ವಿಧ: Basic page
September 18, 2005
ದಾರಿ ದೀಪಗಳು
ಬದುಕಿನ ದಾರಿಯಲಿ ಬಂದು ಹೋಗುವ ದಾರಿ ದೀಪಗಳೆಷ್ಟೋ
ಅರಿವಿಗೆ ಬಂದು ಲೆಕ್ಕ ಹಾಕಿರುವುದು ಅಷ್ಟೋ ಇಷ್ಟೋ
ಸ್ವಲ್ಪ ಕಾಲ ಉರಿವ ಹೆಚ್ಚು ಪ್ರಕಾಶಮಾನವಾದ ದೀಪ ಕೆಲವು
ದೀರ್ಘ ಕಾಲ ಬೆಳಗುವ ಕಡಿಮೆ ಬೆಳಕಿನವು ಹಲವಾರು
ಪುಟ್ಟ ದೀಪಕೆ ಬತ್ತಿ ಹೊಸೆದು ತುಪ್ಪ ಹಾಕಿ
ಜಗಕೆ ಬೆಳಕ ಚೆಲ್ಲಲು ಕಡ್ಡಿಗೀರಿದವಳು ಅಮ್ಮ
ನಡೆದಾಡುವ ದಾರಿಯಲಿ ಮಳೆ ಗಾಳಿಗೆ ನಂದದಿರಲೆಂದು
ಹಗಲೂ ರಾತ್ರಿ ಕಾಯ್ದಿಹರು ಸಹವರ್ತಿಗಳು ಹಲವಾರು
ತನ್ನ ಮನೆಯನು ಕತ್ತಲಿನಲ್ಲಿಟ್ಟು
ಊರ ಉದ್ಧರಿಸಲು ಬೆಳಗುತಿಹುದೀ ದೀಪ
ಈ…
ವಿಧ: ಚರ್ಚೆಯ ವಿಷಯ
September 18, 2005
ಹಿರಿಯ ನಟರೂ, ಕಲಾವಿದರೂ ಆದ ಕೆ ಎಸ್ ಅಶ್ವಥ್ ರವರನ್ನು ಕುರಿತು ಪ್ರಜಾವಾಣಿಯಲ್ಲಿಂದು ಲೇಖನ ಪ್ರಕಟವಾಗಿದೆ.
[:http://prajavani.ne…|ಓದಿ].
ವಿಧ: ಬ್ಲಾಗ್ ಬರಹ
September 17, 2005
ಅಪಾಯದ ಅಂಚಿನಲ್ಲಿರುವ ಭಾಷೆಗಳನ್ನು ಕುರಿತು ಭಾಷಾಶಾಸ್ತ್ರಜ್ಞರು ಕಳೆದ ಹತ್ತು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ.
ಹಲವಾರು ಕಾರಣಗಳಿಂದ ಒಂದು ಭಾಷೆಯನ್ನಾಡುವ ಜನ ತಮ್ಮ ಭಾಷೆಯನ್ನು ಕೈಬಿಟ್ಟು ದ್ವಿತೀಯಭಾಷೆಯನ್ನು ಪರಸ್ಪರ ಬಳಸತೊಡಗಿದಾಗ ಮತ್ತು ತಂದೆತಾಯಂದಿರು ತಮ್ಮ ಮಕ್ಕಳೊಡನೆ ದ್ವಿತೀಯ ಭಾಷೆಯನ್ನು ಬಳಸತೊಡಗಿದಾಗ ಕ್ರಮೇಣ ಆ ಭಾಷೆಯನ್ನು ಮೊದಲಭಾಷೆಯಾಗಿ ಬಳಸುವ ಜನರೇ ಇಲ್ಲವಾಗಿ ಹೋಗುವ ಅಪಾಯ ಹುಟ್ಟುತ್ತದೆ. ಹೀಗಾದಾಗ ಭಾಷೆ ಸಂಪೂರ್ಣ ಕಣ್ಮರೆಯಾಗದಿದ್ದರೂ ಕೇವಲ ಬರವಣಿಗೆಯ ಭಾಷೆಯಾಗಿ…
ವಿಧ: Basic page
September 16, 2005
ಪತಂಜಲಿಯ ಯೋಗ ಭಾಗ ೮
ಎಂಟನೆಯ ಲೇಖನ
ಪತಂಜಲಿಯ ಯೋಗದ ತೃತೀಯ ವಿಭೂತಿ ಪಾದ.
ಮನಸ್ಸನ್ನು ಪರಿಶುಧ್ಧಿಗೊಳಿಸಿದಂತೆ ಅನೇಕ ಸಿಧ್ಧಿಗಳು ಬರಬಹುದು. ಸಿಧ್ಧಿಗಳು ಎಂದರೆ ಪವಾಡ ಮಾಡಬಲ್ಲ ಶಕ್ತಿ. ಆದರೆ ಅವುಗಳ ಬಗ್ಗೆ ಜಾಗ್ರತವಾಗಿದ್ದು ಯೋಗದ ಹಾದಿಯಲ್ಲಿ ಮುಂದುವರೆಯುವ ಬಗ್ಗೆ ವಿಭೂತಿಪಾದದಲ್ಲಿ ವಿವರಣೆ ಇದೆ. ಏಕೆಂದರೆ ಅವು ಯೋಗದ ಗುರಿಯನ್ನು ತಲುಪಲು ಇರುವ ಅಡ್ಡಿಗಳು.
ಮನಸ್ಸನ್ನು ಒಂದು ಜಾಗದಲ್ಲಿ ನೆಲೆಗೊಳಿದಾಗ ಅದು ಧಾರಣೆ.ಯೋ.ಸೂ.ಪಾದ ೩. ಸೂತ್ರ.೧
ಮನಸ್ಸಿನಲ್ಲಿ ಒಂದೇ ಪ್ರತ್ಯಯವು (…
ವಿಧ: Basic page
September 16, 2005
ಏನೂ ಬದಲಾಗಿಲ್ಲ.
ಮೈಗೆ ನೋವಾಗುವುದು ಏನೂ ಬದಲಾಗಿಲ್ಲ.
ಉಣ್ಣಬೇಕು, ಉಸಿರಾಡಬೇಕು, ಮಲಗಬೇಕು,
ಚರ್ಮ ತೆಳು, ಅದರ ಕೆಳಗೇ ಹರಿಯುವ ರಕ್ತ,
ಬಾಯಿ ತುಂಬ ಹಲ್ಲು, ಕೈಕಾಲುಗಳಲ್ಲಿ ಉಗುರು,
ಎಲುಬು ಮುರಿಯುತ್ತವೆ, ಕೀಲು ಕಿರುಗುಟ್ಟುತ್ತವೆ.
ಹಿಂಸೆ ಕೊಡುವಾಗ ಇವೆಲ್ಲವನ್ನೂ ಗಮನಿಸಲಾಗುತ್ತದೆ.
ಏನೂ ಬದಲಾಗಿಲ್ಲ.
ರೋಮ್ ಸಾಮ್ರಾಜ್ಯ ಹುಟ್ಟುವ ಮುನ್ನ,
ಗುಪ್ತರ ಸುವರ್ಣ ಯುಗದಲ್ಲಿ ಕೂಡ,
ಕ್ರಿಸ್ತ, ಬುದ್ಧರು ಹುಟ್ಟುವ ಮುನ್ನ,
ಅವರೆಲ್ಲ ಹುಟ್ಟಿ ಇನ್ನೂರು ಶತಮಾನ ಆದಮೇಲೆ ಕೂಡ,
ಹಿಂಸೆಗೆ ಮೈ ತತ್ತರಿಸುವ…
ವಿಧ: ಚರ್ಚೆಯ ವಿಷಯ
September 16, 2005
From past couple of days, whenever I log in, the first page center portion (frame) will show a 404 error page. Previoiusly it never happened so. This is for your info.
Thanking you,
Subramanya
ವಿಧ: Basic page
September 16, 2005
ಗುರು ಬೆನ್ಕಿ ತೀರಿಹೋಗಿದ್ದ. ಅವನಿದ್ದ ದೇವಾಲಯದ ಬಳಿಯ ಕುರುಡನೊಬ್ಬ ಗೆಳೆಯನ ಬಳಿ ಹೀಗೆ ಹೇಳಿದ:
"ನಾನು ಕುರುಡ. ಮನುಷ್ಯರ ಮುಖ ನನಗೆ ಕಾಣುವುದಿಲ್ಲ. ಮನುಷ್ಯ ಎಂಥವನು ಎಂದು ಮಾತಿನ ದನಿ ಕೇಳಿಯೇ ನಾನು ತಿಳಿಯಬೇಕು. ಸಾಮಾನ್ಯವಾಗಿ ಹೀಗಾಗುತ್ತದೆ. ಯಾರಾದರೂ ಮತ್ತೊಬ್ಬರ ಸಂತೋಷ ಅಥವ ಯಶಸ್ಸನ್ನು ಅಭಿನಂದಿಸುತ್ತಿದ್ದರೆ ಅವರ ದನಿಯಲ್ಲಿ ಗುಟ್ಟಾದ ಅಸೂಯೆ ನನಗೆ ಕೇಳಿಸುತ್ತದೆ. ಏನೋ ಅನಾಹುತವೋ ಆಘಾತವೋ ಆದಾಗ ಇನ್ನೊಬ್ಬರಿಗೆ ಸಮಾಧಾನ ಹೇಳುವವರ ದನಿಯಲ್ಲಿ 'ನನಗೆ ಹೀಗಾಗಲಿಲ್ಲವಲ್ಲ' ಎಂ ಸಂತೋಷ, '…
ವಿಧ: ಬ್ಲಾಗ್ ಬರಹ
September 15, 2005
ಅದೇನು ರೇಡಿಯೊ ಸಿಟಿಗೆ ಒಳ್ಳೆ ಬುದ್ದಿ ಬಂದು ಇತ್ತೀಚೆಗೆ ಕನ್ನಡ ಹಾಡುಗಳನ್ನು ಹಾಕುತ್ತಿದ್ದಾರೆ? ಅದು FM Rainbowಗಿನ್ನ ಒಳ್ಳೆ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದಾರೆ...
ಇನ್ನು ಎರಡು ಹೊಸ FM channelಗಳು ಬಂದಿದ್ದಾವೆ... 100.3 ಆದರೆ ನಮ್ಮ ಕಛೇರಿಯ ವಾಹನದಲ್ಲಿ ಬರಿ ರೇಡಿಯೊ ಸಿಟಿನೆ ಹಾಕುತ್ತಾರೆ. ಒಮ್ಮೊಮ್ಮೆ ನನ್ನ requestಇನಿಂದ rainbow channel ಹಾಕುತ್ತಾರೆ, ಆದರೆ ಅದರಲ್ಲಿ ಯಾವಾಗಲು ಕನ್ನಡ ಹಾಡುಗಳು ಬರುವುದಿಲ್ಲ, ಬಂದರು ಒಳ್ಳೆ (ವಾಹನದಲ್ಲಿರುವ majority appreciate…
ವಿಧ: ಬ್ಲಾಗ್ ಬರಹ
September 15, 2005
ಇಂದು ಯಾಹೂ ಮೇಯ್ಲ್‌ನ [:http://patcavit.com…|ಹೊಸ ಆವೃತ್ತಿ ಬಿಡುಗಡೆಯಾಗಿದೆಯೆಂಬ ಸುದ್ದಿ] ಓದಿ ಎಷ್ಟೋ ದಿನಗಳಿಂದ ಬಳಸದೇ ಇಟ್ಟಿದ್ದ ನನ್ನ ಯಾಹೂ ಅಕೌಂಟ್ ತೆರೆದುನೋಡಿದೆ. ಯಾಹೂನವರಿಗೆ ನಾವುಗಳು 'important' ಎನಿಸಲಿಲ್ಲವೋ ಏನೋ, ಬರೇ ಯು ಎಸ್ ನಲ್ಲಿರುವವರಿಗೆ ಮಾತ್ರ ಹೊಸ ಯಾಹೂ ಮೇಯ್ಲ್ ಬಳಸುವ ಭಾಗ್ಯ ಎಂದು ನನ್ನ ಕುತೂಹಲಕ್ಕೆ ತಣ್ಣೀರು ಎರಚಿದರು.
ಸರಿ, ಇಷ್ಟು ದಿನಗಳಾದ ಮೇಲೆ ತೆರೆದು ನೋಡುತ್ತಿರುವ ನನ್ನ ಯಾಹೂ ಖಾತೆಯೆಲ್ಲಿ ಏನಾದರೂ ಓದಿ ಕ್ಲೋಸ್ ಮಾಡಬೇಕಲ್ಲ! ಯಾಹೂ ಗ್ರೂಪ್ಸ್…
ವಿಧ: Basic page
September 15, 2005
[ ಹೊಸ ದಿಲ್ಲಿಯಲ್ಲಿಯಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕರ್ನಾಟಕದಿಂದ ತಂದ ವೀರಗಲ್ಲೊಂದನ್ನು ನಿಲ್ಲಿಸಿದ್ದಾರೆ. ಅದನ್ನು ಆಧರಿಸಿ ಬರೆದದ್ದು ಈ (ಅರೆಕಾಲ್ಪನಿಕ) ಕಥೆ. - ವೆಂ. ]
ನಮ್ಮದೊಂದು ಹಳ್ಳಿ. ಹೇಳಿಕೊಳ್ಳುವಂತಹದು ಏನೂ ಇಲ್ಲದ ಸಾಮಾನ್ಯ ಹಳ್ಳಿ. ಬೇಸಾಯದ ಬದುಕು. ಆಗಾಗ ದಂಡಿಗೆ ಕರೆಬರುವುದು. ಊರಿಗಿಷ್ಟು ಮಂದಿ ಗಂಡಾಳುಗಳು ದಂಡಿಗೆ ಹೊರಡಬೇಕು. ದಂಡಿಗೆ ಹೋದವರಲ್ಲಿ ಎಲ್ಲರೂ ಮರಳಿ ಬಾರರು. ಕಾಳಗದಲ್ಲಿ ಬಿದ್ದವರಿಗೆ ದೊರೆಗಳು ನೆಲ ಕಾಣಿ ಬಿಟ್ಟರೆಂದು ಕೇಳುವುದುಂಟು. ನಮ್ಮ…