ಸುದ್ದಿ ಪತ್ರದಲ್ಲಿ ಸ್ವಲ್ಪ ಬದಲಾವಣೆಗಳು

ಸುದ್ದಿ ಪತ್ರದಲ್ಲಿ ಸ್ವಲ್ಪ ಬದಲಾವಣೆಗಳು

Comments

ಬರಹ

'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು. ಇದಕ್ಕೆ ಕಾರಣಗಳು ಬಹಳಷ್ಟಿವೆ. ಮೊದಲನೆಯದು, ಏಕಾಏಕಿ ಇ-ಪತ್ರಗಳು ಸರ್ವರಿನಿಂದ ಕಳುಹಿಸುವಾಗ ಬೌನ್ಸ್ ಆದಲ್ಲಿ ಸರ್ವರ್ ನೋಡಿಕೊಳ್ಳುತ್ತಿರುವವರಿಗೆ ವಿನಾ ಕಾರಣ ತಲೆನೋವು. ಎರಡನೆಯದು, ಎಲ್ಲರಿಗೂ ಸುದ್ದಿ ಪತ್ರ ಕಳುಹಿಸುವ ಬದಲು ಅದನ್ನೋದುವ ಉತ್ಸಾಹವುಳ್ಳ ಸದಸ್ಯರಿಗೆ ಮಾತ್ರ ಕಳುಹಿಸಿದರೆ, ಸರ್ವರಿನ ಮೇಲೆ ಲೋಡ್ ಕೂಡ ಕಡಿಮೆಯಾಗುವುದು. ಜೊತೆಗೆ ಮೇಯ್ಲ್ ಮ್ಯಾನ್ ಎಂಬುವ ಸುದ್ದಿ ಪತ್ರ ತಂತ್ರಾಂಶ ಬೌನ್ಸ್ ಆಗುವ ವಿಳಾಸಗಳನ್ನು ಚೆನ್ನಾಗಿ ನಿರ್ವಹಿಸುತ್ತದೆ.

(Update) ಸೂ: ಸೆಪ್ಟೆಂಬರ್ ೩೦ ರಂತೆ 'ಸಂಪದ'ದಲ್ಲಿ ಸದಸ್ಯರಾಗಿದ್ದ ಎಲ್ಲರೂ ಈ ಇ-ಅಂಚೆ ಪೆಟ್ಟಿಗೆಗೆ 'ಬೈ ಡೀಫಾಲ್ಟ್' ಸದಸ್ಯರು. ಮತ್ತೊಮ್ಮೆ ನೊಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ.

[:http://sampada.net/Newsletter_subscribe]

ಸದ್ಯಕ್ಕೆ ಈ ವ್ಯವಸ್ಥಾಪನೆ. ಎಲ್ಲ ಸದಸ್ಯರೂ ಸಹಕಾರ ನೀಡುವಿರೆಂದು ತಿಳಿಯುತ್ತೇನೆ,

- ಹೆಚ್ ಪಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet