ಎಲ್ಲ ಪುಟಗಳು

ಲೇಖಕರು: B T Prashanth
ವಿಧ: Basic page
October 02, 2005
ಸೂರ್ಯಕಾಂತಿ ಅರಳುವುದು ರವಿಯ ಕಿರಣದಿಂದ ರೂಪ ಲಾವಣ್ಯದ ಹೂ ಬಿರಿಯುವುದು ಈಕೆಯ ಕಿರು ನಗೆಯಿಂದ ಕೋಗಿಲೆಯು ಹಾಡುವುದು ಕಾಲಕ್ಕೆ ಸರಿಯಾಗಿ ಈಕೆ ಹಾಡಿದರೆ ಹೊಂದುವುದು ಕಾಲವು ತಾನಾಗಿ ನಟರಾಜ ನಟಿಸಿದರೆ ಹೇಳುವೆವು ಸರಿಸಾಟಿಯಿಲ್ಲವೆಂದು ಹೆಜ್ಜೆಯನಿಟ್ಟರೆ ಇವಳು ನಟರಾಜ ನುಡಿವನು ಸರಿಸಾಟಿಯಾರಿಲ್ಲ ಇವಳಿಗೆಂದು ಗರಿಕೆದರಿ ನಡಿವುದು ನವಿಲು ತಳುಕುಬಳುಕಿನಲಿ ಇವಳು ನಡೆದರೆ ತುಳುಕುವುದು ವಯ್ಯಾರದ ಬಿಂದಿಗೆ ನಡುವಿನಲಿ - ಬಿ ಟಿ
ಲೇಖಕರು: muralihr
ವಿಧ: Basic page
October 02, 2005
ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ ನಿನ್ನ ದೇವ ರೆ೦ದ ಮ೦ದಿ ಆಗಿ ಹೋದರೆ೦ದಿಗೋ ದೇಹಿ ಎ೦ದು ತಿರುಪೆಗೈಯೆ ನೆತ್ತಿದವಳು ನೀನಿಗೊ ನುಡಿಗು ತಿರುಪೆ ನಡೆಗು ತಿರುಪೆ ಜಗದೊಳಾದೆ ನೀನು ಕಳಪೆ ಸಿರಿಗಿಲ್ಲವು ನಿನ್ನೊಳು ಕೃಪೆ ಏಕಾದೆಯೆ ನೀ ನಿಸ್ ತ್ರಪೆ ಓ ಭಾರತ ಭೂಮಿ ಕೈ ಬಿಟ್ಟನೆ ಸ್ವಾಮಿ ಕೋಟಿ ಕೋಟಿ ಕೈಗಳಿವೆ ಜತನ ಕಾಣದೆ ನೂರು ಹಾದಿ ಹಿಡಿಯಿತರಿವು ಗುರಿಯ ತೋಚದೆ ಮನ ಮನಕೂ ಬಿಜ್ಜೆ ಬಿಜಯ ಗೈಯಿಸೆ ನುಡಿ ಸೋತಿದೆ. ಪರರ ಸಾಹಸೋದ್ಯಮಕ್ಕೆ ಬೇತು ಜೀವ ಜೋತಿದೆ. ದುಡಿಮೆಗೈಯೆ ತಲೆಗೆ ಸೂಡಿ ಏನ…
ಲೇಖಕರು: Gopinath Rao
ವಿಧ: Basic page
October 02, 2005
ಮಹಾತ್ಮಾ ಗಾಂಧಿ ಇದೀಗ ರಸ್ತೆಯ ಹೆಸರು ಒಂದು ಬದಿಯೆಲ್ಲ ಬಿಯರು ಬಾರು ಇನ್ನೊಂದು ಬದಿ ನಿಲ್ಲಿಸಿದ ವಿದೇಶಿ ಕಾರು ನಡುವೆ ಹುಡುಗಿಯರ ಹೆಗಲಿಗೆ ಜೋತು ನಡೆಯುವ ಯುವಕರ ಯುವ ಕರ ಕಾರುಭಾರು... ಮಹಾತ್ಮಾ ಗಾಂಧಿ ಇದೀಗ ಅಚಲ ಪ್ರತಿಮೆ ಗಾಂಧಿ ಚೌಕ ಎಲ್ಲರಿಗೂ ಸುಖ ಖಜಾನೆ ನಮಗೆ ತೆರೆದು ಉಪಕರಿಸಿದ ಮುದುಕ ವರ್ಷಕ್ಕೆರಡು ಬಾರಿ ನಮನ, ಹೂಗುಚ್ಛ ಮತ್ತೆ ಕೇಳುವವರ್ಯಾರು ನಮ್ಮ ದಾರಿ ಸ್ವಚ್ಛ.. - ಗೋಪೀನಾಥ ರಾವ್ raogopi@yahoo.com
ಲೇಖಕರು: hpn
ವಿಧ: ಚರ್ಚೆಯ ವಿಷಯ
October 01, 2005
ಇಂದಿನಿಂದ ಹಲವಾರು ಕನ್ನಡಿಗರು ತಮ್ಮ ಬ್ಲಾಗುಗಳಲ್ಲಿ, ವೆಬ್ಸೈಟುಗಳಲ್ಲಿ ಬರೆಯುವ ಬರಹಗಳು ಒಂದೆಡೆಯೇ ಲಭ್ಯ. :) [:http://sampada.net/planet/planet-kannada/|'ಪ್ಲಾನೆಟ್ ಕನ್ನಡ'] - ಕನ್ನಡ ಮಾತ್ರವಲ್ಲ ಕನ್ನಡಿಗರು ಇಂಗ್ಲಿಷಿನಲ್ಲಿ ಬರೆದದ್ದನ್ನೂ ಕಲೆಗೂಡಿಸಿ ಒಂದೆಡೆಯೇ ಓದುವ ಸೌಕರ್ಯ ನೀಡುವ ಪುಟ. ಒಟ್ಟಿನಲ್ಲಿ ಕನ್ನಡಿಗರು ಎಲ್ಲೇ ಬರೆಯಲಿ, ಒಂದೆಡೆ ಓದಲು ಲಭ್ಯವಾಗುವಂತೆ ಮಾಡುವ ಆಶಯ. ಸದ್ಯಕ್ಕೆ 'ಸಂಪದ'ದಲ್ಲಿರುವ ಕೆಲವು ಸದಸ್ಯರ ಬ್ಲಾಗುಗಳನ್ನು, 'ಸಂಪದ'ದಲ್ಲಿರುವ…
ಲೇಖಕರು: hpn
ವಿಧ: ಚರ್ಚೆಯ ವಿಷಯ
October 01, 2005
'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು. ಇದಕ್ಕೆ ಕಾರಣಗಳು ಬಹಳಷ್ಟಿವೆ. ಮೊದಲನೆಯದು, ಏಕಾಏಕಿ ಇ-ಪತ್ರಗಳು ಸರ್ವರಿನಿಂದ ಕಳುಹಿಸುವಾಗ ಬೌನ್ಸ್ ಆದಲ್ಲಿ ಸರ್ವರ್ ನೋಡಿಕೊಳ್ಳುತ್ತಿರುವವರಿಗೆ ವಿನಾ ಕಾರಣ ತಲೆನೋವು. ಎರಡನೆಯದು, ಎಲ್ಲರಿಗೂ ಸುದ್ದಿ ಪತ್ರ ಕಳುಹಿಸುವ ಬದಲು ಅದನ್ನೋದುವ ಉತ್ಸಾಹವುಳ್ಳ ಸದಸ್ಯರಿಗೆ…
ವಿಧ: ಬ್ಲಾಗ್ ಬರಹ
September 30, 2005
Globalization and it's discontents ಲೇಖಕ: ಜೋಸೆಫ್ ಸ್ಟಿಗ್ಲಿಟ್ಸ್ ಮೊದಲಿಗೇ ಹೇಳಿಬಿಡ್ತೀನಿ, ನನ್ನ ಅನಿಸಿಕೆಗಳಿಗೂ ಈ ಪುಸ್ತಕದಲ್ಲಿನ ವಿಚಾರಗಳಿಗೂ ಸಾಮ್ಯತೆ ಇದೆ ಅಂತ ನನಗೆ ಮೊದಲೇ ಗೊತ್ತಿತ್ತು.. ಆದರೆ, ಓದುತ್ತಾ ಹೋದಾಗ ಲೇಖಕನ ಅನಿಸಿಕೆಗಳಿಗೂ ನನ್ನವುಗಳಿಗೂ ವ್ಯತ್ಯಾಸ ತಲೆದೂರಿದ್ದಕ್ಕೆ ಈ ಪುಸ್ತಕ ನನಗೆ ಅಷ್ಟಾಗಿ ಹಿಡಿಸದೇ ಹೋಗಿರಬಹುದು. ಈ ಪುಸ್ತಕವನ್ನು ನಮ್ಮ ವಿಶ್ವವಿದ್ಯಾಲಯದಲ್ಲಿನ ಒಬ್ಬ ಇಂಗ್ಲೀಷ್ ಅಧ್ಯಾಪಕರು ಓದಲಿಕ್ಕೆ ಹೇಳಿದ್ದರು. ಆದ್ದರಿಂದ ಮೊದಮೊದಲು ಹುರುಪಿನಿಂದಲೇ…
ಲೇಖಕರು: achethan
ವಿಧ: ಬ್ಲಾಗ್ ಬರಹ
September 30, 2005
Namaskara IT city Bangalore cribs a under sudden anti IT wave . If IT companies crib about infrastructure , others are cribbing about state of kannada in Software Companies, Northies overtaking localities, Infosys not giving enough jobs . But the ROOT CAUSE for the current state lies in Karnataka's policy in higher education , especially Engineering colleges.. First and formost . We have…
ಲೇಖಕರು: pavanaja
ವಿಧ: Basic page
September 29, 2005
ಒಮ್ಮೆ ನಾರಾಯಣ ಎಂಬವರು ಅನಿಲ್ ಕುಮಾರ್ ಎಂಬವರಿಗೆ ಫೋನ್ ಮಾಡಿದರು. "ಹಲೋ" "ಹಲೋ" "ಹನುಮಂತ ಇದ್ದಾರೋ?" "ಆತ ಇಲ್ಲಿಲ್ಲ. ಶ್ರೀರಾಮಚಂದ್ರನ ಪಕ್ಕ ಇದ್ದಾನೆ" "ನಾನೇ ಶ್ರೀರಾಮಚಂದ್ರ. ನಾರಾಯಣ ಮತ್ತು ರಾಮ ಒಬ್ಬನೆ, ಗೊತ್ತಿಲ್ಲವೇ? ಆತ ಇಲ್ಲಿಲ್ಲ." "ಹಾಗಾದರೆ ನಿಮ್ಮ ಹೆಂಡತಿಯನ್ನು ಹುಡುಕಿಕೊಂಡು ಲಂಕೆಗೆ ಹೋಗಿದ್ದಾನೆ" "ಅಲ್ಲಿಂದ ಆತ ಇನ್ನೂ ಬಾಲ ಸುಟ್ಟುಕೊಂಡು ವಾಪಾಸು ಬಂದಿಲ್ಲವೇ?" -ಪವನಜ
ಲೇಖಕರು: tvsrinivas41
ವಿಧ: Basic page
September 29, 2005
ಏಕಾಕ್ಷರಿಯನ್ನು ಯಾಕೆ ಬರೆಯಬಾರದು ಅಂತ ಅನ್ನಿಸಿತು. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಮುಂಚಿತವಾಗಿ ಇದರ ಪರಿಸರದ ಬಗ್ಗೆ ಒಂದು ಸಣ್ಣ ಪರಿಚಯ ಮಾಡಿಕೊಡುವೆ. ಸುಬ್ಬು ಸುಬ್ಬಕ್ಕ ಅವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದಾರೆ. ಪುಟ್ಟ ಹುಡುಗ (ನನ್ನ ಮಗನೇ ಇನ್ಯಾರೂ ಅಲ್ಲ ) ತಾನೂ ಅವರೊಂದಿಗೆ ಊಟ ಮಾಡುವೆನೆಂದು ಹಟ ಹಿಡಿದು ಕುಳಿತಿರುವನು. ಎಲ್ಲರ ಗಮನ ತನ್ನೆಡೆಗೇ ಸೆಳೆಯಬೇಕೆಂಬ ಹಂಬಲ ಅವನದ್ದು. ಅದಕ್ಕೆ ಹೀಗೆ ಹೇಳುತ್ತಿದ್ದಾನೆ. ಮಮ್ಮ ಮಮ್ಮ ಮಮ್ಮು ಮಮ್ಮು ಮಾಮಾ ಮಾಮೀ ಮೂಮೂ…
ಲೇಖಕರು: pradeepkishore
ವಿಧ: Basic page
September 28, 2005
ನಾನು ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕೇಳಿಸಿದ್ದು.... ಗಣಿತದ ಮೇಷ್ಟ್ರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ, ಕಾಲಾಡಿಸುತ್ತಾ ಕುಳಿತ್ತಿದ್ದ ಹುಡುಗನಿಗೆ "ನಿಮ್ಮಪ್ಪ ಟೈಲರ್ರೇನೋ?" ಅಂತ ಕಿಚಾಯಿಸಿದರು. ಅದಕ್ಕೆ ಅವನು "ಯಾಕ್ಸಾರ್, ನೀವು ಚಡ್ಡಿ ಹೊಲಿಸಬೇಕಿತ್ತಾ?" ಅಂದುಬಿಡುವುದೇ? --- --- --- --- --- --- --- --- ---