ವಿಧ: Basic page
August 31, 2005
ಅದೊಂದು ಝೆನ್ ದೇವಾಲಯ. ಅಲ್ಲಿನ ನಿವಾಸಿಗಳನ್ನು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಸೋಲಿಸಿದ ಸಂನ್ಯಾಸಿಗೆ ಅಲ್ಲಿರಲು ಅವಕಾಶ ದೊರೆಯುತ್ತಿತ್ತು.
ಜಪಾನಿನ ಉತ್ತರಭಾಗದಲ್ಲಿದ್ದ ಆ ದೇವಾಲಯದಲ್ಲಿ ಇಬ್ಬರು ಸನ್ಯಾಸಿಗಳಿದ್ದರು. ದೊಡ್ಡವನು ತುಂಬ ಓದಿಕೊಂಡಿದ್ದ, ಚಿಕ್ಕವನು ಮೂರ್ಖ. ಅವನಿಗೆ ಇದ್ದದ್ದು ಒಂದೇ ಕಣ್ಣು.
ಅಲೆಮಾರಿ ಸನ್ಯಾಸಿಯೊಬ್ಬ ಅಲ್ಲಿಗೆ ಬಂದ. ದೇವಾಲಯದಲ್ಲಿ ಉಳಿಯಲು ಅವಕಾಶ ಕೇಳಿದ. ದೊಡ್ಡ ಸನ್ಯಾಸಿ ಅಂದು ದಿನವೆಲ್ಲ ಓದಿ, ಬರೆದು, ವಾದ ಮಾಡಿ ಸುಸ್ತಾಗಿದ್ದ. ಆದ್ದರಿಂದ…
ವಿಧ: ಬ್ಲಾಗ್ ಬರಹ
August 30, 2005
ನಿನ್ನೆ ನನ್ನ ರಿಲಯನ್ಸ್ ಫೋನಿಗೆ ಒಂದು ಸಂದೇಶ ಬಂತು. ಅದನ್ನು ತೆರದು ನೋಡಿದಾಗ ಆಶ್ವರ್ಯವಾಯಿತು. ಅದು ಅಚ್ಚ ಕನ್ನಡದಲ್ಲಿತ್ತು. ಚಿತ್ರ ನೋಡಿ.
ರಿಲಯನ್ಸಿನಲ್ಲಿ ಕನ್ನಡ
ಈಗಾಗಲೇ ಹಚ್ ಕಂಪೆನಿಯವರ ಕನ್ನಡ ವಿರೋಧಿ ನೀತಿ ಬಗ್ಗೆ ಚರ್ಚೆ ನಡೆದುದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ರಿಲಯನ್ಸ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬಹುದು. ಹಾಗೆಂದು ಹೇಳಿ ನಾನು ರಿಲಯನ್ಸ್ ಪರ ಇದ್ದೇನೆ ಎಂದು ತಿಳಿದುಕೊಳ್ಳಬೇಡಿ. ಅವರ ಸೇವೆ ಬಗ್ಗೆ ನನಗೆ ಹಲವು ಅಸಮಾಧಾನಗಳಿವೆ. ಅವುಗಳ ಬಗ್ಗೆ ಈಗ ಬೇಡ.…
ವಿಧ: ಬ್ಲಾಗ್ ಬರಹ
August 30, 2005
ಹಾರುವವುಗಳಲ್ಲಿ ವಿಮಾನವನ್ನೂ, ಎರಡು ಕಾಲಿನವುಗಳಲ್ಲಿ ಮನುಷ್ಯರನ್ನೂ, ನಾಲ್ಕು ಕಾಲಿನವುಗಳಲ್ಲಿ ಕುರ್ಚಿ, ಮೇಜುಗಳನ್ನು ಮಾತ್ರ ತಿನ್ನದೇ ಬಿಟ್ಟಿರುವ ನನ್ನಂಥ ಕನ್ನಡಿಗರಿಗೆ ಈ ಪ್ರಶ್ನೆ ಆಗಾಗ ಕಾಡುತ್ತಿರುತ್ತದೆ. ಹಾಗಾಗಿ ಆಹಾರದ ವಿಷಯದಲ್ಲಿ ನಮ್ಮ ಕನ್ನಡಾಭಿಮಾನ ಸ್ವಲ್ಪ ಕಡಿಮೆಯೇ. ಇಲ್ಲಿ ನಾವು ಕನ್ನಡಾಭಿಮಾನಿಗಳಾಗಿಬಿಟ್ಟರೆ ಕೇವಲ ಮಾಂಸದ ‘ಸಾರು’, ಮಾಂಸದ ‘ಪಲ್ಯ’ ಇಲ್ಲವೇ ಮೀನಿನ ‘ಸಾರು’, ‘ಪಲ್ಯ’ಗಳನ್ನೇ ತಿನ್ನಬೇಕಾಗುತ್ತದೆ.
ಭಿ(ಭೀ?).ಪ. ಕಾಳೆಯವರು ಹಿಂದೊಮ್ಮೆ ತಮ್ಮ ವಿಲನ್ ಒಬ್ಬನಿಗೆ…
ವಿಧ: ಚರ್ಚೆಯ ವಿಷಯ
August 29, 2005
ಸರಿಯಾಗಿ ಒಂದು ವರ್ಷದ ಹಿಂದೆ ಚಿತ್ರಕಲೆ, ಕಂಪ್ಯೂಟರ್ ಗ್ರಾಫಿಕ್ಸಿಗೆ ಸೂರೆ ಹೋಗಿ 'ಕಂಜ್ಯೂರರ್' ಎಂಬ ಹೆಸರಲ್ಲಿ [:http://conjurer.deviantart.com/|ಡೀವಿಯೆಂಟ್ ಆರ್ಟ್ ತಾಣದಲ್ಲಿ ಖಾತೆಯೊಂದನ್ನು ತೆರೆದಿದ್ದೆ]. ಆಗ ಪರಿಚಯವಾದವರು ಹಲವು ಚಿತ್ರಕಾರರು, ಕಲಾಕಾರರು, ಗ್ರಾಫಿಕ್ಸ್ ಪಂಡಿತರು. ನನ್ನ ಇದೆಲ್ಲದರ ತಿಳುವಳಿಕೆ ಎಷ್ಟರ ಮಟ್ಟಿಗೆ (ಕಳಪೆಯಾಗಿ) ಇರುವುದೆಂಬ ಪರಿಚಯ ಮಾಡಿಕೊಟ್ಟದ್ದು ಅದೇ ಸಮುದಾಯವೆ!
ಆಗೊಮ್ಮೆ ಮಲೇಶಿಯಾದ ಥಿನೇಶ್ವರಿ ಗೋವಿಂದಸಾಮಿ ಎಂಬುವರ ಪರಿಚಯವಾದಾಗ ಅವರ…
ವಿಧ: ಬ್ಲಾಗ್ ಬರಹ
August 29, 2005
ಸಂಪದಕ್ಕೆ ಲಾಗ್ ಇನ್ ಆದಾಗಲೆಲ್ಲಾ, ರಂ . ಶ್ರೀ. ಮುಗಳಿಯವರ ಈ ಮಾತು 'ಅನುಭವಾಮೃತಗಳ'ಲ್ಲಿ ಕಣ್ಣಿಗೆ ಬೀಳುತ್ತಿತ್ತು. ಇದು ನನಗೆ ಬಹಳ ಪ್ರಿಯ ವಿಷಯಗಳಾದ ಕನ್ನಡ ಹಾಗೂ ಕರ್ನಾಟಕದ ಇತಿಹಾಸಗಳನ್ನು ನೆನಪಿಗೆ ತರುತ್ತಿದ್ದವು. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದಾಗ ಆಗಾಗ, ವಾಚನಾಲಯಗಳಲ್ಲಿ ಓದಿದ್ದ, ಕನ್ನಡ ನುಡಿ, ಸಾಹಿತ್ಯದ ಬಗೆಗಿನ ಪುಸ್ತಕಗಳಿಂದ ನಾನು ತಿಳಿಕೊಂಡದ್ದನ್ನು ಬರೆಯೋಣವೆನಿಸಿದೆ. ಕರ್ನಾಟಕದ ಏಕೀಕರಣಕ್ಕಾಗಿ ನಡೆಯುತ್ತಿದ್ದ ಹೋರಾಟದ ಸಮಯದಲ್ಲಿ, ಶ್ರೀಯುತರುಗಳಾದ, ರಂ. ಶ್ರೀ.…
ವಿಧ: ರುಚಿ
August 29, 2005
ಮ್ಯಾಗಿ ಪ್ಯಾಕಿನ ಹಿಂಬದಿಯಲ್ಲಿ ಬರೆದ ಇನ್ಸ್ಟ್ರಕ್ಶನ್ಸ್ ನೋಡಿಕೊಂಡು ಮ್ಯಾಗಿ ಮಾಡಿಟ್ಟುಕೊಳ್ಳಿ. ಅದನ್ನಾರಲು ಬಿಡಿ.
ಒಂದಷ್ಟು ಕಡಲೇಹಿಟ್ಟಿಗೆ (ಸ್ವಲ್ಪ ಮಾತ್ರ) ಹೆಚ್ಚಿದ ಈರುಳ್ಳಿ, ಮೆಣಸಿನಕಾಯಿ ಜೊತೆಗೆ ಬೆರೆಸಿಟ್ಟುಕೊಂಡು ಮೆಣಸಿನಪುಡಿ, ಕೊತ್ತಂಬರಿ ಸೇರಿಸಿ. ಈ ಮಿಶ್ರಣಕ್ಕೆ ತಣ್ಣಗಾದ ಮ್ಯಾಗಿ ಸೇರಿಸಿ ಚೆನ್ನಾಗಿ ಬೆರೆಯುವಂತೆ ಕದಡಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಪಕೋಡದಂತೆ ಕರೆಯಿರಿ. ರೆಡೆಯಾಯ್ತು ಮ್ಯಾಗಿ ಪಕೋಡ ;)
ಯಾವುದಾದರೂ sauce ಅಥವಾ ಟೊಮಾಟೊ ಕೆಚಪ್ ಜೊತೆ ತಿನ್ನಬಹುದು.…
ವಿಧ: ಚರ್ಚೆಯ ವಿಷಯ
August 27, 2005
ನಾನು ಈ ತಾಣಕ್ಕೆ ಹೊಸಬ.
ನನ್ನ ನಾಮಧೇಯ ವೆಂಕಟೇಶ.
ಊರು: ಅಟ್ಲಾಂಟ.
ಕೆಲಸ: ಸಂಪದ ದಲ್ಲಿ ಹರಟೆ.
ಈ ತಾಣ ನನಗೆ ಬಹಳ ಸಂತಸ ತಂದಿತು.
ಕನ್ನಡದ ಅಕ್ಷರಗಳನ್ನು ನೋಡಿ
ನನಗೆ ಮಹದಾನಂದವಾಯ್ತು.
ನನಗೆ ನಮ್ಮ ತ.ವಿ.ಶ್ರೀ. ಇಂದ ಈ ತಾಣದ
ಬಗ್ಗೆ ತಿಳಿಯಿತು.
ಈ ತಾಣ ಮಾಡಿದ ನಾಡಿಗ್ ಅವರಿಗೆ
ನನ್ನ ಶುಭ ಕಾಮನೆಗಳು.
ಇಲ್ಲಿ ಹೆಚ್ಚಿನ ಗೆಳೆಯರು ಸಿಗುತ್ತಾರೆಂಬ
ಆಶಯದೊಂದಿಗೆ
-ನುಡಿಕನ್ನಡ.
ವಿಧ: ಬ್ಲಾಗ್ ಬರಹ
August 26, 2005
ಚಿತ್ರ ಕೃಪೆ: [:http://cricinfo.com|ಕ್ರಿಕ್ ಇನ್ಫೊ]
ಶ್ರೀಲಂಕಾದಲ್ಲಿ ಹೀನಾಯವಾಗಿ ಸೋತು ಬಂದು ಇನ್ನೂ ವಾರಗಳೇ ಕಳೆದಿಲ್ಲ, ಭಾರತ ತಂಡಕ್ಕೆ... ಆಗಲೇ ಅಷ್ಟು ನಮ್ಮ ಯೋಗ್ಯತೆಗೆ ಸಾಲದು ಎಂಬಂತೆ ಮತ್ತೊಂದು ಬಾರಿ ಇನ್ನಷ್ಟು ಹೀನಾಯವಾಗಿ ಸೋತಿದ್ದಾರೆ.
ಇಂದು ಅವರನ್ನು ಮನೆಗೋಡಿಸಿ ಮೊದಲೇ ಕೆಟ್ಟದಾಗಿ ಆಡುತ್ತಿರುವ ಭಾರತ ತಂಡವನ್ನು ಇನ್ನೂ ಕೆಟ್ಟದಾಗಿ ಕಾಣುವಂತೆ ಮಾಡಿದವರು ಬ್ರಿಟಿಷ್ ಧೂತ ವಿಭಾಗದ ಬಾಂಡ್ ಅಲ್ಲ... ನ್ಯೂಜಿಲೆಂಡಿನ ಬಾಂಡ್. 'ಪಾಪ ಈಗ ತಾನೆ ಇಂಜುರಿಯಿಂದ ವಾಪಸ್ ಬಂದಿದ್ದಾನೆ…
ವಿಧ: Basic page
August 26, 2005
ಪತಂಜಲಿಯ ಯೋಗ ಭಾಗ ೫
ಐದನೆಯ ಲೇಖನ
ಬಾಹ್ಯ ಸಂವೇದನೆಗಳಿಂದ ಬರುವ ವೃತ್ತಿಗಳನ್ನು ತಡೆಯುವ ಬಗೆಯನ್ನು ಸಮಾಧಿ ಪಾದದಲ್ಲಿ ನೋಡಿದೆವು. ಆದರೆ ಮನದೊಳಗೇ ಇರುವ ಕ್ಲೇಷಗಳಿಂದ ಒಳಗೇ ವೃತ್ತಿಗಳು ಏಳುತ್ತದೆ. ಆ ವೃತ್ತಿಗಳನ್ನೂ ತಡೆಯುವುದನ್ನು ಸಾಧನ ಪಾದದಲ್ಲಿ ಕಲಿಯಬಹುದು.
ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರನ ಬಗ್ಗೆ ಆಳವಾದ ಚಿಂತನೆ ಕ್ರಿಯಾಯೋಗ.ಯೋಗ ಸೂತ್ರ ಪಾದ೨. ಸೂತ್ರ.೧ ಇಲ್ಲಿ ತಪಸ್ಸು ಎಂದರೆ ದೇಹಕ್ಕೆ ತೊಂದರೆಯಾದರೂ ಮನಸ್ಸು ಚಂಚಲವಾಗದ ಸ್ಥಿತಿಯನ್ನು ಹೊಂದಲು ಮಾಡುವ ಪ್ರಯತ್ನ. ಸ್ವಾಧ್ಯಾಯ…
ವಿಧ: Basic page
August 26, 2005
(ಈ ಲೇಖನವನ್ನು ೪-೭-೨೦೦೩ರಲ್ಲಿ ಬರೆಯಲಾಗಿತ್ತು)
ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೇ ಮುಂಚೂಣಿಯಲ್ಲಿದೆ. ಖ್ಯಾತ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಬೆಂಗಳೂರನ್ನು ತಮ್ಮ ಮನೆಯನ್ನಾಗಿಸಿಕೊಂಡಿವೆ. ಕರ್ನಾಟಕ ಸರಕಾರವೂ ವರ್ಷಕ್ಕೊಮ್ಮೆ ೫ ದಿನಗಳ ಕಾಲ ಐಟಿ.ಕಾಂ ಎಂಬ ಮೇಳ ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಒತ್ತು ನೀಡುತ್ತಲೇ ಬಂದಿದೆ. ಮುಖ್ಯಮಂತ್ರಿ ಎಸ್.ಎಂ. ಕೃಷ್ಣರಂತೂ ಹೈಟೆಕ್ ಮುಖ್ಯಮಂತ್ರಿ ಎಂಬ…