೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...

೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...

ಬರಹ

ಬೆಳಗಾವಿ ಮತ್ತು ಗಡಿಯಲ್ಲಿರುವ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿತ್ತು. ಇದಕ್ಕೆ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.(ಈಗ ಕರ್ನಾಟಕ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ರದ್ದು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದೆ.) ಇತ್ತೀಚೆಗೆ ಬೆಳಗಾವಿ ನಗರ ಪಾಲಿಕೆಯ ಮೇಯರ್ ವಿಜಯ್ ಪಾಂಡುರಂಗ ಮೋರೆ ಬೆಂಗಳೂರಿಗೆ ಬಂದು ಶಾಸಕರ ಭವನದಲ್ಲಿ ಇಳಿದುಕೊಂಡಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು 'ಮಿಂಚಿನ ದಾಳಿ' ನಡೆಸಿ ವಿಜಯ್ ಮೋರೆಯವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿ ತಮ್ಮ ಕನ್ನಡಾಭಿಮಾನವನ್ನು ತೋರಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಹಿಂಸಾತ್ಮಕ ಪ್ರತಿಭಟನೆ ಈಗ ಬಿಸಿಯೇರಿದ ಚರ್ಚೆಗಳಿಗೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಈ ಮಸಿಬಳಿಯುವಿಕೆಯನ್ನು 'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ'ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿ 'ಕನ್ನಾಡಭಿಮಾನ'ದ ಹಿಂಸಾತ್ಮಕ ಅಭಿವ್ಯಕ್ತಿಯನ್ನು ವಿರೋಧಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ ಪಾಟೀಲ್ 'ಮಸಿಬಳಿದದ್ದನ್ನು ವಿರೋಧಿಸುವವರು ಮಸಾಲೆ ದೋಸೆ ಸಾಹಿತಿಗಳು'ಎಂದು ಟೀಕಿಸಿದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಪದ ಬಳಗ ಯು.ಆರ್ .ಅನಂತಮೂರ್ತಿಯವರನ್ನು ಸಂದರ್ಶಿಸಿದೆ. ಹಿಂಸಾತ್ಮಕ ಕನ್ನಡಾಭಿಮಾನವನ್ನು ಗೋಕಾಕ್ ಚಳವಳಿಯ ಕಾಲದಿಂದಲೂ ವಿರೋಧಿಸುತ್ತಲೇ ಬಂದಿರುವ ಅನಂತಮೂರ್ತಿ ಈ ಸಂದರ್ಶನದಲ್ಲಿ ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದಾರೆ. ಜತೆಗೆ ಕನ್ನಡದ ಸಂದರ್ಭದಲ್ಲಿ ಭಾಷೆಯ ಅಭಿವೃದ್ಧಿ, ಭಾಷಾಭಿಮಾನ, ಭಾಷಾಂಧತೆಗಳ ಕುರಿತ ತಮ್ಮ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

>ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (28 MB)

ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ‌ ಸಂಪದದಲ್ಲಿ ಕಾಮೆಂಟ್ ಮೂಲಕ ತಿಳಿಸಿ. ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:
u r ananthmurthy
ಯು ಆರ್ ಅನಂತಮೂರ್ತಿ ಅವರ ಆಫೀಸಿನಲ್ಲಿ.
ಆಂಜನೇಯ ಯು ಆರ್ ಅನಂತಮೂರ್ತಿಯವರ ರೀಡಿಂಗ್ ರೂಮ್ ಪಕ್ಕದಲ್ಲಿದ್ದ ಆಂಜನೇಯ.
u r ananthmurthy