ವಿಧ: ಚರ್ಚೆಯ ವಿಷಯ
September 09, 2005
ಮೊಬೈಲ್ ಫಿಲಾಸಫಿ ಭಾಗ ೧
1. ನಾವು ಯಾರ ಸಂಪರ್ಕ ಇಟ್ಟುಕೊಳ್ಳಲು ಬಯಸುತ್ತೇವೋ ಅವರು ನಮಗೆ ಬೇಕಾದಗ ನಮ್ಮೊಡನೆ ಇರುವುದಿಲ್ಲ. ಅವರಿಗೆ ಕಾಲ್ ಮಾಡುತ್ತೇವೆ ಅಥವ ಅವರು ನಮ್ಮ ಮೊಬೈಲ್‌ಗೆ ಕಾಲ್ ಮಾಡುತ್ತಾರೆ.
2. ನಾವು ಯಾರ ಜೊತೆಯಲ್ಲಿ ಇರುತ್ತೇವೋ ಅವರ ಸಂಪರ್ಕ ನಮಗೆ ಬೇಕಾಗಿರುವುದಿಲ್ಲ. ಆದ್ದರಿಂದ ನಮಗೆ ಕಾಲ್ ಬಂದಾಗ ನಾವೇ ಕೊಂಚ ದೂರ ಹೋಗಿ ಮಾತಾಡುತ್ತೇವೆ.
3. ಆದ್ದರಿಂದ ನಮ್ಮನ್ನು ಬಯಸುವವರಿಂದ ನಾವು, ನಾವು ಬಯಸುವವರಿಂದ ನಮ್ಮವರು ಸದಾ ದೂರವೇ ಇರುತ್ತಾರೆ ಎಂಬ ಪರಮಸತ್ಯವನ್ನು ಮೊಬೈಲ್…
ವಿಧ: Basic page
September 09, 2005
ಪತಂಜಲಿಯ ಯೋಗ ಭಾಗ ೭
ಏಳನೆಯ ಲೇಖನ
ಪತಂಜಲಿಯ ಯೋಗದ ಬಹು ಮುಖ್ಯ ಅಂಶವೆಂದರೆ ಆಚರಣೆ. ಇದರಲ್ಲಿ ಓದಿಗೆ ಅಥವಾ ತಿಳಿಸಿದ ಜ್ಞಾನಕ್ಕೆ ಹೆಚ್ಚು ಬೆಲೆ ಇಲ್ಲ. ತಾತ್ವಿಕ ಚರ್ಚೆಯೊ ಮುಖ್ಯವಲ್ಲ. ಎಲ್ಲಾ ಜ್ಞಾನವನ್ನೂ ಸಾಧಕನು ಮಾಡಿ/ಆಚರಣೆಯಲ್ಲಿತಂದು ಅದು ನಿಜ/ಸತ್ಯ ಎಂದು ಸಾಧನೆ ಮಾಡಿದಾಗ ಮಾತ್ರ ಯೋಗದ ಹಾದಿಯಲ್ಲಿ ಮುಂದುವರೆಯುತ್ತಾನೆ. ಈಗ ಯೋಗದ ಅಷ್ಟಾಂಗಗಳ ಬಗ್ಗೆ ನೋಡೋಣ.
ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಇವೇ ಯಮ.ಯೋ.ಸೂ.ಪಾದ೨. ಸೂತ್ರ.೩೦
ಇವು ಯಾವಾಗಲೂ ಪಾಲಿಸಲೇ…
ವಿಧ: ಚರ್ಚೆಯ ವಿಷಯ
September 09, 2005
ಕನ್ನಡಕ್ಕಾಗಿ ಲಿನಕ್ಸಿನಲ್ಲಿ 'ಭಾಷಾ ಪ್ಯಾಕ್' ಸಂಪೂರ್ಣವಾಗಿಲ್ಲ. ಇದನ್ನು ಸಂಪೂರ್ಣಗೊಳಿಸಲು 'ಸಂಪದ'ದಲ್ಲಿ ನಿಮ್ಮ ಬ್ರೌಸರಿನಲ್ಲಿಯೇ ಭಾಷಾಂತರ ಮಾಡಲು ಸಾಧ್ಯವಾಗುವಂತಹ ತಂತ್ರಾಂಶವೊಂದನ್ನು ಸ್ಥಾಪಿಸಿದ್ದೇವೆ.
ಲಿನಕ್ಸನ್ನು ಸಂಪೂರ್ಣವಾಗಿ [:http://translate.sa…|ಕನ್ನಡದಲ್ಲಿ ನೋಡುವಂತಾಗಲು ಸಹಾಯ ಮಾಡಿ]. ನೀವು ಮಾಡಬೇಕಾದದ್ದಿಷ್ಟೆ: ನಿಮ್ಮ ವೆಬ್ ಬ್ರೌಸರಿನಲ್ಲಿ ಈ ಮೇಲಿನ ಲಿಂಕ್ ಓಪನ್ ಮಾಡಿ ನಿಮಗೆ ಸಾಧ್ಯವಾದಷ್ಟು ಶಬ್ಧಗಳಿಗೆ ಕನ್ನಡದ ಸಮಾನಾರ್ಥಕಗಳನ್ನು ಸೇರಿಸುವುದು. (…
ವಿಧ: ಚರ್ಚೆಯ ವಿಷಯ
September 09, 2005
ಹೆಸರು ಪ್ರಶಾಂತ ಪಂಡಿತ. ಮೂಲ ಉತ್ತರಕನ್ನಡ. ಸಧ್ಯಕ್ಕೆ ಬೆಂದಕಾಳೂರಿನಲ್ಲಿ ಉದ್ಯೋಗ, ವಾಸ. ಮಿತ್ರರೊಂದಿಗೆ lacefilms ಎಂಬ ಚಿತ್ರಸಮಾಜದಲ್ಲಿ ಸಕ್ರಿಯ ಪಾತ್ರ (www.lacefilms.org)
ಸಂಪದದಲ್ಲಿ ಚರ್ಚಿಸುವ, ಬರೆಯುವ ಇಚ್ಛೆಯಿದೆ.
ವಿಧ: Basic page
September 09, 2005
ವಂಶದ ಕುಡಿ - ಭಾಗ ೧
ಪಾಂಡುರಂಗನನ್ನು ಮನೆಮಂದಿ ಮತ್ತು ಸ್ನೇಹಿತರೆಲ್ಲರೂ ಪ್ರೀತಿಯಾಗಿ ಪಾಂಡು ಅಂತ ಕರೆಯುತ್ತಿದ್ದರು. ತುಂಬಾ ಬುದ್ಧಿವಂತ, ಶಾಲಾಕಾಲೇಜುಗಳಲ್ಲಿ ಎಂದೂ ಮೊದಲನೇ ಸ್ಥಾನವನ್ನು ಇತರರಿಗೆ ಬಿಟ್ಟು ಕೊಟ್ಟವನಲ್ಲ. ಬಿ.ಕಾಂ. ಪದವಿಯನ್ನು ಉತ್ತಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದ.
ಪದವಿ ಪಡೆದ ಒಂದೆರಡು ದಿನಗಳಲ್ಲೇ ಬೆಂಗಳೂರಿನಲ್ಲೇ ಒಂದು ಪ್ರೈವೇಟ್ ಕಂಪೆನಿಯಲ್ಲಿ ಕೆಲಸ ಸಿಕ್ಕಿತ್ತು. ಮುಂದೆ ಐ.ಸಿ.ಡಬ್ಲ್ಯು.ಏ. ಮಾಡಬೇಕೆಂದು ಯೋಚಿಸುತ್ತಿರುವಾಗಲೇ, ಅಕೌಂಟೆಂಟ್ ಜನರಲ್…
ವಿಧ: Basic page
September 09, 2005
ಯಮಕೊಅ ತೆಶ್ಶು ಒಬ್ಬ ಕಿರಿಯ ವಿದ್ಯಾರ್ಥಿ. ಅನೇಕ ಗುರುಗಳನ್ನು ಭೇಟಿ ಮಾಡಿದ್ದ. ಒಮ್ಮೆ ಆತ ಶೊಕೊಕು ಊರಿನ ದುಕೌನ್ ನನ್ನು ಕಾಣಲೆಂದು ಹೋದ.
ತನ್ನ ಜ್ಞಾನವನ್ನು ತೋರಿಸಿಕೊಳ್ಳಬೇಕು ಅನ್ನಿಸಿತು. “ಮನಸ್ಸು ಎಂಬುದಿಲ್ಲ, ಬುದ್ಧ ಎಂಬುದು ಇಲ್ಲ, ಸಚರ, ಅಚರ ಇವೆಲ್ಲವೂ ಇಲ್ಲವೇ ಇಲ್ಲ. ಸುಖವಿಲ್ಲ, ದುಃಖವಿಲ್ಲ, ಶೂನ್ಯವೊಂದೇ ಸತ್ಯ. ಸಾಕ್ಷಾತ್ಕಾರವೂ ಇಲ್ಲ. ಗುರುವೂ ಇಲ್ಲ, ಶಿಷ್ಯನೂ ಇಲ್ಲ. ಕೊಡುವುದೆಂಬುದಿಲ್ಲ, ಸ್ವೀಕರಿಸುವುದೆಂಬುದಿಲ್ಲ.”
ಗುರು ದುಕೌನ್ ಹೊಗೆ ಬತ್ತಿ ಸೇದುತ್ತಿದ್ದ. ಕೊಂಚ…
ವಿಧ: Basic page
September 09, 2005
ಝೆನ್ ವಿದ್ಯಾರ್ಥಿಗಳು ಕನಿಷ್ಠಪಕ್ಷ ಹತ್ತು ವರ್ಷ ಶಿಷ್ಯವೃತ್ತಿ ಮಾಡಿದ ಮೇಲಷ್ಟೆ ಇತರರಿಗೆ ಬೋಧಿಸುವ ಗುರುಗಳಾಗುತ್ತಾರೆ. ತೆನೋ ಎಂಬಾತ ತನ್ನ ಶಿಷ್ಯವೃತ್ತಿ ಮುಗಿಸಿ ಗುರುವಾಗಿ ಹಿರಿಯ ನಾನ್ ಇನ್ ಬಳಿಗೆ ಬಂದಿದ್ದ. ಅಂದು ಬಹಳ ಮಳೆ. ತೆನೋ ಹೊರ ಕೋಣೆಯಲ್ಲಿ ತನ್ನ ಮರದ ಚಪ್ಪಲಿಗಳನ್ನೂ ಕೊಡೆಯನ್ನೂ ಇಟ್ಟು ಒಳಬಂದು ನಾನ್ ಇನ್‌ಗೆ ನಮಸ್ಕರಿಸಿದ. “ನಿನ್ನ ಚಪ್ಪಲಿ ಮತ್ತು ಕೊಡೆ ಹೊರಗೆ ಬಿಟ್ಟು ಬಂದಿದ್ದೀಯೆ. ನಿನ್ನ ಕೊಡೆ ಚಪ್ಪಲಿಗಳ ಎಡಗಡೆಗೆ ಇದೆಯೋ, ಬಲಗಡೆಗೋ?” ಎಂದು ನಾನ್ ಇನ್ ಕೇಳಿದ.
ತೆನೋ…
ವಿಧ: Basic page
September 09, 2005
ಗೂಗಲ್ ನಲ್ಲಿ ಏನೋ ಹುಡುಕುತ್ತಾ ಕಳೆದುಹೋಗಿದ್ದ ನನಗೆ ಆಕಸ್ಮಿಕವಾಗಿ ದೊರಕಿದ್ದು [:http://www.inference.phy.cam.ac.uk/dasher/|ಈ ಪುಟ]. ತಂತ್ರಾಂಶದ ಹೆಸರು - 'ಡ್ಯಾಶರ್'. ಆಶ್ಚರ್ಯವೇನಲ್ಲದಂತೆ ಉಬುಂಟು/ಡೆಬಿಯನ್ ರೆಪಾಸಿಟರಿಯಲ್ಲಿ ದೊರಕಿ ಈ ತಂತ್ರಾಂಶ ನನಗೆ ಆಪ್ಟ್ ಉಪಯೋಗಿಸಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡಲು ಸಾಧ್ಯವಾಯಿತು. (ಮೈಕ್ರೊಸಾಫ್ಟಿನ ಎಲ್ಲ ಆಪರೇಟಿಂಗ್ ಸಿಸ್ಟಮ್ ಗಳಿಗೂ ಹಾಗೂ ಮ್ಯಾಕ್ ಓಎಸ್ ಎಕ್ಸ್ ಗೂ ಈ ತಂತ್ರಾಂಶ ಲಭ್ಯವಿದೆ). ಒಟ್ಟಾರೆ ೧೦…
ವಿಧ: Basic page
September 08, 2005
ಮೌನ ದೇವಾಲಯ
ಶೋಹಿಚಿ ಒಕ್ಕಣ್ಣ ಝೆನ್ ಗುರು. ಅವನಲ್ಲಿ ಜ್ಞಾನದ ಪ್ರಭೆ ಇತ್ತು. ಅವನು ತನ್ನ ಶಿಷ್ಯರಿಗೆ ತೊಫುಕು ದೇವಾಲಯದಲ್ಲಿ ಶಿಕ್ಷಣ ನೀಡುತ್ತಿದ್ದ.
ಅವನ ಶಿಕ್ಷಣ ವಿಧಾನವೆಂದರೆ ಮೌನದ ಸಾಧನೆ.
ದೇವಾಲಯದಲ್ಲಿ ಯಾವ ಸದ್ದೂ ಇರುತ್ತಿರಲಿಲ್ಲ. ಸಂಪೂರ್ಣ ನಿಶ್ಶಬ್ದ.
ಧರ್ಮ ಸೂತ್ರಗಳನ್ನು ಪಠಿಸುವುದಕ್ಕೂ ಅವನು ಅನುಮತಿ ನೀಡುತ್ತಿರಲಿಲ್ಲ.
ಅವನ ಶಿಷ್ಯರು ಮೌನ ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನೂ ಮಾಡಬೇಕಿರಲಿಲ್ಲ.
ಒಂದು ದಿನ ದೇವಾಲಯದ ಸಮೀಪದಲ್ಲಿದ್ದ ಹೆಂಗಸು ಗಂಟೆಗಳ ಸದ್ದು…
ವಿಧ: Basic page
September 08, 2005
ಆರಿಹೋದ ದೀಪ
ಹಿಂದಿನ ಕಾಲದ ಜಪಾನಿನ ಜನ ರಾತ್ರಿಯ ಹೊತ್ತಿನಲ್ಲಿ ಬಿದಿರಿನ ಬುಟ್ಟಿಗೆ ತೆಳ್ಳನೆಯ ಹಾಳೆಯನ್ನು ಸುತ್ತಿ, ಅದರೊಳಗೆ ಒಂದು ದೀಪವಿಟ್ಟುಕೊಂಡು ಓಡಾಡುತ್ತಿದ್ದರು. ಕುರುಡನೊಬ್ಬ ತನ್ನ ಗೆಳೆಯನನ್ನು ನೋಡಲೆಂದು ಹೋಗಿದ್ದ. ರಾತ್ರಿಯಾಯಿತು. ಗೆಳೆಯ ಅವನ ಕೈಗೆ ಬಿದಿರು ಹಾಳೆಯ ದೀಪವನ್ನು ಕೊಟ್ಟ.
“ದೀಪ ನನಗೇಕೆ? ಹೇಗಿದ್ದರೂ ಕುರುಡ. ಹಗಲು ಇರುಳು ಎರಡೂ ಒಂದೇ ನನಗೆ.”
“ನಿನಗೆ ದೀಪ ಬೇಡವೆಂದು ಗೊತ್ತು. ಆದರೆ ಕತ್ತಲಲ್ಲಿ ಯಾರಾದರೂ ಬಂದು ನಿನಗೆ ಡಿಕ್ಕಿ ಹೊಡೆಯುವುದು ತಪ್ಪುತ್ತದೆ,…