ವಿಧ: ಬ್ಲಾಗ್ ಬರಹ
October 14, 2005
ಮುಕ್ತ ಮಾರುಕಟ್ಟೆಗಳು ಮತ್ತು ಜಾಗತೀಕರಣದಿಂದ ಇಂದು ಸಾವಿರಾರು ಕೆಲಸಗಳು ಅಮೇರಿಕಾ ದೇಶದ ಕೈ ತಪ್ಪಿವೆ. ಭಾರತ, ಚೀನ ಮೆಕ್ಸಿಕೋದಂತಹ ಹಲವು ದೇಶಗಳಲ್ಲಿ ಈ ಬೆಳವಣಿಗೆಗಳಿಂದಾಗಿ ಹಲವಾರು ಜನಕ್ಕೆ ಕೆಲಸಗಳು ಸಿಕ್ಕಿವೆ. ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಂಡ ಅಮೇರಿಕಾದ ಜನರ ವಿಚಾರವಾಗಿ ಹೆಚ್ಚಾಗಿ ತಿಳಿದಿಲ್ಲ. ಮೊದಲು manufacturing ವಲಯದಲ್ಲಿ ಬಹಳ ಪ್ರಸಿದ್ಧವಾಗಿದ್ದ ಸಣ್ಣ ಸಣ್ಣ ನಗರಗಳು ಇಂದು ಯಾವ ಚಟುವಟಿಕೆಗಳಿಲ್ಲದೇ ಪಾಳು ಬಿದ್ದಿವೆ. ಕೆಲಸ ಕಳೆದುಕೊಂಡ ಜನರು ದೊಡ್ಡ ನಗರಗಳಿಗೆ ವಲಸೆ…
ವಿಧ: Basic page
October 14, 2005
ರಮಾಕಾಂತ ಬಿ.ಎಸ್.ಸಿ ಮುಗಿಸಿದ ನಂತರ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಪ್ರಯತ್ನಿಸುತ್ತಿದ್ದ. ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಆಗ ಅವನ ಸೋದರಮಾವ ವಿಶ್ವನಾಥ ಅವನಿಗೆ ಸುಮ್ಮನೆ ಮನೆಯಲ್ಲಿ ಕುಳಿತಿರುವ ಬದಲು ಎಲ್.ಎಲ್.ಬಿ.ಯನ್ನಾದರೂ ಮಾಡು ಎಂದು ಹೇಳಿದರು. ರಮಾಕಾಂತ ಹಾಗೇ ಮಾಡಿದ. ಆದರೆ ಈ ಮಧ್ಯೆ ಅವನಿಗೆಲ್ಲೂ ಕೆಲಸ ಸಿಗಲಿಲ್ಲ. ವಿಶ್ವನಾಥರೇ ತಮ್ಮ ಸ್ನೇಹಿತ ಮಾರ್ಕಂಡೇಯ ಎಂಬ ಒಬ್ಬ ಪ್ರಸಿದ್ಧ ಲಾಯರಿನ ಹತ್ತಿರ ಅಸಿಸ್ಟೆಂಟ್ ಆಗಿ ಕೆಲಸ ಮಾಡಲು ಸೇರಿಸಿದರು. ಅದಕ್ಕೆ ಪ್ರತಿಯಾಗಿ ತನ್ನ ಮಗಳು…
ವಿಧ: ಬ್ಲಾಗ್ ಬರಹ
October 14, 2005
'ಸಂಪದ'ವೆಂಬಂತಹ ಒಂದು ವೆಬ್ಸೈಟ್ ಪ್ರಾರಭಿಸಬೇಕೆಂಬುದು ನನ್ನ ಉದ್ದೇಶವಾಗಿರಲ್ಲಿಲ್ಲವಾದರೂ ಹೇಗು ಹೇಗೋ ಹೀಗೊಂದು ತಾಣವಾಗಿ ಹೋಯ್ತು. ನಿಮ್ಮಲ್ಲಿ ಯಾರಿಗಾದ್ರೂ 'ಯಾಕ್ ಹೀಗ್ ಮಾಡಿದ್ನೋ' ಅಂತ ಸಿಟ್ಟು ಇದ್ದರೆ ಇದರ ಉಗಮವಾಗುವಂತಿದ್ದ 'ವಿಧಿ'ಗೆ ಬೈದುಕೊಳ್ಳಿ. ಅಥವಾ “'ಯುನಿಕೋಡ್'ಗೆ ನಿಮ್ಮ ತಾಣಗಳನ್ನು ಪರಿವರ್ತಿಸಿ" ಎಂದು ನಾನು ಗೋಗರಿದರೂ ಪರಿವರ್ತಿಸದ ವೆಬ್ಸೈಟುಗಳ ownerಗಳನ್ನ ಬೈದುಕೊಳ್ಳಿ. 'ಬಹಳ ಒಳ್ಳೆ ಕೆಲಸ ಮಾಡಿದಾನೆ, ಇವನಿಗೆ ಬಾಳ ಜೋಷ್' ಅನ್ನುವವರು ನಾನು ಅಂತಹ ಜೋಷ್ ಪಾರ್ಟಿನೂ…
ವಿಧ: Basic page
October 13, 2005
(ರಾಬರ್ಟ್ ಹೆರ್ರಿಕ್ ನ "ಟು ಬ್ಲಾಸಮ್ಸ್" ಕವಿತೆಯ ಸರಳಾನುವಾದ)
ಬದುಕಿನೊಲುಮೆಯ ತರು ಮುಡುಪಿಟ್ಟ ಫಲವೆ
ನೀನೇಕೆ ಅಳಿವೆ ಕ್ಷಣದೊಳಗೆ
ಬಂದಿಲ್ಲ ನಿನಗಿನ್ನು ಕಾಲ
ಇಲ್ಲಿರಲು ನೀನು ಕೆಲಕಾಲ
ಕೆಂಪಡರಿ ಮುಗುಳುನಗೆ ಬೀರಿ
ಬಳಿಕವೇ ನಿನ್ನಗಲುವಿಕೆಯಲ್ಲವೆ
ನಿನ್ನ ಚೇತನ ಬುವಿಗಿಳಿದ ಕಾರಣವೇನು
ಕ್ಷಣವರೆಕ್ಷಣದ ಉಲ್ಲಾಸಕೆ
ಮರುಘಳಿಗೆ ಪಾಡುವ ವಿದಾಯಕೆ?
ದುರ್ದೈವ ಪ್ರಕೃತಿ ನಿನಗೆ ಕೊಟ್ಟ ಹುಟ್ಟು
ಕ್ಷಣಿಕ ಸುಖವ ನೀ ಕೊಟ್ಟು
ಅರಿಯದಲೆ ಕ್ಷಯಿಸುವ ನಿನ್ನದೇನು ಗುಟ್ಟು
ನಿನ್ನ ತಳಿರೆಲೆಗಳಲಿ ಬರೆದಿಟ್ಟ
ವಿಧಿಯ…
ವಿಧ: ಚರ್ಚೆಯ ವಿಷಯ
October 12, 2005
ಪೆಪ್ಸಿ ಮತ್ತು ಕೊಕಾ ಕೋಲ ಗಳಲ್ಲಿ ಡಿಡಿಟಿ ಇದೆಯೆಂಬ ಸುದ್ದಿ ಹೊರಬಂದಾಗ ಬರೆದದ್ದು. ;)
ವಿಧ: Basic page
October 11, 2005
ಈಗ ನೀವು ಓದುತ್ತಿರುವ ಕತೆ ಹತ್ತೊಂಬತ್ತನೆಯ ಶತಮಾನದ್ದು. ಒಬ್ಬ ಹೆಂಗಸು ತನ್ನ ಗೆಳೆಯನಿಗೆ ಬರೆದ ಪತ್ರದ ರೂಪದಲ್ಲಿದೆ. ವಿವರಗಳನ್ನು ಆಮೇಲೆ ಹೇಳುತ್ತೇನೆ.
ಗೆಳೆಯಾ,
ನನ್ನ ಬದುಕಿನ ಸುಂದರ ನೆನಪುಗಳನ್ನು ಹೇಳುವಂತೆ ಕೇಳಿದ್ದೀಯ. ನನಗೀಗ ವಯಸ್ಸಾಗಿದೆ. ನಂಟರಿಲ್ಲ. ಮಕ್ಕಳೂ ಇಲ್ಲ. ನನ್ನ ನೆನಪುಗಳನ್ನು ಈಗ ನಿಜವಾಗಿ ಹೇಳಬಹುದು. ಆದರೆ ಹೆಸರುಗಳನ್ನು ಹೇಳುವ ಧೈರ್ಯವಿಲ್ಲ.
ಎಲ್ಲರೂ ನನ್ನ ಬಗ್ಗೆ ಪ್ರೀತಿ ತೋರಿಸುತ್ತಿದ್ದರು. ಅದು ನಿನಗೂ ಗೊತ್ತು. ನೋಡುವುದಕ್ಕೆ ನಾನು ತುಂಬ ಚೆನ್ನಾಗಿದ್ದೆ.…
ವಿಧ: Basic page
October 11, 2005
ಯಾನ್ ಕೋಡೆ ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಮೆರೆನ ಒಂಜಿ ಬೂಕು ಓದಿಯೆ ಅಯಿಟ್ ಇತ್ತಿನ ಒಂಜಿ ಕವನ ಎಂಕ್ ಮಸ್ತ್ ಇಷ್ಟ ಆಂಡ್
ಎನ್ನ ಆಸೆ :
ಎಂಕುಂಡು ಸಾರ ಸಾರ ಆಸೆ
ಬಾನೊಡು ಪಕ್ಕಿಯಾದ್ ರಾಪುನ ಆಸೆ
ದೇಶದ ಪ್ರಧಾನಿಯಾದ್ ಮೆರೆಪುನ ಆಸೆ
ಭೂಮಿನೇ ಅಡಿಮೇಲ್ ಮಲ್ಪುನ ಆಸೆ
ಆಂಡ ಅಪಗಪಗ ಎನ್ನುಂಡು
ಎಂಕೇಪ ಪಾಡುವೆರಾ ದೇಸೆ
ನನ್ನ ಆಸೆ
ನನಗಿದೆ ಸಾವಿರ ಸಾವಿರ ಆಸೆ
ಬಾನಲ್ಲಿ ಹಕ್ಕಿಯಾಗಿ ಹಾರುವ ಆಸೆ
ದೇಶದ ಪ್ರಧಾನಿಯಾಗಿ ಮೆರೆಯುವ ಆಸೆ
ಭೂಮಿಯನ್ನೇ ಬುಡಮೇಲು ಮಾಡುವಾಸೆ
ಆದರೂ ಆವಾಗಾವಾಗ ಎಣಿಸುತ್ತದೆ…
ವಿಧ: ರುಚಿ
October 11, 2005
ಮೊದಲು ತರಕಾರಿ ಪಲ್ಯ- ಎಲ್ಲಾ ತರಕಾರಿಯನ್ನು ಮತ್ತೊಮ್ಮೆ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ ,ಅದಕ್ಕೆ ಉಪ್ಪು ಕಾರ
ಒಗ್ಗರಣ್ಣೆ ಸೇರಿಸಿ ..ಬಾಣಲೆಯಿಂದ ಇಳಿಸಿ.
ಬ್ರೆಡ್ ಸ್ಲೈಸ್ ನ ಹೊರ ಚರ್ಮ (ಗೋಲ್ದನ್ ಬ್ರೊವ್ನ ಭಾಗ)ತೆಗೆಯಿರಿ.ಬಿಳಿ ಭಾಗದ ಬ್ರೆಡ್ ಸ್ಲೈಸ್ ಅನ್ನು ಸ್ವಲ್ಪ ನೀರಿನಲ್ಲಿ ಅದ್ದಿ ತೆಗೆದು ಆ ತರಕಾರಿ ಪಲ್ಲ್ಯವನ್ನು ತುಂಬಿ .ಬೋಂಡದ ಅಕ್ರುತಿ ಮಾಡಿಕೊಳ್ಳೀ .ಅದನ್ನು ಬ್ರೆಡ್ ಪುಡಿಯಲ್ಲಿ ಉರುಳಿಸಿ
ಕಂದು ಬಣ್ಣ ಬರುವರೆಗೂ ಎಣ್ಣೆಯಲ್ಲಿ ಕರೆಯಿರಿ.. ಬೊಂಡ ತಯಾರು.ಪುದಿನಾ ಚಟ್ನಿ…
ವಿಧ: Basic page
October 11, 2005
ನಿತ್ಯ ಆತ್ಮ ಹತ್ಯೆ
ನಾವು ನಿತ್ಯ ರಸ ಅ೦ದ್ಕೊ೦ಡೂ ಮಾಡೋ ಊಟ ರಸಾಯನ ಗೊಬ್ಬರ.
ನಾವು ನಿತ್ಯ ಅವಸರದಲ್ಲಿ ಉಸಿರಾಡೋ ಗಾಳಿ ಧೂಳೂ.
ನಾವು ನಿತ್ಯ ಯವಗಾದರೂ ಕುಡಿಯುವ ನೀರು ವಿಷ.
ನಾವು ನಿತ್ಯ ಆಡೋ ಮಾತು ಬರೀ ಮಾತು ಮತ್ತೇನಿಲ್ಲಾ.
ನಾವು ನಿತ್ಯ ಹತ್ತ್ತುಘ್೦ಟೆ ಮಾಡೋ ಕರ್ಮ ಶ್ರದ್ಧಾ ಶೂನ್ಯ ..
ನಿತ್ಯ ಹತ್ಯೆ ನಡೆ ವುದಿಲ್ಲಿ ಸಾಮಾನ್ಯ ಹತ್ಯೆಯಲ್ಲವಿದು ಆತ್ಮಹತ್ಯೆ.
ಪೊಲಿಸ್ ನವರೆಗೂ ಸುಳಿವ್ ಇಲ್ಲಾ...
ರಕ್ತ ಚೂರಿ ಏನೂ ಇಲ್ಲಾ...
ಆದರೆ ಅತೀ ಭಯ೦ಕರ ಹತ್ಯೆ ಆತ್ಮಹತ್ಯೆ.
ವಿಧ: ಚರ್ಚೆಯ ವಿಷಯ
October 11, 2005
ಸುಮಾರು ಎರಡು ವರ್ಷ ಹಿಂದೆ ಬರೆದದ್ದು. ಆಗ ನನ್ನ ಬಳಿ ಸ್ಕ್ಯಾನರ್ ಇರಲಿಲ್ಲ. ಸ್ನೇಹಿತನೊಬ್ಬನ ಮನೆಯಲ್ಲಿ ಸರ್ಕಸ್ ಮಾಡಿ ಸ್ಕ್ಯಾನ್ ಮಾಡಿದ್ದಾದ್ದರಿಂದ ನೀಲಿ ಬಣ್ಣದ ರೇಖೆಗಳೂ ಚಿತ್ರದೊಡನೆ ಸೇರಿಕೊಂಡು ಬಿಟ್ಟಿವೆ. :)