ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
August 06, 2005
ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ. ”ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಕೇಳಿದ. ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು…
ಲೇಖಕರು: olnswamy
ವಿಧ: Basic page
August 06, 2005
ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು ಒಕ್ಕುದ ಹಾರೈಸಿ ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು ಬೇನೆ ಬಂದಡೆ ಒರಲು ಜೀವ ಹೋದಡೆ ಸಾಯಿ ಇದಕ್ಕಾ ದೇವರ ಹಂಗೇಕೆ ಭಾಪು ಲದ್ದೆಯ ಸೋಮಾ ನಮ್ಮ ಪಾಲಿಗೆ ಬಂದ ಕಾಯಕ ಯಾವುದಾದರೂ ಸರಿ. ನಾವೇ ಮಾಡಬೇಕಾದ ನಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಬೇಕು. ನಮ್ಮ ಕಾಯಕದಿಂದ ಬಂದ ಫಲವನ್ನು ನಮಗಿಂತ ಹಿರಿಯರಾದವರಿಗೆ (ಗುರು), ಲೋಕಕ್ಕೆ (ಲಿಂಗ), ಪ್ರಜ್ಞಾವಂತರಾದವರಿಗೆ (ಜಂಗಮ) ಅರ್ಪಿಸಬೇಕು. ಉಳಿದದ್ದನ್ನು ನಮ್ಮದೆಂದು…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
August 05, 2005
ಕಳೆದ ಮಂಗಳವಾರ ಮತ್ತು ಭಾನುವಾರದ ಮಳೆಯ ಆರ್ಭಟದಿಂದ ತತ್ತರಿಸಿದ್ದ ಜನರ ದೈನಂದಿನ ಕೆಲಸ ಕಾರ್ಯಗಳು ಇಂದಿಗೆ ಸಾಮಾನ್ಯ ಸ್ಥಿತಿಗೆ ಬಂದಿತು. ಅದು ಹೇಗೆ ಇಂದೇ ಸಾಮಾನ್ಯ ಸ್ಥಿತಿಗೆ ಬಂದಿತು ಅಂತ ಹೇಳ್ತೀರಿ ಅಂತ ನೀವು ಕೇಳಬಹುದು. ಇಂದು ಲೋಕಲ್ ಟ್ರೈನಿನಲ್ಲಿ ತುಂಬಾ ಜನಸಂದಣಿ ಇತ್ತು. ಮತ್ತು ನನ್ನ ಸ್ನೇಹಿತನೊಬ್ಬನ ಜೇಬಿಗೆ ಕತ್ತರಿ ಬಿದ್ದಿತ್ತು. ಪ್ರತಿದಿನ ಟ್ರೈನ್ ಹತ್ತುವಾಗ, ಹತ್ತಿದ ಮೇಲೆ, ಇಳಿಯುವಾಗ ತುಂಬಾ ಕಷ್ಟ ಕೋಟಲೆಗಳನ್ನು ಅನುಭವಿಸುತ್ತೀವಿ. ನನಗೇನೋ ಅದು ಆಭ್ಯಾಸವಾಗಿ ಹೋಗಿದೆ…
ಲೇಖಕರು: hpn
ವಿಧ: Basic page
August 05, 2005
ಮುಕ್ತ ಜ್ಞಾನ ಭಂಡಾರ - ಕನ್ನಡ ವಿಕಿಪೀಡಿಯ ಹಿಂದೊಮ್ಮೆ ವಸ್ತುಗಳ ಬಗ್ಗೆ, ವಿಷಯಗಳ ಬಗ್ಗೆ ಮಾಹಿತಿ ಹುಡುಕಲು ಗ್ರಂಥಾಲಯವೇ ಬೀಡು. ಅಲ್ಲಿರುವ ಪುಸ್ತಕಗಳನ್ನೆಲ್ಲಾ ಹೆಕ್ಕಿ ತೆಗೆದು, ಮಾಹಿತಿ ಹುಡುಕಬೇಕಿತ್ತು. ಮಾಹಿತಿ ತಂತ್ರಜ್ಞಾನದಲ್ಲಿ ಬೆಳವಣಿಗೆಗಳಾದಂತೆ, ಅಂತರಜಾಲ ಮನೆಮನೆಗಳನ್ನು ಪ್ರವೇಶಿಸಿದಂತೆ ಮಾಹಿತಿ ಹುಡುಕುವುದು ಈಗಾದರೋ ಅತಿ ಸುಲಭವಾಗಿದೆ. ಈಗ ಮಾಡಬೇಕಾದದ್ದು ಇಷ್ಟೆ: ಗಣಕದಲ್ಲಿ ತಮ್ಮ ನೆಚ್ಚಿನ ಬ್ರೌಸರ್ ತೆರೆದು ನೆಚ್ಚಿನ Search engineನಲ್ಲಿ ಟೈಪ್ ಮಾಡಿ ಬಟ್ಟನ್ ಕ್ಲಿಕ್…
ಲೇಖಕರು: olnswamy
ವಿಧ: Basic page
August 05, 2005
ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು. ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆ. ಗೌತಮನಾದ ಬುದ್ಧನು ಧ್ಯಾನದ ಮೂಲಕವೇ ತನ್ನ ಬೋಧಿ-ಸತ್ವವನ್ನು ಪಡೆದವನು. ಧ್ಯಾನ ಮುಖ್ಯವಾದ ಈ ಪಂಥವು ಕ್ರಿಶ ೬ನೆಯ ಶತಮಾನದಲ್ಲಿ ಮಹಾಯಾನ ಬೌದ್ಧರ ಮೂಲಕ ಛಾನ್ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿತು. ಹಲವಾರು ಶತಮಾನಗಳ…

ವಿಧ: ಚರ್ಚೆಯ ವಿಷಯ
August 05, 2005
ಸಂಪದ 'ವಿಷ್ ಲಿಸ್ಟ್'ಗೆ ಸ್ವಾಗತ. ಮಾನ್ಯ [:http://sampada.net/node/59|ಓ ಎಲ್ ಎನ್ ಸ್ವಾಮಿಯವರ ಸಲಹೆಯಂತೆ] ಈ ವಿಶ್ ಲಿಸ್ಟ್ ಪ್ರಾರಂಭಿಸಲಾಗಿದೆ. ಸಂಪದದಲ್ಲಿ ಭವಿಷ್ಯದಲ್ಲಿ ನೀವೇನು ಕಾಣಲು ಬಯಸುವಿರೆಂಬುದನ್ನು ಇಲ್ಲಿ ಸೇರಿಸಿ. ಸಂಪದದಲ್ಲೀಗಾಗಲೇ ಇರುವ ಫೀಚರ್‌ಗಳನ್ನು ಇಂಪ್ರೂವ್ ಮಾಡುವ ಬಗ್ಗೆಯಾಗಲೀ ಅಥವಾ ಹೊಸ ವಿಭಾಗಗಳನ್ನು ತೆರೆಯುವ ಬಗ್ಗೆಯಾಗಲೀ ನಿಮ್ಮಲ್ಲಿ ಸಲಹೆಗಳಿದ್ದರೆ ಇಲ್ಲಿ ಕಾಮೆಂಟ್ ಮೂಲಕ ಸೇರಿಸಿ. ಈಗಾಗಲೇ ಕೆಲವು ಸದಸ್ಯರು ನೀಡಿರುವ ಸಲಹೆಗಳ ಬಗ್ಗೆ [:http://sampada…
ಲೇಖಕರು: olnswamy
ವಿಧ: Basic page
August 05, 2005
ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು. ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು…

ಲೇಖಕರು: modmani
ವಿಧ: Basic page
August 05, 2005
ಹಳದಿ ಕಾಡಿನಲೊಂದು ಕವಲೊಡೆದ ಹಾದಿ, ಹೋಗಲಾಗದು ಎರಡರಲೂ ಒಂದೇ ಬಾರಿ ಏನು ಮಾಡಲಿ ಒಂಟಿ ಪಯಣಿಗ ನಿಂತು ನೋಡಿದೆ ಕಣ್ಣು ಹೋಗುವರೆಗೆ ದಾರಿಯೊಂದು ಸುತ್ತಿಸುಳಿದು ಮರೆಯಾಗುವರೆಗೆ ಮತ್ತೊಂದರೆಡೆ ಕಣ್ಣು ಹಾಯಿಸಿದರೆ ಅದೂ ಹಾಗೆ ಹುಲ್ಲು ಬೆಳೆದ ಹಾದಿ; ಹೊಸತಂತೆ ಕಾಣುತಿದೆ. ಮತ್ತೊಂದರದಕಿಂತ ಸ್ವಲ್ಪ ಒಳಿತಿರಬಹುದು ಬಳಸಿದಾ ಜನಸಂಖ್ಯೆ ಕಡಿಮೆಯಿರಬಹುದು ಕಣ್ಣೋಟಕೆರಡೂ ಕಾಣುವುದೂ ಒಂದೇ ಬಗೆ ಆ ಬೆಳಗಿನಲ್ಲಿಂದು ಕವಲುಹಾದಿಗಳೆರಡು ಒಂದರಂತೇ ಇನ್ನೊಂದು ಗುರಿ ಕಾಣದಿಹುದು. ಮೊದಲಿನದು ಮತ್ತೊಂದು…