ಎಲ್ಲ ಪುಟಗಳು

ಲೇಖಕರು: sannams
ವಿಧ: ಬ್ಲಾಗ್ ಬರಹ
September 20, 2005
ಉಪ್ಪಿಯ ಹುಟ್ಟು ಹಬ್ಬಕ್ಕೊಂದು ಪ್ರೀತಿಯ ಪತ್ರ   ಹಲೋ ಉಪ್ಪಿ!,   ಹೇಗಿದ್ದೀಯಾ ಗುರು ? ನಾನು ನಿನ್ನ ಅಭಿಮಾನಿ ಆದರೆ ಅಭಿಮಾನಿ ದೇವರಲ್ಲಾ, ತುಂಬಾ ದಿವಸದಿಂದ ನಿನಗೆ ಒಂದು ಪತ್ರ ಬರೆಯೋಣ ಅಂದು ಕೊಂಡಿದ್ದೆ, ಅದಕ್ಕೆ ಟೈಮು ಈಗ ಕೂಡಿ ಬಂತು ನೋಡು ಗುರು. ನಿನ್ನ "ಗೌರಮ್ಮ" ಸೂಪರ್ ಹಿಟ್ ಆಗಿದೆ ಅಂತ ಗೊತ್ತಾಯ್ತು....ತುಂಬಾ ಕಂಗ್ರಾಜುಲೆಶನ್ಸ್ !. ಏನ್ ಗುರೂ ನೀನು "ಓ೦" ಚಿತ್ರ ಮಾಡಿದ್ದೆ ತಡ ಎಲ್ಲರೂ ಅದೇ ತರಾ ಚಿತ್ರ ಮಾಡೋಕೆ ಸುರು ಹಚ್‍ಕೊಂಡು ಬಿಟ್ಟಾವ್ರೇ, ಇರೋ ಬರೋ ಹೀರೊಗಳ ಕೈಯಲ್ಲಿ…
ಲೇಖಕರು: pavanaja
ವಿಧ: Basic page
September 20, 2005
ಸ್ಟೀರಿಯೋ ಸಿಸ್ಟಮ್ ಕೊಳ್ಳಲು ಅಂಗಡಿಗೆ ಹೋಗಿದ್ದೀರಾ? ಅಂಗಡಿಯಾತ ಕೇಳುವ ಪ್ರಶ್ನೆ "ನಿಮಗೆ ಎಷ್ಟು ವಾಟ್‌ನ ಸಿಸ್ಟಮ್ ಬೇಕು?". ಅಥವಾ ಆತನೇ ಒಂದೊಂದಾಗಿ ತನ್ನಲ್ಲಿರುವ ಸ್ಟೀರಿಯೋಗಳನ್ನು ತೋರಿಸುತ್ತಾ ಹೋಗುತ್ತಾನೆ. ಪ್ರತಿ ಸ್ಟೀರಿಯೋವನ್ನು ತೋರಿಸುವಾಗಲೂ ಮರೆಯದೆ ಹೇಳುವ ಮಾತು ಅದು ಎಷ್ಟು ವಾಟ್‌ನದು ಎಂದು. "ಸಾರ್, ಇದು 1000 ವಾಟ್, ಇದು 2000 ವಾಟ್,..." ಹೀಗೆ ಗುಣಗಾನ ಸಾಗುತ್ತಿರುತ್ತದೆ. ಹೆಚ್ಚಿನ ಗ್ರಾಹಕರೂ ಸ್ಟೀರಿಯೋ ಕೊಳ್ಳುವಾಗ ಮುಖ್ಯವಾಗಿ ಗಮನಿಸುವುದು ಅದು ಎಷ್ಟು ವಾಟ್‌ನದು ಎಂದು…
ಲೇಖಕರು: koumodiki
ವಿಧ: ಚರ್ಚೆಯ ವಿಷಯ
September 20, 2005
ಬ್ರಿಟನಿನ ಸಂಗೀತ ಪ್ರಿಯರಿಗೆ ಕರ್ನಾಟಕ ಪರಿಚಿತ ಹೆಸರು. ಯೇಕೆಂದರೆ ಇದು ಒಂದು ರಾಕ್ ಸಂಗೀತಗಾರರ ಗುಂಪು. ೫ ಜನರ ಈ ತಂಡ ತನ್ನ ಹಾಡುವ ಶೈಲಿಯನ್ನು "ಪ್ರೊಗ್ರೆಸಿವ್ ರಾಕ್" ಎಂದು ವರ್ಣಿಸುತ್ತರೆ. ಈ ಗುಂಪಿನ ಬಗ್ಗೆ ಮಾಹಿತಿಗಾಗಿ ಇಲ್ಲಿ ನೋಡಿ http://www.musicald… http://www.karnatak…
ಲೇಖಕರು: hpn
ವಿಧ: ಚರ್ಚೆಯ ವಿಷಯ
September 20, 2005
ಗೂಗಲ್ ನ ಸರ್ಚ್ ಸೌಲಭ್ಯ ಈಗ ಸಂಪೂರ್ಣ ಕನ್ನಡ ಇಂತರ್ಫೇಸಿನಲ್ಲಿ (ಸಂಪೂರ್ಣ ಕನ್ನಡ ಮಾಧ್ಯಮದಲ್ಲಿ) ಲಭ್ಯ. ಕೆಳಗಿನ ಸ್ಕ್ರೀನ್ ಶಾಟ್ ನೋಡಿ: ನಿಮ್ಮ ಬ್ರೌಸರಿನಲ್ಲಿಯೂ ಗೂಗಲ್ ಕನ್ನಡದಲ್ಲೇ ಬರುವಂತೆ ಮಾಡಬೇಕೆನಿಸಿದರೆ ಗೂಗಲ್ ಸರ್ಚಿನ "preferences" ಲಿಂಕ್ ಮೇಲೆ ಕ್ಲಿಕ್ಕಿಸಿ "Ineterface language" ನಲ್ಲಿ ಕನ್ನಡವನ್ನು ಆಯ್ಕೆ ಮಾಡಿಕೊಳ್ಳಿ. *** ಇದನ್ನು ಸಾಕಾರಗೊಳಿಸಿದ ಕೀರ್ತಿಯೂ ಹಲವು ಕನ್ನಡಾಭಿಮಾನಿ ಕನ್ನಡಿಗರದೆ! ಜನವರಿ - ಫೆಬ್ರುವರಿ ಸಮಯದಲ್ಲಿ ನಾನೂ ಒಂದಷ್ಟು ಅನುವಾದಗಳನ್ನು…
ಲೇಖಕರು: tvsrinivas41
ವಿಧ: Basic page
September 20, 2005
ನಾನೊಂದು ಕಂಪ್ಯೂಟರ್ ನನಗೂ ನಿನಗೂ ಏನು ವ್ಯತ್ಯಾಸ? ಪ್ರತಿಸಲವೂ ನನ್ನನು ಮಾತ್ರ ಎಬ್ಬಿಸುವುದು ಕಾಲಿನಲ್ಲಿ ಒದ್ದು ಒದ್ದು ನಿನಗೆ ಹಾಗೆ ಮಾಡಲು ರಂಪ ಮಾಡುವೆ ಬಿದ್ದು ಬಿದ್ದು ನನ್ನಲಿಹುದು ಹಾರ್ಡ್ ಡಿಸ್ಕ್ ಅದೆಂದೂ ಸುಲಭದಿ ಹಾಳಾಗದು ನಿನ್ನಲ್ಲೂ ಇಹುದೊಂದು ಬುರುಡೆ ಅಲ್ಪ ಸ್ವಲ್ಪಕೂ ಬಿಸಿಯಾಗುವುದು ಕಾಲಕ್ಕೆ ತಕ್ಕಂತೆ ನನ್ನ ಪಿ ೪ ಸ್ಪೀಡು ೮೮೮ ನಿನಗೆ ತಿಳೀದಿರೋದು ಬುಸುಗುಡುವ ೫೫೫ ನನ್ನ ರ್‍ಯಾಮಿನ ಕೆಪ್ಯಾಸಿಟಿ ೨ ಜಿಬಿ ನನ್ನ ಮುಂದೆ ನೀನೊಂದು ದೊಡ್ಡ ಗೂಬೆ ನನ್ನಲಿಹುದೊಂದು ಪುಟ್ಟ…
ಲೇಖಕರು: olnswamy
ವಿಧ: Basic page
September 20, 2005
ಝೆನ್ ಗುರು ಇಕ್ಕ್ಯು ತನ್ನ ಚಿಕ್ಕಂದಿನಿಂದಲೇ ಚುರುಕು ಬುದ್ಧಿಗೆ ಪ್ರಸಿದ್ಧನಾಗಿದ್ದ. ಇಕ್ಕ್ಯುನ ಗುರುವಿನ ಬಳಿ ಒಂದು ಪ್ರಾಚೀನವಾದ, ಸುಂದರವಾದ, ಅತ್ಯಂತ ಬಲೆಬಾಳುವ, ಪಿಂಗಾಣಿಯ ಚಹಾ ಕಪ್ಪು ಇತ್ತು. ಇಕ್ಕ್ಯು ಒಮ್ಮೆ ಅದನ್ನು ಒರೆಸುತ್ತಿದ್ದಾಗ ಕೈ ಜಾರಿ ಬಿದ್ದು ಒಡೆದು ಹೋಯಿತು. ಏನುಮಾಡುವುದೆಂದು ತಿಳಿಯದೆ ಗೊಂದಲಗೊಂಡ. ಗುರುವಿನ ಹೆಜ್ಜೆ ಸದ್ದು ಕೇಳಿಸಿತು. ಸರಸರನೆ ಚಹಾ ಕಪ್ಪಿನ ಚೂರುಗಳನ್ನೆಲ್ಲ ಗುಡಿಸಿ, ತನ್ನ ಬೆನ್ನ ಹಿಂದೆ ಮರೆಮಾಡಿಕೊಂಡು, ಏನೂ ಅರಿಯದವನಂತೆ ನಿಂತ. ಗುರು ಬಂದ ಕೂಡಲೆ…
ಲೇಖಕರು: olnswamy
ವಿಧ: Basic page
September 20, 2005
೩. ಆಚೆ ಈಚೆ ಮುಲ್ಲಾ ಒಮ್ಮೆ ನದಿಯ ದಡದಲ್ಲಿ ಕೂತಿದ್ದ. ಇನ್ನೊಂದು ದಡದಲ್ಲಿದ್ದ ಒಬ್ಬಾತ “ಆಚೆ ದಡಕ್ಕೆ ಹೋಗುವುದು ಹೇಗೆ?” ಎಂದು ಕೂಗಿ ಕೇಳಿದ. ”ನೀನು ಆಗಲೇ ಆಚೆ ದಡದಲ್ಲಿದ್ದೀಯಲ್ಲ” ಎಂದು ಈ ದಡದಿಂದ ಮುಲ್ಲಾ ಕೂಗಿದ! ೪ ಒಂಟೆ ಒಮ್ಮೆ ಮುಲ್ಲಾ ನಸ್ರುದ್ದೀನ್ ಒಂಟೆಯ ಮೇಲೆ ಕೂತು ಹಳ್ಳಿಹಗೆ ಬಂದ. ಒಂಟೆಗೋ ಬಹಳ ವೇಗವಿತ್ತು. ಕಣ್ಣು ಮುಚ್ಚಿತೆರೆಯುವುದರೊಳಗೆ ಇಡೀ ಹಳ್ಳಿ ಸುತ್ತಿ ಹೊರಟು ಹೋದ ಮುಲ್ಲಾ. ಜನರೆಲ್ಲ ಕಣ್ಣು ಬಿಟ್ಟುಕೊಂಡು ನೋಡುತ್ತನಿಂತಿದ್ದರು. ಮಾರನೆಯ ದಿನವೂ ಅದೇ ಕತೆ.…
ಲೇಖಕರು: hpn
ವಿಧ: ಬ್ಲಾಗ್ ಬರಹ
September 20, 2005
ಕಳೆದ ಎರಡು ಮೂರು ದಿನಗಳಿಂದ ವೈರಲ್ ಫೀವರ್ ನನಗಂಟಿಕೊಂಡು ಬೇರೇನೂ ಮಾಡದಾಗಿ, ಕೊನೆಗೆ ನನ್ನ ಇಂಗ್ಲಿಷ್ ಸ್ನೇಹಿತ "ಬೋರು ಹೊಡೆದಿದೆ, ಮ್ಯಾಕಿಗೊಂದು (Mac OS X ಗೆ ಒಂದು) ಯುನಿಕೋಡ್ ಫಾಂಟ್ ಮಾಡೋಣವಾ?" ಎಂದಾಗ ಓಗೊಟ್ಟೆ. ಅವನಾರಿಸಿದ 'ಜನಕನ್ನಡ', 'ತುಂಗ' ಹಾಗೆ ಬದಲಾಯಿಸಲಾಗದೆಂದೂ, ಬದಲಾಯಿಸಬಲ್ಲ ಮುಕ್ತ ಲೈಸನ್ಸಿನ ಒಂದು ಫಾಂಟ್ ಹುಡುಕುವಾಗ ಕೇದಗೆ ಬಹಳ ಚೆನ್ನಾಗಿದೆಯೆನಿಸಿತು. ಸರಿ ಅದನ್ನೇ ಹಿಡಿದು ಶುರುವಾಯ್ತು... ಮೊದಲಿಗೆ ಅಕ್ಷರಗಳ ಪರಿಚಯ, ಕನ್ನಡ ಹೇಗೆ ಕಾಣುವುದೆಂಬುದಕ್ಕೆ 'ಸಂಪದ'…
ಲೇಖಕರು: Rohit
ವಿಧ: ಚರ್ಚೆಯ ವಿಷಯ
September 19, 2005
ಗೂಗಲ್ ಅರ್ಥ್ನಲ್ಲಿ ಮಸುಕು ಮಸುಕಾಗಿ ಕಾಣುತ್ತಿದ್ದ ನಮ್ಮ ಬೆಂಗಳೂರು ಈಗ ಇನ್ನೂ ಸ್ಪಷ್ಟ ಹಾಗೂ ನಿಖರವಾಗಿ ಕಾಣ್ತಿದೆ. ನಾನಂತೂ ಇಲ್ಲೇ ಕೂತ್ಕೊಂಡು ನಮ್ಮನೆಗೊಂದು ಭೇಟಿ ಕೊಟ್ಟು ಬಂದೆ.
ಲೇಖಕರು: pavanaja
ವಿಧ: Basic page
September 19, 2005
ತುಂಬ ಹಿಂದೆ, ಅಂದರೆ ನಾನು ತೈವಾನಿನಲ್ಲಿದ್ದಾಗ, ನಾನು ಜಾಲಿಗನಾದ ಆರಂಭದ ದಿನಗಳಲ್ಲಿ, soc.culture.indian.karnatakaದಲ್ಲಿ ತರಲೆ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದೆ. ಅವು ತುಂಬ ಜನಪ್ರಿಯವೂ ಆಗಿದ್ದವು. ಅದನ್ನೇ ಮತ್ತೆ ನನ್ನ ವಿಶ್ವಕನ್ನಡದಲ್ಲೂ ಮುಂದುವರಿಸಿದೆ. ಅವುಗಳನ್ನು ಓದಿದವರಿಗೆ ತರಲೆ ಪ್ರಶ್ನೆಗಳ ಪರಿಚಯವಿರಬಹುದು. ಒಂದು ಉದಾಹರಣೆ- ಪ್ರ: ಕೋಳಿ ಯಾಕೆ ಮೊಟ್ಟೆ ಇಡುತ್ತದೆ? ಉ: ಯಾಕೆಂದರೆ ಹಾಕಿದರೆ ಒಡೆಯುತ್ತದೆ, ಅದಕ್ಕೆ ಈಗ ಕೆಲವು ಪ್ರಶ್ನೆಗಳು: 1. ಕೋಳಿ ಮೊದಲೋ,…