ವಿಧ: Basic page
August 23, 2005
ಪತಂಜಲಿಯ ಯೋಗ
ನಾಲ್ಕನೆಯ ಲೇಖನ
ಮನಸ್ಸಿನಲ್ಲಿ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಅಭ್ಯಾಸ ಮಾಡುತ್ತಿದ್ದಾಗ ಅನೇಕ ತಡೆ-ಅಡಚಣೆಗಳು ಬರುತ್ತವೆ. ಅವು ಯಾವುವೆಂದರೆ
ವ್ಯಾಧಿ(ಕಾಹಿಲೆ), ಸ್ತ್ಯಾನ (ಸೋಮಾರಿತನ), ಸಂಶಯ (ನಂಬಿಕೆ ಇಲ್ಲದಿರುವುದು), ಪ್ರಮಾದ (ತಪ್ಪು), ಅವಿರತಿ (ದೇಹದ ಕಾಮನೆಗಳು), ಭ್ರಾಂತಿದರ್ಶನ (ಆಗದಿದ್ದನ್ನು ಆಯಿತೆಂದು ತಿಳಿಯುವುದು), ಅಲಭ್ದಭೂಮಿಕತ್ವ (ಮನಸ್ಸನ್ನು ಹರಿಬಿಡುವುದು;ಅನುಪಸ್ಥಿತಿ), ಅನವಸ್ಥಿತತ್ವ (ಒಂದು ಸ್ಥಿತಿ ಏರಿದ್ದನ್ನು ಉಳಿಸಿಕೊಳ್ಳದಿರುವುದು), ದುಃಖ…
ವಿಧ: Basic page
August 22, 2005
ರಾಮು: ಯಾಕೋ ಇವತ್ತು ಆಫೀಸಿಗೆ ತಡವಾಗಿ ಬಂದೆ?
ಶಾಮು: ಬರುವಾಗ ಬೀದಿ ನಾಯಿ ಕಚ್ಚಿತು ಕಣೊ. ಡಾಕ್ತರ್ ಹತ್ತಿರ ಹೋಗಿ ರೇಬಿಸ್ ಇಂಜೆಕ್ಷನ್ ಮಾಡಿಸಿಕೊಂಡು ಬರಲು ತಡವಾಯಿತು.
ರಾಮು: ಅಯ್ಯೋ ಪಾಪ! ನಾಯಿಗೇನಾಯಿತು?
ಶಾಮು: .....
ವಿಧ: Basic page
August 22, 2005
ನನ್ನ ಚಿಕ್ಕಪ್ಪನಿಗೆ ಮೊದಲ ಮಗು ಜನಸಿತ್ತು. ಆಗ ಅವರು ಮಗುವನ್ನು ನೋಡಲು ಬಾಣಂತಿ ಕೋಣೆಗೆ ಹೋಗಿ ಬಂದರು. ಹೊರಗೆ ಕೂತಿದ್ದ ನೆಂಟರು ತಮಾಷೆಗೆ 'ಏನು ಹೇಳಿದಳಪ್ಪಾ ಮಗಳು?' ಎಂದು ಪ್ರಶ್ನಿಸಿದರು. ಆಗ ತಾನೆ ಹುಟ್ಟಿದ ಮಗು ಮಾತನಾಡಲು ಸಾಧ್ಯವೆ! ಚಿಕ್ಕಪ್ಪ ಕೂಡ ಸೋಲೊಪ್ಪದ ವ್ಯಕ್ತಿ. ಚಿಕ್ಕಪ್ಪ ಕೂಡ ಅದೇ ವರಸೆಯಿಂದ 'ನಿಮಗೆಲ್ಲಾ ಹೀಳಬೇಡಿ ಎಂದಿದ್ದಾಳೆ' ಎನ್ನಬೇಕೆ. ಅಲ್ಲಿದ್ದ ಜನರ ಜೊತೆಗೆ, ಒಳಗಿನ ಕೋಣೆಯಲ್ಲಿ ಮಲಗಿದ್ದ ಚಿಕ್ಕಮ್ಮನೂ ಅದನ್ನು ಕೇಳಿಸಿಕೊಂಡು ನಕ್ಕರು.
ವಿಧ: Basic page
August 22, 2005
ಈ ಘಟನೆ ನಡೆದಾಗ ನಾನಿನ್ನು 10 ವರುಷದ ಹುಡುಗ. ನನ್ನ ಚಿಕ್ಕಪ್ಪನ ನಿಶ್ಚಿತಾರ್ಥ ನಡೆದಿತ್ತು. ಗಂಡು, ಹೆಣ್ಣಿನ ಕಡೆಯವರೆಲ್ಲರೂ ಸೇರಿದ್ದರು. ನಮ್ಮ ಅತ್ತೆಗಳೆಲ್ಲರೂ ಸೇರಿ (ಅಂದರೆ ನಮ್ಮೆ ತಂದೆಯ ತಂಗಿಯಂದಿರು) ನನ್ನ ಚಿಕ್ಕಪ್ಪನ ಕಾಲೆಳೆಯುತ್ತಿದ್ದರು. ಅವರಿಗೆಲ್ಲರಿಗೂ ಆಗಲೆ ಮದುವೆಯಾಗಿತ್ತು. ನಮ್ಮ ಅತ್ತೆಯಂದಿರು ಚಿಕ್ಕಪ್ಪನಿಗೆ 'ನೀನು ಮದುವೆಯಗುತ್ತಿರುವ ಹುಡುಗ. ಸ್ವಲ್ಪ ಗೊಭೀರತೆಯಿಂದಿರಲು ಕಲಿತುಕೊ.' ಎಂದು ಹಾಗೆ ಹೀಗೆ ಎಂದೆಲ್ಲಾ ಬೋಧಿಸುತ್ತಿದ್ದರು. ಇದು ತುಂಬಾ ಹೊತ್ತಿನ ವರೆಗೆ…
ವಿಧ: ಚುಟುಕು ಬರಹ
August 22, 2005
ಮುಂಬಯಿಯೂ ಒಂದು ಹಳ್ಳಿಯಿದ್ದಂತೆ. ಇಲ್ಲೂ ಜನರು ದೇವರು ಎಂದರೆ ಎಲ್ಲೆಂದರಲ್ಲಿ ನೆಲಕ್ಕೆ ಬೀಳುವರು. ಮಾಧ್ಯಾಹ್ನಿಕ ಪತ್ರಿಕೆಯೊಂದರಲ್ಲಿ [:http://web.mid-day…|ಇವತ್ತಿನ ಅಂಕಣ ನೋಡಿ], ಹೀಗಿದೆ:
"ಸಿನೆಮಾ ಮಂದಿರವೋ ದೇವತಾ ಮಂದಿರವೋ?"
ಮುಂಬಯಿ ಎಂದರೆ ಬರಿಯ ಪಾಶ್ಚಾತ್ಯ ಸಂಸ್ಕೃತಿ ಅಂತ ತಿಳಿಯಬೇಡಿ. ;)
ವಿಧ: ಬ್ಲಾಗ್ ಬರಹ
August 22, 2005
1999 ಮುಗಿಯುತ್ತಾ ಬಂದಾಗ ‘ಜನವಾಹಿನಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ವರ್ಗಾವಣೆಯ ಆದೇಶವೂ ತಲುಪಿತ್ತು. ನನಗೆ ಅರ್ಥವಾಗದ ಕಾರಣಗಳಿಗಾಗಿ ನನ್ನನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಗಿತ್ತು. 1999ಕ್ಕೆ ವಿದಾಯ ಹೇಳಿದ ಮರುದಿನ ಅರ್ಥಾತ್ 2000ದ ಜನವರಿ ಒಂದನೇ ತಾರೀಕಿನಂದು ನಾನು ‘ಜನವಾಹಿನಿ’ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಸೇರಿಕೊಂಡೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಕೆಲಸವಿರಲಿಲ್ಲ. ಇಲ್ಲಿ ನನಗೊಬ್ಬ…
ವಿಧ: Basic page
August 22, 2005
ತೇಜಸ್ವಿಯವರನ್ನು ಸ್ಮರಿಸಿಕೊಳ್ಳುತ್ತಿರುವ ಈ ಸಮಯದಲ್ಲಿ ಅವರ ಚಿಂತನೆಗೆ ಕನ್ನಡಿ ಹಿಡಿಯುವಂತಹ ಅವರ ಈ ಬರಹ ಸದಸ್ಯರ ಮುಂದಿಡಲು ಬಯಸುತ್ತೇವೆ. ಈ ಬರಹ 'ಸಂಪದ'ದಲ್ಲಿ ಆಗಸ್ಟ್ ೨೦೦೫ರಂದು ಮೊದಲು ಪ್ರಕಟವಾಗಿತ್ತು.
ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಮೊದಲು ಚಾರಿತ್ರಿಕವಾಗಿ ಮೀಸಲಾತಿ ಎದುರಿಸುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ಅದು ಹುಟ್ಟು ಹಾಕಿರುವ ವಿರೋಧಾಭಾಸಗಳನ್ನು ಮಂಡಿಸಬಯಸುತ್ತೇನೆ.
ಮೊಟ್ಟ ಮೊದಲನೆಯನದಾಗಿ…
ವಿಧ: ಚುಟುಕು ಬರಹ
August 21, 2005
೧೯೨೫ರಲ್ಲಿ ಪ್ರಕಟವಾದ ಆಲ್ಬರ್ಟ್ ಐನ್ಸ್ಟನ್ ರ ಸಂಶೋಧನೆಯ ಮೂಲ ಹಸ್ತಪ್ರತಿ ಲೀಡನ್ ವಿಶ್ವವಿದ್ಯಾಲಯದ ಲಾರೆಂಟ್ಸ್ ಇನ್ಸ್ಟಿಟ್ಯೂಟ್ ಫಾರ್ ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ದೊರೆತಿದೆಯೆಂದು [:http://www.timesdai…|ಟೈಮ್ಸ್ ಡೈಲಿ ವರದಿ ಮಾಡಿದೆ]. ಆ ಹಸ್ತಪ್ರತಿಯ ವಿಷಯ "ಕ್ವಾಂಟಮ್ ಥಿಯರಿ ಆಫ್ ದ ಮೊನೊ ಅಟೊಮಿಕ್ ಐಡೀಲ್ ಗ್ಯಾಸ್" ಎಂಬುದಾಗಿತ್ತೆಂದೂ, ಡಿಸೆಂಬರ್ ೧೯೨೪ರಲ್ಲಿ ಬರೆಯಲಾಗಿತ್ತೆಂದೂ ಹೇಳಲಾಗಿದೆ. ಮೂಲಪ್ರತಿ (Manuscript) ಜರ್ಮನ್ ಭಾಷೆಯಲ್ಲಿದೆಯಂತೆ.
ವಿಧ: ಚುಟುಕು ಬರಹ
August 21, 2005
೧೯೨೫ರಲ್ಲಿ ಪ್ರಕಟವಾದ ಆಲ್ಬರ್ಟ್ ಐನ್ಸ್ಟನ್ ರ ಸಂಶೋಧನೆಯ ಮೂಲ ಹಸ್ತಪ್ರತಿ ಲೀಡನ್ ವಿಶ್ವವಿದ್ಯಾಲಯದ ಲಾರೆಂಟ್ಸ್ ಇನ್ಸ್ಟಿಟ್ಯೂಟ್ ಫಾರ್ ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ದೊರೆತಿದೆಯೆಂದು [:http://www.timesdai…|ಟೈಮ್ಸ್ ಡೈಲಿ ವರದಿ ಮಾಡಿದೆ]. ಆ ಹಸ್ತಪ್ರತಿಯ ವಿಷಯ "ಕ್ವಾಂಟಮ್ ಥಿಯರಿ ಆಫ್ ದ ಮೊನೊ ಅಟೊಮಿಕ್ ಐಡೀಲ್ ಗ್ಯಾಸ್" ಎಂಬುದಾಗಿತ್ತೆಂದೂ, ಡಿಸೆಂಬರ್ ೧೯೨೪ರಲ್ಲಿ ಬರೆಯಲಾಗಿತ್ತೆಂದೂ ಹೇಳಲಾಗಿದೆ. ಮೂಲಪ್ರತಿ (Manuscript) ಜರ್ಮನ್ ಭಾಷೆಯಲ್ಲಿದೆಯಂತೆ.
ವಿಧ: ಬ್ಲಾಗ್ ಬರಹ
August 21, 2005
ಉಪದೇಶ ಹೇಳುವಾಗ ಜನ ಕೆಲವೊಮ್ಮೆ ಇಂಗ್ಲೀಷ್ ನಲ್ಲಿ be yourself ಅಂತ ಹೇಳುತ್ತಾರೆ. ಪಶ್ಚಿಮದಲ್ಲಿ ಈ phraseನ ಬಹಳವಾಗಿ ಉಪಯೋಗಿಸುತ್ತಾರೆ. ಒಮ್ಮೆ ವಾಕಿಂಗ್ ಗಿಗೆ ಹೋಗುವಾಗ ಈ phraseಗೆ ಕನ್ನಡ ಅನುವಾದ ಹುಡುಕುತ್ತಿದ್ದೆ. ಕನ್ನಡಕ್ಕೆ literally ಅನುವಾದಿಸುವುದಾದರೆ 'ಸ್ವೇಚ್ಛಾಹಾರಿಯಾಗಿರು' ಎನ್ನಬಹುದು. ಆದರೆ ಈ ಪದವನ್ನು ನಾವು derogatory ಆಗಿ ಬಳಸುತ್ತೇವೆ. ಭಾವಾಂತರಕ್ಕೆ ಪ್ರಯತ್ನಿಸಿದರೆ, ನಿನ್ನತನ ಬೆಳೆಸಿಕೊ ಅಥವ ಸ್ವಂತಿಕೆ ಕಾಪಾಡಿಕೋ ಅಥವ ಸ್ವಂತಿಕೆ ಉಳಿಸಿಕೊ ಎನ್ನಬಹುದು.…