ವಿಧ: Basic page
September 08, 2005
ನಾರಿಮನ್ ಪಾಯಿಂಟಿನ ಮಗ್ಗುಲಲ್ಲಿರುವ ಅರಬ್ಬೀ ಸಮುದ್ರ
ನಿಮಿಷಕೊಮ್ಮೆ ಆವರ್ತಿಸುವ ಅಲೆಗಳು ರಮಣೀಯ
ಅರೆ ನಿಮಿಷ ಬರಲು ಅರೆ ನಿಮಿಷ ಹೋಗಲು
ಚಣಕಾಲವೂ ವಿಶ್ರಮಸಲೇ ಬಾರದೇ ಈ ನಿಸರ್ಗ
ನಿರೀಕ್ಷಿಸುತಿರುವೆ ಎಂದಾದರೂ ಸುಸ್ತಾಗಿ ನಿಲ್ಲುವುದೇ
ಇತ್ತ ಚರ್ಚ್‍ಗೇಟಿನ ರೈಲ್ವೇ ಸ್ಟೇಷನ್ನಿನಾಚೆ
ಕೆಂಪು, ಕಪ್ಪು, ಬಿಳಿ, ತಲೆಗಳ ಸಮೂಹ
ಅರ್ಧ ನಿಮಷಕ್ಕೊಮ್ಮೆ ಬರುವ ಮಂದಿಯ ದಂಡು
ಅವ್ಯಾಹತವಾಗಿ ಒಳನುಗ್ಗುತ್ತಿರುವ ಜನರ ಸಾಲು ಸಾಲು
ಒಂದು ಚಣವೂ ಈ ಸ್ಟೇಷನ್ನಿನ ನೆಲಕೆ ವಿಶ್ರಾಮವಿಲ್ಲವೇ?
ಮದುವೆ ಮನೆಯಲಿ…
ವಿಧ: Basic page
September 08, 2005
ಮುಂಬಯಿಯ ಗಣಪ
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್. ಗಣೇಶಾಥರ್ವಶೀರ್ಷದಲ್ಲಿ ಬರುವ ಒಂದು ಶ್ಲೋಕ. (ಏಕ ದಂತ ಉಳ್ಳವನೂ ಬಾಗಿರುವ ಸೊಂಡಿಲಿನವನೂ ಆದ ಆ ಭಗವಂತ ಬುದ್ಧಿಯನ್ನೂ ಮತ್ತು ಸ್ಫೂರ್ತಿಯನ್ನೂ ನೀಡಲಿ).
ಗಣಪತಿ ಬಾಪ್ಪಾ ಮೋರಿಯಾ
ಪುಡಚ್ಯಾ ವರ್ಷೀ ಲವಕರ್ ಯಾ
ಇದು ಮರಾಠಿಯಲ್ಲಿ ಗಣಪತಿಗಾಗಿ ಹೇಳುವ ಹಾಡು. ಇದರರ್ಥ, 'ಓ ಗಣಪತಿ ದೇವನೇ ಮುಂದಿನ ವರ್ಷ ಬೇಗ ಬಾ' ಎಂದು. ಮರಾಠಿ ಭಾಷಿಗರಿಗೆ ಮನೆಯಲ್ಲಿ ಎಂದೂ ಗಣಪತಿ ಇರಲಿ ಎಂಬ ಆಶಯ. ಆದರೇನೂ ಹಬ್ಬದ ದಿನದಿಂದ…
ವಿಧ: Basic page
September 08, 2005
ಇಪ್ಪತ್ತೊಂದು ವರ್ಷಗಳ ಹಿಂದೆ, ನಾನು ಒಂಬತ್ತು ವರ್ಷದವನಾಗಿದ್ದಾಗ ನನ್ನ ತಂದೆ, ಅವರು ಸುಮಾರು ಹದಿನೈದು ವರ್ಷದವರಾಗಿದ್ದಾಗ, ದಾವಣಗೆರೆಯಲ್ಲಿ, ಅವರ ಮನೆಯಲ್ಲಿ ನಡೆದ ಒಂದು ಘಟನೆಯನ್ನು ನನಗೆ ತಿಳಿಸಿದರು.
ನನ್ನ ತಂದೆಯವರ ಸಹೋದರ ಮನೆಯಿಂದ ಬೇರೆಯಾದರಂತೆ. ತಮಗೆ ಬರುವ ಸಾಮಗ್ರಿಗಳನ್ನು ತುಂಬಿಕೊಂಡು ಹೋಗಲು ಮನೆಯ ಮುಂದೆ ಎತ್ತಿನಗಾಡಿಯನ್ನು ತಂದು ನಿಲ್ಲಿಸಿದಾಗ, ಅವರ ಪತ್ನಿ (ನನ್ನ ತಂದೆಯವರ ಅತ್ತಿಗೆ) ನನ್ನ ತಾತನವರನ್ನು, "ಯಾವ ಯಾವ ವಸ್ತುಗಳನ್ನು ನಾನು ತೆಗೆದುಕೊಳ್ಳಲಿ?" ಎಂದು…
ವಿಧ: ಬ್ಲಾಗ್ ಬರಹ
September 07, 2005
ಸ್ನೇಹಿತರೆ,
ಸುಧಾ ವಾರಪತ್ರಿಕೆಯಲ್ಲಿ ಸಂಪದದ ಬಗ್ಗೆ ನನ್ನ ಲೇಖನ ಹೋದ ವಾರ ಪ್ರಕಟವಾಗಿತ್ತು. ಅವುಗಳನ್ನು ಸ್ಕಾನ್ ಮಾಡಿ ನನ್ನ ತಾಣದಲ್ಲಿ ಸೇರಿಸಿದ್ದೇನೆ. ಅವುಗಳನ್ನು ಇಲ್ಲಿ ಓದಬಹುದು -[http://www.vishvaka…|ಪುಟ-೧] ಮತ್ತು [http://www.vishvaka…|ಪುಟ-೨].
ನಾಡಿಗರೆ, ನೀವು ಈ ಚಿತ್ರಗಳನ್ನು ಸಂಪದ ತಾಣಕ್ಕೆ ಪ್ರತಿ ಮಾಡಿಕೊಂಡು ಅವುಗಳನ್ನು ಶಾಶ್ವತವಾಗಿ ಇಲ್ಲಿಯೇ ಇಟ್ಟುಕೊಳ್ಳಬಹುದು. ನಮ್ಮ ಬಗ್ಗೆ ಮಾಧ್ಯಮದಲ್ಲಿ ಎಂಬ ಒಂದು ಹೊಸ ಕೊಂಡಿ ಸೇರಿಸಿ.
ಇಂದು ಬೆಳಿಗ್ಗೆ ಕಥೆಗಾರ…
ವಿಧ: ಬ್ಲಾಗ್ ಬರಹ
September 07, 2005
ಸಂಪದದಲ್ಲೀಗ ೩೧೬ ಸದಸ್ಯರಿದ್ದಾರೆ ಎಂದರೆ ಆಶ್ಚರ್ಯವೇನಲ್ಲ. ಅದರಲ್ಲಿ ಸರಿ ಸುಮಾರು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಯಾವುದೇ ತಾಣದಲ್ಲಿ ಸೇರುವ ಸದಸ್ಯರು ಆಗೊಮ್ಮೆ ಈಗೊಮ್ಮೆ ಮಾತ್ರ ಇಣುಕಿ ನೋಡಿ ಕಣ್ಮರೆಯಾಗುವರು. ಆದರಿಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ.
ಈ ಕೂಸಿಗಿನ್ನೂ ಒಂದು ತಿಂಗಳು ಕಳೆದಿಲ್ಲ. ಇದರ ಕರ್ತೃವಿಗೆ ತಾಣವನ್ನು ಸಂಭಾಳಿಸುವುದೇ ಸಮಸ್ಯೆ ಆಗಿದೆ. ಉಂಹೂಂ! ಹಣದ ಸಮಸ್ಯೆಯಲ್ಲ. ಬ್ಯಾಂಡ್‍ವಿಡ್ತಿನ ಸಮಸ್ಯೆ. ಇಷ್ಟು ಸದಸ್ಯರು ಬಂದು ಸೇರುವರೆಂದು…
ವಿಧ: ಚರ್ಚೆಯ ವಿಷಯ
September 06, 2005
ಈಗಾಗ್ಲೇ, ವಿಧಾನಸೌಧವೇ ಕಾಣಿಸದಷ್ಟು ಪ್ರತಿಮೆಗಳು ಅದನ್ನು ಮುತ್ತಿಕೊಂಡಿರುವಾಗ, ಇನ್ನೊಂದು ಹೊಸ ಪ್ರತಿಮೆ ಸ್ಥಾಪಿಸ್ತಾರಂತೆ. ನಮ್ಮ ಕನ್ನಡಿಗರ ಪ್ರತಿಮೆಗಳಿಗೆ ವಿಧಾನಸೌಧದ ಹಿಂದೆ ಜಾಗ, ಕನ್ನಡೇತರ ನಾಯಕರುಗಳ ಮೂರ್ತಿಗಳಿಗೆ ವಿಧಾನ ಸೌಧದೆದುರಿನ ಜಾಗ!...ಈ ಸಾಲಿಗೆ ಹೊಸ ಸೇರ್ಪಡೆ 'ಬಾಬು ಜಗಜೀವನ ರಾಂ'.
ಆಗ್ಲೇ ಕನ್ನಡನಾಡಿನ ರಾಜಧಾನಿಯಲ್ಲಿ ಕನ್ನಡದ ಸ್ಥಿತಿ ಪಾತಾಳ ಮುಟ್ಟಿರುವಾಗ ಇದು ಬೇಕಿತ್ತಾ?
ವಿಧ: ಚರ್ಚೆಯ ವಿಷಯ
September 06, 2005
ಮಲಯಾಳಮ್ ಚಿತ್ರರಂಗದ ಅಡೂರು ಗೋಪಾಲಕೃಷ್ಣನ್ ರವರನ್ನು ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸುದ್ದಿ [:http://www.hindu.com/2005/09/06/stories/2005090614170100.htm|ಇಂದಿನ ಹಿಂದೂ ಪತ್ರಿಕೆಯಲ್ಲಿ], ಓದಿ.
"ಈ ಪ್ರಶಸ್ತಿ ಮತ್ತಷ್ಟು ಜನರು ನನ್ನ ಸಿನಿಮಾಗಳನ್ನು ನೋಡುವಂತೆ ಮಾಡಿದರೆ, ಅದೇ ಸಂತೋಷ"
ಎಂದಿದ್ದಾರೆ, ಗೋಪಾಲಕೃಷ್ಣನ್
ವಿಧ: ಚರ್ಚೆಯ ವಿಷಯ
September 06, 2005
ಫೋಟೊ ಕೃಪೆ: [:http://prajavani.net|ಪ್ರಜಾವಾಣಿ]
ನಿನ್ನೆ ದಿನ ವಿಟಿಯು ಸಿ ಇ ಓ (ಆಕಾ ಕುಲಪತಿ - ಬಲವೀರರೆಡ್ಡಿ) ಕೆಲವರೊಂದಿಗೆ ಬಿ ಎಮ್ ಎಸ್ ಹಾಗು ಇನ್ನೊಂದು ಇಂಜಿನೀಯರಿಂಗ್ ಕಾಲೇಜಿಗೆ ಲಗ್ಗೆ ಇಟ್ಟು ಕ್ಲಾಸಿನಲ್ಲಿದ್ದ ಮೊಬೈಲ್ ಫೋನುಗಳನ್ನೆಲ್ಲ ವಶಪಡಿಸಿಕೊಂಡರಂತೆ!
ವಿಟಿಯು ಪ್ರಕಾರ ಕಾಲೇಜು ಪ್ರಾಂಗಣಕ್ಕೆ ಮೊಬೈಲ್ ತರುವುದೇ ತಪ್ಪಂತೆ, ಹಾಗೂ ಹಾಗೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆಯಂತೆ. ಎಲ್ಲಾದರೂ 'ಸುರಕ್ಷಿತ' ಜಾಗದಲ್ಲಿ ಮೊಬೈಲ್ ಇಟ್ಟು ಕಾಲೇಜು ಪ್ರವೇಶಿಸಬೇಕಂತೆ ;)
"ಏನಪ್ಪಾ…
ವಿಧ: ಬ್ಲಾಗ್ ಬರಹ
September 06, 2005
ಅಥವಾ ಇದೂ ಒಂದು ಬ್ಲಾಗು. ನನ್ನ ಬ್ಲಾಗು ಬೇರೊಂದು ಇದೆ. ಅಲ್ಲಿ ನಾನೂ ನನ್ನವಳೂ ಇಬ್ಬರೂ ಬ್ಲಾಗಿಸುತ್ತೇವೆ. ಆದ್ದರಿಂದ ಇಲ್ಲಿ ಹೆಚ್ಚಾಗಿ ಬರೆಯುಲಾರೆ. ಆದರೆ ಆಗಾಗ ಅಲ್ಲಿಂದ ಇಲ್ಲಿಗೆ ತಂದು ಹಾಕಿಯೇನು. ಅದು ಕೃತಿಚೌರ್ಯವೆನಿಸುವುದಿಲ್ಲವಷ್ಟೆ. ಆದರೆ ಸಂಪದವನ್ನು ದಿನಕ್ಕೊಮ್ಮೆಯಾದರೂ ಓದುತ್ತೇನೆ. ಆಗಾಗ ಪ್ರತಿಕ್ರಯಿಸುತ್ತೇನೆ.
ಸಂಪದದಂಥ ತಾಣದಲ್ಲಿ ಬ್ಲಾಗ್‌ಗಳು ಇರಬೇಕೆ? ನಾನು ಕಂಡ ಹಾಗೆ ಬ್ಲಾಗುಗಳಲ್ಲಿ ಎರಡು ಬಗೆ: "ನಾನು ಈಹೊತ್ತು ಇಲ್ಲಿಗೆ ಹೋದೆ; ಅದು ಮಾಡಿದೆ/ಮಾಡಲಿಲ್ಲ; ಹೀಗಾಯಿತು/…
ವಿಧ: Basic page
September 06, 2005
[ ಈ ಕಿರುಬರಹವನ್ನು ಹಿಂದೆ ನನ್ನ ಸ್ವಂತ ಬ್ಲಾಗಿನಲ್ಲಿ ಪ್ರಕಟಿಸಿದ್ದೆ. ಸಂಪದದ ಓದುಗರಿಗೆಂದು ಮತ್ತೆ ಇಲ್ಲಿ ಹಾಕುತ್ತಿದ್ದೇನೆ. - ವೆಂ ]
ನೆಲ್ಲಿಕಾಯಿಯ ಗಾತ್ರ. ಅಂಗೈಯಲ್ಲಿ ಹಿಡಿಯಲು ಸುಲಭಸಾಧ್ಯ. ಆದರೆ ಅದಕ್ಕೂ ಇದಕ್ಕೂ ಅಜಗಜಾಂತರ. ಇದೊ ಅಬನೇರೊ ([w:Habanero|Habanero]). [:node/289/#indian_tezpur|ಅಸ್ಸಾಮಿನ ಮೆಣಸಿನಕಾಯಿಯ] ಬಗ್ಗೆ ಇರುವ ಚರ್ಚೆ ಇಲ್ಲಿಲ್ಲ. ಸದ್ಯಕ್ಕಂತೂ ಇದರಷ್ಟು ಖಾರದ ಮೆಣಸಿನಕಾಯಿ ಜಗತ್ತಿನಲ್ಲಿ ಬೇರೆ ಇಲ್ಲ. ಎಷ್ಟು ಖಾರ? ಗುಂಟೂರಿನ ಕಾಯಿಯಷ್ಟೆ? ಎಂದೀರಿ.…