ವಿಧ: ಬ್ಲಾಗ್ ಬರಹ
November 22, 2005
ನನಗೆ ಇಂಗ್ಲೀಷಿನಲ್ಲಿ ರೋಫ್ ಹಾಕಕ್ಕೇ ಬರಲ್ಲ ಗುರು. ಯಾವಾನಾದ್ರೂ ಸ್ವಲ್ಪ ಕಿರಿಕ್ ಮಾಡಿದ್ರೆ ಕನ್ನಡದಲ್ಲಾದ್ರೆ ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಭಾಷೆಯ ಹರಿತವನ್ನು ಹೊಂದಿಸಿಕೊಂಡು ನನ್ನ ಮನಸ್ಸಿನಲ್ಲಿರುವುದನ್ನು ಇತರರಿಗೆ ಮನವರಿಕೆಯಾಗುವಂತೆ ಮಾತಾಡಬಲ್ಲೆ. ಆದರೆ ಇಂಗ್ಲೀಷಿನಲ್ಲಿ ಹಾಗಲ್ಲ.. ಒಂದೋ ಅಫೀಷಿಯಲ್ ಟೋನಿನಲ್ಲಿ ನಿಧಾನಕ್ಕೆ ಮಾತಾಡಬಲ್ಲೆ ಇಲ್ಲ ತಾರಾಮಾರ ಬೈಯ್ಯಬಲ್ಲೆ ಆಷ್ಟೇ ವಿನಹ ಮಧ್ಯದಲ್ಲಿ ಮಾತೇ ಬರುವುದಿಲ್ಲ.
ಮೊನ್ನೆ ಇದರಿಂದನೇ ಸಕತ್ ತೊಂದರೆಯಾಗಿ ಹೋಯ್ತು. ನಮ್ಮ ಬಾಸ್…
ವಿಧ: ಬ್ಲಾಗ್ ಬರಹ
November 21, 2005
ಮುಂಬಯಿ ಲೋಕಲ್ ಟ್ರೈನ್ ಬಗ್ಗೆ ಇನ್ನೊಂದು ಪ್ರಸಂಗದ ವರದಿ. ಈ ಘಟನೆ ನಡೆದದ್ದು ಇಂದು ಸಂಜೆ.
ಚರ್ಚ್‍ಗೇಟ್ ಸ್ಟೇಷನ್ನಿನ ಮೂರನೇ ಮತ್ತು ನಾಲ್ಕನೇ ಪ್ಲಾಟ್‍ಫಾರಂಗಳಿಂದ ಫಾಸ್ಟ್ ಲೋಕಲ್‍ಗಳು ಹೊರಡುವುವು. ನಾಲ್ಕನೇ ಪ್ಲಾಟ್‍ಫಾರಂನಲ್ಲಿ ವಿರಾರ್ ಗೆ ಹೋಗುವ ಲೋಕಲ್ ಟ್ರೈನ್ ನಿಂತಿದ್ದಿತು. ಮೂರನೇ ಪ್ಲಾಟ್‍ಫಾರಂನಲ್ಲಿ ಬೊರಿವಿಲಿಗೆ ಹೊರಟಿದ್ದ ಲೋಕಲ್ ಇದ್ದಿತು. ನಾನು ಎಂದಿನಂತೆ ಬೊರಿವಿಲಿ ಲೋಕಲ್‍ನಲ್ಲಿ ಕಿಟಕಿಯ ಪಕ್ಕದಲ್ಲಿ ಕುಳಿತಿದ್ದೆ. ಈ ಸೀಟು ಸಿಗುವುದು ಬಲು ಕಷ್ಟ. ಅದಕ್ಕಾಗಿ…
ವಿಧ: Basic page
November 20, 2005
೬೫ ಕ್ಕೂ ಹೆಚ್ಚು ಮಿಲ್ಲಿಯನ್ ವರ್ಷಗಳ ಹಿಂದೆ ಈ ಭೂಮಿಯಲ್ಲಿ ವಾಸವಾಗಿದ್ದ ಡೈನೊಸಾರ್ ಗಳು ಹುಲ್ಲು ತಿಂದು ಬದುಕಿದ್ದುದು ಸಾಧ್ಯವೇ ಇರಲಿಕ್ಕಿಲ್ಲ ಎಂಬ ಥಿಯರಿ ಪ್ರಚಲಿತವಾಗಿತ್ತಂತೆ. ಆದರೆ, ಭಾರತದಲ್ಲಿ ಇತ್ತೀಚೆಗೆ ಸಿಕ್ಕ ಫಾಸಿಲ್ ಗಳ ಅಧ್ಯಯನ ನಡೆಸಿದ ಭಾರತದ ವಿಜ್ಞಾನಿಗಳು ಹಾಗು ಅವರೊಂದಿಗೆ ಈ ಅಧ್ಯಯನದಲ್ಲಿ ಪಾಲ್ಗೊಂಡ ಸ್ವಿಡ್ಜರ್ಲ್ಯಾಂಡಿನ ವಿಜ್ಞಾನಿಗಳು ಇದನ್ನು ಅಲ್ಲಗಳೆಯುವ ಒಂದು ಮಹತ್ವದ ಪುರಾವೆ ಕಂಡುಹಿಡಿದಿದ್ದಾರಂತೆ.
ಮೊನ್ನೆ ಮೊನ್ನೆ ಭಾರತದಲ್ಲಿ ಸಿಕ್ಕ ಈ ಸೆಗಣಿಯ ಫಾಸಿಲ್…
ವಿಧ: ಚರ್ಚೆಯ ವಿಷಯ
November 20, 2005
([:user/9|ತ ವಿ ಶ್ರೀ ಯವರು] ಕಳುಹಿಸಿದ PM ನಿಂದ)
ಕಂಗ್ಲಿಷನ್ನು ಯುನಿಕೋಡಿಗೆ ಕನ್ವರ್ಟ್ ಮಾಡಲು [:http://www.iit.edu/~laksvij/language/kannada.html|ಇಲ್ಲೊಂದು ಆನ್ಲೈನ್ ಸ್ಕ್ರಿಪ್ಟ್] ಇದೆ. ಇನ್ನೂ ಯುನಿಕೋಡ್ IME install ಮಾಡಿಕೊಂಡಿಲ್ಲದವರು ಕಂಗ್ಲಿಷಿನಲ್ಲಿ ಬರೆದು ಮೇಲಿನ ಸಂಪರ್ಕದಲ್ಲಿ ಅದನ್ನು ಯುನಿಕೋಡಿಗೆ ಪರಿವರ್ತಿಸಬಹುದು. :)
ವಿಧ: Basic page
November 20, 2005
ರಚನೆ: ಜಿ. ಪಿ. ರಾಜರತ್ನಂ (ರತ್ನ)
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸ-ರಿ-ಗ-ಮ-ಪ-ದ-ನಿ-ಸ ಊದಿದನು
ತನಗೇ ತುತ್ತುರಿ ಇದೆಯೆಂದ
ಬೇರಾರಿಗು ಅದು ಇಲ್ಲೆಂದ
ತುತ್ತೂರಿ ಊದುತ ಕೊಳದ ಬಳಿ
ಕಸ್ತೂರಿ ನಡೆದನು ಸಂಜೆಯಲಿ
ಜಂಭದ ಕೋಳಿಯ ರೀತಿಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಸ-ರಿ-ಗ-ಮ ಊದಲು ನೋಡಿದನು
ಗ-ಗ-ಗ-ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಜಂಭದ ಕೋಳಿಗೆ ಗೋಳಾಯ್ತು
ವಿಧ: Basic page
November 20, 2005
ರಚನೆ: ದ. ರಾ. ಬೆಂದ್ರೇ
ಶ್ರಾವಣ ಬಂತು ಕಾಡಿಗೆ
ಬಂತು ನಾಡಿಗೆ
ಬಂತು ಬೀಡಿಗೆ
ಬಂತು ಶ್ರಾವಣ
ಓ ಬಂತು ಶ್ರಾವಣ
ಕಡಲಿಗೆ ಬಂತು ಶ್ರಾವಣ
ಕುಣಿದಂಗ ರಾವಣ
ಕುಣಿದಾವ ಗಾಳಿ
ಭೈರವನ ರೂಪ ತಾಳಿ
ಶ್ರಾವಣ ಬಂತು ಘಟ್ಟಕ
ರಾಜ್ಯ ಪಟ್ಟಕ ಬಾನ ಮಟ್ಟಕ
ಏರ್‍ಯಾವ ಮುಗಿಲು
ರವಿ ಕಾಣೆ ಹಾಡೆ ಹಗಲು
ಬೆತ್ತ ತೊಟ್ಟಾವ ಕುಸುನಿಯ ಅಂಗಿ
ಹಸಿರು ನೋಡ ತಂಗಿ
ಹೊರತಾವೆಲ್ಲೊ ಜಂಗಿ
ಜಾತ್ರಿಗೇನು ನೆರೆದದ ಇಲ್ಲೆ ತಾನು
ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ ಹಾಂಗ
ತಲೆಗ ಬಾಸಿಂಗ ಕಟ್ಟಿಕೊಂಡು
ನಿಂತಾವ ಹರ್ಷಗೊಂಡು
ಗುಡ್ಡ ಗುಡ್ಡ…
ವಿಧ: Basic page
November 20, 2005
ರಚನೆ: ಚಂದ್ರಶೇಖರ ಕಂಬಾರ
ಕಾನ್ತನಿಲ್ಲದ ಮ್ಯಾಲೆ ಏಕಾನ್ತವ್ಯಾತಕೆ
ಗಂಧಲೆ ಬನವ್ಯಾತಕೆ ಈ ದೇಹಕೆ
ಮಂದ ಮಾರುತ ಮೈಗೆ ಬಿಸಿಯಾಗದೆ ತಾಯೀ
ಬೆಳುದಿಂಗಳು ಉರಿವ ಬಿಸಿಲಾಯಿತೆ ಧರೆಗೆ
ಹೂಜಜಿ ಸೂಜಿಯ ಹಾಗೆ ಚುಚ್ಚುತಲಿವೆ
ಉರಿಗಳು ಮೂಡ್ಯಾವು ನಿಡಿಸುಯ್ಲಿನೊಳಗೆ
ಉಸಿರಿನ ಬಿಸಿಯವಗೆ ತಾಗದೆ ಹುಸಿ ಹೋಯ್ತೆ
ಚೆಲುವ ಬಾರದಿರೆನು ಫಲವೆ ಈ ಚೆಲುವಿಗೆ
ಕಾಮನ ಬಾಣ ಹತ್ಯಾವ ಬೆನ್ನ
ಆತುರ ತೀವ್ರ ಕಾಮಾತುರ ತಾಳೆನ
ಆಪ್ತಳಿಗೆ ಆಶ್ರಯವಿರದೆ ಒದ್ದಾಡುವೆ
ಅನ್ಯಪುರುಷನು ಮಾರ ಅನ್ಗನೆಯನೆಳೆದಾರೆ
ಕೈಹಿಡಿದ ಸರಿಪುರುಶ…
ವಿಧ: Basic page
November 20, 2005
ರಚನೆ: ಗೋಪಾಲಕೃಷ್ಣ ಅಡಿಗ
ಓ ಇವಳೇ ನನ್ನವಳೀ ಹೆಣ್ಣು
ನನ್ನೆಳಗನಸಿನ ಹೂವಿನ ಹಣ್ಣು
ನನ್ನೆದೆ ಕುರುಳಿಗೆ ಮಾಡಿದ ಕಣ್ಣು
ತಿರಿವ ತೆರೆವ ಬಗೆ ಬೊಗಸೆಗೆ ದಿವವೆ
ಸುರಿದ ಹೊನ್ನು ಹೊನ್ನು
ಕಂಡೆನವಳನದೆ ನೂರನೆ ಯಾಗ
ಬಂದುದಂದೆ ಅಮರಾವತಿ ಭೋಗ
ದೊರೆಯಿತೆಲ್ಲ ಇನ್ನಿಲ್ಲವಿಯೋಗ
ನಾನೆ ಯೋಗಿಯಿನ್ನು
ಜಗವೆಲ್ಲವು ಬರಿ ಬೀದಿಯಾಗಿ ಬರೆ
ತೊಳಲಿ ಬಳಲಿ ಬಗೆ ಸೋತಿರೆ ಭೀತಿರೆ
ಯಾವ ಹುತ್ತಿನೊಳು ನಾ ಕಟ್ಟಿದ ಮನೆ
ಸೇರಿದೆನಿವಳನ್ನು
ಇಹಪರಗಳ ಹೊಂಬೆತ್ತ ಜೋಡಿಗೆ
ನಡುವೆ ತೂಗುವೀ ಹೂವಿನ ಹಾಸಿಗೆ
ಇದೆ ಇದೆ ಸೇತುವೆ…
ವಿಧ: Basic page
November 20, 2005
ರಚನೆ: ಸಿದ್ಧಯ್ಯ ಪುರಣಿಕ
ಹೊತ್ತಿತೊ ಹೊತ್ತಿತು ಕನ್ನಡದ ದೀಪ
ಮುಗಿಯಿತೊ ಮುಗಿಯಿತು ಶತಮಾನಗಳ ಶಾಪ
ಕಣ್ಣು ಕುಕ್ಕಿಸುವಂತೆ ದೇದಿಪ್ಯಮಾನ
ಹರ್ಷವುಕ್ಕಿಸುವಂತೆ ಶೊಭಾಯಮಾನ
ಕನ್ನಡದ ಮನೆಯಾಗೆ ಜ್ಯೋತಿರ್ನಿದಾನ
ಕನ್ನಡದ ಪ್ರಾಣ ಕನ್ನಡದ ಮಾನ
ಉರಿವವರು ಬೇಕಿದನು ಇದರೆಣ್ಣೆಯಾಗಿ
ಸುಡುವವರು ಬೇಕಿದನು ನಿಡುಬತ್ತಿಯಾಗಿ
ಧರಿಸುವರು ಬೇಕಿದನು ಸಿರಿಹಣತೆಯಾಗಿ
ನನ್ನೆಸುರಾಗಿ ಧರ್ಮಕ್ಕೆ ಬಾಗಿ
ಚಿರಕಾಲ ಬೆಳಗಲಿ ಕನ್ನಡದ ದೀಪ
ಜಗಕೆಲ್ಲ ಬೆಳಕಾಗಿ ಪುಣ್ಯಪ್ರದೀಪ
ಭಾರತಕೆ ಬಲವಾಗಿ ಭವ್ಯಪ್ರದೀಪ
ಕಳೆಯುತ್ತ ತಾಪ…
ವಿಧ: Basic page
November 20, 2005
ರಚನೆ: ಕೆ. ಎಸ್. ನರಸಿಂಹಸ್ವಾಮಿ
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ
ಹಬ್ಬಿನ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ
ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ
ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ
ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ
ಮಾನವ…