ವಿಧ: ಬ್ಲಾಗ್ ಬರಹ
October 15, 2005
ಇದು ನಾನು ಇತ್ತೀಚೆಗೆ ಸಂಪದದಲ್ಲಿ ಬರೆದ ಬ್ಲಾಗ್‍ನ ಒಂದು ವೈಯುಕ್ತಿಕ critic. ಜೊತೆಗೆ http://sampada.net/node/532#comment-689 ನಲ್ಲಿ ಇಸ್ಮಾಯಿಲರ ಅನಿಸಿಕೆಗಳಿಗೆ ಸಂಬಂಧಿಸಿದಂತೆ ನನ್ನ ಯೋಚನೆಗಳು. ಪತ್ರಕರ್ತರು ಬರೆಯುವ ವರದಿಗಳು biased ಆಗಿದ್ದರೂ ಕೊನೇಪಕ್ಷ ಅವರಿಗೆ ಅದರ ಅರಿವಾದರೂ ಇರುತ್ತದೆಯಲ್ಲವೆ. ನಮ್ಮಂತಹ ಜನಸಾಮನ್ಯರು ಯಾವುದೋ ಆದರ್ಶಕ್ಕೆ ಶರಣಾಗಿ ತಮಗೆ ಗೊತ್ತಿಲ್ಲದೇ ತಮ್ಮ ಮಾತುಕಥೆಗಳಲ್ಲಿ ಆ ಆದರ್ಶದ ಪ್ರತಿಪಾದಕರಾಗುತ್ತೇವೆ. ನಮ್ಮ ಲೇಖನಗಳಲ್ಲಿಯೂ ಇದೇ…
ವಿಧ: ಬ್ಲಾಗ್ ಬರಹ
October 15, 2005
11) ಶಿಲೆಯಲ್ಲಿ ಆನೆಯನ್ನು ಕೆತ್ತುವ ಅತಿ ಸುಲಭ ವಿಧಾನ: ದೊಡ್ಡ ಅಮೃತಶಿಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆನೆಯಂತೆ ಕಾಣದಿರುವ ಭಾಗವನ್ನೆಲ್ಲ ಕೆತ್ತಿ ತೆಗೆದುಬಿಡಿ.
12) ವಯಸ್ಸು ಹೆಚ್ಚಿದಂತೆ ವಿವೇಕ ಹೆಚ್ಚುವುದಿಲ್ಲ. ಸಾಮಾನ್ಯವಾಗಿ ವಯಸ್ಸೊಂದೇ ಹೆಚ್ಚುತ್ತಾ ಹೋಗುತ್ತದೆ.
13) ಭಾರತೀಯರು ಬಲಶಾಲಿಗಳಾಗುತ್ತಿದ್ದಾರೆ. ನಲವತ್ತು ವರ್ಷದ ಹಿಂದೆ ನೂರು ರೂಪಾಯಿಯ ದಿನಸಿ ಹೊರಲು ಇಬ್ಬರು ಬೇಕಾಗುತ್ತಿತ್ತು. ಈಗ ಐದು ವರ್ಷದ ಮಗುವೇ ಆ ಕೆಲಸ ಮಾಡಬಲ್ಲುದು.
14) ಎರಡೂ ಕೈಯಲ್ಲಿ ಒಂದೊಂದು ಜಿಲೇಬಿ…
ವಿಧ: Basic page
October 15, 2005
ತಾಂಗ್ ವಂಶದವರ ಆಳ್ವಿಕೆಯ ಕಾಲದಲ್ಲಿದ್ದ ಝೆನ್ ಗುರು ಝೆನ್‌ಗೆಟ್ಸು ತನ್ನ ಶಿಷ್ಯರಿಗೆ ಹೀಗೆ ಉಪದೇಶಗಳನ್ನು ಮಾಡಿದ:
ಈ ಭೂಮಿಯ ಬಗ್ಗೆ, ನೆಲದ ಬಗ್ಗೆ, ವ್ಯಾಮೋಹ ಬೆಳೆಸಿಕೊಳ್ಳದಂತೆ ಬದುಕುವುದೇ ಝೆನ್ ವಿದ್ಯಾರ್ಥಿಯ ಲಕ್ಷಣ.
ಇತರರ ಒಳ್ಳೆಯ ಕೆಲಸಗಳನ್ನು ನೋಡಿದಾಗ ನೀನೂ ಹಾಗೆ ಮಾಡುವಂತೆ ನಿನ್ನನ್ನೇ ಪ್ರಚೋದಿಸಿಕೋ. ಇತರರ ಕೆಟ್ಟ ಕೆಲಸಗಳನ್ನು ಕಂಡಾಗ ನಾನು ಹಾಗೆ ಮಾಡಬಾರದು ಎಂದು ಎಚ್ಚರಿಕೆ ಹೇಳಿಕೋ.
ನೀನೊಬ್ಬನೇ ಕತ್ತಲೆಯ ಕೋಣೆಯಲ್ಲಿರುವಾಗ ಕೂಡ ನಿನ್ನೆದುರಿಗೆ ಅಪರೂಪದ ಅತಿಥಿ ಇದ್ದಾನೆಂದು…
ವಿಧ: Basic page
October 15, 2005
ಝೆನ್ ಇನ್ನೂ ಜಪಾನಿನಲ್ಲಿ ಪರಿಚಯಗೊಳ್ಳುವ ಮುನ್ನ ತೆಂಡೈ ಪಂಥದ ನಾಲ್ವರು ವಿದ್ಯಾರ್ಥಿಗಳು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಅವರು ನಾಲ್ಕು ಜನರೂ ಆತ್ಮೀಯ ಸ್ನೇಹಿತರು. ಏಳು ದಿನಗಳ ಕಾಲ ಮೌನವನ್ನು ಪಾಲಿಸಬೇಕೆಂದು ನಿರ್ಧರಿಸಿದರು.
ಮೊದಲ ದಿನ ಎಲ್ಲರೂ ಮೌನವಾಗಿದ್ದರು. ಮೌನ ವ್ರತ ಸುಸೂತ್ರವಾಗಿ ಸಾಗಿತು. ಸಂಜೆಯಾಯಿತು. ಕತ್ತಲು ಇಳಿಯಿತು. ದೀಪದಲ್ಲಿ ಎಣ್ಣೆ ತೀರುತ್ತ ಬಂದಿತು. ಮೊದಲನೆಯಾತನಿಗೆ ಸುಮ್ಮನಿರಲು ಆಗಲೇ ಇಲ್ಲ. ಸೇವಕನನ್ನು ಕುರಿತು “ದೀಪಕ್ಕೆ ಸ್ವಲ್ಪ ಎಣ್ಣೆ ಹಾಕು” ಎಂದ.…
ವಿಧ: Basic page
October 15, 2005
ಗುರು ರ್ಯೋಕಾನ್ ತನ್ನ ಇಡೀ ಜೀವಿತವನ್ನು ಝೆನ್ ಅಭ್ಯಾಸದಲ್ಲಿ ಕಳೆದಿದ್ದ. ಒಂದು ದಿನ ತನ್ನ ಸೋದರಳಿಯ ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದಿದ್ದಾನೆ, ಸಂಪತ್ತನ್ನೆಲ್ಲ ಹಾಳು ಮಾಡುತ್ತಿದ್ದಾನೆ ಎಂದು ತಿಳಿಯಿತು. ಬಂಧುಗಳೆಲ್ಲ ಬಂದು ರ್ಯೋಕಾನ್ ತನ್ನ ಸೋದರಳಿಯನಿಗೆ ಬುದ್ಧಿ ಹೇಳದಿದ್ದರೆ ಕುಟುಂಬದ ಸಂಪತ್ತೆಲ್ಲ ನಾಶವಾಗುತ್ತದೆ ಎಂದು ಗೋಳಾಡಿದರು.
ಸೋದರಳಿಯನನ್ನು ಕಂಡು ಅನೇಕ ವರ್ಷಗಳೇ ಕಳೆದಿದ್ದವು. ಅವನ ಊರಿಗೆ ಹೋಗಲು ರ್ಯೋಕಾನ್ ಬಹಳ ದೂರ ನಡೆಯಬೇಕಿತ್ತು. ಆದರೂ ಹೊರಟ.
ಅವನನ್ನು ಕಂಡು…
ವಿಧ: ಬ್ಲಾಗ್ ಬರಹ
October 14, 2005
Yoga's Great Teacher Draws Crowds on Final U.S. Tour - New York Times
ಮೇಲಿನ ಕೊಂಡಿಯನ್ನು ನೀವು ಕ್ಲಿಕ್ಕಿಸಿದರೆ ಬೆಂಗಳೂರಿನ ಬಳಿಯ ಬೆಳ್ಳೂರಿನವರಾದ ಬಿ.ಕೆ.ಎಸ್.ಅಯ್ಯಂಗಾರ್ಯರ ಬಗ್ಗೆ ಇರುವ ನ್ಯೂಯಾರ್ಕ್ ಟೈಮ್ಸ್ ನ ಲೇಖನವನ್ನೋದಬಹುದು. ಅಯ್ಯಂಗಾರ್ಯರ ಹೆಸರು ಯೋಗಾಭ್ಯಾಸಿಗಳಿಗೆ ಮಾತ್ರವಲ್ಲ, ಯೋಗದ ಹೆಸರು ಕೇಳಿದ್ದವರಿಗೂ ಚಿರಪರಿಚಿತ. ಅವರ "ಯೋಗದೀಪಿಕೆ" (ಕನ್ನಡದಲ್ಲಿನ ಅನುವಾದ) ಬಹಳ ಒಳ್ಳೆಯ ಗ್ರಂಥ. (ನಮ್ಮ ಮನೆಯಲ್ಲಿದೆ. ನಾನು ಓದಿದ್ದೇನೆ. ಮಾಡಿ ನೋಡಿಲ್ಲ). ಅವರ…
ವಿಧ: ಬ್ಲಾಗ್ ಬರಹ
October 14, 2005
ಮುಕ್ತ ಮಾರುಕಟ್ಟೆಗಳು ಮತ್ತು ಜಾಗತೀಕರಣದಿಂದ ಇಂದು ಸಾವಿರಾರು ಕೆಲಸಗಳು ಅಮೇರಿಕಾ ದೇಶದ ಕೈ ತಪ್ಪಿವೆ. ಭಾರತ, ಚೀನ ಮೆಕ್ಸಿಕೋದಂತಹ ಹಲವು ದೇಶಗಳಲ್ಲಿ ಈ ಬೆಳವಣಿಗೆಗಳಿಂದಾಗಿ ಹಲವಾರು ಜನಕ್ಕೆ ಕೆಲಸಗಳು ಸಿಕ್ಕಿವೆ. ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಂಡ ಅಮೇರಿಕಾದ ಜನರ ವಿಚಾರವಾಗಿ ಹೆಚ್ಚಾಗಿ ತಿಳಿದಿಲ್ಲ. ಮೊದಲು manufacturing ವಲಯದಲ್ಲಿ ಬಹಳ ಪ್ರಸಿದ್ಧವಾಗಿದ್ದ ಸಣ್ಣ ಸಣ್ಣ ನಗರಗಳು ಇಂದು ಯಾವ ಚಟುವಟಿಕೆಗಳಿಲ್ಲದೇ ಪಾಳು ಬಿದ್ದಿವೆ. ಕೆಲಸ ಕಳೆದುಕೊಂಡ ಜನರು ದೊಡ್ಡ ನಗರಗಳಿಗೆ ವಲಸೆ…
ವಿಧ: Basic page
October 14, 2005
ರಮಾಕಾಂತ ಬಿ.ಎಸ್.ಸಿ ಮುಗಿಸಿದ ನಂತರ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಪ್ರಯತ್ನಿಸುತ್ತಿದ್ದ. ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಆಗ ಅವನ ಸೋದರಮಾವ ವಿಶ್ವನಾಥ ಅವನಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರುವ ಬದಲು ಎಲ್.ಎಲ್.ಬಿ.ಯನ್ನಾದರೂ ಮಾಡು ಎಂದು ಹೇಳಿದರು. ರಮಾಕಾಂತ ಹಾಗೇ ಮಾಡಿದ. ಆದರೆ ಈ ಮಧ್ಯೆ ಅವನಿಗೆಲ್ಲೂ ಕೆಲಸ ಸಿಗಲಿಲ್ಲ. ವಿಶ್ವನಾಥರೇ ತಮ್ಮ ಸ್ನೇಹಿತ ಮಾರ್ಕಂಡೇಯ ಎಂಬ ಒಬ್ಬ ಪ್ರಸಿದ್ಧ ಲಾಯರಿನ ಹತ್ತಿರ ಅಸಿಸ್ಟೆಂಟ್ ಆಗಿ ಕೆಲಸ ಮಾಡಲು ಸೇರಿಸಿದರು. ಅದಕ್ಕೆ ಪ್ರತಿಯಾಗಿ ತನ್ನ ಮಗಳು…
ವಿಧ: ಬ್ಲಾಗ್ ಬರಹ
October 14, 2005
'ಸಂಪದ'ವೆಂಬಂತಹ ಒಂದು ವೆಬ್ಸೈಟ್ ಪ್ರಾರಭಿಸಬೇಕೆಂಬುದು ನನ್ನ ಉದ್ದೇಶವಾಗಿರಲ್ಲಿಲ್ಲವಾದರೂ ಹೇಗು ಹೇಗೋ ಹೀಗೊಂದು ತಾಣವಾಗಿ ಹೋಯ್ತು. ನಿಮ್ಮಲ್ಲಿ ಯಾರಿಗಾದ್ರೂ 'ಯಾಕ್ ಹೀಗ್ ಮಾಡಿದ್ನೋ' ಅಂತ ಸಿಟ್ಟು ಇದ್ದರೆ ಇದರ ಉಗಮವಾಗುವಂತಿದ್ದ 'ವಿಧಿ'ಗೆ ಬೈದುಕೊಳ್ಳಿ. ಅಥವಾ “'ಯುನಿಕೋಡ್'ಗೆ ನಿಮ್ಮ ತಾಣಗಳನ್ನು ಪರಿವರ್ತಿಸಿ" ಎಂದು ನಾನು ಗೋಗರಿದರೂ ಪರಿವರ್ತಿಸದ ವೆಬ್ಸೈಟುಗಳ ownerಗಳನ್ನ ಬೈದುಕೊಳ್ಳಿ. 'ಬಹಳ ಒಳ್ಳೆ ಕೆಲಸ ಮಾಡಿದಾನೆ, ಇವನಿಗೆ ಬಾಳ ಜೋಷ್' ಅನ್ನುವವರು ನಾನು ಅಂತಹ ಜೋಷ್ ಪಾರ್ಟಿನೂ…
ವಿಧ: Basic page
October 13, 2005
(ರಾಬರ್ಟ್ ಹೆರ್ರಿಕ್ ನ "ಟು ಬ್ಲಾಸಮ್ಸ್" ಕವಿತೆಯ ಸರಳಾನುವಾದ)
ಬದುಕಿನೊಲುಮೆಯ ತರು ಮುಡುಪಿಟ್ಟ ಫಲವೆ
ನೀನೇಕೆ ಅಳಿವೆ ಕ್ಷಣದೊಳಗೆ
ಬಂದಿಲ್ಲ ನಿನಗಿನ್ನು ಕಾಲ
ಇಲ್ಲಿರಲು ನೀನು ಕೆಲಕಾಲ
ಕೆಂಪಡರಿ ಮುಗುಳುನಗೆ ಬೀರಿ
ಬಳಿಕವೇ ನಿನ್ನಗಲುವಿಕೆಯಲ್ಲವೆ
ನಿನ್ನ ಚೇತನ ಬುವಿಗಿಳಿದ ಕಾರಣವೇನು
ಕ್ಷಣವರೆಕ್ಷಣದ ಉಲ್ಲಾಸಕೆ
ಮರುಘಳಿಗೆ ಪಾಡುವ ವಿದಾಯಕೆ?
ದುರ್ದೈವ ಪ್ರಕೃತಿ ನಿನಗೆ ಕೊಟ್ಟ ಹುಟ್ಟು
ಕ್ಷಣಿಕ ಸುಖವ ನೀ ಕೊಟ್ಟು
ಅರಿಯದಲೆ ಕ್ಷಯಿಸುವ ನಿನ್ನದೇನು ಗುಟ್ಟು
ನಿನ್ನ ತಳಿರೆಲೆಗಳಲಿ ಬರೆದಿಟ್ಟ
ವಿಧಿಯ…