ವಿಧ: ಬ್ಲಾಗ್ ಬರಹ
September 28, 2005
ಗೆಳೆಯರೆ, ಇಂದು ಪತ್ರಿಕೆಗಳಲ್ಲಿ ಅನುವಾದ ಅಕಾಡೆಮಿಯನ್ನು ಕರ್ನಾಟಕ ಸರ್ಕಾರ ಆರಂಭಿಸಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಸನುವಾದಕ್ಕಾಗಿಯೇ ಅಕಾಡೆಮಿಯೊಂದು ಸ್ಥಾಪನೆಗೊಂಡಿರುವುದು, ಬಹುಶಃ ಭಾರತೀಯ ಭಾಷೆಗಳಲ್ಲಿ ಇದೇ ಮೊದಲು.
ಈ ಅಕಾಡೆಮಿಗಾಗಿ ಯಾವ ಧ್ಯೇಯೋದ್ದೇಶಗಳನ್ನು ಸರ್ಕಾರ ಗೊತ್ತು ಮಾಡಿದೆಯೋ ತಿಳಿಯದು. ಇನ್ನೂ ಮೊದಲ ಸಭೆ ನಡೆಯಬೇಕಾಗಿದೆ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ನಿಜವಾಗಿ ಆಸಕ್ತರಾದ ಸಂಪದ ಬಳಗದ ಸದಸ್ಯರು ಈ ಅಕಾಅಡೆಮಿ ಯಾವ ಕಾರ್ಯಗಳನ್ನು ಮಾಡಬಹುದೆಂಬ ಬಗ್ಗೆ…
ವಿಧ: ಚರ್ಚೆಯ ವಿಷಯ
September 28, 2005
ಇಂದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿರುವ [http://www.deccanherald.com/deccanherald/sep282005/index2037442005927.asp|ಸುದ್ದಿ] ಓದಿ. ವಿಚಿತ್ರ ಎಂದರೆ ಇದು ಬೇರೆ ಯಾವುದೆ ಪತ್ರಿಕೆಗೆಳಲ್ಲಿ ಪ್ರಮುಖ ಸುದ್ದಿಯಾಗಿಲ್ಲ. ನಾನು ಇನ್ನೂ ಎಲ್ಲ ಪತ್ರಿಕೆಗಳ ಎಲ್ಲ ಪುಟಗಳನ್ನು ಓದಿಲ್ಲ. ಮುಖಪುಟ ಮಾತ್ರ ನೋಡಿದೆ.
ಸಿಗೋಣ,
ಪವನಜ
ವಿಧ: ಚರ್ಚೆಯ ವಿಷಯ
September 28, 2005
ಸಂಪದದ ಸಕ್ರಿಯ ಸದಸ್ಯರಾಗಿರುವ ಓ ಎಲ್ ಎನ್ ಸ್ವಾಮಿ ಅವರನ್ನು ಕರ್ನಾಟಕ ಭಾಷಾಂತರ ಅಕಾದೆಮಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಿಗೋಣ,
ಪವನಜ
ವಿಧ: ಚರ್ಚೆಯ ವಿಷಯ
September 27, 2005
ಪಹೇಲಿ (ಅಮೋಲ್ ಪಾಲೇಕರ್ ನಿರ್ದೇಶನದ, ರಾಣಿ ಮೂಖರ್ಜಿ ಮತ್ತು ಶಾರುಖ್ ಖಾನ್ ನಟನೆಯ ಚಿತ್ರ) ಆಸ್ಕರ್ ಗೆ ಆಯ್ಕೆಯಾಗಿದೆ. ನಮ್ಮ ಕರ್ಣಾಟಕದಿಂದ ಗಿರೀಶ ಕಾಸರವಳ್ಳಿಯವರ "ಹಸೀನಾ" ಚಿತ್ರವನ್ನು ಈ ಆಯ್ಕೆಗೆ ಕಳಿಸಲಾಗಿತ್ತು. ಆದರೆ ಪಹೇಲಿಯ ಆಯ್ಕೆ ಆಗಿದೆ.
ನಾನು ಎರಡೂ ಚಿತ್ರಗಳನ್ನು ನೋಡಿಲ್ಲ. ಆದರೆ ಒಂದು ಪ್ರಶ್ನೆ. ಹಸೀನಾ ಒಳ್ಳೆಯ ಚಿತ್ರವೋ ಅಥವಾ ಪಹೇಲಿಯೋ ? ಎರಡು ಭಿನ್ನ ರೀತಿಯ ಚಿತ್ರಗಳನ್ನು ಹೋಲಿಸುವುದು ಅಷ್ಟೊಂದು ಸರಿಯಲ್ಲ. ಆದರೂ ಸಂಪದದ ಸದಸ್ಯರನ್ನು ಕೇಳಲೇಬೇಕಿತ್ತು. ದುರದೃಷ್ಟವಶಾತ್…
ವಿಧ: Basic page
September 27, 2005
ಕರ್ನಾಟಕದಲ್ಲಿ...
ಜಾತಿಮತ ಹೆಸರಲ್ಲಿ
ಹೆರಿಗೆ ಕಸ ಕೆಸರಲ್ಲಿ
ಗಂಧದ ಕೊರಡು
ತೇಯುತ್ತಿದೆ
ಅವರಿವರ ಬೇಳೆ
ಬೇಯುತ್ತಿದೆ
ಪ್ರಜಾಸತ್ತೆ
ಹೆದರಿ ಸಾಯುತ್ತಿದೆ!
ಜಾತಿ ಕಸೂತಿ
ಗೌಡರು ಅರೆದ ಮದ್ದು
ಸಿದ್ದುಗೊಂದು ಗುದ್ದು
ಅ ಅ ಹಿಂದ ಹಿಂದಲ್ಲ
ಸವಲತ್ತಲ್ಲಿ ಅವರು ಮುಂದ
ಈಡಿಗ ಕುರುಬರ ಕಣ್ಣು ಕೆಂಪು
ಹೊಡೆದಾಡಿ ಒಳಜಾತಿ
ಚದುರಿ ಮೂಲೆಗುಂಪು
ಮುದ್ದು ಮಕ್ಕಳ ಹೊಟ್ಟೆ ತಂಪು!
ಗಂಗೂಲಿ
ಚಲೋ ಒಳ್ಳೇದಾತು
ಮಾತು ಬಯಲಾಯ್ತು
ಹನ್ನೊಂದು ಜನರ
ನೇತಾರ
ಬಂಗಾಲದ ಸರದಾರ
ಮೇಲೆವರೆಗೆ ಸೇತು
ಹೋದರೂ ಸೋತು…
ವಿಧ: Basic page
September 27, 2005
ಅಂತರ್ಜಾಲ ನಿಸರ್ಗವೇ?
ನಿಸರ್ಗ ದೇವರೇ?
ಕಣ್ಣಿಗೆ ಕಾಣದು, ಕಿವಿಗೆ ಕೇಳದು, ಮುಟ್ಟಲಾಗದು ನಿಸರ್ಗ
ಅಂತೆಯೇ ಅಂತರ್ಜಾಲ ಇಂದ್ರಿಯಗಳಿಗೆ ನಿಲುಕದು
ಯಾರ ಕೈಗೂ ಸಿಲುಕದು
ಆದರೂ ತನ್ನ ಕರಾಮತ್ತು ತೋರುವುದು
ಜಾಲದಿ ಸಿಲುಕಿದವರು ಒಬ್ಬರನೊಬ್ಬರು
ನೋಡದವರು, ಅರಿಯದವರು,
ಆದರೂ ಚಿರಪರಿಚಿತರು
ಚಾಟು ಪದ್ಯ ತಿಳಿಯದ, ಚಾಟ್ ತಿನ್ನದ
ಮಂದಿಯೂ ಚಾಟಿಸುವವರು ಚಿರಪರಿಚಿತರಂತೆ
ಯಾರ ಮನೆಯನೂ ಭಿಡೆಯಿಲ್ಲದೇ ಹೊಕ್ಕುವ
ಎಲ್ಲರ ಮನದಲೂ ನೆಲೆಸಿ ನಲಿದಾಡುವ
ಹೃದಯಕೆ ಲಗ್ಗೆ ಹಾಕುವ
ತಿಳಿವಿಗೆ ಬರದೇ ಪ್ರೇಮವ ಬೆಸೆಯುವ…
ವಿಧ: ಚರ್ಚೆಯ ವಿಷಯ
September 26, 2005
ಹಿಡಕಲ್ ಜಲಾಶಯದ ನೀರು ಗ್ರಾಮದೊಳ ನುಗ್ಗಿ ಕ್ಯಾಟ್ರಿನ, ರೀಟ ಅಮೇರಿಕನ್ನರಿಗೆ ತಂದಿತ್ತ ವೇದನೆಯೇ ಗೋಕಾಕ ಗ್ರಾಮವಾಸಿಗಳದ್ದೂ.
ಇಡೀ ಪ್ರದೇಶ ಹೊಲಸು ತುಂಬಿಕೊಂಡು ದುರ್ನಾತ ಬೀರತೊಡಗಿದೆ. ಹಂದಿ, ನಾಯಿಗಳು ಅಲ್ಲಲ್ಲೇ ಸತ್ತುಬಿದ್ದಿವೆ.
ಪ್ರಜಾವಾಣಿಯ [:http://prajavani.net/sep262005/2961020050926.php|ಈ ಲೇಖನ] ಓದಿ.
ವಿಧ: ಚರ್ಚೆಯ ವಿಷಯ
September 26, 2005
ಪ್ರಜಾವಾಣಿಯಲ್ಲಿಂದು ಕಸಾಪ ದಲ್ಲಿ ನಡೆದ ಗಲಾಟೆ ಗದ್ದಲ ಬಗ್ಗೆ [:http://prajavani.net/sep262005/2964320050926.php|ಒಂದು ರಿಪೋರ್ಟ್ ಇದೆ, ಓದಿ].
ಸಾಹಿತ್ಯವನ್ನು 'channel' ಮಾಡಬೇಕಾದ ಸಂಸ್ಥೆಯೊಂದು ಹೀಗೆ 'ರಾಜಕೀಯ'ದಿಂದ ಆವೃತಗೊಂಡು ತನ್ನ ಜವಾಬ್ದಾರಿಯಿಂದ ದೂರ ಹೋಗುತ್ತಿರುವುದು ಬಹಳ ವಿಷಾದನೀಯ ಸಂಗತಿ.
ವಿಧ: ಚರ್ಚೆಯ ವಿಷಯ
September 26, 2005
ನಮಸ್ಕಾರ...
ಬೆಂಗಳೂರಿನ ಹೊರಗಿರುವವರಿಗೆ ಬೆಂಗಳೂರಿನ ಆಕಾಶವಾಣಿ ಹಾಗು ಎಫ಼್.ಎಮ್ ರೇಡಿಯೊ ಕೇಳುವ ಭಾಗ್ಯವಿಲ್ಲ...ಇದಕ್ಕೆ ಯಾರಾದರೂ ಅದನ್ನು ಅಂತರ್ಜಾಲದಲ್ಲಿ 'ಸ್ಟ್ರೀಮಿಂಗ್' ಮಾಡುವುದಕ್ಕೆ ಸಾಧ್ಯವೆ ?
ಇದಕ್ಕೆ ಸುಬ್ಸ್ಕ್ರಿಪ್ಶನ್ ಇಲ್ಲದೆ ಇರುವುದರಿಂದ ಅಂತರ್ಜಾಲದಲ್ಲಿ 'ಸ್ಟ್ರೀಮಿಂಗ್' ಕಾನೂನುಬಾಹಿರವಲ್ಲವೆಂದು ನಂಬಿದ್ದೇನೆ.
ಇಂತಿ, ಪ್ರತಾಪ
ವಿಧ: ಚರ್ಚೆಯ ವಿಷಯ
September 25, 2005
ಚಿತ್ರ ಕೃಪೆ: ಪ್ರಜಾವಾಣಿ
ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಬಸವರಾಜ ರಾಜಗುರು ಇವರೇ ಮೊದಲಾದ ಪ್ರಸಿದ್ಧ ಕಲಾವಿದರಿಗೆ ಗುರುಗಳಾಗಿದ್ದ 'ರಾಮಭಾವು ಕುಂದಗೋಳಕರ'ರವರ ಬಗ್ಗೆ ಇಂದಿನ ಪ್ರಜಾವಾಣಿಯ [:http://prajavani.net/sep252005/2944120050925.php|ಸಾಪ್ತಾಹಿಕ ಪುರವಣಿಯಲ್ಲೊಂದು ಲೇಖನ ಪ್ರಕಟವಾಗಿದೆ], ಓದಿ.