ವಿಧ: Basic page
September 11, 2005
ನಿನ್‌ಕವಾ ಸಾಯುವ ಕೊಂಚ ಮೊದಲು ಝೆನ್ ಗುರು ಇಕ್ಕ್ಯೂ ಅವನನ್ನು ಭೇಟಿ ಮಾಡಿದ.
“ನಿನಗೆ ದಾರಿ ತೋರಲೇ” ಎಂದು ಕೇಳಿದ ಗುರು.
ನಿನ್‌ಕವಾ “ನಾನು ಒಬ್ಬನೇ ಬಂದೆ, ಒಬ್ಬನೇ ಹೋಗುತ್ತಿರುವೆ. ನೀನು ನನಗೇನು ಸಹಾಯ ಮಾಡಬಲ್ಲೆ?” ಎಂದ.
“ನೀನು ಬಂದೆ, ನೀನು ಹೋಗುತ್ತಿರುವೆ ಎಂಬುದು ಭ್ರಮೆ. ಹೋಗುವುದು, ಬರುವುದು ಎರಡೂ ಇಲ್ಲದ ದಾರಿ ತೋರುತ್ತೇನೆ, ಅದರಲ್ಲಿ ಸಾಗು” ಎಂದ ಇಕ್ಕ್ಯೂ.
ಈ ಮಾತು ಕೇಳುತ್ತಿದ್ದಂತೆ ನಿನ್‌ಕವಾನಿಗೆ ತನ್ನ ದಾರಿ ನಿಚ್ಚಳವೆನಿಸಿತು. ಮುಗುಳ್ನಗುತ್ತ ಸತ್ತು ಹೋದ.
[ಬೆಳಗೆರೆ…
ವಿಧ: ಚರ್ಚೆಯ ವಿಷಯ
September 11, 2005
ಓದುಗರಿಗೆ: ಈ ಥ್ರೆಡ್ಡು ಸುಮಾರು ಎರಡು ವರ್ಷ ಹಳೆಯದು. ಆಗಿನ್ನೂ ಸಂಪದ ಇಷ್ಟು ದೊಡ್ಡದಾಗಿರಲಿಲ್ಲ. ಈಗ ಪ್ರತಿಯೊಬ್ಬರ ಬ್ಲಾಗ್ ಕೂಡ http://sampada.net/blog/[username] ಎಂಬಂತೆ ಇದೆಯಾದ್ದರಿಂದ ಯಾರಿಗೂ manual ಆಗಿ URL ಕೊಡುತ್ತಿಲ್ಲ (ಹಾಗೂ ಸಾವಿರಾರು ಸದಸ್ಯರಿರುವುದರಿಂದ ಕೊಡಲಾಗುವುದೂ ಇಲ್ಲ).
ನಿಮಗೆಲ್ಲ ಬೇಸರವಾದೀತು. ಕ್ಷಮೆಯಿರಲಿ.
ಸಂಪದದಲ್ಲಿನ ನಿಮ್ಮ ಬ್ಲಾಗುಗಳಿಗೆ ನಿಮ್ಮ ಹೆಸರಿನ URL ಕೋರಿಕೆಯನ್ವಯ ಸೇರಿಸಬಹುದು.
ಉದಾ:
http://sampada.net/yourname
೩೫೦ಕ್ಕೂ…
ವಿಧ: Basic page
September 10, 2005
ನಾವು ನಮ್ಮ ಯುಗದ ಮಕ್ಕಳು
ನಮ್ಮದು ರಾಜಕೀಯ ಯುಗ
ಹಗಲೂ ಇರುಳೂ
ನಿಮ್ಮ ನಮ್ಮ ಅವರ ಎಲ್ಲರ ಎಲ್ಲ ವ್ಯವಹಾರ
ರಾಜಕೀಯ
ಇಷ್ಟಪಟ್ಟರೆ ಪಡಿ ಇಲ್ಲ ಬಿಡಿ
ನಮ್ಮ ವಂಶವಾಹಿನಿಗಳಲ್ಲಿ ರಾಜಕೀಯ ಭೂತ
ನಮ್ಮ ಚರ್ಮದಲ್ಲಿ ರಾಜಕೀಯ ಸ್ಪರ್ಶ
ನಮ್ಮ ಕಣ್ಣಿನಲ್ಲಿ ರಾಜಕೀಯ ನೋಟ
ಗಟ್ಟಿದನಿಯಲ್ಲಿ ಹೇಳುವುದು ರಾಜಕೀಯ
ಏನೂ ಹೇಳದೆ ಮೌನವಾಗಿರುವುದು ಕೂಡ ಹೇಳಿದಂತೆಯೇ
ಮಾತು ಮೌನ ಎರಡೂ ರಾಜಕೀಯ
ಊರು ಬಿಟ್ಟು ಬೆಟ್ಟಕ್ಕೆ ಹೆಜ್ಜೆಹಾಕಿದರೆ
ರಾಜಕೀಯ ನೆಲದ ಮೇಲೆ ರಾಜಕೀಯ ಹೆಜ್ಜೆಗಳನ್ನೆ ಇಡುತ್ತೇವೆ
ಅರಾಜಕೀಯ…
ವಿಧ: Basic page
September 10, 2005
ನನ್ನೊಡನೆ ಇರು ಚೆಲುವೆ, ಜ್ವಾಲೆ ನಂದುತ್ತಿದೆ.
ನನ್ನ ನಾಯಿ ಮುದಿಯಾಗಿದೆ. ನಾನೂ ಅಷ್ಟೆ.
ಬಗುರಿಯಂತೆ ತಿರುಗುತಲಿದ್ದ ಯುವಕ ಈಗ
ಅತ್ತಲಿತ್ತ ಸುಳಿಯಲಾರೆ, ಮೈಯ ಕಾವಿಳಿದು ತಣಿಯುತಿದೆ
ಮಂಚದ ಮೇಲೊರಗಿ ಹಳೆಯ ಕಾವ್ಯದ ಹಾಳೆ ತಿರುಗಿಸುತಲಿರುವೆ
ನನ್ನೆದೆ ಗಡಿಯಾರದ ಮುಳ್ಳು ನಿಮಿಷ ನಿಮಿಷ ಚುಚ್ಚುತ್ತಲಿದೆ
ಹೃದಯ ಹಾರ್ಮೊನಿಯಮ್ಮಿನ ಸ್ವರ ಏರುಪೇರಾಗುತಲಿದೆ
ನಿನ್ನೊಡನೆ ಬೀಚಿಗೆ ಬರಲಾರೆ, ನಿನ್ನೊಡನೆ ಪಾರ್ಕಿನಲ್ಲಿ ತಿರುಗಲಾರೆ
ಕಣಿವೆಗಳಲ್ಲಿ ಸುಳಿಯಲಾರೆ, ಎಲ್ಲೆಂದರಲ್ಲಿ ಅಲೆಯಲಾರೆ,
ಹಟದ ರೋಷದ…
ವಿಧ: Basic page
September 10, 2005
ಗುರುಗಳಾದವರು ದಿನವೂ ಧರ್ಮ ಪರೀಕ್ಷೆಯಲ್ಲಿ ತೊಡಗುವರು
ಜಟಿಲ ಸೂತ್ರಗಳನ್ನು ದಣಿವಿಲ್ಲದೆ ಪಠಿಸುವರು
ಇವನ್ನೆಲ್ಲ ಮಾಡುವ ಮೊದಲು
ಗಾಳಿ, ಮಳೆ, ಹಿಮ, ಚಂದಿರ ಕಳಿಸುವ ಪ್ರೇಮ ಪತ್ರ
ಓದಲು ಕಲಿತರೆಷ್ಟು ಒಳ್ಳೆಯದು.
ಹೀಗೆಂದವನು ೧೩೯೪ರಿಂದ ೧೪೯೧ರ ವರೆಗೆ ಬದುಕಿದ್ದ ಇಕ್ಕ್ಯು ಎಂಬ ಕವಿ.
ವಿಧ: Basic page
September 10, 2005
ಝೆನ್‌ನ ಮಹಾನ್ ಗುರು ಚುಆಂಗ್ ತ್ಸು ಗೆ ಒಮ್ಮೆ ಕನಸು ಬಿತ್ತು. ಕನಸಿನಲ್ಲಿ ಅವನೊಂದು ಚಿಟ್ಟೆಯಾಗಿಬಿಟ್ಟಿದ್ದ. ಅತ್ತಿತ್ತ ಹಾರಾಡುತ್ತಿದ್ದ. ಕನಸು ಇದ್ದಷ್ಟು ಹೊತ್ತೂ ಅವನಿಗೆ ತಾನು ಚುಆಂಗ್ ಎಂಬುದು ಗೊತ್ತೇ ಇರಲಿಲ್ಲ. ಎಚ್ಚರವಾಯಿತು. ತಾನು ತನ್ನ ಕೋಣೆಯಲ್ಲಿ ಮಲಗಿರುವ ಚುಆನ್ ಎಂಬುದು ಮನಸ್ಸಿನಲ್ಲಿ ಮೂಡಿತು. ಆಗ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ ಇದು: “ಚಿಟ್ಟೆಯಾದಂತೆ ಕನಸು ಕಂಡವನು ನಾನೋ ಅಥವ ಚಿಟ್ಟೆ ಈಗ ನಾನು ಚುಆನ್ ಎಂಬ ಕನಸು ಕಾಣುತ್ತಿದೆಯೋ?”
[ನಾವು ಕಾಣುತ್ತಿರುವುದು ಕನಸನ್ನೋ,…
ವಿಧ: ಚರ್ಚೆಯ ವಿಷಯ
September 09, 2005
ಮೊಬೈಲ್ ಫಿಲಾಸಫಿ ಭಾಗ ೧
1. ನಾವು ಯಾರ ಸಂಪರ್ಕ ಇಟ್ಟುಕೊಳ್ಳಲು ಬಯಸುತ್ತೇವೋ ಅವರು ನಮಗೆ ಬೇಕಾದಗ ನಮ್ಮೊಡನೆ ಇರುವುದಿಲ್ಲ. ಅವರಿಗೆ ಕಾಲ್ ಮಾಡುತ್ತೇವೆ ಅಥವ ಅವರು ನಮ್ಮ ಮೊಬೈಲ್‌ಗೆ ಕಾಲ್ ಮಾಡುತ್ತಾರೆ.
2. ನಾವು ಯಾರ ಜೊತೆಯಲ್ಲಿ ಇರುತ್ತೇವೋ ಅವರ ಸಂಪರ್ಕ ನಮಗೆ ಬೇಕಾಗಿರುವುದಿಲ್ಲ. ಆದ್ದರಿಂದ ನಮಗೆ ಕಾಲ್ ಬಂದಾಗ ನಾವೇ ಕೊಂಚ ದೂರ ಹೋಗಿ ಮಾತಾಡುತ್ತೇವೆ.
3. ಆದ್ದರಿಂದ ನಮ್ಮನ್ನು ಬಯಸುವವರಿಂದ ನಾವು, ನಾವು ಬಯಸುವವರಿಂದ ನಮ್ಮವರು ಸದಾ ದೂರವೇ ಇರುತ್ತಾರೆ ಎಂಬ ಪರಮಸತ್ಯವನ್ನು ಮೊಬೈಲ್…
ವಿಧ: Basic page
September 09, 2005
ಪತಂಜಲಿಯ ಯೋಗ ಭಾಗ ೭
ಏಳನೆಯ ಲೇಖನ
ಪತಂಜಲಿಯ ಯೋಗದ ಬಹು ಮುಖ್ಯ ಅಂಶವೆಂದರೆ ಆಚರಣೆ. ಇದರಲ್ಲಿ ಓದಿಗೆ ಅಥವಾ ತಿಳಿಸಿದ ಜ್ಞಾನಕ್ಕೆ ಹೆಚ್ಚು ಬೆಲೆ ಇಲ್ಲ. ತಾತ್ವಿಕ ಚರ್ಚೆಯೊ ಮುಖ್ಯವಲ್ಲ. ಎಲ್ಲಾ ಜ್ಞಾನವನ್ನೂ ಸಾಧಕನು ಮಾಡಿ/ಆಚರಣೆಯಲ್ಲಿತಂದು ಅದು ನಿಜ/ಸತ್ಯ ಎಂದು ಸಾಧನೆ ಮಾಡಿದಾಗ ಮಾತ್ರ ಯೋಗದ ಹಾದಿಯಲ್ಲಿ ಮುಂದುವರೆಯುತ್ತಾನೆ. ಈಗ ಯೋಗದ ಅಷ್ಟಾಂಗಗಳ ಬಗ್ಗೆ ನೋಡೋಣ.
ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಇವೇ ಯಮ.ಯೋ.ಸೂ.ಪಾದ೨. ಸೂತ್ರ.೩೦
ಇವು ಯಾವಾಗಲೂ ಪಾಲಿಸಲೇ…
ವಿಧ: ಚರ್ಚೆಯ ವಿಷಯ
September 09, 2005
ಕನ್ನಡಕ್ಕಾಗಿ ಲಿನಕ್ಸಿನಲ್ಲಿ 'ಭಾಷಾ ಪ್ಯಾಕ್' ಸಂಪೂರ್ಣವಾಗಿಲ್ಲ. ಇದನ್ನು ಸಂಪೂರ್ಣಗೊಳಿಸಲು 'ಸಂಪದ'ದಲ್ಲಿ ನಿಮ್ಮ ಬ್ರೌಸರಿನಲ್ಲಿಯೇ ಭಾಷಾಂತರ ಮಾಡಲು ಸಾಧ್ಯವಾಗುವಂತಹ ತಂತ್ರಾಂಶವೊಂದನ್ನು ಸ್ಥಾಪಿಸಿದ್ದೇವೆ.
ಲಿನಕ್ಸನ್ನು ಸಂಪೂರ್ಣವಾಗಿ [:http://translate.sa…|ಕನ್ನಡದಲ್ಲಿ ನೋಡುವಂತಾಗಲು ಸಹಾಯ ಮಾಡಿ]. ನೀವು ಮಾಡಬೇಕಾದದ್ದಿಷ್ಟೆ: ನಿಮ್ಮ ವೆಬ್ ಬ್ರೌಸರಿನಲ್ಲಿ ಈ ಮೇಲಿನ ಲಿಂಕ್ ಓಪನ್ ಮಾಡಿ ನಿಮಗೆ ಸಾಧ್ಯವಾದಷ್ಟು ಶಬ್ಧಗಳಿಗೆ ಕನ್ನಡದ ಸಮಾನಾರ್ಥಕಗಳನ್ನು ಸೇರಿಸುವುದು. (…
ವಿಧ: ಚರ್ಚೆಯ ವಿಷಯ
September 09, 2005
ಹೆಸರು ಪ್ರಶಾಂತ ಪಂಡಿತ. ಮೂಲ ಉತ್ತರಕನ್ನಡ. ಸಧ್ಯಕ್ಕೆ ಬೆಂದಕಾಳೂರಿನಲ್ಲಿ ಉದ್ಯೋಗ, ವಾಸ. ಮಿತ್ರರೊಂದಿಗೆ lacefilms ಎಂಬ ಚಿತ್ರಸಮಾಜದಲ್ಲಿ ಸಕ್ರಿಯ ಪಾತ್ರ (www.lacefilms.org)
ಸಂಪದದಲ್ಲಿ ಚರ್ಚಿಸುವ, ಬರೆಯುವ ಇಚ್ಛೆಯಿದೆ.