ಜರ್ಮನ್ ಕವಿತೆ: ರಿಲ್ಕ್: ಚನ್ನಾಗಿಯೇ ಗೊತ್ತಿದೆ, ಆದರೂ...

ಜರ್ಮನ್ ಕವಿತೆ: ರಿಲ್ಕ್: ಚನ್ನಾಗಿಯೇ ಗೊತ್ತಿದೆ, ಆದರೂ...

ಬರಹ

ಪ್ರೀತಿಯ ನಾಡಿನ ಭೂಪಟ ನಮಗೆ ಚನ್ನಾಗಿಯೇ ಗೊತ್ತಿದೆ
ಅಲ್ಲಿರುವ ದೇವಾಲಯ, ಅದರ ಬಳಿಯ ಸ್ಮಶಾನ ಚನ್ನಾಗಿಯೇ ಗೊತ್ತಿದೆ
ಸ್ಮಶಾನದಲ್ಲಿರುವ ಪ್ರೇಮಿಗಳ ಹೆಸರು ಹೊತ್ತ ಕಲ್ಲು
ಅಗಾಧ ನಿಶ್ಶಬ್ದದ ಕಣಿವೆಯಲ್ಲಿ ಬಿದ್ದು ಹೆಸರಿಲ್ಲವಾದವರು
ಇವೆಲ್ಲ ಚನ್ನಾಗಿಯೇ ಗೊತ್ತಿದೆ ಗೊತ್ತಿದೆ.
ಆದರೂ, ನಿನೂ ನಾನೂ, ಅವಕಾಶವಾದಾಗಲೆಲ್ಲ
ಆ ಪುರಾತನ ಮರಗಳ ನೆರಳಲ್ಲಿ ಅಡ್ಡಾಡುವುದು
ಅಲ್ಲೆ ಅರಳಿದ ಹೂಗಳ ನಡುವೆ, ಹಸಿರು ಹುಲ್ಲಿನ ಮೇಲೆ ಮಲಗಿ
ಮೇಲೆ ಆಕಾಶವನ್ನು ಮುಖಾಮುಖಿ ದಿಟ್ಟಿಸುವುದು ಬಿಡಲಾರೆವು.

ರೇನರ್ ಮಾರಿಯಾ ರಿಲ್ಕ್
ಜರ್ಮನಿಯ ಕವಿ. ತುಂಬ ಸೂಕ್ಷ್ಮವಾದ, ಸದೃಢವಾದ, ಸಂಕೀರ್ಣವಾದ ಕವಿತೆಗಳನ್ನು ಬರೆದಿದ್ದಾನೆ. ಅವನು ಬದುಕನ್ನು ನೋಡುವ ರೀತಿಯೇ ಬೇರೆ. ಇತ್ತೀಚೆಗೆ ಓದಿದ ಅವನ ಒಂದು ಕಿರು ಕವಿತೆ ಇಲ್ಲಿ ಹೀಗೆ ಕನ್ನಡಕ್ಕೆ ತಂದಿದ್ದೇನೆ.