ವಿಧ: ಬ್ಲಾಗ್ ಬರಹ
September 05, 2005
ಕನ್ನಡಿಗರ ಅತಿದೊಡ್ಡ ಸಮಸ್ಯೆ ಎಂದರೆ ತಮ್ಮೊಳಗೇ ಮಾತನಾಡಿಕೊಳ್ಳಲು ಕಷ್ಟಪಡುವುದು. ಇ-ಕನ್ನಡಿಗರು ಈ ದೌರ್ಬಲ್ಯವನ್ನು ಮೀರಿದ್ದಾರೆ ಎಂಬುದು ನನ್ನ ನಂಬಿಕೆಯಾಗಿತ್ತು. ಈಗ ಅವರನ್ನೂ ಸಾಮಾನ್ಯ ಕನ್ನಡಿಗರ ರೋಗ ಬಾಧಿಸುತ್ತಿದೆ. ಪತ್ರಿಕೆಗಳಲ್ಲಿ ಓದುಗರ ಕಾಲಂ ತುಂಬಿಸಲು ಉಪ ಸಂಪಾದಕರು ಪಡುವ ಪಾಡು ಅರಿತವರಿಗೆ ಕನ್ನಡಿಗರ ಪ್ರತಿಕ್ರಿಯಿಸುವ ಗುಣದ ಬಗ್ಗೆ ತಿಳಿದಿರುತ್ತದೆ.
ಸಂಪದದಲ್ಲಿ ಲೇಖನ ಬರೆಯುವವರು ಮತ್ತು ಪ್ರತಿಕ್ರಿಯಿಸುವವರನ್ನು ನೋಡಿದರೇ ಇದು ಅರ್ಥವಾಗುತ್ತದೆ. ಈ ಎಲ್ಲರ ಹೆಸರುಗಳನ್ನೂ…
ವಿಧ: Basic page
September 05, 2005
ಎಂದಿಗೂ ನಗುತ ನಗಿಸುತಿಹ ನಗೆ ಬುಗ್ಗೆ
ಹಿರಿಯ ಕಿರಿಯರೆಲ್ಲರ ಮನ ತಣಿಸುವ ಕಣ್ಮಣಿ
ಕಪ್ಪಾದರೂ ಕಡೆದಿಟ್ಟ ಕರಿಬಂಡೆಯಂತಿಹ ತರುಣ
ಸಹೃದಯರಿಗೆ ತೋರಿಸುವ ತನ್ನಲಿರುವ ಕರುಣ
ಕೆಟ್ಟವರಿಗೆ ಕೆಟ್ಟವನಾಗಿ ದುಷ್ಟರ ಸದೆಬಡಿಯುವ ವೀರ
ದಾಂಡಿಗರೂ ಇವನ ಹತ್ತಿರ ಬರಲು ಹೆದರಿಯಾರು
ಒಳ್ಳೆಯವರಿಗೆ ಒಳ್ಳೆಯವನಾಗಿ ಸಹಾಯ ಹಸ್ತ ಚಾಚುವ ಧೀರ
ಓಣಿಯ ಮಕ್ಕಳಿಗೆಲ್ಲ ಅಚ್ಚು ಮೆಚ್ಚಿನ ಅಣ್ಣ
ಸ್ನೇಹಿತರ ನಗಿಸುತ ದಾಟಲು ಹೋದ ರೈಲ್ವೇ ಹಳಿ
ದೈತ್ಯಾಕಾರದ ಬಂಡಿ ಬಂದೇ ಬಿಟ್ಟಿತು ಇವನ ಬಳಿ
ಇವನ ಸಹೃದಯತನವ ಹೇಗೆ ಅರಿಯಬೇಕಾ…
ವಿಧ: ಚರ್ಚೆಯ ವಿಷಯ
September 05, 2005
ಕನ್ನಡದಲ್ಲಿ ಕತೆಗಳೇ ಇಲ್ಲ. ಕನ್ನಡದಲ್ಲಿ ಒಳ್ಳೆಯ ಚಿತ್ರಕತೆ ಬರೆಯುವವರಿಲ್ಲ. ಹೀಗೆ ಕನ್ನಡ ಚಿತ್ರ ನಿರ್ಮಾಪಕರು ಹೇಳುತ್ತಾ ಹೋಗುತ್ತಾರೆ. ನಿಜಕ್ಕೂ ಕನ್ನಡದಲ್ಲಿ ಸಿನಿಮಾಗಳಿಗೆ ಅಗತ್ಯವಿರುವ ಕತೆಗಳ ಕೊರತೆ ಇದೆಯೇ?
ಗಾಂಧಿನಗರದ ದೊಡ್ಡ ಸಮಸ್ಯೆ ಎಂದರೆ ಯಶಸ್ಸಿನ ಹಿಂದೆ ಸಾಗುವುದು. ಪ್ರತೀ ಯಶಸ್ಸೂ ತನ್ನಷ್ಟಕ್ಕೇ ವಿಶಿಷ್ಟ ಎನ್ನುವುದನ್ನು ಗಾಂಧಿನಗರ ಒಪ್ಪುವುದಿಲ್ಲ. ತೆಲುಗು ರಿಮೇಕ್ ಸಿನಿಮಾ ಒಂದು ಯಶಸ್ವಿಯಾದರೆ ಕನ್ನಡದ ನಿರ್ಮಾಪಕರೆಲ್ಲಾ ದಂಡು ದಂಡಾಗಿ ಆಂಧ್ರಪ್ರದೇಶ ಯಾತ್ರೆ…
ವಿಧ: ಚರ್ಚೆಯ ವಿಷಯ
September 04, 2005
ಪ್ರಜಾವಾಣಿಯ ಇಂದಿನ ಸಾಪ್ತಾಹಿಕ ಪುರವಣಿಯಲ್ಲಿ ತ ಸು ಶಾಮರಾಯರ ಬಗ್ಗೆ ಜಿ ಎಸ್ ಶಿವರುದ್ರಪ್ಪರವರ ಲೇಖನ ಪ್ರಕಟವಾಗಿದೆ. ಓದಿ:
[:http://www.prajavan…|ಲಿಂಕ್]
ವಿಧ: ಬ್ಲಾಗ್ ಬರಹ
September 04, 2005
ಮಕ್ಕಳ ಮೇಲಿನ ಅನಗತ್ಯ ಭಾರವನ್ನು ತಗ್ಗಿಸುವದಕ್ಕಾಗಿ ಸರಕಾರ ಪ್ರಾಥಮಿಕ ಶಾಲೆಗಳಿಗಾಗಿ ಟ್ರೈಮಿಸ್ಟರ್ ಪಧ್ಧತಿಯನ್ನ ಜಾರಿಗೆ ತ೦ದಿದೆ. ಇದರಿ೦ದ ಒ೦ದು ದೃಷ್ಟಿಯಲ್ಲಿ ಮಕ್ಕಳ ಭಾರ ತಗ್ಗಿದೆ. ಆದರೆ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವಲ್ಲಿ ಕೊ೦ಚ ಎಡವಟ್ಟಾದ ಕಾರಣದಿ೦ದಲೋ ಅಥವಾ "ಪ್ರತಿ ಪಾಠದ ನ೦ತರ ಪರೀಕ್ಷೆ ನಡೆಸಿ ದಾಖಲಿಸಿ" ಎನ್ನುವ ಸೂಚನೆಯಲ್ಲಿ ಪರೀಕ್ಷೆ ಎ೦ಬ ಪದವನ್ನು ಲಿಖಿತ ಪರೀಕ್ಷೆ ಎ೦ಬ ಸುಲಭ ಅರ್ಥದಲ್ಲಿ ಗ್ರಹಿಸಿದ್ದುದರಿ೦ದಲೋ ಏನೋ ಮಕ್ಕಳು ಪ್ರತಿ ದಿನ ಎರಡು ಮೂರು ಪರೀಕ್ಷೆ ಬರೆಯುತ್ತ…
ವಿಧ: Basic page
September 02, 2005
ಪತಂಜಲಿಯ ಯೋಗ ಭಾಗ ೬
ಆರನೆಯ ಲೇಖನ
ಮನಸ್ಸಿನಲ್ಲಿ ತಾನೇತಾನಾಗಿ ಹುಟ್ಟುವ ಈ ಕ್ಲೇಷವೃತ್ತಿಗಳನ್ನು ಧ್ಯಾನದಿಂದ ಹುಟ್ಟದಂತೆ ಮಾಡಬಹುದು.
ಧ್ಯಾನದಿಂದ (ಕ್ಲೇಷಗಳಿಂದ ಉಂಟಾಗುವ) ಈ ವೃತ್ತಿಗಳನ್ನು ಕೊನೆಗಾಣಿಸಬಹುದು.ಯೋ.ಸೂ.ಪಾದ೨. ಸೂತ್ರ.೧೧
ಪರಿಣಾಮ ದುಃಖ, ತಾಪಗಳಿಂದ ಉಂಟಾಗುವ ದುಃಖ, ಸಂಸ್ಕಾರ ದುಃಖ ಇದಲ್ಲದೆ ಮನಸ್ಸಿನಲ್ಲಿ ಗುಣ ವೃತ್ತಿಗಳ ಪರಸ್ಪರ ವಿರೋಧ ಇವುಗಳನ್ನು ನೋಡಿದ ವಿವೇಕಿಗೆ ಸರ್ವವೂ ದುಃಖ; ದುಃಖ ಬಿಟ್ಟರೆ ಬೇರೇನೂ ಇಲ್ಲ ಎಂಬ ಅರಿವುಂಟಾಗುತ್ತದೆ.ಯೋ.ಸೂ.ಪಾದ೨. ಸೂತ್ರ.೧೫.
ಇಲ್ಲಿ…
ವಿಧ: ಚರ್ಚೆಯ ವಿಷಯ
September 02, 2005
([:http://msanjay.weblogs.us|ಸಂಜಯ್] ಇಂದು ಕನ್ನಡ ಕಂಪ್ಯೂಟಿಂಗ್ ಲಿಸ್ಟಿಗೆ [:http://www.sharma-home.net/pipermail/kannada/2005-September/000443.html|ಕಳುಹಿಸಿದ ಪತ್ರ]ದಿಂದ)
ಸಾಫ್ಟ್ವೇರ್ ಜಗತ್ತಿನಲ್ಲಿ ಪ್ರಸಿದ್ಧಿಯನ್ನು ಪಡೆದ 'Joel on Software' (ಜೋಎಲ್ ಎಂಬ ತಂತ್ರಜ್ಞರ ಸಾಫ್ಟ್ವೇರ್ ಬಗ್ಗೆ ಉಪನ್ಯಾಸಗಳು) ಕನ್ನಡದಲ್ಲಿ ಲಭ್ಯವಿದೆ.
ಕನ್ನಡದಲ್ಲಿ ಓದಿ ಆನಂದ ಪಡೆಯಬೇಕೆಂದು ಆಶಿಸಿದವರು [:http://kannada.joelonsoftware.com/index.html|ಈ ಲಿಂಕ್…
ವಿಧ: ಚರ್ಚೆಯ ವಿಷಯ
September 01, 2005
ಕನ್ನಡ ಚಿತ್ರಗಳಲ್ಲಿ ಎನ್ಗ್ಲಿಶ್ ಪದಗಳು ಹೊಸದೆನಲ್ಲ. ಬಹಳ ವರ್ಷದ ಹಿಂದೆ ಡಾ.ರ್‍ಆಜ್ ಅವರೆ ಕನ್ನಡದಲ್ಲಿ ಹಡಿದ್ದರೆ, ಒಂದಲ್ಲ ೨ ಹಡುಗಳು "ಇಫ಼್ ಯು ಕಮ್ ಟುಡೇ","ಲವ್ ಮಿ ಅರೆ ಹೇಟ್ ಮಿ". ಡಾ. ರ್‍ಅಜ್ ರಿಂದ ಹಿಡಿದು ಪುನಿತ್ ರವರ ವರೆಗೆ ಬಹಳ ಹಡು ಆಂಗ್ಲ ಪದಗಳನ್ನು ಹೊಂದಿದೆ. ಕನ್ನಡ ಚಿತ್ರಗಳಲ್ಲಿ ಇದರ ಅವಶ್ಯಕತೆ ಎಷಟರ ಮಟ್ಟಿಗೆ ಇದೆ?
ವಿಧ: Basic page
August 31, 2005
ಕನ್ನಡ ಆಡಿಯೋ ವೇದಿಕೆ ಮತ್ತು ಓರ್ಕುಟ್ಟಿನಲ್ಲಿ ನನಗೆ ಕೆಲವರು ಫ್ಯಾನುಗಳು ಇದ್ದಾರೆ. ಅವರುಗಳ ವಿಶ್ವಾಸಕ್ಕೆ ನನ್ನದೊಂದು ಕಾಣಿಕೆ ತಯಾರು ಮಾಡಿದ್ದೆ. ಅದು ಹೀಗಿದೆ.
ನನ್ನೂರಿನಲಿ ಸೆಖೆ, ಬಲು ಸೆಖೆ
ಮೈ ಅಂಟು ಅಂಟಾಗಿಸುವ ಬೆವರಿನ ಸೆಖೆ
ಎಂದೂ ಎಲ್ಲೂ ಚಾಲ್ತಿಯಲ್ಲಿರಬೇಕು ಫ್ಯಾನು
ಲೋಕಲ್ಲಿನಲಿ ಬೆವರು ಒರೆಸಿಕೊಳ್ಳದಿರುವುದೇ ಫ್ಯಾಷನ್ನು
೯ ರಿಂದ ೫ ರವರೆಗೆ ಇರುವುದು ಏರ್ ಕಂಡೀಷನ್ನು
ಮನೆಯಲ್ಲೆಲ್ಲೂ ಸುತ್ತುತ್ತಿರುವುದು ಫ್ಯಾನು
ಫ್ಯಾನು ತಿರುಗದಿದ್ದರೆ ತಿರುಗುವುದೆಲ್ಲರ ತಲೆ…
ವಿಧ: Basic page
August 31, 2005
ಈ ಪವಿತ್ರ ಭೂಮಿಯ ಹೆಂಗಳೆಯರು ಕಾಣಿಸಿಕೊಂಡಿದ್ದು ಪುತ್ರವಾತ್ಸಲ್ಯದ ಮಾತೃಗಳಾಗಿ, ಭ್ರಾತೃವಾತ್ಸಲ್ಯದ ಭಗಿನಿಗಳಾಗಿ, ಪತಿಭಕ್ತಿಯುಳ್ಳ ಪತ್ನಿಯಾಗಿ, ಮತ್ತು ಅಂತರಂಗದ ಸಖಿಯಾಗಿ. ಇದು ನಮ್ಮ ಸಂಸ್ಕೃತಿ. ಸ್ತ್ರೀ ಮನಸ್ಸು ಇದರಿಂದಾಚೆ ಹೋಗಲಾರದು. ಅವಳು ಭಾವನೆಗಳಿಗೆ ಬೆಲೆಕೊಡುತ್ತಾಳೆ. ಅದರ ಜೊತೆಯಾಗಿಯೇ ಬೆಳೆಯುತ್ತಾಳೆ. ಎಲ್ಲಿಯತನಕ ಭಾವನೆಗಳು ಬದುಕಿರುವುದೋ ಅಲ್ಲಿಯವರೆಗೆ ಸ್ತ್ರೀ ಅಂದರೆ ಒಂದೇ ಅರ್ಥ.
ಪುರುಷ ಮತ್ತು ಸ್ತ್ರೀ ಇವೆರಡೂ ಭಿನ್ನ ಸೃಷ್ಟಿ.ಆದರೆ ಯಾವುದೇಒಂದು ಪ್ರಭಲ ಸೃಷ್ಟಿ ಅಲ್ಲ.…