ವಿಧ: ಬ್ಲಾಗ್ ಬರಹ
November 14, 2005
ಬದುಕುವ ಕಲೆ (Art of Living)
ಇತ್ತೀಚಿಗೆ ನಾನು ಈ ಕಲೆಯನ್ನು ಕಲಿತೆ! ಇದು ಒಟ್ಟು ೬ ದಿನಗಳ ಕೋರ್ಸ್. ಇದರಲ್ಲಿ, ಸತ್ಸಂಗ, ಹಿತವಚನಗಳ ಜೊತೆಗೆ ಮುಖ್ಯವಾಗಿರುವುದೇನೆಂದರೆ 'ಪ್ರಾಣಾಯಮ' ಮತ್ತು 'ಸುದರ್ಶನ ಕ್ರಿಯ ಯೋಗ'. ಇವುಗಳ ಬಗ್ಗೆ ಸ್ವಲ್ಪ ಇಲ್ಲಿ ವಿವರಿಸುತಿದ್ದೇನೆ.
ಪ್ರಾಣಾಯಾಮ:
ಮೊದಲಿಗೆ ಕಣ್ಮುಚ್ಚಿಕೊಂಡು, 'ವಜ್ರಾಸನ' ದಲ್ಲಿ ಕುಳಿತುಕೊಳ್ಳಬೇಕು. ವಜ್ರಾಸನದಲ್ಲಿ ಕುಳಿತರೆ ಬೆನ್ನುಮೂಳೆ ನೇರವಾಗಿರುವುದು ಮತ್ತು ಉಸಿರಾಟ ಸುಗಮವಾಗಿರುವುದು.
ಪ್ರಾಣಯಾಮದಲ್ಲಿ ಮೂರು ಹಂತಗಳಿರುತ್ತವೆ.…
ವಿಧ: ಬ್ಲಾಗ್ ಬರಹ
November 14, 2005
ಹುಂ!!!, ತುಂಬಾ ದಿನಗಳಾಯ್ತು ಬ್ಲಾಗ್ ಅಕೌಂಟ್ ತೆರೆದು. ಇನ್ನೂ ಒಂದು ಸಾರಿನೂ 'ಬ್ಲಾಗಿ'ಸಿಲ್ಲ. ಬೇರೆಯವರ ಬ್ಲಾಗ್ ಓದುವುದು ಹವ್ಯಾಸವಾಗಿಬಿಟ್ಟಿದೆ. ನನಗೆ ಅಷ್ಟು ಚೆನ್ನಾಗಿ ಬರೆಯಲು ಬರುವುದಿಲ್ಲವೆಂಬುದೇ ಕಾರಣವಾಗಿರಬಹುದು. ಇನ್ನು ಮುಂದೆ ವ್ಯವಸ್ಥಿತ (regular?) ವಾಗಿ ಬ್ಲಾಗಿಸೋಣ ಅಂತ...
ವಿಧ: ಚರ್ಚೆಯ ವಿಷಯ
November 14, 2005
ಧ್ವನಿ ಮುದ್ರಣಕ್ಕಾಗಿ ಮೊದಲು ಸಂಗೀತ ನಿರ್ದೇಶಕರು ಟ್ರ್ಯಾಕ್ ಸಿಂಗರ್ ಗಳನ್ನು ಬಳಸಿಕೊಳ್ಳುತ್ತಾರೆ. ಇದು ಬಿಡುಗಡೆಯಾಗುವ ಹಾಡಿನ ಮೊದಲ ಕರಡು ಪ್ರತಿ. ಈ ಗಾಯಕರು ಕನ್ನಡಿಗರೇ ಆಗಿರುವುದರಿಂದ ಅಪಭ್ರಂಶ ಆಗುವ ಸಾಧ್ಯತೆ ಕಡಿಮೆ. ಈ ಹಾಡನ್ನು ಪ್ರಸಿದ್ಧ ಗಾಯಕರಿಗೆ ಕೇಳಿಸುತ್ತಾರೆ. ನಂತರ ಈ ಹೆಸರಾನ್ವಿತ ಹಿನ್ನೆಲೆ ಗಾಯಕರು ಅದೇ ರೀತಿ ತಮ್ಮ ಧ್ವನಿಯಲ್ಲೇ ಹಾಡುತ್ತಾರೆ. ಇದು ಕೊನೆಯ ಹಾಡಿನ ಕೊನೆಯ ಆವೃತ್ತಿ. ಕೊನೆಯ ಮುದ್ರಣವನ್ನೇ ನಾವು ಕ್ಯಾಸೆಟ್ ಗಳಲ್ಲಿ ಕೇಳುವುದು.
ಈಗೀಗ ಕನ್ನಡದ ಗಂಧವೂ ಅರಿಯದ…
ವಿಧ: ಚರ್ಚೆಯ ವಿಷಯ
November 14, 2005
ಇತ್ತೀಚಿಗೆ ನನ್ನ ಸ್ನೇಹಿತನೊಬ್ಬರು ತಿಳಿಸಿದರು. ಈ ಸಂಪದದಲ್ಲಿ ಕನ್ನಡ ಎಲ್ಲಿದೆ ಮಾರಾಯ ಎಂದು ಕೇಳಿದರು. ನನಗೆ ಅರ್ಥವಾಗಲಿಲ್ಲ. ಕೊನೆಗೆ ತಿಳಿದು ಬಂದದ್ದೆಂದರೆ ಅವರು ಟೈಪಿಸಿದ್ದು ಬೇರೆಯೇ ವಿಳಾಸ. ಅವರು ತಲುಪಿದ್ದು www.sampada.in ಗೆ. ಅದು ಚಂಡೀಗಡ ಕೇಂದ್ರಾಡಳಿತ ಪ್ರದೇಶದ ಎಸ್ಟೇಟ್ ಕಾರ್ಯಾಲಯದ ತಾಣ.
ಅದರ URL ವಿಳಾಸ ಕೂಡ ನಮ್ಮ ಸಂಪದದ URL ವಿಳಾಸಕ್ಕೆ ಹೊಂದುವುದರಿಂದ ಕುತೂಹಲಕಾರಿಯಾಗಿದೆ. ಈಗೀಗ co.in ಹಾಗೂ .in ವಿಳಾಸದ ಬಳಕೆ ಜಾಸ್ತಿಯಾಗುತ್ತಿದೆ. ಅವರೂ ವೃತ್ತಪತ್ರಿಕೆಗಳಲ್ಲಿ…
ವಿಧ: ಚರ್ಚೆಯ ವಿಷಯ
November 13, 2005
ದೆಹಲಿಯಲ್ಲಿ ದೀಪಾವಳಿಯ ಹಿಂದಿನ ದಿನ ನಡೆದ ಸ್ಪೋಟಗಳ ಹಿಂದಿನ ಮಾಸ್ಟರ್ ಮೈಂಡ್ ಈಗ [:http://abcnews.go.com/International/wireStory?id=1308152|ಪೋಲೀಸರ ಹಿರಾಸತ್ತಿನಲ್ಲಿದ್ದಾನಂತೆ]. ಇವ ಲಶ್ಕರ್-ಎ-ತಯ್ಯಬಾ ಸದಸ್ಯನೆಂದೂ, ಈ ಕೃತ್ಯವೆಸಗುವುದಕ್ಕೆ ಇವನಿಗೆ $10,900 ಬ್ಯಾಂಕಿನ ಮೂಲಕ ರವಾನಿಸಲಾಗಿತ್ತೆಂದೂ ದೆಹಲಿ ಪೋಲೀಸರು ತಿಳಿಸಿದರಂತೆ.
ಕಳೆದು ಒಂದು ವಾರದಿಂದ ಒಬ್ಬನಲ್ಲೊಬ್ಬನನ್ನು ಹಿಡಿದು ಇವನೇ ಆ ಕೃತ್ಯ ನಡೆಸಿದ್ದು ಎಂದು ದೆಹಲಿ ಪೋಲೀಸರು ಹೇಳುತ್ತಲೇ ಬಂದಿದ್ದಾರೆ.…
ವಿಧ: Basic page
November 13, 2005
ಸಂಪದ ಓದುಗರಿಗೆಲ್ಲ ನನ್ನ ನಮಸ್ಕಾರಗಳು.
ಮೊನ್ನೆ ಹೀಗೇ (ನವೆಂಬರ್ ತಿಂಗಳ) ಮಯೂರ ಓದ್ತಾ ಇದ್ದೆ. ಅದರಲ್ಲಿ ಬಿ.ಎಂ.ಶ್ರೀ ಬರೆದ ಒಂದು ಅದ್ಭುತವಾದ ಕವನ ಓದಿದೆ. "ಎಲ್ಲ ಕನ್ನಡಿಗರೂ ಓದಲೇಬೇಕಾದ ಕವನವಿದು" ಅನ್ನಿಸ್ತು.
ಇದೋ ನಿಮ್ಮ ಮುಂದೆ ಆ ಕವನ.
ಕನ್ನಡತಾಯ ನೋಟ
(ಆಯ್ದ ಭಾಗಗಳು)
-4-
"ಕೇಳಣ್ಣ, ನಾನೊಬ್ಬ ಹಳೆಯ ಮುತ್ತೈದೆ- ಹಿರಿದಾಗಿ
ಬಾಳಿದವಳೊಮ್ಮೆ;
ಈಗ ಬಡತನ, ಬಡವೆ, ಬಡವಾದೆ; ಬಡವಾದ
ಮಕ್ಕಳನ್ನು ನೋಡಿ,
ಬತ್ತಿ,…
ವಿಧ: ಬ್ಲಾಗ್ ಬರಹ
November 12, 2005
ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಂದ ಕನ್ನಡಕ್ಕೆ ಕೊಡುಗೆ ಸೊನ್ನೆ ಎಂಬ ಕೂಗು ಎಲ್ಲಡೆ ಕೇಳಿಬರುತ್ತಿದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಕನ್ನಡವನ್ನು ಕಡೆಗಣಿಸುತ್ತಿವೆ ಎಂದು ಬಹುಜನರ ಆರೋಪ. ಇವುಗಳ ನಡುವೆ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಕಂಪೆನಿಯೊಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ ಎಂದರೆ ಅದು ದೊಡ್ಡ ಸುದ್ದಿಯಲ್ಲವೇ? ಹೆಚ್ಚಿನ ಮಾಹಿತಿಗಳಿಗೆ [http://vishvakannada.com/node/86|ಇಲ್ಲಿ ಕ್ಲಿಕ್] ಮಾಡಿ.
ವಿಧ: ಚರ್ಚೆಯ ವಿಷಯ
November 12, 2005
ಈ ಬಾರಿ ಸಂಪದದಲ್ಲಿ ನಡೆಸಿದ ಜನಮತ (poll) ಫಲಿತಾಂಶ ಹೀಗಿದೆ:
ಪ್ರಶ್ನೆ: "ಕನ್ನಡಿಗರಿಗೆ ಕರ್ನಾಟಕದಲ್ಲಿರುವ ಐಟಿ ಕಂಪೆನಿಗಳಲ್ಲಿ ಕೆಲಸ ನೀಡುವಾಗ ಆದ್ಯತೆ", ನಿಮ್ಮ ಅಭಿಪ್ರಾಯದಲ್ಲಿ:
ಓದುಗರಲ್ಲಿ 52% (55 ಮಂದಿ ) ಇದು ಅರ್ಥಪೂರ್ಣವೆಂದು ಅಭಿಪ್ರಾಯಪಟ್ಟರು.
23% (24 ಜನ ) ಇದು ಹುರುಳಿಲ್ಲದ್ದೆಂದು ಅಭಿಪ್ರಾಯಪಟ್ಟರು.
ಇನ್ನು 24% (25 ಮತಗಳು ) ಈ ವಿಷಯವನ್ನು ಚಿಂತನೆಗೆ ಯೋಗ್ಯವಾದದ್ದೆಂದು ಅಭಿಪ್ರಾಯ ದಾಖಲಿಸಿದರು.
ಒಟ್ಟಾರೆ, ಸಂಪದ ಓದುಗರ ಮಟ್ಟಿಗೆ ಈ ವಿಷಯ ಅರ್ಥಪೂರ್ಣವೆಂಬುದು…
ವಿಧ: Basic page
November 12, 2005
ಈ ಘಟನೆ ನಡೆದದ್ದು ೧೯೯೩ರಲ್ಲಿ. ಆಗ ತಾನೆ ಮಹಿಳೆಯರಿಗಾಗಿಯೇ ಒಂದು ವಿಶೇಷ ಲೋಕಲ್ ಟ್ರೈನ್ ಅನ್ನು ಪಶ್ಚಿಮ ರೈಲ್ವೇಯವರು ಪ್ರಾರಂಭಿಸಿದ್ದರು. ಆ ಲೋಕಲ್ ಬೆಳಗ್ಗೆ ಕಛೇರಿಗಳ ವೇಳೆಗೆ ಮತ್ತು ಸಂಜೆ ಕಛೇರಿಗಳು ಮುಗಿಯುವ ವೇಳೆಗೆ ಅನುಕೂಲವಾಗುವಂತೆ ಓಡುತ್ತಿತ್ತು. ಅದು ಬೊರಿವಿಲಿ ಮತ್ತು ಚರ್ಚ್‍ಗೇಟ್ ಮಧ್ಯೆ ಓಡಾಡುತ್ತಿತ್ತು.
ಅಂದು ಮಳೆಗಾಲದ ಒಂದು ದಿನ. ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಬೀಳುತ್ತಿತ್ತು. ಎಂಥಹ ಜೋರುಮಳೆಗೂ ಹೆದರದ ಜನರು ತಮ್ಮ ತಮ್ಮ ಕಾರ್ಯಸ್ಥಾನಗಳಿಗೆ ತೆರಳಿದ್ದರು.…
ವಿಧ: Basic page
November 12, 2005
ಸಮಾಜ ಸೇವೆ ಮಾಡುವುದೂ ಒಂದು ವಿದ್ಯೆ
ಮನೆ ಮನಗಳಲ್ಲೂ ಕಾಣುವ ಇದೊಂದು ಮಿಥ್ಯೆ
ನಾನು ಹೇಳ ಹೊರಟಿಹೆನೊಂದು ಕಥಾನಕ
ಎಲ್ಲರೂ ಅದುರಿಸ ಬೇಕಿರುವ ಭಯಾನಕ
ಇವನಾಗ ಹೊರಟಿಹ ಸಮಾಜ ಸೇವಕ
ಪರಿಸರದಿ ಆಗುವನೇ ಸಮಾಜಕೆ ಪೂರಕ
ಎಂಥದು ಇವನು ಬೆಳೆಯುತಿಹ ಪರಿಸರ
ಸಿಹಿಯೆಂದು ನಂಬಿದುದೆಲ್ಲವೂ ಕಹಿಯ ಸರ
ಗಾಣದೆತ್ತಿನಂತೆ ದುಡಿಯುವುದೇ ಅಪ್ಪನ ಕಾಯಕ
ಅಮ್ಮನಆದರೋ ಮನೆಯ ಒಂದಾಗಿಸುವ ದ್ಯೋತಕ
ಅಣ್ಣ ಅಕ್ಕಂದಿರುಗಳು ಮುಳುಗಿಹ ತಮ್ಮದೇ ಸಂಸಾರ
ತಮ್ಮ ತಂಗಿಯರಿಗೆ ಓದು ಬರಹದ್ದೇ ವ್ಯವಹಾರ
ಇವರುಗಳ ಮಧ್ಯೆ ಸಿಲುಕಿಹ…