತ್ತಿದ್ದೆ. ಅವರು ಸೇದುವುದರಲ್ಲಿ ಹೊಂದಿದ್ದ ಅಲಿಖಿತ ಕಟ್ಟಳೆಗಳ ಬಗ್ಗೆ ಆಸಕ್ತಿ ಉಂಟಾಯಿತು. ಇವು ಸಹ ಒಂದು ಬಗೆಯ ಮೂಢನಂಬಿಕೆಗಳೇ ಅನ್ನಿ. ಹಾಗೇ ಹುಡುಕುತ್ತಾ ಹೋದಂತೆ ಇವುಗಳ ಹಿಂದಿನ ಕಾರಣಗಳೂ ತಿಳಿದವು. ಅವನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಂಬಿಕೆ: ಒಂದೇ ಬೆಂಕಿ ಕಡ್ಡಿಯಿಂದ ಎರಡಕ್ಕಿಂತ ಹೆಚ್ಚು…
ಲೇಖಕರು: karthik
ವಿಧ: ಬ್ಲಾಗ್ ಬರಹ
November 29, 2005
ಮೊನ್ನೆ ನಾಡಿಗರ entry ನೋದಿದ ಮೇಲೆ "ಅಂಕಿತ"ಗೆ ಹೋಗಿದ್ದೆ. ಹೋದದ್ದು "ದೌರ್ಗಂದಿಕಾಪಹರಣ" ಪುಸ್ತಕ ಕೊಳ್ಳಲು. ಆದರೆ ಅಲ್ಲಿ ಹೋದ ಮೇಲೆ ಪುಸ್ತಕ ಪ್ರೀತಿ ಬೇರೆ ಪುಸ್ತಕಗಳನ್ನೂ ಕೊಳ್ಳುವಂತೆ ಮಾಡಿತು. ತುಂಬ ದಿನಗಳಿಂದ ಕನ್ನಡ ಪುಸ್ತಕ ಓದಿಲ್ಲವೆಂಬ guilt ಕೂಡ ಇತ್ತು ಅನ್ನಿ.  ದೌರ್ಗಂದಿಕಾಪಹರಣದ ಜೊತೆ ತಮಿಳು ತಲೆಗಳ ನಡುವೆ.(ಬಿಜಿಎಲ್ ಸ್ವಾಮಿ) ಕರ್ವಾಲೊ (ಕೆ ಪಿ ತೇಜಸ್ವಿ) ಕಿರಗೂರಿನ ಗಯ್ಯಾಳಿಗಳು (ಕೆ ಪಿ ತೇಜಸ್ವಿ) ತೆಗೆದು ಕೊಂಡಿದ್ದೇನೆ. ಈ ವಾರಾಂತ್ಯದಲ್ಲಿ ಓದಬೇಕು.