ಎಲ್ಲ ಪುಟಗಳು

ಲೇಖಕರು: honnung
ವಿಧ: Basic page
September 23, 2005
ಗೀತ ರಚನಕಾರರು: ಪುರಂದರದಾಸರು ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ, ಗೆಜ್ಜೆಯ ಕಾಲ್ಗಳ ನಾದವ ತೋರುತ, ಸಜ್ಜನ ಸಾಧು ಪೂಜೆಯ ವೇಳೆಗೆ, ಮಜ್ಜಿಗೆಯೊಳಗಿನ ಬೆಣ್ಣೆಯಂತೆ, ಭಾಗ್ಯದ || ಕನಕ ವೃಷ್ಟಿಯ ಕರೆಯುತ ಬಾರೇ, ಮನ ಕಾಮನೆಯ ಸಿದ್ಧಿಯ ತೋರೇ, ದಿನಕರ ಕೋಟಿ ತೇಜದಿ ಹೊಳೆವ, ಜನಕ ರಾಯನ ಕುಮಾರಿ ಬಾರೇ, ಭಾಗ್ಯದ || ಅತ್ತಿತ್ತಗಲದೆ ಭಕ್ತರ ಮನೆಯಲಿ, ನಿತ್ಯ ಮಹೋತ್ಸವ ನಿತ್ಯ ಸುಮಂಗಲ ಸತ್ಯವ ತೋರುತ ಸಾಧು ಸಜ್ಜನರ ಚಿತ್ತದಿ ಹೊಳೆವ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
September 23, 2005
ಇವು ಅಲ್ಲಲ್ಲಿ ಕಿವಿಗೆ, ಕಣ್ಣಿಗೆ ಬಿದ್ದ ಮಾತಿನ ಹುರಿಗಾಳು. ಕಚಗುಳಿ ಇಡುತ್ತವೆ, ನಮ್ಮ ಪರಿಚಿತ ಕಲ್ಪನೆಗಳನ್ನು ಕೆಣಕುತ್ತವೆ, ಗೊತ್ತಿರುವ ಸಂಗತಿಗಳಿಗೆ ಹೊಸ ಡೆಫೆನಿಶನ್ ಕೊಡುತ್ತವೆ. ಇಷ್ಟವಾದರೆ ತಿಳಿಸಿ. ಆಗಾಗ ಇನ್ನಷ್ಟು ಹುರಿಗಾಳು ಸಪ್ಲೈ ಮಾಡುತ್ತೇನೆ. 1) ನನ್ನದು ಪರಿಶುದ್ಧವಾದ ಮನಸ್ಸು ಅನ್ನುವವರ ನೆನಪಿನ ಶಕ್ತಿ ದುರ್ಬಲವಾಗಿರುತ್ತದೆ. 2) ಪ್ರಬುದ್ಧ ವ್ಯಕ್ತಿ ಎಂದರೆ ಜವಾಬ್ದಾರಿಗಳಿಂದ ನರಳುತ್ತಿರುವ ವ್ಯಕ್ತಿ. 3) ಯಾರಿಂದ ಇನ್ನೂ ನೀವು ಇನ್ನೂ ಸಾಲ ಪಡೆದಿಲ್ಲವೋ ಅವನೇ ಆತ್ಮೀಯ…
ಲೇಖಕರು: R M Rao
ವಿಧ: Basic page
September 23, 2005
ಪತಂಜಲಿಯ ಯೋಗ ಅಂತಿಮ ಭಾಗ ಕೊನೆಯ ಲೇಖನ ಪತಂಜಲಿಯ ಯೋಗದ ಚತು‍ರ್ಥ ಕೈವಲ್ಯಪಾದ ನಿರಂತರವಾಗಿ ವೃತ್ತಿಗಳು ಏಳುವ ಸ್ಥಿತಿಯಿಂದ, ಮನಸ್ಸಿನಲ್ಲಿ ನಿರಂತರವಾಗಿ ಏಕಪ್ರಕಾರದ ವೃತ್ತಿ/ವೃತ್ತಿಗಳಿಂದ ಬರುವ ಜ್ಞಾನದ ಸ್ಥಿತಿಯನ್ನು ತಲುಪುದು ಹೇಗೆ ಎಂಬುದನ್ನು ವಿವರಿಸಿದ್ದಾಯಿತು. ಮನಸ್ಸಿನ ಏಕಪ್ರಕಾರದ ಬದಲಾವಣೆಯಿಂದ ಬದಲಾವಣೆ ಇಲ್ಲದ ಸ್ಥಿತಿಯನ್ನು ಹೊಂದುವುದೇ ಕೈವಲ್ಯ. ಜನ್ಮ, ಔಷಧಿ, ಮಂತ್ರ, ತಪಸ್ಸು ಮತ್ತು ಸಮಾಧಿಯಿಂದ ಸಿಧ್ಧಿಗಳು ಹುಟ್ಟುತ್ತವೆ.ಯೋ.ಸೂ.ಪಾದ ೪. ಸೂತ್ರ.೧ ಧ್ಯಾನದಿಂದ ಹುಟ್ಟಿದವು…
ಲೇಖಕರು: hpn
ವಿಧ: ಚರ್ಚೆಯ ವಿಷಯ
September 23, 2005
ಹೆಚ್ ಆರ್ ಚಂದ್ರಶೇಖರರ ಪುಟದಲ್ಲಿ ನಿಮಗೆ ಭಾವಗೀತೆಗಳು, ಜಾನಪದ, ದಾಸರ ಕೃತಿಗಳು, ಸರ್ವಜ್ಞನ ವಚನಗಳೂ ಸೇರಿದಂತೆ ಮತ್ತು ಹಲವು [:http://www.missouri.edu/~physchan/kannada/kannada.html|ಸಂಗ್ರಹಗಳು ಓದಲು ಸಿಗುವುದು]. ಆದರೆ ಕನ್ನಡವಿರುವುದು ಚಿತ್ರದ ರೂಪದಲ್ಲಿ. :)
ಲೇಖಕರು: hpn
ವಿಧ: ಚರ್ಚೆಯ ವಿಷಯ
September 23, 2005
ಯುನಿಕೋಡ್ ಬೆಂಬಲವಿರುವ ಓದುಗರು (ಇದನ್ನೋದುತ್ತಿದ್ದೀರ ಎಂದ ಮೇಲೆ ಬೆಂಬಲ ಇರಲೇಬೇಕು) ಶ್ರೀ ಮದ್ಭಗವದ್ಗೀತೆಯನ್ನು ಕನ್ನಡ ಲಿಪಿಯಲ್ಲಿ [:http://bangla.name/citi/bhg/bhg-2-kan.htm|ಇಲ್ಲಿ ಓದಬಹುದು].
ಲೇಖಕರು: hpn
ವಿಧ: ಚರ್ಚೆಯ ವಿಷಯ
September 22, 2005
ಈ ತಿಂಗಳ ವಾರದ ಮೈಕ್ರೊಸಾಫ್ಟಿನ ಭಾಷಾ ಇಂಡಿಯ ಸುದ್ದಿ ಪತ್ರದಲ್ಲಿ 'ಸಂಪದ'ವನ್ನು 'ತಿಂಗಳ ವಾರದ ವೆಬ್ಸೈಟ್' ಆಗಿ ಫೀಚರ್ ಮಾಡಿದ್ದಾರೆ. :) ಓದಿ: [:http://www.bhashaindia.com/SOW/Site_Review.aspx?Id=116|link]
ಲೇಖಕರು: olnswamy
ವಿಧ: Basic page
September 22, 2005
ಎನ್ಕೋ ಸುಪ್ರಸಿದ್ಧ ಕತೆಗಾರ. ಅವನು ಪ್ರೀತಿಯ ಕತೆ ಹೇಳಿದಾಗ ಕೇಳುಗರ ಮನಸ್ಸಿನ ತುಂಬ ಪ್ರೀತಿಯ ಭಾವ ತುಂಬಿಕೊಳ್ಳುತ್ತಿತ್ತು. ಯುದ್ಧದ ಕತೆ ಹೇಳಿದಾಗ ಕೇಳುಗರು ತಾವೂ ಸೈನ್ಯಕ್ಕೆ ಸೇರಿ ಯುದ್ಧಮಾಡಬೇಕು ಎಂದು ಹಾತೊರೆಯುವಂತೆ ಆಗುತ್ತಿತ್ತು. ಒಂದು ದಿನ ಎನ್ಕೋ ಯಮಒಕ ತೆಷು ಎಂಬ ಸಾಮಾನ್ಯ ಮನುಷ್ಯನೊಬ್ಬನನ್ನು ಭೇಟಿಯಾದ. ತೆಷು ಅದಾಗಲೇ ತನ್ನ ಸಾಧನೆಯಲ್ಲಿ ಮುಂದುವರೆದಿದ್ದು ಸ್ವತಃ ಝೆನ್ ಗುರುವಾಗುವಷ್ಟು ಬೆಳೆದಿದ್ದ. “ನೀನು ನಮ್ಮ ನಾಡಿನಲ್ಲೇ ಪ್ರಸಿದ್ಧನಾದ ಕತೆಗಾರನೆಂದು ಕೇಳಿದ್ದೇನೆ,” ತೆಷು…
ಲೇಖಕರು: olnswamy
ವಿಧ: Basic page
September 22, 2005
ಗುರು ಸೆನ್ಗಿಯನ್ನು ಶ್ರೀಮಂತನೊಬ್ಬ ಕೇಳಿದ. “ಗುರುವೇ, ನಮ್ಮ ಮನೆತನದವರಿಗೆ ಒಳ್ಳೆಯದಾಗಲೆಂದು ಆಶೀರ್ವಾದದ ಮಾತುಗಳನ್ನು ಬರೆದುಕೊಡು. ಅದನ್ನು ನಮ್ಮ ವಂಶದವರೆಲ್ಲ ನಿನ್ನ ಹರಕೆಯೆಂದು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ” ಎಂದ. ದೊಡ್ಡ ಹಾಳೆಯೊಂದನ್ನು ತೆಗೆದುಕೊಂಡು “ಈ ವಂಶದವರ ತಂದೆ ಸಾಯಲಿ, ಮಗ ಸಾಯಲಿ, ಮೊಮ್ಮಗ ಸಾಯಲಿ” ಎಂದು ಬರೆದುಕೊಟ್ಟ ಸೆನ್ಗಿ. ಶ್ರೀಮಂತನಿಗೆ ಬಹಳ ಕೋಪ ಬಂದುಬಿಟ್ಟಿತು. “ಇದೇನು ಗುರುವೇ, ನಾನು ಆಶೀರ್ವಾದದ ಮಾತು ಕೇಳಿದರೆ ತಂದೆ, ಮಗ, ಮೊಮ್ಮಗ ಸಾಯಲಿ” ಎಂದು…
ಲೇಖಕರು: hpn
ವಿಧ: ಚರ್ಚೆಯ ವಿಷಯ
September 21, 2005
ಇಂದು ಏನೋ ಹುಡುಕುತ್ತಿರಲು [:http://www.makkalakavanagalu.esmartweb.com/index.html|ಈ ಪುಟ] ಕಣ್ಣಿಗೆ ಬಿತ್ತು. ಶ್ರೀನಿವಾಸ ಉಡುಪರ ಮಕ್ಕಳ ಕವನಗಳು ನಿಜಕ್ಕೂ ಬಹಳ ಚೆನ್ನಾಗಿವೆ. ಭೇಟಿ ಕೊಡಿ.
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
September 21, 2005
ಇದೊಂದು ವಿಚಿತ್ರವಾದರೂ ಸತ್ಯವಾದ ಸಂಗತಿ. ನನ್ನ ಅನುಭವ. ನಿತ್ಯವೂ ಲೋಕಲ್ ಟ್ರೈನ್‍ನಲ್ಲಿ ಚರ್ಚ್‍ಗೇಟ್ ತಲುಪಿದ ಬಳಿಕ ನನ್ನ ಕಛೇರಿ ಇರುವ ವರ್ಲ್ಡ್ ಟ್ರ್‍ಏಡ್ ಸೆಂಟರ್ ಗೆ ಹೋಗಲು ಬಸ್ ಹಿಡಿಯಬೇಕು. ಮೊದಲ ಬಸ್ ಇರೋದು ಬೆಳಗ್ಗೆಯ ೮.೧೫ಕ್ಕೆ. ಸಾಮಾನ್ಯವಾಗಿ ನಾನು ೮.೧೦ಕ್ಕೆ ಅಲ್ಲಿಯ ಕ್ಯೂನಲ್ಲಿ ನಿಲ್ಲುವೆ. ನಾನು ಹೋಗಿ ನಿಲ್ಲುವ ವೇಳೆಗೆ ಸರಿಯಾಗಿ ಒಂದು ನಾಯಿ ಎಲ್ಲಿಂದಲೋ ಬಂದು ನನ್ನ ಮುಂದೆ ಮಲಗಿಕೊಳ್ಳುವುದು. ನಾನು ಇಲ್ಲಿಯವರೆವಿಗೂ ಇದನ್ನು ಗಮನಿಸಿರಲಿಲ್ಲ. ಮೊನ್ನೆ ಒಂದು ದಿನ ಆ…