ವಿಧ: ಚರ್ಚೆಯ ವಿಷಯ
October 04, 2005
ನಮ್ಮ ಕಡೆ (ಮಂಗಳೂರು ಸುತ್ತ ಮುತ್ತ) ಸೂರ್ಯ ಗ್ರಹಣದ ಸಮಯದಲ್ಲಿ ಉಳಿದ ಆಹಾರ (ಅನ್ನ ಪಲ್ಯ)ಕ್ಕೆ ಗರಿಕೆ ಹುಲ್ಲನ್ನು ಹಾಕಿ ಇಡುತ್ತಾರೆ.. ಬಾವಿಗೂ ಹಾಕುವ ಕ್ರಮ ಇದೆ.. ಈ ಗರಿಕೆ ಹುಲ್ಲಿನ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದು ನನಗೆ ಇದುವರೆಗೂ ತಿಳಿದಿಲ್ಲ.. ಯಾರಿಗಾದರೂ ತಿಳಿದಿದೆಯೇ. ಹಿಂದಿನವರು ಏನಾದರೂ ಕಾರಣವಿರದೆ ಇದನ್ನು ಪಾಲಿಸಲಾರರು ಎಂಬುವುದೇ ನನ್ನ ನಂಬಿಕೆ.
ನಿಮ್ಮ ಊರಿನಲ್ಲಿ ಹಾಗೇನಾದರೂ ಕ್ರಮವಿದೆಯೇ ??
ಉತ್ತರದ ನಿರೀಕ್ಷೆಯಲ್ಲಿ
ಪ್ರಕಾಶ್ ಶೆಟ್ಟಿ ಉಳೆಪಾಡಿ
ವಿಧ: ಬ್ಲಾಗ್ ಬರಹ
October 03, 2005
ಸುದರ್ಶನ
ತುಂಬ ದಿನಗಳ ನಂತರ- ಹೀಗೆ ನೋಡುತ್ತಿದ್ದೇನೆ
ಉಪಯುಕ್ತವಾದ ಲೇಖನಕ್ಕಾಗಿ ಅಭಿನಂದನೆ
ಮುಖ್ಯವಾಗಿ ನಮ್ಮಂತಹ ಪುಸ್ತಕ ಚಳುವಳಿಯಲ್ಲಿ ತೊಡಗಿಸಿಕೊಂಡವರು ಅಗತ್ಯ ಓದಬೇಕಾದ್ದು.ಮಕ್ಕಳಿಗಾಗಿ ಹೊಸ ಓದಿನ ದಾರಿ ತೆರೆದುಕೊಳ್ಳುತ್ತಿರುವುದು ನಮಗೆಲ್ಲಾ ತುಂಬ ಸಂತೋಷ ತರುವ ಸಂಗತಿ
-ಗೆಳೆಯರಿಗೆ ತಿಳಿಸುತ್ತೇನೆ
ಕಿರಣ ಭಟ್
ವಿಧ: Basic page
October 03, 2005
ದೇವನಿಹನು ಎಲ್ಲಿ?
ನನ್ನಲ್ಲಿ ನಿನ್ನಲ್ಲಿ ದೇಗುಲದಲ್ಲಿ?
ಅವನಿಗೆಂದು ಹುಡುಕಿದರು ವಾಸ್ತುಪ್ರಕಾರದ ತಾಣ
ಮಕ್ಕಳ ಆಟದ ಮೈದಾನಕೆ ಬಿದ್ದಿತ್ತು ಕಡಿವಾಣ
ಪಾದಚಾರಿಗಳ ತಳ್ಳಿದರು ರಸ್ತೆಗೆ
ಪಾರ್ಕಿಗೆಂದು ಬಿಟ್ಟಿದ್ದ ಸಾರ್ವತ್ರಿಕ ಜಾಗ
ಮನೆ ಕಟ್ಟದೇ ಬಿಟ್ಟ ಪಾಳು ನಿವೇಶನ
ಯಾರೂ ಸೊಲ್ಲೆತ್ತದಂತೆ ನಿರ್ವಿಣ್ಣ ಮಾಡಿಹ ಪಾಲಕರು
ರಾತ್ರೋ ರಾತ್ರಿ ಎಬ್ಬಿಸಿದರಲ್ಲೇ ಗರ್ಭಗುಡಿ
ಗೋರ್ಕಲ್ಲ ದೇವರೂಪಕೆ ಮಾಡಿಹರು
ನೀರು ಪಂಚಾಮೃತದಭಿಷೇಕ
ಪಠಿಸಿಹರು ಅರ್ಥ ತಿಳಿಯದಾ ಮಂತ್ರ
ಕಣ್ಣೊಂದು ಕಡೆ ಮನ ಇನ್ನೊಂದೆಡೆ…
ವಿಧ: ಚರ್ಚೆಯ ವಿಷಯ
October 03, 2005
(ಅರುಣ್ ಶರ್ಮರವರ ಬ್ಲಾಗಿನಿಂದ)
ಮೈಕ್ರೊಸಾಫ್ಟ್ ಭಾರತಕ್ಕಾಗಿಯೇ ಒಂದು ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ ತರಲಿದೆ ಎಂದು [:http://news.yahoo.com/s/nm/20051001/tc_nm/india_microsoft_dc|ಯಾಹೂ ವರದಿ ಮಾಡಿದೆ]. ಹೊರದೇಶದಲ್ಲಿ ತುಟ್ಟಿಯಾದ ಪುಸ್ತಕಗಳು ಭಾರತದಲ್ಲಿ ಕಡೆಮೆ ಬೆಲೆಗೆ ಲಭ್ಯವಿರುವಂತೆ ಇದೂ ಕೂಡ ಎನ್ನುತ್ತದೆ, ವರದಿ.
ಈ ಕಡಿಮೆ ಬೆಲೆಯ ಆಪರೇಟಿಂಗ್ ಸಿಸ್ಟಮ್ ಇಂಗ್ಲೀಷ್ ಮತ್ತು ಹಿಂದಿ ಆವೃತ್ತಿಗಳಲ್ಲಿ ೧,೦೦೦ ರೂ ಗಳಿಗೆ ದೊರೆಯಲಿದೆಯಂತೆ.
ವಿಧ: Basic page
October 02, 2005
ಸೂರ್ಯಕಾಂತಿ ಅರಳುವುದು ರವಿಯ ಕಿರಣದಿಂದ
ರೂಪ ಲಾವಣ್ಯದ ಹೂ ಬಿರಿಯುವುದು
ಈಕೆಯ ಕಿರು ನಗೆಯಿಂದ
ಕೋಗಿಲೆಯು ಹಾಡುವುದು ಕಾಲಕ್ಕೆ ಸರಿಯಾಗಿ
ಈಕೆ ಹಾಡಿದರೆ ಹೊಂದುವುದು
ಕಾಲವು ತಾನಾಗಿ
ನಟರಾಜ ನಟಿಸಿದರೆ ಹೇಳುವೆವು ಸರಿಸಾಟಿಯಿಲ್ಲವೆಂದು
ಹೆಜ್ಜೆಯನಿಟ್ಟರೆ ಇವಳು ನಟರಾಜ ನುಡಿವನು
ಸರಿಸಾಟಿಯಾರಿಲ್ಲ ಇವಳಿಗೆಂದು
ಗರಿಕೆದರಿ ನಡಿವುದು ನವಿಲು ತಳುಕುಬಳುಕಿನಲಿ
ಇವಳು ನಡೆದರೆ ತುಳುಕುವುದು ವಯ್ಯಾರದ
ಬಿಂದಿಗೆ ನಡುವಿನಲಿ
- ಬಿ ಟಿ
ವಿಧ: Basic page
October 02, 2005
ಭಾರತ ಭೂಮಿ -- ಗಾ೦ಧಿಯ ನೆನಪು -- ಪು.ತಿ.ನ
ನಿನ್ನ ದೇವ ರೆ೦ದ ಮ೦ದಿ
ಆಗಿ ಹೋದರೆ೦ದಿಗೋ
ದೇಹಿ ಎ೦ದು ತಿರುಪೆಗೈಯೆ
ನೆತ್ತಿದವಳು ನೀನಿಗೊ
ನುಡಿಗು ತಿರುಪೆ ನಡೆಗು ತಿರುಪೆ
ಜಗದೊಳಾದೆ ನೀನು ಕಳಪೆ
ಸಿರಿಗಿಲ್ಲವು ನಿನ್ನೊಳು ಕೃಪೆ
ಏಕಾದೆಯೆ ನೀ ನಿಸ್ ತ್ರಪೆ
ಓ ಭಾರತ ಭೂಮಿ
ಕೈ ಬಿಟ್ಟನೆ ಸ್ವಾಮಿ
ಕೋಟಿ ಕೋಟಿ ಕೈಗಳಿವೆ
ಜತನ ಕಾಣದೆ
ನೂರು ಹಾದಿ ಹಿಡಿಯಿತರಿವು
ಗುರಿಯ ತೋಚದೆ
ಮನ ಮನಕೂ ಬಿಜ್ಜೆ ಬಿಜಯ
ಗೈಯಿಸೆ ನುಡಿ ಸೋತಿದೆ.
ಪರರ ಸಾಹಸೋದ್ಯಮಕ್ಕೆ
ಬೇತು ಜೀವ ಜೋತಿದೆ.
ದುಡಿಮೆಗೈಯೆ ತಲೆಗೆ ಸೂಡಿ
ಏನ…
ವಿಧ: Basic page
October 02, 2005
ಮಹಾತ್ಮಾ ಗಾಂಧಿ
ಇದೀಗ ರಸ್ತೆಯ ಹೆಸರು
ಒಂದು ಬದಿಯೆಲ್ಲ
ಬಿಯರು ಬಾರು
ಇನ್ನೊಂದು ಬದಿ
ನಿಲ್ಲಿಸಿದ ವಿದೇಶಿ ಕಾರು
ನಡುವೆ ಹುಡುಗಿಯರ
ಹೆಗಲಿಗೆ ಜೋತು ನಡೆಯುವ
ಯುವಕರ ಯುವ
ಕರ ಕಾರುಭಾರು...
ಮಹಾತ್ಮಾ ಗಾಂಧಿ
ಇದೀಗ ಅಚಲ ಪ್ರತಿಮೆ
ಗಾಂಧಿ ಚೌಕ
ಎಲ್ಲರಿಗೂ ಸುಖ
ಖಜಾನೆ ನಮಗೆ ತೆರೆದು
ಉಪಕರಿಸಿದ ಮುದುಕ
ವರ್ಷಕ್ಕೆರಡು ಬಾರಿ
ನಮನ, ಹೂಗುಚ್ಛ
ಮತ್ತೆ ಕೇಳುವವರ್ಯಾರು
ನಮ್ಮ ದಾರಿ ಸ್ವಚ್ಛ..
- ಗೋಪೀನಾಥ ರಾವ್
raogopi@yahoo.com
ವಿಧ: ಚರ್ಚೆಯ ವಿಷಯ
October 01, 2005
ಇಂದಿನಿಂದ ಹಲವಾರು ಕನ್ನಡಿಗರು ತಮ್ಮ ಬ್ಲಾಗುಗಳಲ್ಲಿ, ವೆಬ್ಸೈಟುಗಳಲ್ಲಿ ಬರೆಯುವ ಬರಹಗಳು ಒಂದೆಡೆಯೇ ಲಭ್ಯ. :)
[:http://sampada.net/planet/planet-kannada/|'ಪ್ಲಾನೆಟ್ ಕನ್ನಡ'] - ಕನ್ನಡ ಮಾತ್ರವಲ್ಲ ಕನ್ನಡಿಗರು ಇಂಗ್ಲಿಷಿನಲ್ಲಿ ಬರೆದದ್ದನ್ನೂ ಕಲೆಗೂಡಿಸಿ ಒಂದೆಡೆಯೇ ಓದುವ ಸೌಕರ್ಯ ನೀಡುವ ಪುಟ. ಒಟ್ಟಿನಲ್ಲಿ ಕನ್ನಡಿಗರು ಎಲ್ಲೇ ಬರೆಯಲಿ, ಒಂದೆಡೆ ಓದಲು ಲಭ್ಯವಾಗುವಂತೆ ಮಾಡುವ ಆಶಯ.
ಸದ್ಯಕ್ಕೆ 'ಸಂಪದ'ದಲ್ಲಿರುವ ಕೆಲವು ಸದಸ್ಯರ ಬ್ಲಾಗುಗಳನ್ನು, 'ಸಂಪದ'ದಲ್ಲಿರುವ…
ವಿಧ: ಚರ್ಚೆಯ ವಿಷಯ
October 01, 2005
'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು. ಇದಕ್ಕೆ ಕಾರಣಗಳು ಬಹಳಷ್ಟಿವೆ. ಮೊದಲನೆಯದು, ಏಕಾಏಕಿ ಇ-ಪತ್ರಗಳು ಸರ್ವರಿನಿಂದ ಕಳುಹಿಸುವಾಗ ಬೌನ್ಸ್ ಆದಲ್ಲಿ ಸರ್ವರ್ ನೋಡಿಕೊಳ್ಳುತ್ತಿರುವವರಿಗೆ ವಿನಾ ಕಾರಣ ತಲೆನೋವು. ಎರಡನೆಯದು, ಎಲ್ಲರಿಗೂ ಸುದ್ದಿ ಪತ್ರ ಕಳುಹಿಸುವ ಬದಲು ಅದನ್ನೋದುವ ಉತ್ಸಾಹವುಳ್ಳ ಸದಸ್ಯರಿಗೆ…
ವಿಧ: ಬ್ಲಾಗ್ ಬರಹ
September 30, 2005
Globalization and it's discontents
ಲೇಖಕ: ಜೋಸೆಫ್ ಸ್ಟಿಗ್ಲಿಟ್ಸ್
ಮೊದಲಿಗೇ ಹೇಳಿಬಿಡ್ತೀನಿ, ನನ್ನ ಅನಿಸಿಕೆಗಳಿಗೂ ಈ ಪುಸ್ತಕದಲ್ಲಿನ ವಿಚಾರಗಳಿಗೂ ಸಾಮ್ಯತೆ ಇದೆ ಅಂತ ನನಗೆ ಮೊದಲೇ ಗೊತ್ತಿತ್ತು.. ಆದರೆ, ಓದುತ್ತಾ ಹೋದಾಗ ಲೇಖಕನ ಅನಿಸಿಕೆಗಳಿಗೂ ನನ್ನವುಗಳಿಗೂ ವ್ಯತ್ಯಾಸ ತಲೆದೂರಿದ್ದಕ್ಕೆ ಈ ಪುಸ್ತಕ ನನಗೆ ಅಷ್ಟಾಗಿ ಹಿಡಿಸದೇ ಹೋಗಿರಬಹುದು.
ಈ ಪುಸ್ತಕವನ್ನು ನಮ್ಮ ವಿಶ್ವವಿದ್ಯಾಲಯದಲ್ಲಿನ ಒಬ್ಬ ಇಂಗ್ಲೀಷ್ ಅಧ್ಯಾಪಕರು ಓದಲಿಕ್ಕೆ ಹೇಳಿದ್ದರು. ಆದ್ದರಿಂದ ಮೊದಮೊದಲು ಹುರುಪಿನಿಂದಲೇ…