ವಿಧ: Basic page
August 25, 2005
ನಾನೊಬ್ಬ ಏದುಸಿರು ಬಿಡುತಿಹ ಕಲ್ಲಿದ್ದಲು ಉಗಿಬಂಡಿ
ನನ್ನ ಬಳಿ ಎಂದಿಗೂ ಸುಳಿಯಲಿಲ್ಲ ಬಂಗಾರದ ಗಿಂಡಿ
ಟ್ಯಾಕ್ಸು ಪಾಕ್ಸು ಮುರಿದು ಮಾಹೆಯಾನ ಬರುತಿಹುದು ೮೦೦೦ ರೂಪಾಯಿ
ಚಾತಕದಂತೆ ತಾರೀಖು ಒಂದಕೆ ಕಾದು ಬಿಡುತಿಹೆ ನಾ ಬಾಯಿ ಬಾಯಿ
ಬರುವುದರಲಿ ಒಂದು ಪಾಲು ಕೈ ತುತ್ತನಿಟ್ಟ ಆ ತಾಯಿಗೆ
ಇನ್ನೊಂದು ದೊಡ್ಡ ತುತ್ತು ನನ್ನ ನಂಬಿದ ನನ್ನ ಮಕ್ಕಳ ತಾಯಿಗೆ
ಹೆಚ್ಚಿನ ಖರ್ಚಿಗೆ ಗಟ್ಟಿಯಾಗಿರುವುದು ಸಾಲ ಕೊಡುವ ಸೊಸೈಟಿ
ಉಳಿಸುವ ಮಾತೇ ಇಲ್ಲ ಈ ನನ್ನ ಸರಕಾರದ ಖಜಾನೆಯಲ್ಲಿ
ಮುಚ್ಚಿದಷ್ಟೂ ಮತ್ತೆ ಮತ್ತೆ…
ವಿಧ: ಚರ್ಚೆಯ ವಿಷಯ
August 24, 2005
ವ್ಯಂಗ ಚಿತ್ರ... ಜಿಂಪ್ ನಲ್ಲಿ ಮೌಸ್ ಉಪಯೋಗಿಸಿ ಕಂಪ್ಯೂಟರಿನಲ್ಲಿಯೇ ಬರೆದದ್ದು...
- ಹರಿ ಪ್ರಸಾದ್ ನಾಡಿಗ್
ವಿಧ: ಚರ್ಚೆಯ ವಿಷಯ
August 24, 2005
ನಮಸ್ಕಾರ,
ನನಗೆ 18 ತುಂಬುತ್ತಲೆ, ಈ ವರ್ಷದಿಂದ ಚುನಾವಣೆಗಳಲ್ಲಿ ಪಾಲ್ಗೊಳ್ಳೊ "ಭಾಗ್ಯ" ಕೂಡಿ ಬಂದಿದೆ.. ಆದರೆ ಯಾರಿಗೆ ಮತ ನೀಡಲಿ? ನನಗೆ ಗೊತ್ತಿರೊ ಹಾಗೆ ನಮ್ಮ areaದಲ್ಲಿ ಇರೋರೆಲ್ಲ wasteಗಳು - ಯಾರಿಗೆ ಹಾಕಿದ್ರು ಅದರಿಂದ ನಮಗೆ ಯಾರಿಗೂ ಏನು ಉಪಯೋಗ ಇಲ್ಲ ಅಂತನು ಚೆನಾಗ್ ಗೊತ್ತು! ಇನ್ನು ಅದರ ಮೇಲಿರೊರೊ ಅಷ್ತೆ - ಯಾರೆ ಗೆದ್ದರೂ ಕನ್ನಡ, ಕರ್ನಾಟಕದ ಬಗ್ಗೆ ಯಾವುದೆ ಕಾಳಜಿ ಇರೊಲ್ಲ ಅವರಿಗೆ!
ಕರ್ನಾಟಕದ ಒಬ್ಬ ಪ್ರಜೆಯಾಗಿ ಚುನಾವಣೆಗಳಲ್ಲಿ ಪಾಲ್ಗೊಳ್ಳೊದು ನನ್ನ ಕರ್ತವ್ಯ.. ಹಾಗಂತ…
ವಿಧ: ಬ್ಲಾಗ್ ಬರಹ
August 23, 2005
ಏನೋ ಕೆಲಸದ ನಿಮಿತ್ತ ಆ ದಾರಿಯಲ್ಲಿ ನಡೆದು ಸಾಗುತ್ತಿದ್ದೆ. ದೂರದಲ್ಲಿ ಜನರಗುಂಪೊಂದು ಸೇರಿರುವುದು ನನ್ನ ಕಣ್ಣಿಗೆ ಬಿತ್ತು. ಅದರ ಹತ್ತಿರ ಸಾಗುತ್ತಿದ್ದಂತೆ "ಕನ್ನಡ ವಿರೋಧಿಗಳಿಗೆ ಧಿಕ್ಕಾರ,ಕನ್ನಡ ವಿರೋಧಿ ವರ್ತಕರಿಗೆ ಧಿಕ್ಕಾರ,ಕನ್ನಡ ವಿರೊಧಿ ಕಂಪನಿಗಳಿಗೆ ಧಿಕ್ಕಾರ" ಎನ್ನುತ್ತಿರುವುದು ಸ್ಪಷ್ಟವಾಗಿ ಕೇಳುತ್ತಿತ್ತು. ಆ ಗುಂಪು ಸೇರಿರುವುದು hutch ಆಫಿಸ್ ನ ಎದಿರು, ಅದರ ಬಾಗಿಲು ಮುಚ್ಹಿತ್ತು ಅನ್ನುವುದಕ್ಕಿಂತ ಮುಚ್ಹಿಸಿದ್ದರು ಎನ್ನಬಹುದು.
ಇದು hutch ಅವರ ವಿರುದ್ಧ ಎಂಬುದು…
ವಿಧ: Basic page
August 23, 2005
ಪತಂಜಲಿಯ ಯೋಗ
ನಾಲ್ಕನೆಯ ಲೇಖನ
ಮನಸ್ಸಿನಲ್ಲಿ ವೃತ್ತಿಗಳು ಏಳುವದನ್ನು ಕಡಿಮೆ ಮಾಡಲು ಅಭ್ಯಾಸ ಮಾಡುತ್ತಿದ್ದಾಗ ಅನೇಕ ತಡೆ-ಅಡಚಣೆಗಳು ಬರುತ್ತವೆ. ಅವು ಯಾವುವೆಂದರೆ
ವ್ಯಾಧಿ(ಕಾಹಿಲೆ), ಸ್ತ್ಯಾನ (ಸೋಮಾರಿತನ), ಸಂಶಯ (ನಂಬಿಕೆ ಇಲ್ಲದಿರುವುದು), ಪ್ರಮಾದ (ತಪ್ಪು), ಅವಿರತಿ (ದೇಹದ ಕಾಮನೆಗಳು), ಭ್ರಾಂತಿದರ್ಶನ (ಆಗದಿದ್ದನ್ನು ಆಯಿತೆಂದು ತಿಳಿಯುವುದು), ಅಲಭ್ದಭೂಮಿಕತ್ವ (ಮನಸ್ಸನ್ನು ಹರಿಬಿಡುವುದು;ಅನುಪಸ್ಥಿತಿ), ಅನವಸ್ಥಿತತ್ವ (ಒಂದು ಸ್ಥಿತಿ ಏರಿದ್ದನ್ನು ಉಳಿಸಿಕೊಳ್ಳದಿರುವುದು), ದುಃಖ…
ವಿಧ: Basic page
August 22, 2005
ರಾಮು: ಯಾಕೋ ಇವತ್ತು ಆಫೀಸಿಗೆ ತಡವಾಗಿ ಬಂದೆ?
ಶಾಮು: ಬರುವಾಗ ಬೀದಿ ನಾಯಿ ಕಚ್ಚಿತು ಕಣೊ. ಡಾಕ್ತರ್ ಹತ್ತಿರ ಹೋಗಿ ರೇಬಿಸ್ ಇಂಜೆಕ್ಷನ್ ಮಾಡಿಸಿಕೊಂಡು ಬರಲು ತಡವಾಯಿತು.
ರಾಮು: ಅಯ್ಯೋ ಪಾಪ! ನಾಯಿಗೇನಾಯಿತು?
ಶಾಮು: .....
ವಿಧ: Basic page
August 22, 2005
ನನ್ನ ಚಿಕ್ಕಪ್ಪನಿಗೆ ಮೊದಲ ಮಗು ಜನಸಿತ್ತು. ಆಗ ಅವರು ಮಗುವನ್ನು ನೋಡಲು ಬಾಣಂತಿ ಕೋಣೆಗೆ ಹೋಗಿ ಬಂದರು. ಹೊರಗೆ ಕೂತಿದ್ದ ನೆಂಟರು ತಮಾಷೆಗೆ 'ಏನು ಹೇಳಿದಳಪ್ಪಾ ಮಗಳು?' ಎಂದು ಪ್ರಶ್ನಿಸಿದರು. ಆಗ ತಾನೆ ಹುಟ್ಟಿದ ಮಗು ಮಾತನಾಡಲು ಸಾಧ್ಯವೆ! ಚಿಕ್ಕಪ್ಪ ಕೂಡ ಸೋಲೊಪ್ಪದ ವ್ಯಕ್ತಿ. ಚಿಕ್ಕಪ್ಪ ಕೂಡ ಅದೇ ವರಸೆಯಿಂದ 'ನಿಮಗೆಲ್ಲಾ ಹೀಳಬೇಡಿ ಎಂದಿದ್ದಾಳೆ' ಎನ್ನಬೇಕೆ. ಅಲ್ಲಿದ್ದ ಜನರ ಜೊತೆಗೆ, ಒಳಗಿನ ಕೋಣೆಯಲ್ಲಿ ಮಲಗಿದ್ದ ಚಿಕ್ಕಮ್ಮನೂ ಅದನ್ನು ಕೇಳಿಸಿಕೊಂಡು ನಕ್ಕರು.
ವಿಧ: Basic page
August 22, 2005
ಈ ಘಟನೆ ನಡೆದಾಗ ನಾನಿನ್ನು 10 ವರುಷದ ಹುಡುಗ. ನನ್ನ ಚಿಕ್ಕಪ್ಪನ ನಿಶ್ಚಿತಾರ್ಥ ನಡೆದಿತ್ತು. ಗಂಡು, ಹೆಣ್ಣಿನ ಕಡೆಯವರೆಲ್ಲರೂ ಸೇರಿದ್ದರು. ನಮ್ಮ ಅತ್ತೆಗಳೆಲ್ಲರೂ ಸೇರಿ (ಅಂದರೆ ನಮ್ಮೆ ತಂದೆಯ ತಂಗಿಯಂದಿರು) ನನ್ನ ಚಿಕ್ಕಪ್ಪನ ಕಾಲೆಳೆಯುತ್ತಿದ್ದರು. ಅವರಿಗೆಲ್ಲರಿಗೂ ಆಗಲೆ ಮದುವೆಯಾಗಿತ್ತು. ನಮ್ಮ ಅತ್ತೆಯಂದಿರು ಚಿಕ್ಕಪ್ಪನಿಗೆ 'ನೀನು ಮದುವೆಯಗುತ್ತಿರುವ ಹುಡುಗ. ಸ್ವಲ್ಪ ಗೊಭೀರತೆಯಿಂದಿರಲು ಕಲಿತುಕೊ.' ಎಂದು ಹಾಗೆ ಹೀಗೆ ಎಂದೆಲ್ಲಾ ಬೋಧಿಸುತ್ತಿದ್ದರು. ಇದು ತುಂಬಾ ಹೊತ್ತಿನ ವರೆಗೆ…
ವಿಧ: ಚುಟುಕು ಬರಹ
August 22, 2005
ಮುಂಬಯಿಯೂ ಒಂದು ಹಳ್ಳಿಯಿದ್ದಂತೆ. ಇಲ್ಲೂ ಜನರು ದೇವರು ಎಂದರೆ ಎಲ್ಲೆಂದರಲ್ಲಿ ನೆಲಕ್ಕೆ ಬೀಳುವರು. ಮಾಧ್ಯಾಹ್ನಿಕ ಪತ್ರಿಕೆಯೊಂದರಲ್ಲಿ [:http://web.mid-day…|ಇವತ್ತಿನ ಅಂಕಣ ನೋಡಿ], ಹೀಗಿದೆ:
"ಸಿನೆಮಾ ಮಂದಿರವೋ ದೇವತಾ ಮಂದಿರವೋ?"
ಮುಂಬಯಿ ಎಂದರೆ ಬರಿಯ ಪಾಶ್ಚಾತ್ಯ ಸಂಸ್ಕೃತಿ ಅಂತ ತಿಳಿಯಬೇಡಿ. ;)
ವಿಧ: ಬ್ಲಾಗ್ ಬರಹ
August 22, 2005
1999 ಮುಗಿಯುತ್ತಾ ಬಂದಾಗ ‘ಜನವಾಹಿನಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ವರ್ಗಾವಣೆಯ ಆದೇಶವೂ ತಲುಪಿತ್ತು. ನನಗೆ ಅರ್ಥವಾಗದ ಕಾರಣಗಳಿಗಾಗಿ ನನ್ನನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಗಿತ್ತು. 1999ಕ್ಕೆ ವಿದಾಯ ಹೇಳಿದ ಮರುದಿನ ಅರ್ಥಾತ್ 2000ದ ಜನವರಿ ಒಂದನೇ ತಾರೀಕಿನಂದು ನಾನು ‘ಜನವಾಹಿನಿ’ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಸೇರಿಕೊಂಡೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಕೆಲಸವಿರಲಿಲ್ಲ. ಇಲ್ಲಿ ನನಗೊಬ್ಬ…