ವಿಧ: Basic page
September 20, 2005
೩. ಆಚೆ ಈಚೆ
ಮುಲ್ಲಾ ಒಮ್ಮೆ ನದಿಯ ದಡದಲ್ಲಿ ಕೂತಿದ್ದ. ಇನ್ನೊಂದು ದಡದಲ್ಲಿದ್ದ ಒಬ್ಬಾತ “ಆಚೆ ದಡಕ್ಕೆ ಹೋಗುವುದು ಹೇಗೆ?” ಎಂದು ಕೂಗಿ ಕೇಳಿದ. ”ನೀನು ಆಗಲೇ ಆಚೆ ದಡದಲ್ಲಿದ್ದೀಯಲ್ಲ” ಎಂದು ಈ ದಡದಿಂದ ಮುಲ್ಲಾ ಕೂಗಿದ!
೪ ಒಂಟೆ
ಒಮ್ಮೆ ಮುಲ್ಲಾ ನಸ್ರುದ್ದೀನ್ ಒಂಟೆಯ ಮೇಲೆ ಕೂತು ಹಳ್ಳಿಹಗೆ ಬಂದ. ಒಂಟೆಗೋ ಬಹಳ ವೇಗವಿತ್ತು. ಕಣ್ಣು ಮುಚ್ಚಿತೆರೆಯುವುದರೊಳಗೆ ಇಡೀ ಹಳ್ಳಿ ಸುತ್ತಿ ಹೊರಟು ಹೋದ ಮುಲ್ಲಾ. ಜನರೆಲ್ಲ ಕಣ್ಣು ಬಿಟ್ಟುಕೊಂಡು ನೋಡುತ್ತನಿಂತಿದ್ದರು. ಮಾರನೆಯ ದಿನವೂ ಅದೇ ಕತೆ.…
ವಿಧ: ಬ್ಲಾಗ್ ಬರಹ
September 20, 2005
ಕಳೆದ ಎರಡು ಮೂರು ದಿನಗಳಿಂದ ವೈರಲ್ ಫೀವರ್ ನನಗಂಟಿಕೊಂಡು ಬೇರೇನೂ ಮಾಡದಾಗಿ, ಕೊನೆಗೆ ನನ್ನ ಇಂಗ್ಲಿಷ್ ಸ್ನೇಹಿತ "ಬೋರು ಹೊಡೆದಿದೆ, ಮ್ಯಾಕಿಗೊಂದು (Mac OS X ಗೆ ಒಂದು) ಯುನಿಕೋಡ್ ಫಾಂಟ್ ಮಾಡೋಣವಾ?" ಎಂದಾಗ ಓಗೊಟ್ಟೆ.
ಅವನಾರಿಸಿದ 'ಜನಕನ್ನಡ', 'ತುಂಗ' ಹಾಗೆ ಬದಲಾಯಿಸಲಾಗದೆಂದೂ, ಬದಲಾಯಿಸಬಲ್ಲ ಮುಕ್ತ ಲೈಸನ್ಸಿನ ಒಂದು ಫಾಂಟ್ ಹುಡುಕುವಾಗ ಕೇದಗೆ ಬಹಳ ಚೆನ್ನಾಗಿದೆಯೆನಿಸಿತು. ಸರಿ ಅದನ್ನೇ ಹಿಡಿದು ಶುರುವಾಯ್ತು... ಮೊದಲಿಗೆ ಅಕ್ಷರಗಳ ಪರಿಚಯ, ಕನ್ನಡ ಹೇಗೆ ಕಾಣುವುದೆಂಬುದಕ್ಕೆ 'ಸಂಪದ'…
ವಿಧ: ಚರ್ಚೆಯ ವಿಷಯ
September 19, 2005
ಗೂಗಲ್ ಅರ್ಥ್ನಲ್ಲಿ ಮಸುಕು ಮಸುಕಾಗಿ ಕಾಣುತ್ತಿದ್ದ ನಮ್ಮ ಬೆಂಗಳೂರು ಈಗ ಇನ್ನೂ ಸ್ಪಷ್ಟ ಹಾಗೂ ನಿಖರವಾಗಿ ಕಾಣ್ತಿದೆ. ನಾನಂತೂ ಇಲ್ಲೇ ಕೂತ್ಕೊಂಡು ನಮ್ಮನೆಗೊಂದು ಭೇಟಿ ಕೊಟ್ಟು ಬಂದೆ.
ವಿಧ: Basic page
September 19, 2005
ತುಂಬ ಹಿಂದೆ, ಅಂದರೆ ನಾನು ತೈವಾನಿನಲ್ಲಿದ್ದಾಗ, ನಾನು ಜಾಲಿಗನಾದ ಆರಂಭದ ದಿನಗಳಲ್ಲಿ, soc.culture.indian.karnatakaದಲ್ಲಿ ತರಲೆ ಪ್ರಶ್ನೆಗಳನ್ನು ಆಗಾಗ ಕೇಳುತ್ತಿದ್ದೆ. ಅವು ತುಂಬ ಜನಪ್ರಿಯವೂ ಆಗಿದ್ದವು. ಅದನ್ನೇ ಮತ್ತೆ ನನ್ನ ವಿಶ್ವಕನ್ನಡದಲ್ಲೂ ಮುಂದುವರಿಸಿದೆ. ಅವುಗಳನ್ನು ಓದಿದವರಿಗೆ ತರಲೆ ಪ್ರಶ್ನೆಗಳ ಪರಿಚಯವಿರಬಹುದು. ಒಂದು ಉದಾಹರಣೆ-
ಪ್ರ: ಕೋಳಿ ಯಾಕೆ ಮೊಟ್ಟೆ ಇಡುತ್ತದೆ?
ಉ: ಯಾಕೆಂದರೆ ಹಾಕಿದರೆ ಒಡೆಯುತ್ತದೆ, ಅದಕ್ಕೆ
ಈಗ ಕೆಲವು ಪ್ರಶ್ನೆಗಳು:
1. ಕೋಳಿ ಮೊದಲೋ,…
ವಿಧ: Basic page
September 19, 2005
ಅತ್ತ ವ್ಯಾಟಿಕನ್ ಸುದ್ದಿ!
ಇತ್ತ ವ್ಯಾಟ್ ಸುದ್ದಿ!!
ಈ ನಡುವೆ ಅಲ್ಲಲ್ಲಿ
ನೆಲ ನಡುಕ, ಜಲ ಪ್ರಳಯ!
ನೆಲವೂ ಸುರಕ್ಷಿತವಲ್ಲ!
ಜಲವೂ ಸಲಹುದಿಲ್ಲ!!
ದೇವನೊಬ್ಬನಿದ್ದಾನೆಂದರೆ
ಆತನ ಧೂತರೂ ನಮ್ಮನ್ನು
ನಡುಗಡ್ಡೆಯಲಿ ನಿಲ್ಲಿಸಿ
ದೈವಾಧೀನರಾದರು
ಅಲ್ಲೆಲ್ಲ 'ಅಂತಿಮ ಯಾತ್ರೆ....'
ಇಲ್ಲಿ ಅಶಾಂತಿಯ ಮಧ್ಯೆ 'ಬಸ್' ನ 'ಶಾಂತಿಯ ಯಾತ್ರೆ..'
ಈ ಮಧ್ಯೆ ಅಂದೆಂದೋ ಕೈಗೊಂಡ
'ದಂಡೀಯಾತ್ರೆ' ಯ ಮರು ಆಚರಣೆ!
ಇದೆಲ್ಲದರ ಗೊಡವೆ ಬೇಡ
ನಾವು ನಾವಾಗಿರೋಣಾ ಎಂದರೆ...
ಈ 'ದೇಹ' ದ ತುಂಬಾ ನೋವು...
ನೋವಿನ ಆಗರ.…
ವಿಧ: Basic page
September 19, 2005
ಡೀ.. ಡೀ...ಡಿಚ್ಚಿ...
ಡೀ.. ಡೀ...ಡಿಚ್ಚಿ...
ಎಂದು ಡಿಚ್ಚಿ ಹೊಡಿಯುತಿದ್ದ...
'ನೋ ಪಾರ್ಕಿಂಗ್' ಎಂಬ ಫಲಕದ ಕೆಳಗೇ ಪಾರ್ಕ್ ಮಾಡಿದ್ದ
ಕಾರಿನ ಕಿಟಕಿ ಗಾಜಿಗೆ.
ಆಡಲು, ಹಾಡಲು, ಆಡಾಡಿ....ಉಂಡು ಮಲಗಲು
ದಿಕ್ಕು ದಿಸೆ ಇಲ್ಲದ, ನನ್ನವರು ಎಂಬುವರಿಲ್ಲದ ಚಿಣ್ಣಗೆ
ಡಿಚ್ಚಿ ಹೊಡೆಯಲು ಯಾರು ಸಿಕ್ಕಾರು?
ಅನಾಥರಿಗೆ ಅನಾಥರೇ ದಿಕ್ಕು
ಆದರೆ
ಇವಗೆ ಇವನ ಪ್ರತಿರೂಪವೇ ದಿಕ್ಕು.
-ಸಂಕೇತ್ ಗುರುದತ್ತ
ವಿಧ: Basic page
September 19, 2005
ಗುರು ಬೆನ್ಕಿಯ ಬಳಿ ಶಿಷ್ಯನೊಬ್ಬ ಬಂದು ಗೋಳಾಡಿಕೊಂಡ. “ಗುರುವೇ, ನನಗೆ ತಡೆಯಲಾರದಷ್ಟು ಕೋಪ ಬಂದುಬಿಡುತ್ತದೆ. ಏನು ಮಾಡಲಿ? ಕೋಪವನ್ನು ಹೇಗೆ ಕಳೆದುಕೊಳ್ಳಲಿ?”
“ಬಹಳ ವಿಚಿತ್ರವಪ್ಪಾ ಇದು. ಎಲ್ಲಿ, ನಿನ್ನ ಕೋಪವನ್ನು ತೋರಿಸು, ನೋಡೋಣ” ಎಂದ ಗುರು.
“ಹೇಗೆ ಸಾಧ್ಯ? ಈಗ ಕೋಪವನ್ನು ತೋರಿಸಲಾರೆ” ಎಂದ ಶಿಷ್ಯ.
“ಹಾಗಾದರೆ ಯಾವಾಗ ತೋರಿಸಬಲ್ಲೆ?” ಎಂದು ಕೇಳಿದ ಗುರು.
“ಇದ್ದಕ್ಕಿದ್ದಂತೆ, ಯಾವಾಗಲಾದರೂ ತುಂಬ ಕೋಪ ಬಂದುಬಿಡುತ್ತದೆ” ಎಂದ ಶಿಷ್ಯ.
“ಹಾಗಿದ್ದರೆ ಕೋಪ ನಿನ್ನ ಸ್ವಭಾವದ್ದಲ್ಲ. ನಿನ್ನ…
ವಿಧ: Basic page
September 19, 2005
ಚೀನಾದ ಝೆನ್ ಗುರು ಸೋಝನ್‌ನನ್ನು ಒಮ್ಮೆ ಶಿಷ್ಯನೊಬ್ಬ ಹೀಗೆ ಕೇಳಿದ: “ಗುರುವೇ, ಈ ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದದ್ದು ಯಾವುದು?”
“ಸತ್ತು ಹೋದ ಬೆಕ್ಕಿನ ತಲೆ” ಎಂದು ಉತ್ತರಿಸಿದ ಗುರು.
“ಸತ್ತು ಹೋದ ಬೆಕ್ಕಿನ ತಲೆ ಅದು ಹೇಗೆ ಅಮೂಲ್ಯವಾಗುತ್ತದೆ?” ಎಂದು ಕೇಳಿದ ಶಿಷ್ಯ.
“ಅದರ ಬೆಲೆಯನ್ನು ಇಷ್ಟೇ ಎಂದು ಯಾರೂ ಹೇಳಲಾರರು, ಅದಕ್ಕೇ” ಎಂದ ಗುರು.
[ಕುವೆಂಪು ಅವರು ಹೇಳಿದ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ ಎಂಬ ಮಾತು ನೆನಪಿಗೆ ಬರುತ್ತಿದೆ. “ಬೆಲೆ” ಎಂಬುದು, ಮೌಲ್ಯ ಎಂಬುದು ನಮ್ಮ…
ವಿಧ: Basic page
September 18, 2005
ಮುಲ್ಲಾ ನಸ್ರುದ್ದೀನ್ ಒಬ್ಬ ಸೂಫಿ ದಾರ್ಶನಿಕ. ಸೂಫಿ ಎಂಬುದು ಇಸ್ಲಾಮ್ ಅನುಭಾವಿಗಳ ಒಂದು ಪಂಥ. ಯಾಂತ್ರಿಕವಾದ ಮತನಿಷ್ಠೆಗಿಂತ, ಒಣ ತಾತ್ವಿಕ ಚರ್ಚೆಗಳಿಗಿಂತ, ನೇರವಾಗಿ ದೈವಿಕ ಅನುಭವವನ್ನು ಪಡೆಯುವುದು ಸೂಕ್ತ ಎಂದು ನಂಬಿದ್ದವರು ಸೂಫಿಗಳು. ಕನ್ನಡದ ಶರಣರು, ದಾಸೆರು, ಸೂಫಿಗಳು ಒಂದೇ ಗೂಡಿನ ಹಕ್ಕಿಗಳು. ಸೂಫೀಸ್ ಆಫ್ ಬಿಜಾಪುರ್ ಎಂಬ, ಪೆಂಗ್ವಿನ್ ಪ್ರಕಾಶನದ ಪುಸ್ತಕವು ಕನ್ನಡದ ಸಂಸ್ಕೃತಿಗೂ ಸೂಫೀ ಪರಂಪರೆಗೂ ಇರುವ ಸಂಬಂಧಗಳನ್ನು ವಿವರಿಸುತ್ತದೆ.
ಮುಲ್ಲಾ ನಸ್ರುದ್ದೀನ್ ೧೩ನೆಯ…
ವಿಧ: Basic page
September 18, 2005
ಚೈತ್ರದಲ್ಲಿ ಚಿಗುರಿದ್ದ ಬಯಕೆ
ವೈಶಾಖದ ಬಿಸಿಲಿಗೆ ಬಾಡಿತ್ತು
ಜ್ಯೇಷ್ಟ ಆಷಾಢದ ಬಿರುಗಾಳಿಗೆ
ಬೇರುಬಿಳಿಲುಗಳೆಲ್ಲ ಹಾರಿ ಹೋಗಿತ್ತು
ಶ್ರಾವಣದ ಮೋಡದಲಿ ಬಿದ್ದ ಮಳೆಯಲ್ಲಿ
ಚಿಗುರುವಾಸೆ ಮತ್ತೆ ಮೂಡಿತ್ತು
ಭಾದ್ರಪದ ಆಶ್ವಯುಜ ಕಾರ್ತೀಕದ
ಹನಿಹನಿಯು ಬಯಕೆಗೆ ಗರಿ ಮೂಡಿಸಿತ್ತು
ಟಿಸಿಲೊಡೆದು ಗರಿಗೆದರಿ ನೆಲದಲ್ಲಿ ನಿಂತಾಗ
ಮಾರ್ಗಶಿರ ಮತ್ತೆ ಪುಷ್ಯ ಕಳೆದಿತ್ತು
ಮಾಘ ಫಾಲ್ಗುಣದ ಚಳಿಯಲ್ಲಿ ಮುದುಡಿ
ಎಲೆಯುದುರಿ ಚೈತ್ರದಲ್ಲಿ ಮತ್ತೆ ಚಿಗುರಿತ್ತು
ಆದರೇನು ಮತ್ತೆ ಬಂದ ವೈಶಾಖದ ಬಿಸಿಲು…