ಎಲ್ಲ ಪುಟಗಳು

ಲೇಖಕರು: olnswamy
ವಿಧ: Basic page
September 13, 2005
ಯುದ್ಧ ಕಲೆಯನ್ನು ಅಭ್ಯಾಸ ಮಾಡುತ್ತಿದ್ದ ಒಬ್ಬ ಶಿಷ್ಯ ಗುರುವನ್ನು ಕೇಳಿದ: "ಗುರುವೇ, ನಾನು ಯುದ್ಧ ಕಲೆಯನ್ನು ಕುರಿತು ಎಲ್ಲವನ್ನೂ ತಿಳಿಯಬೇಕೆಂದಿದ್ದೇನೆ. ನಿಮ್ಮೊಡನೆ ಕಲಿಯುತ್ತಿರುವುದರೊಂದಿಗೆ ಬಿಡುವಿನ ಸಮಯದಲ್ಲಿ ಇನ್ನೊಬ್ಬ ಗುರುವಿನ ಬಳಿ ಯುದ್ಧ ಕಲೆಯ ಮತ್ತೊಂದು ಶೈಲಿಯನ್ನೂ ಅಭ್ಯಾಸ ಮಾಡಬೇಂದಿರುವೆ. ನಿಮಗೇನು ಅನ್ನಿಸುತ್ತದೆ?" "ಏಕ ಕಾಲದಲ್ಲಿ ಎರಡು ಮೊಲಗಳನ್ನು ಅಟ್ಟಿಸಿಕೊಂಡು ಹೋದ ಬೇಟೆಗಾರನಿಗೆ ಯಾವ ಮೊಲವೂ ಸಿಗುವುದಿಲ್ಲ" ಎಂದ ಗುರು. [ಮನಸ್ಸನ್ನು ಮತ್ತೊಂದು ಕಡೆಗೆ ಎಳೆಸದೆ…
ಲೇಖಕರು: olnswamy
ವಿಧ: Basic page
September 12, 2005
“ಭವಿಷ್ಯ” ಎನ್ನುತ್ತಿರುವಂತೆಯೇ ಮೊದಲ ಅಕ್ಷರ ಆಗಲೇ ಭೂತಕ್ಕೆ ಸೇರಿಬಿಟ್ಟಿರುತ್ತದೆ. “ಮೌನ” ಎನ್ನುತ್ತಿರುವಂತೆಯೇ ಅದನ್ನು ಕೊಂದಿರುತ್ತೇನೆ. “ಶೂನ್ಯ” ಎನ್ನುತ್ತಿರುವಂತೆಯೇ ಅದನ್ನು ಯಾವುದರಲ್ಲೂ ಹಿಡಿದಿಡಲಾಗದ್ದು ಎಂದು ಹೊಳೆಯುತ್ತದೆ. ವಿಸ್ಲಾವಾ ಝಿಂಬ್ರೋಸ್ಕ [ಹೇಳಲಾಗದ್ದು ನಿಜವಾಗಿರುವಷ್ಟು ಹೇಳಬಹುದಾದ್ದು ನಿಜವಾಗದು, ಅಲ್ಲವೇ? ಇದು ನನ್ನನ್ನು ಬಹಳ ದಿನದಿಂದ ಕಾಡಿರುವ ಇನ್ನೊಂದು ಕವಿತೆ]
ಲೇಖಕರು: tvsrinivas41
ವಿಧ: Basic page
September 12, 2005
ಅಪ್ಪಣ್ಣ ಭಟ್ಟರನ್ನು ಜನರು ಅಪರ ಭಟ್ಟರು ಎಂದೂ ಕರೆಯುತ್ತಿದ್ದರು. ಪ್ರೀತಿಯಿಂದ ಆ ರೀತಿ ಕರೆಯುತ್ತಿದ್ದರೋ ಏನೋ, ಆದರೂ ನನ್ನ ಪ್ರಕಾರ ಅಪ್ಪಣ್ಣ ಭಟ್ಟರು ಅಪರ ಕರ್ಮದಲ್ಲೇ ಜಾಸ್ತಿ ಸಂಪಾದಿಸುತ್ತಿದ್ದರಿಂದ ಮತ್ತು ಪೂರ್ವ ಪ್ರಯೋಗದ ಬಗ್ಗೆ ಜಾಸ್ತಿ ಒಲವು ಇಟ್ಟಿರದಿದ್ದರಿಂದ ಹಾಗೆನ್ನುತ್ತಿದರು ಎಂದು ತಿಳಿದಿದ್ದೇನೆ. ಇಲ್ಲಿ ಒಂದು ಸಣ್ಣ ಸ್ಪಷ್ಟೀಕರಣ ನೀಡಬಯಸುವೆ. ಅಪರ ಕರ್ಮ ಎಂದರೆ ವ್ಯಕ್ತಿ ಸತ್ತ ಮೇಲೆ ಹನ್ನೆರಡು ದಿನಗಳು ಮಾಡುವ ಅಂತ್ಯಕ್ರಿಯೆ. ವ್ಯಕ್ತಿ ಸತ್ತ ನಂತರ ಅವನ ಶವ ಸಂಸ್ಕಾರವಾದ…
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
September 12, 2005
ಇಂದು ಬೆಳಗ್ಗೆ ಎಂದಿನಂತೆ ಇಲ್ಲಿಯ ಆನ್‍ಲೈನ್ ಪತ್ರಿಕೆಯಾದ ಮಿಡ್‍ಡೇ ಓದಲು ಹೋದಾಗ ಮೊದಲು ಕಂಡದ್ದೇ ಹೃದಯ ಕಲಕುವಂತಹ ಸುದ್ದಿ. ಅದೇನೆಂದರೆ ಮೊನ್ನೆ ವಿಪರೀತ ಮಳೆಯಾಗುತ್ತಿದ್ದು ಜನರೆಲ್ಲರಲ್ಲೂ ಜುಲೈ ೨೬ರ ಕಹಿ ನೆನಪಾಗಿ ದಾದರ ಸ್ಟೇಷನ್ನಿನಲ್ಲಿ ಲೋಕಲ್ ಟ್ರೈನ್ ಹತ್ತಲು ವಿಪರೀತ ಜನಸಂದಣಿ. ರೈಲ್ವೇ ಹಳಿಗಳ ಮೇಲೆ ನೀರು ನಿಂತು ಟ್ರೈನ್ ಸಂಚಾರ ಬಹಳ ಕಡಿಮೆಯಾಗಿದ್ದಿತ್ತು. ಜನರೆಲ್ಲರಿಗೂ ಎದುರಿಗೆ ಆಗೊಮ್ಮೆ ಈಗೊಮ್ಮೆ ಬರುವ ಲೋಕಲ್ ಟ್ರೈನ್ ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಗಾಡಿ ಬಂದಾಗ…
ಲೇಖಕರು: olnswamy
ವಿಧ: Basic page
September 12, 2005
ನಮ್ಮೊಳಗೆ ಆತ್ಮವಿರುತ್ತದೆ-ಕೆಲವು ಬಾರಿ. ಇರಬೇಕೆಂದು ಬಯಸಿದರೂ ಯಾರ ಆತ್ಮವೂ ಸದಾ ಕಾಲವೂ ಜೊತೆಗೆ ಇರುವುದೇ ಇಲ್ಲ. ದಿನಗಳು ದಿನಗಳು ವರ್ಷಗಳು ವರ್ಷಗಳು ಆತ್ಮವಿರದೆಯೇ ಉರುಳಿಹೋಗುವವು. ಕೆಲವೊಮ್ಮೆ ಆತ್ಮ ಚೆನ್ನಾಗಿ ಸೆಟಲ್ ಆಗಿರುತ್ತದೆ- ಎಳೆತನದ ಭಯ ಉದ್ವೇಗಗಳಲ್ಲಿ ಅಯ್ಯೋ ವಯಸಾಯಿತೆ ಎಂದು ತಟ್ಟನೆ ಆಗುವ ಆಶ್ಚರ್ಯದಲ್ಲಿ. ಕುರ್ಚಿ ಮೇಜು ಸೋಫಾಗಳನ್ನು ಅತ್ತಿತ್ತ ಸರಿಸುವ ಹೆಣಭಾರದ ಲಗೇಜು ಹೊರುವ ಸಂದರ್ಭಗಳಲ್ಲಿ ಆತ್ಮ ತನ್ನ ಸಹಾಯ ಹಸ್ತ ಚಾಚುವುದೇ ಇಲ್ಲ. ಆದರೆ ಮಾಂಸ ಕೊಚ್ಚುವಾಗ ಅಥವ ಯಾವುದೋ…
ಲೇಖಕರು: Rohit
ವಿಧ: ಬ್ಲಾಗ್ ಬರಹ
September 12, 2005
ಕರ್ನಾಟಕದಿಂದ ಹೊರಬಂದಮೇಲೆ ನನಗೀಗ ಕನ್ನಡ ಮ್ಯಾಗಜೀನ್ಗಳು, ಪುಸ್ತಕಗಳೇ ಕನ್ನಡದ ಕೊಂಡಿಗಳು. ಬೆಂಗಳೂರಿನಲ್ಲಿ ಅಪರೂಪಕ್ಕೊಮ್ಮೆ ಕಣ್ಣಾಡಿಸುತ್ತಿದ್ದ ಮಯೂರವನ್ನು ಇಲ್ಲಿ ಪ್ರತಿ ತಿಂಗಳು ಕೊಂಡು ಒಂದೂ ಪುಟವನ್ನು ಬಿಡದೆ ಓದುತ್ತೇನೆ...ವಿಶೇಷವಾಗಿ ಈ ತಿಂಗಳಿನ ಸಂಚಿಕೆ ಹಾಗೆ ಓದಿಸಿಕೊಂಡುಹೋಯಿತು. ಈ ಸಂಚಿಕೆ ಶ್ರಾವಣದ ವಿಶೇಷ. ಹಾಗೇ ಪ್ರಕಟಿತ ಸಾಮಗ್ರಿಯಲ್ಲೂ ನಾವಿನ್ಯತೆ. ಜಿ.ಎಚ್.ನಾಯಕರ ಆತ್ಮಕಥನದ ಒಂದು ಭಾಗ,'ಮೀನು ಮಾಂಸ ಪುರಾಣ' ಅಂಕೋಲೆಯ ಸುತ್ತಮುತ್ತಲಿನ ಜೀವನವನ್ನು ಕಣ್ಣಿಗೆ…
ಲೇಖಕರು: subramanya
ವಿಧ: ಬ್ಲಾಗ್ ಬರಹ
September 12, 2005
ಸರ್ವರಿಗೂ ಶುಭವಾಗಲಿ. ನಿರಂತರವಾಗಿ ಎಲ್ಲೆಡೆಯೂ ಕನ್ನಡವನ್ನು ಉಪಯೋಗಿಸೋಣ. ತಾಯಿಭಾಷೆಯನ್ನು ಉಳಿಸಿ, ಬೆಳೆಸೋಣ... ಸಿರಿಗಂಧದ ಕಂಪನ್ನು ಹರಡೋಣ... ಕನ್ನಡದ ಸೊಗಡನ್ನು ಅಂತರ್ಜಾಲದಲ್ಲಿ ಪಸರಿಸುತ್ತಿರುವ ಸಂಪದ ತಂಡದವರಿಗೆ ನನ್ನ ಶುಭಾಶಯಗಳು.. ಪ್ರತಿಯೊಬ್ಬ ಸದಸ್ಯರು ಕನಿಷ್ಟ ೧೦ ಹೊಸ ಸದಸ್ಯರನ್ನು ಸಂಪದಕ್ಕೆ ಸೇರಿಸುವಂತಾಗಲಿ. ಕನ್ನಡ ನಾಡಿನಿಂದ ಹೊರಗಿರುವ ಎಲ್ಲ ಕನ್ನಡಿಗರಿಗೂ ಸಂಪದದ ಬಗ್ಗೆ ಗೊತ್ತಾಗಲಿ. ಧನ್ಯವಾದಗಳೊಂದಿಗೆ, ಸುಬ್ರಹ್ಮಣ್ಯ
ಲೇಖಕರು: olnswamy
ವಿಧ: Basic page
September 12, 2005
ಒಬ್ಬಾತನ ಹೆಂಡತಿಗೆ ಬಹಳ ಕಾಯಿಲೆಯಾಗಿತ್ತು. ಗಂಡನನ್ನು ಸಮೀಪಕ್ಕೆ ಕರೆದು ಹೇಳಿದಳು-- “ನನಗೆ ನಿನ್ನ ಮೇಲೆ ತುಂಬ ಪ್ರೀತಿ. ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ಆದರೆ ಸಾವು ಸಮೀಪವಿದೆ. ನಿನ್ನನ್ನು ಬಿಟ್ಟು ಇರಲಾರೆ. ನನ್ನ ಪ್ರೀತಿಗೆ ನೀನು ಮೋಸ ಮಾಡಲಾರೆಯೆಂಬ ನಂಬಿಕೆ ನನಗಿದೆ. ನಾನು ಸತ್ತ ಮೇಲೆ ನೀನು ಬೇರೆಯ ಹೆಂಗಸರನ್ನು ನೋಡುವುದಿಲ್ಲ, ಮದುವೆಯಾಗುವುದಿಲ್ಲ ಎಂದು ನನಗೆ ಮಾತು ಕೊಡಬೇಕು. ನೀನು ಮಾತಿಗೆ ತಪ್ಪಿದರೆ ಭೂತವಾಗಿ ಬಂದು ಕಾಡುತ್ತೇನೆ” ಹೆಂಡತಿ ಸತ್ತ ಕೆಲವು ತಿಂಗಳು ಗಂಡ ಬೇರೆ ಯಾವ…
ಲೇಖಕರು: shashi
ವಿಧ: ಚರ್ಚೆಯ ವಿಷಯ
September 12, 2005
- ಶಶಿಶೇಖರ (GIMP ಉಪಯೋಗಿಸಿ ಗೀಚಿದ್ದು)
ಲೇಖಕರು: olnswamy
ವಿಧ: ಬ್ಲಾಗ್ ಬರಹ
September 11, 2005
http://www.ethnolog… ಎಂಬ ತಾಣದಲ್ಲಿ ಇದೀಗ ಜಗತ್ತಿನ ಭಾಷೆಗಳ ಪೈಕಿ ಯಾವ ಯಾವ ಭಾಷೆಗಳು ವಿನಾಶದ ಅಂಚಿನಲ್ಲಿವೆ ಎಂಬ ಬಹು ವಿಸ್ತೃತ ಮಾಹಿತಿ ಇದೆ. ಆಸಕ್ತರು ನೋಡಿ. ಸದ್ಯದಲ್ಲೆ ಅಲ್ಲಿ ಸಂಗ್ರಹಿಸಿದ ವಿವರಗಳನ್ನು ಈ ಬ್ಲಾಗ್ ನಲ್ಲಿ ನಿಮ್ಮೊಡನೆ ಹಂಚಿಕೊಳ್ಳುವೆ. ಭಾಷೆಗಳು ಕಣ್ಮರೆಯಾಗುವುದೆಂದರೆ ಬದುಕಿನ ವೈವಿಧ್ಯವೇ ಕಳೆದುಹೋದಂತೆ. ನೆನಪಿರಲಿ, ಕನ್ನಡ ಕೂಡ ಈ ಸರ್ವೆ ಪ್ರಾಕಾರ ಅಪಾಯದ ಅಂಚಿನಲ್ಲಿರುವ ಭಾಷೆ. ಈ ಬಗ್ಗೆ ತಿಳಿಯಲು ಕುತೂಹಲವಿದೆಯೇ? ಶ್ರೀ ಸುಗತ ಅವರು ಬರೆದಿರುವ ಎಕುಶೆ…