ಎಲ್ಲ ಪುಟಗಳು

ಲೇಖಕರು: achethan
ವಿಧ: ಬ್ಲಾಗ್ ಬರಹ
September 30, 2005
Namaskara IT city Bangalore cribs a under sudden anti IT wave . If IT companies crib about infrastructure , others are cribbing about state of kannada in Software Companies, Northies overtaking localities, Infosys not giving enough jobs . But the ROOT CAUSE for the current state lies in Karnataka's policy in higher education , especially Engineering colleges.. First and formost . We have…
ಲೇಖಕರು: pavanaja
ವಿಧ: Basic page
September 29, 2005
ಒಮ್ಮೆ ನಾರಾಯಣ ಎಂಬವರು ಅನಿಲ್ ಕುಮಾರ್ ಎಂಬವರಿಗೆ ಫೋನ್ ಮಾಡಿದರು. "ಹಲೋ" "ಹಲೋ" "ಹನುಮಂತ ಇದ್ದಾರೋ?" "ಆತ ಇಲ್ಲಿಲ್ಲ. ಶ್ರೀರಾಮಚಂದ್ರನ ಪಕ್ಕ ಇದ್ದಾನೆ" "ನಾನೇ ಶ್ರೀರಾಮಚಂದ್ರ. ನಾರಾಯಣ ಮತ್ತು ರಾಮ ಒಬ್ಬನೆ, ಗೊತ್ತಿಲ್ಲವೇ? ಆತ ಇಲ್ಲಿಲ್ಲ." "ಹಾಗಾದರೆ ನಿಮ್ಮ ಹೆಂಡತಿಯನ್ನು ಹುಡುಕಿಕೊಂಡು ಲಂಕೆಗೆ ಹೋಗಿದ್ದಾನೆ" "ಅಲ್ಲಿಂದ ಆತ ಇನ್ನೂ ಬಾಲ ಸುಟ್ಟುಕೊಂಡು ವಾಪಾಸು ಬಂದಿಲ್ಲವೇ?" -ಪವನಜ
ಲೇಖಕರು: tvsrinivas41
ವಿಧ: Basic page
September 29, 2005
ಏಕಾಕ್ಷರಿಯನ್ನು ಯಾಕೆ ಬರೆಯಬಾರದು ಅಂತ ಅನ್ನಿಸಿತು. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಮುಂಚಿತವಾಗಿ ಇದರ ಪರಿಸರದ ಬಗ್ಗೆ ಒಂದು ಸಣ್ಣ ಪರಿಚಯ ಮಾಡಿಕೊಡುವೆ. ಸುಬ್ಬು ಸುಬ್ಬಕ್ಕ ಅವರು ನಮ್ಮ ಮನೆಗೆ ಊಟಕ್ಕೆ ಬಂದಿದ್ದಾರೆ. ಪುಟ್ಟ ಹುಡುಗ (ನನ್ನ ಮಗನೇ ಇನ್ಯಾರೂ ಅಲ್ಲ ) ತಾನೂ ಅವರೊಂದಿಗೆ ಊಟ ಮಾಡುವೆನೆಂದು ಹಟ ಹಿಡಿದು ಕುಳಿತಿರುವನು. ಎಲ್ಲರ ಗಮನ ತನ್ನೆಡೆಗೇ ಸೆಳೆಯಬೇಕೆಂಬ ಹಂಬಲ ಅವನದ್ದು. ಅದಕ್ಕೆ ಹೀಗೆ ಹೇಳುತ್ತಿದ್ದಾನೆ. ಮಮ್ಮ ಮಮ್ಮ ಮಮ್ಮು ಮಮ್ಮು ಮಾಮಾ ಮಾಮೀ ಮೂಮೂ…
ಲೇಖಕರು: pradeepkishore
ವಿಧ: Basic page
September 28, 2005
ನಾನು ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕೇಳಿಸಿದ್ದು.... ಗಣಿತದ ಮೇಷ್ಟ್ರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ, ಕಾಲಾಡಿಸುತ್ತಾ ಕುಳಿತ್ತಿದ್ದ ಹುಡುಗನಿಗೆ "ನಿಮ್ಮಪ್ಪ ಟೈಲರ್ರೇನೋ?" ಅಂತ ಕಿಚಾಯಿಸಿದರು. ಅದಕ್ಕೆ ಅವನು "ಯಾಕ್ಸಾರ್, ನೀವು ಚಡ್ಡಿ ಹೊಲಿಸಬೇಕಿತ್ತಾ?" ಅಂದುಬಿಡುವುದೇ? --- --- --- --- --- --- --- --- ---
ಲೇಖಕರು: olnswamy
ವಿಧ: ಬ್ಲಾಗ್ ಬರಹ
September 28, 2005
ಗೆಳೆಯರೆ, ಇಂದು ಪತ್ರಿಕೆಗಳಲ್ಲಿ ಅನುವಾದ ಅಕಾಡೆಮಿಯನ್ನು ಕರ್ನಾಟಕ ಸರ್ಕಾರ ಆರಂಭಿಸಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಸನುವಾದಕ್ಕಾಗಿಯೇ ಅಕಾಡೆಮಿಯೊಂದು ಸ್ಥಾಪನೆಗೊಂಡಿರುವುದು, ಬಹುಶಃ ಭಾರತೀಯ ಭಾಷೆಗಳಲ್ಲಿ ಇದೇ ಮೊದಲು. ಈ ಅಕಾಡೆಮಿಗಾಗಿ ಯಾವ ಧ್ಯೇಯೋದ್ದೇಶಗಳನ್ನು ಸರ್ಕಾರ ಗೊತ್ತು ಮಾಡಿದೆಯೋ ತಿಳಿಯದು. ಇನ್ನೂ ಮೊದಲ ಸಭೆ ನಡೆಯಬೇಕಾಗಿದೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯದಲ್ಲಿ ನಿಜವಾಗಿ ಆಸಕ್ತರಾದ ಸಂಪದ ಬಳಗದ ಸದಸ್ಯರು ಈ ಅಕಾಅಡೆಮಿ ಯಾವ ಕಾರ್ಯಗಳನ್ನು ಮಾಡಬಹುದೆಂಬ ಬಗ್ಗೆ…
ಲೇಖಕರು: pavanaja
ವಿಧ: ಚರ್ಚೆಯ ವಿಷಯ
September 28, 2005
ಇಂದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿರುವ [http://www.deccanherald.com/deccanherald/sep282005/index2037442005927.asp|ಸುದ್ದಿ] ಓದಿ. ವಿಚಿತ್ರ ಎಂದರೆ ಇದು ಬೇರೆ ಯಾವುದೆ ಪತ್ರಿಕೆಗೆಳಲ್ಲಿ ಪ್ರಮುಖ ಸುದ್ದಿಯಾಗಿಲ್ಲ. ನಾನು ಇನ್ನೂ ಎಲ್ಲ ಪತ್ರಿಕೆಗಳ ಎಲ್ಲ ಪುಟಗಳನ್ನು ಓದಿಲ್ಲ. ಮುಖಪುಟ ಮಾತ್ರ ನೋಡಿದೆ. ಸಿಗೋಣ, ಪವನಜ
ಲೇಖಕರು: pavanaja
ವಿಧ: ಚರ್ಚೆಯ ವಿಷಯ
September 28, 2005
ಸಂಪದದ ಸಕ್ರಿಯ ಸದಸ್ಯರಾಗಿರುವ ಓ ಎಲ್ ಎನ್ ಸ್ವಾಮಿ ಅವರನ್ನು ಕರ್ನಾಟಕ ಭಾಷಾಂತರ ಅಕಾದೆಮಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಸಿಗೋಣ, ಪವನಜ
ಲೇಖಕರು: nilagriva
ವಿಧ: ಚರ್ಚೆಯ ವಿಷಯ
September 27, 2005
ಪಹೇಲಿ (ಅಮೋಲ್ ಪಾಲೇಕರ್ ನಿರ್ದೇಶನದ, ರಾಣಿ ಮೂಖರ್ಜಿ ಮತ್ತು ಶಾರುಖ್ ಖಾನ್ ನಟನೆಯ ಚಿತ್ರ) ಆಸ್ಕರ್ ಗೆ ಆಯ್ಕೆಯಾಗಿದೆ. ನಮ್ಮ ಕರ್ಣಾಟಕದಿಂದ ಗಿರೀಶ ಕಾಸರವಳ್ಳಿಯವರ "ಹಸೀನಾ" ಚಿತ್ರವನ್ನು ಈ ಆಯ್ಕೆಗೆ ಕಳಿಸಲಾಗಿತ್ತು. ಆದರೆ ಪಹೇಲಿಯ ಆಯ್ಕೆ ಆಗಿದೆ. ನಾನು ಎರಡೂ ಚಿತ್ರಗಳನ್ನು ನೋಡಿಲ್ಲ. ಆದರೆ ಒಂದು ಪ್ರಶ್ನೆ. ಹಸೀನಾ ಒಳ್ಳೆಯ ಚಿತ್ರವೋ ಅಥವಾ ಪಹೇಲಿಯೋ ? ಎರಡು ಭಿನ್ನ ರೀತಿಯ ಚಿತ್ರಗಳನ್ನು ಹೋಲಿಸುವುದು ಅಷ್ಟೊಂದು ಸರಿಯಲ್ಲ. ಆದರೂ ಸಂಪದದ ಸದಸ್ಯರನ್ನು ಕೇಳಲೇಬೇಕಿತ್ತು. ದುರದೃಷ್ಟವಶಾತ್…
ಲೇಖಕರು: Gopinath Rao
ವಿಧ: Basic page
September 27, 2005
ಕರ್ನಾಟಕದಲ್ಲಿ... ಜಾತಿಮತ ಹೆಸರಲ್ಲಿ ಹೆರಿಗೆ ಕಸ ಕೆಸರಲ್ಲಿ ಗಂಧದ ಕೊರಡು ತೇಯುತ್ತಿದೆ ಅವರಿವರ ಬೇಳೆ ಬೇಯುತ್ತಿದೆ ಪ್ರಜಾಸತ್ತೆ ಹೆದರಿ ಸಾಯುತ್ತಿದೆ! ಜಾತಿ ಕಸೂತಿ ಗೌಡರು ಅರೆದ ಮದ್ದು ಸಿದ್ದುಗೊಂದು ಗುದ್ದು ಅ ಅ ಹಿಂದ ಹಿಂದಲ್ಲ ಸವಲತ್ತಲ್ಲಿ ಅವರು ಮುಂದ ಈಡಿಗ ಕುರುಬರ ಕಣ್ಣು ಕೆಂಪು ಹೊಡೆದಾಡಿ ಒಳಜಾತಿ ಚದುರಿ ಮೂಲೆಗುಂಪು ಮುದ್ದು ಮಕ್ಕಳ ಹೊಟ್ಟೆ ತಂಪು! ಗಂಗೂಲಿ ಚಲೋ ಒಳ್ಳೇದಾತು ಮಾತು ಬಯಲಾಯ್ತು ಹನ್ನೊಂದು ಜನರ ನೇತಾರ ಬಂಗಾಲದ ಸರದಾರ ಮೇಲೆವರೆಗೆ ಸೇತು ಹೋದರೂ ಸೋತು…
ಲೇಖಕರು: tvsrinivas41
ವಿಧ: Basic page
September 27, 2005
ಅಂತರ್ಜಾಲ ನಿಸರ್ಗವೇ? ನಿಸರ್ಗ ದೇವರೇ? ಕಣ್ಣಿಗೆ ಕಾಣದು, ಕಿವಿಗೆ ಕೇಳದು, ಮುಟ್ಟಲಾಗದು ನಿಸರ್ಗ ಅಂತೆಯೇ ಅಂತರ್ಜಾಲ ಇಂದ್ರಿಯಗಳಿಗೆ ನಿಲುಕದು ಯಾರ ಕೈಗೂ ಸಿಲುಕದು ಆದರೂ ತನ್ನ ಕರಾಮತ್ತು ತೋರುವುದು ಜಾಲದಿ ಸಿಲುಕಿದವರು ಒಬ್ಬರನೊಬ್ಬರು ನೋಡದವರು, ಅರಿಯದವರು, ಆದರೂ ಚಿರಪರಿಚಿತರು ಚಾಟು ಪದ್ಯ ತಿಳಿಯದ, ಚಾಟ್ ತಿನ್ನದ ಮಂದಿಯೂ ಚಾಟಿಸುವವರು ಚಿರಪರಿಚಿತರಂತೆ ಯಾರ ಮನೆಯನೂ ಭಿಡೆಯಿಲ್ಲದೇ ಹೊಕ್ಕುವ ಎಲ್ಲರ ಮನದಲೂ ನೆಲೆಸಿ ನಲಿದಾಡುವ ಹೃದಯಕೆ ಲಗ್ಗೆ ಹಾಕುವ ತಿಳಿವಿಗೆ ಬರದೇ ಪ್ರೇಮವ ಬೆಸೆಯುವ…