ಶ್ರಾವಣ ಬಂತು

ಶ್ರಾವಣ ಬಂತು

ಬರಹ

ರಚನೆ: ದ. ರಾ. ಬೆಂದ್ರೇ

ಶ್ರಾವಣ ಬಂತು ಕಾಡಿಗೆ
ಬಂತು ನಾಡಿಗೆ
ಬಂತು ಬೀಡಿಗೆ
ಬಂತು ಶ್ರಾವಣ
ಓ ಬಂತು ಶ್ರಾವಣ

ಕಡಲಿಗೆ ಬಂತು ಶ್ರಾವಣ
ಕುಣಿದಂಗ ರಾವಣ
ಕುಣಿದಾವ ಗಾಳಿ
ಭೈರವನ ರೂಪ ತಾಳಿ

ಶ್ರಾವಣ ಬಂತು ಘಟ್ಟಕ
ರಾಜ್ಯ ಪಟ್ಟಕ ಬಾನ ಮಟ್ಟಕ
ಏರ್‍ಯಾವ ಮುಗಿಲು
ರವಿ ಕಾಣೆ ಹಾಡೆ ಹಗಲು

ಬೆತ್ತ ತೊಟ್ಟಾವ ಕುಸುನಿಯ ಅಂಗಿ
ಹಸಿರು ನೋಡ ತಂಗಿ
ಹೊರತಾವೆಲ್ಲೊ ಜಂಗಿ
ಜಾತ್ರಿಗೇನು ನೆರೆದದ ಇಲ್ಲೆ ತಾನು

ಬನ ಬನ ನೋಡು ಈಗ ಹ್ಯಾಂಗ
ಮದುವಿ ಮಗನ ಹಾಂಗ
ತಲೆಗ ಬಾಸಿಂಗ ಕಟ್ಟಿಕೊಂಡು
ನಿಂತಾವ ಹರ್ಷಗೊಂಡು

ಗುಡ್ಡ ಗುಡ್ಡ ಸ್ಥಾವರಲಿಂಗ
ಅವಕ ಅಭ್ಯಂಗ
ಎರೆತಾವನ್ನೊ ಹಂಗ
ಹೂಡ್ಯಾವ ಮೋಡ
ಸುತ್ತೆಲ್ಲ ನೋಡ ನೋಡ

ನಾಡೆಲ್ಲ ಏರಿ ಯಾವಾರಿ
ಹರಿತಾವ ಹಾಲಿನ ಝರಿ
ಹಾಲಿನ ತರಿ
ಈಗ ಯಾಕ ನೆಲಕೆಲ್ಲ ಕುಡಿಸಲಾಕ