ಗೂಗಲ್ ನ ಹೊಸ 'ಗೂಗಲ್ ಅನಲಿಟಿಕ್ಸ್'
ಗೂಗಲ್ ಹೊಸತನ್ನು ಹೊರ ತಂದು ಕ್ರಾಂತಿ ಎಬ್ಬಿಸಿದ್ದು ಇದೇ ಮೊದಲ ಬಾರಿಯೇನಲ್ಲ್. ಈ ಬಾರಿ ತಾಣದ statistics ಒಟ್ಟುಗೂಡಿಸಲು ತಾನು ಕೊಂಡುಕೊಂಡಿದ್ದ ಕಂಪೆನಿ, ಅರ್ಚಿನ್ (urchin) ನ ಮೂಲಕ ಹೊಸ '[:https://www.google.com/analytics/home/?et=reset&hl=en-US|ಗೂಗಲ್ ಅನಲಿಟಿಕ್ಸ್]' ಹೊರತಂದಿದೆ.
'ಗೂಗಲ್ ಅನಲಿಟಿಕ್ಸ್' ವಿಮರ್ಶಕರ ಪ್ರಕಾರ ಅತ್ಯುನ್ನತ ಮಟ್ಟದ webstats ತಂತ್ರಾಂಶ, ಅಂದರೆ ನಿಮ್ಮ ತಾಣದ ಅಂಕಿ ಅಂಶಗಳು, ಯಾರು ಯಾರು ಬಂದು ಹೋಗುವರೆಂಬ ಮಾಹಿತಿ ಮುಂತಾದವುಗಳನ್ನು ದೊರೆಯುವಂತೆ ಮಾಡುವ ತಂತ್ರಾಂಶ. "ಅರೆ! ಇದನ್ನ ನನ್ನ webhost ಕೂಡ ಕೊಡುತ್ತಾನೆ" ಅಂತೀರ? ಗೂಗಲ್ ಅನಲಿಟಿಕ್ಸ್ ಅಷ್ಟೇ ಮಾತ್ರವಲ್ಲ, ಗೂಗಲ್ ನದ್ದೇ ಆದ 'adwords'ಅನ್ನು ಇದು ಜೊತೆಗೂಡಿಸಿ ನಿಮಗೆ ಲಾಭದಾಯಕವಾಗುವಂತಹ ರಿಪೋರ್ಟುಗಳನ್ನು ಒದಗಿಸುತ್ತದೆ! ಇಷ್ಟೆಲ್ಲ ನಿಮಗೆ ಸಿಗುವುದು ಭಿಟ್ಟಿಯಾಗಿ!
ಗೂಗಲಿನ business model ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟದ ವಿಷಯವಷ್ಟೆ, ಆದರೆ ಅವರ ತಂತ್ರಾಂಶಗಳು, ಸರ್ವೀಸುಗಳು ಒಂದಕ್ಕಿಂತ ಒಂದರಂತೆ ಚೆನ್ನಾಗಿರುವಂತವು.
ಮುಂದೆ ಇದನ್ನೆ ವಿರುದ್ಧವಾಗಿಟ್ಟುಕೊಂಡು ಉಳಿದ ಪ್ರತಿಸ್ಪರ್ಧಿಗಳಾದ "ಯಾಹೂ!", ಮೈಕ್ರೊಸಾಫ್ಟಿನ ಎಮ್ ಎಸ್ ಎನ್ ಏನೇನು ಹೊಸ ರೀತಿಯ ಸರ್ವೀಸುಗಳನ್ನು ಹೊರ ತರುವುದೆಂಬುದನ್ನು ಕಾದು ನೋಡಬೇಕು.