ಕವಿತೆ: ಪೋಲೆಂಡ್: ಯುಗದ ಮಕ್ಕಳು

ಕವಿತೆ: ಪೋಲೆಂಡ್: ಯುಗದ ಮಕ್ಕಳು

ಬರಹ
ನಾವು ನಮ್ಮ ಯುಗದ ಮಕ್ಕಳು ನಮ್ಮದು ರಾಜಕೀಯ ಯುಗ ಹಗಲೂ ಇರುಳೂ ನಿಮ್ಮ ನಮ್ಮ ಅವರ ಎಲ್ಲರ ಎಲ್ಲ ವ್ಯವಹಾರ ರಾಜಕೀಯ ಇಷ್ಟಪಟ್ಟರೆ ಪಡಿ ಇಲ್ಲ ಬಿಡಿ ನಮ್ಮ ವಂಶವಾಹಿನಿಗಳಲ್ಲಿ ರಾಜಕೀಯ ಭೂತ ನಮ್ಮ ಚರ್ಮದಲ್ಲಿ ರಾಜಕೀಯ ಸ್ಪರ್ಶ ನಮ್ಮ ಕಣ್ಣಿನಲ್ಲಿ ರಾಜಕೀಯ ನೋಟ ಗಟ್ಟಿದನಿಯಲ್ಲಿ ಹೇಳುವುದು ರಾಜಕೀಯ ಏನೂ ಹೇಳದೆ ಮೌನವಾಗಿರುವುದು ಕೂಡ ಹೇಳಿದಂತೆಯೇ ಮಾತು ಮೌನ ಎರಡೂ ರಾಜಕೀಯ ಊರು ಬಿಟ್ಟು ಬೆಟ್ಟಕ್ಕೆ ಹೆಜ್ಜೆಹಾಕಿದರೆ ರಾಜಕೀಯ ನೆಲದ ಮೇಲೆ ರಾಜಕೀಯ ಹೆಜ್ಜೆಗಳನ್ನೆ ಇಡುತ್ತೇವೆ ಅರಾಜಕೀಯ ಕವಿತೆಯೂ ರಾಜಕೀಯವೇ ಆಕಾಶದಲ್ಲಿ ಹೊಳೆಯುವ ಚಂದ್ರ ಚಂದ್ರನಲ್ಲ ರಾಜಕೀಯದಾಟದ ಪಾನು. “ಬದುಕಿರಲೆ, ಬಾಳಿಗಂತವ ತರಲೆ, ಅದುವೆ ಪ್ರಶ್ನೆ” ಎಂದ ಹ್ಯಾಮ್ಲೆಟ್. ಪ್ರಶ್ನೆ? ಎಂಥ ಪ್ರಶ್ನೆ? ರಾಜಕೀಯ ಪ್ರಶ್ನೆಯೇ ಅಲ್ಲವೆ? ರಾಜಕೀಯ ಮಹತ್ವ ಪಡೆಯಲು ಮನುಷ್ಯರಾಗಿರಲೇ ಬೇಕು ಎಂದೇನಿಲ್ಲ. ಪೆಟ್ರೋಲು ಡೀಸಲು ಆಗಿದ್ದರೂ ಸಾಕು. ಗೊಬ್ಬರ, ಹತ್ತಿ, ಗೋದಿ, ಎಲ್ಲ ಮೂಲಸಾಮಗ್ರಿಗೂ ರಾಜಕೀಯ ಮಹತ್ವ. ಸಾವು ಬದುಕಿನ ಪ್ರಶ್ನೆಗಳನ್ನು ಚರ್ಚಿಸಲಿರುವ ಸಮ್ಮೇಳನದ ಮೇಜಿನ ಆಕಾರದ ಬಗ್ಗೆ ತಿಂಗಳು ತಿಂಗಳು ಚರ್ಚೆ, ದುಂಡು ಮೇಜು ಪರಿಷತ್ತೋ ಚೌಕ ಮೇಜಿನ ಸಭೆಯೋ ಯಾರೆಲ್ಲ ಭಾಗವಹಿಸಬೇಕೋ? ಸಂಧಾನ, ಚರ್ಚೆ ಇವೆಲ್ಲ ನಡೆಯುತ್ತಿರುವಾಗಲೆ ಜನ ಸಾಯುತ್ತಿದ್ದಾರೆ ಪ್ರಾಣಿ ಸಂಕುಲ ನಶಿಸುತ್ತಿದೆ ಮನೆಗಳು ಹೊತ್ತಿ ಉರಿಯುತ್ತಿವೆ ನೆಲ ಬಂಜರಾಗುತ್ತಿದೆ— ಪ್ರಾಚೀನ ಕಾಲದಲ್ಲಿ ಕಡಮೆ ರಾಜಕೀಯ ಇದ್ದ ಕಾಲದಲ್ಲಿ ಹೇಗೋ ಹಾಗೇ. ವಿಸ್ಲಾವಾ ಝಿಂಬ್ರೋಸ್ಕಾ [ವಿಸ್ಲಾವಾ ಪೋಲೆಂಡ್ ದೇಶದ ಕವಿ. ಹುಟ್ಟಿದ್ದು ೧೯೨೩ರಲ್ಲಿ. ಆಕೆಗೆ ೧೯೯೬ರಲ್ಲಿ ನೊಬೆಲ್ ಬಹುಮಾನ ಬಂದಿದೆ. ಆಕೆಯ ಈ ಪದ್ಯ ಇಷ್ಟವಾಯಿತೆಂದು ಕನ್ನಡಕ್ಕೆ ಮಾಡಿರುವೆ. ರಾಜಕೀಯ ಎಂಬ ಕಲ್ಪನೆಯನ್ನು ತಾತ್ವಿಕವಾಗಿ ಹಿಗ್ಗಿಸುವ, ವಿಸ್ತರಿಸುವ, ಪ್ರಶ್ನಿಸುವ ಕವನ ಇದು.]