ವಿಧ: Basic page
October 08, 2005
ನನ್ನ ನೋಟ ಸಂಜೆ ಬಿಸಿಲು ಬಿದ್ದ ದೂರ ಶಿಖರವನ್ನು ಸ್ಪರ್ಶಿಸಿದೆ.
ಈಗಿನ್ನೂ ಹೆಜ್ಜೆಯಿಟ್ಟ ಹಾದಿಯ ತುದಿಯ ತಲುಪಿದೆ.
ನಾವು ಹಿಡಿಯಲಾಗದುದು ನಮ್ಮ ಹಿಡಿಯುವುದು ಹೀಗೆಯೇ.
ಶಿಖರದ ಒಳಬೆಳಕು ಒಂದಿದೆ. ನಾವಿನ್ನೂ ಅಲ್ಲಿಗೆ ತಲುಪದಿದ್ದರೂ
ದೂರದಿಂದಲೇ ನಮ್ಮೊಳಗೆ ಚೈತನ್ಯವ ತುಂಬುವುದದು
ನಾವು ಅರಿಯದಿದ್ದರೂ ನಮ್ಮ ಬದಲಾಯಿಸುವುದು
ಆಗಲೇ “ಏನೋ” ಆಗಿಬಿಟ್ಟಿರುವೆವು.
ನಮ್ಮೊಳಗಿನ ಅಲೆಯ ತನ್ನತ್ತ ಸೆಳೆವ ಸೂಚನೆ...
ನಮಗೆ ತಿಳಿವುದು ಮುಖದ ಮೇಲೆ ಸುಳಿವ ತೆಳು ಗಾಳಿ ಮಾತ್ರ.
ರಿಲಕ್ ನ ಇನ್ನೊಂದು ಕವಿತೆ.…
ವಿಧ: Basic page
October 07, 2005
ಪ್ರೀತಿಯ ನಾಡಿನ ಭೂಪಟ ನಮಗೆ ಚನ್ನಾಗಿಯೇ ಗೊತ್ತಿದೆ
ಅಲ್ಲಿರುವ ದೇವಾಲಯ, ಅದರ ಬಳಿಯ ಸ್ಮಶಾನ ಚನ್ನಾಗಿಯೇ ಗೊತ್ತಿದೆ
ಸ್ಮಶಾನದಲ್ಲಿರುವ ಪ್ರೇಮಿಗಳ ಹೆಸರು ಹೊತ್ತ ಕಲ್ಲು
ಅಗಾಧ ನಿಶ್ಶಬ್ದದ ಕಣಿವೆಯಲ್ಲಿ ಬಿದ್ದು ಹೆಸರಿಲ್ಲವಾದವರು
ಇವೆಲ್ಲ ಚನ್ನಾಗಿಯೇ ಗೊತ್ತಿದೆ ಗೊತ್ತಿದೆ.
ಆದರೂ, ನಿನೂ ನಾನೂ, ಅವಕಾಶವಾದಾಗಲೆಲ್ಲ
ಆ ಪುರಾತನ ಮರಗಳ ನೆರಳಲ್ಲಿ ಅಡ್ಡಾಡುವುದು
ಅಲ್ಲೆ ಅರಳಿದ ಹೂಗಳ ನಡುವೆ, ಹಸಿರು ಹುಲ್ಲಿನ ಮೇಲೆ ಮಲಗಿ
ಮೇಲೆ ಆಕಾಶವನ್ನು ಮುಖಾಮುಖಿ ದಿಟ್ಟಿಸುವುದು ಬಿಡಲಾರೆವು.
ರೇನರ್ ಮಾರಿಯಾ…
ವಿಧ: ಬ್ಲಾಗ್ ಬರಹ
October 06, 2005
ಸೆಪ್ಟೆಂಬರ್ ೨೭, ೨೦೦೫.
ಚಿತ್ರದುರ್ಗದ ಸರ್ಕಾರೀ ಕಲಾ ಕಾಲೇಜಿನಲ್ಲಿ ಒಂದು ಕಾರ್ಯಕ್ರಮ.
ಪುಸ್ತಕಪ್ರಾಧಿಕಾರ ಏರ್ಪಡಿಸಿದ್ದ ವಾಚನಾಭಿರುಚಿ ಶಿಬಿರ. ಭಾಗವಹಿಸಿದ್ದವರು ಚಿತ್ರದುರ್ಗ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಬಂದಿದ್ದ ಸುಮಾರು ನೂರು ಮಂದಿ ವಿದ್ಯಾರ್ಥಿಗಳು.
ನಾನು ಆ ಶಿಬಿರದ ನಿರ್ದೇಶಕನಾಗಿ ಹೋಗಿದ್ದೆ.
ಹತ್ತು ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಪ್ರಾರ್ಥನೆ ಇತ್ಯಾದಿ. ಸುಮ್ಮನೆ ಜೇಬು ಮುಟ್ಟಿಕೊಂಡೆ. ಮೊಬೈಲು ಇರಲಿಲ್ಲ. ತಟ್ಟನೆ ಹೊಳೆಯಿತು. ಜುಬ್ಬಾದ ಸೈಡು ಜೇಬಿನಲ್ಲಿಟ್ಟುಕೊಂಡಿದ್ದ…
ವಿಧ: Basic page
October 06, 2005
ಚೈತ್ರ ಬಂದಿದೆ..
ಚಿತ್ತಾರ ಬರೆದಿದೆ..
ಆಹಾ..ಕಲಾಕಾರನೆಂದರೆ ಇವನೇ....
ಮಹಾಕಲಾವಿದ...ಮಹಾ ಕೋವಿದ...
ಕ್ಯಾನವಾಸೋ ಎಲ್ಲೆ ಇಲ್ಲದಷ್ಟು..
ಹರವು, ಎತ್ತರ ಎಲ್ಲಾ ಅಕ್ಷಿ ಕಕ್ಷೆಯಷ್ತು..
ಬ್ರಶ್ ಬಳಸಿದನೋ, ಸ್ಪ್ರೇ ಮಾಡಿದನೋ,
ನೈಫ಼್ ನಲ್ಲೇ ಹಚ್ಚಿದನೋ,,
ನಾನರಿಯೇ..
ಅದೇನು ಹೊಸತು.. ಅದೇನು ಹೊಳಪು..
ನಳನಳಿಪ ರಂಗಲಿ
ಚಿತ್ತಾರಕೆ ರಂಗು ಬಳಿದಿದೆ...
ಚೈತ್ರನಿಗೆ ಹಸಿರೇ ಮೆಚ್ಚು
ನೋಡುಗನಿಗೆ ಮತ್ತಿನ ಹುಚ್ಚು
ಕೆಂಪು, ಹಳದಿ, ನೀಲಿ,
ನೇರಳೆ, ಕೇಸರಿ ಎಲ್ಲಾ
ಹೂವಾಗಿ ಅರಳಿದೆ.
ಕಲ್ಲು ಮನದಲ್ಲೂ…
ವಿಧ: ಬ್ಲಾಗ್ ಬರಹ
October 06, 2005
ಮೊನ್ನೆ ತಾನೆ ಮುಂಬಯಿಗೆ ಭೇಟಿ ನೀಡಿದ್ದೆ. ವಿಮಾನ ನಿಲ್ದಾಣದ ಸಮೀಪ ಇರುವ ಪಂಚತಾರಾ ಹೋಟೆಲಿನ ಎದುರುಗಡೆಯ ರಸ್ತೆಯಲ್ಲಿ ಒಂದು ಟ್ಯಾಕ್ಸಿ ಹಿಡಿದೆ. ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ಗೆ ಹೋಗಬೇಕಿತ್ತು. ಚಾಲಕ, ಬಹುಶಃ ಪಂಚತಾರಾ ಹೋಟೆಲಿನ ಎದುರುಗಡೆಯಿಂದ ಟ್ಯಾಕ್ಸಿ ಹಿಡಿದುದಕ್ಕೆ ಇರಬೇಕು, “ನೂರು ರೂಪಾಯಿ ಆಗುತ್ತದೆ” ಎಂದ. ನಾನು “ಮೀಟರು ಪ್ರಕಾರ ಬರುವುದಿದ್ದರೆ ಮಾತ್ರ ಬಾ. ಇಲ್ಲದಿದ್ದರೆ ಬೇರೆ ಟ್ಯಾಕ್ಸಿ ಹಿಡಿಯುತ್ತೇನೆ” ಎಂದು ಹೇಳಿ ಟ್ಯಾಕ್ಸಿಯಿಂದ ಇಳಿಯಲು ಅನುವಾದೆ. ಆತ ಕೂಡಲೆ ವರಸೆ…
ವಿಧ: Basic page
October 05, 2005
ಕುಬೇರಪ್ಪ ಕುಬೇರಪ್ಪಾ...
ಲಕ್ಷ್ಮೀ ಪೂಜೆ ಮಾಡ್ದಾ..?
ಮಾಡೇ ಇರ್ತಿಯಾ ಬಿಡು ದೇವರ ಗೂಡಲ್ಲಿ ಐವತ್ತೋ, ನೂರೋ ರೂಪಾಯಿ ಇಟ್ಟು....
ಇಲ್ಲಾ ರಾಯ್ರೇ, ಲಕ್ಷಾಂತರ ರೂಪಾಯಿಗೆ ಪೂಜೆ ಮಾಡ್ದೆ...!!
ಹಾ ಹಾ, ಅದು ಹ್ಯಾಗೇ?
ತುಂಬಾ ಸಿಂಪಲ್. ಗಲ್ಲಿ ಗಲ್ಲಿಲಿ ಇರೋ
ಎ ಟಿ ಎಮ್ ಸೆಂಟರ್ ಗೆಲ್ಲ ಹೋಗಿ ಅರಿಸಿನ-ಕುಂಕುಮಾ
ಪೂಜೆ ಮಾಡ್ಕೊಂಡು ಬಂದೆ!!!
ನೀವೆಲ್ಲ ವರ್ಚ್ಯುಲ್ ಲಕ್ಷ್ಮೀ ಪೂಜೆ ಮಾಡಿದರೇ...
ನಾನು ಅಕ್ಚ್ಯುಲ್ ಲಕ್ಷ್ಮೀ ಪೂಜೆ ಮಾಡಿದೇ...!!
ವಿಧ: ಚರ್ಚೆಯ ವಿಷಯ
October 04, 2005
ನಮ್ಮ ಕಡೆ (ಮಂಗಳೂರು ಸುತ್ತ ಮುತ್ತ) ಸೂರ್ಯ ಗ್ರಹಣದ ಸಮಯದಲ್ಲಿ ಉಳಿದ ಆಹಾರ (ಅನ್ನ ಪಲ್ಯ)ಕ್ಕೆ ಗರಿಕೆ ಹುಲ್ಲನ್ನು ಹಾಕಿ ಇಡುತ್ತಾರೆ.. ಬಾವಿಗೂ ಹಾಕುವ ಕ್ರಮ ಇದೆ.. ಈ ಗರಿಕೆ ಹುಲ್ಲಿನ ಹಿಂದಿರುವ ವೈಜ್ಞಾನಿಕ ಸತ್ಯವೇನೆಂದು ನನಗೆ ಇದುವರೆಗೂ ತಿಳಿದಿಲ್ಲ.. ಯಾರಿಗಾದರೂ ತಿಳಿದಿದೆಯೇ. ಹಿಂದಿನವರು ಏನಾದರೂ ಕಾರಣವಿರದೆ ಇದನ್ನು ಪಾಲಿಸಲಾರರು ಎಂಬುವುದೇ ನನ್ನ ನಂಬಿಕೆ.
ನಿಮ್ಮ ಊರಿನಲ್ಲಿ ಹಾಗೇನಾದರೂ ಕ್ರಮವಿದೆಯೇ ??
ಉತ್ತರದ ನಿರೀಕ್ಷೆಯಲ್ಲಿ
ಪ್ರಕಾಶ್ ಶೆಟ್ಟಿ ಉಳೆಪಾಡಿ
ವಿಧ: ಬ್ಲಾಗ್ ಬರಹ
October 03, 2005
ಸುದರ್ಶನ
ತುಂಬ ದಿನಗಳ ನಂತರ- ಹೀಗೆ ನೋಡುತ್ತಿದ್ದೇನೆ
ಉಪಯುಕ್ತವಾದ ಲೇಖನಕ್ಕಾಗಿ ಅಭಿನಂದನೆ
ಮುಖ್ಯವಾಗಿ ನಮ್ಮಂತಹ ಪುಸ್ತಕ ಚಳುವಳಿಯಲ್ಲಿ ತೊಡಗಿಸಿಕೊಂಡವರು ಅಗತ್ಯ ಓದಬೇಕಾದ್ದು.ಮಕ್ಕಳಿಗಾಗಿ ಹೊಸ ಓದಿನ ದಾರಿ ತೆರೆದುಕೊಳ್ಳುತ್ತಿರುವುದು ನಮಗೆಲ್ಲಾ ತುಂಬ ಸಂತೋಷ ತರುವ ಸಂಗತಿ
-ಗೆಳೆಯರಿಗೆ ತಿಳಿಸುತ್ತೇನೆ
ಕಿರಣ ಭಟ್
ವಿಧ: Basic page
October 03, 2005
ದೇವನಿಹನು ಎಲ್ಲಿ?
ನನ್ನಲ್ಲಿ ನಿನ್ನಲ್ಲಿ ದೇಗುಲದಲ್ಲಿ?
ಅವನಿಗೆಂದು ಹುಡುಕಿದರು ವಾಸ್ತುಪ್ರಕಾರದ ತಾಣ
ಮಕ್ಕಳ ಆಟದ ಮೈದಾನಕೆ ಬಿದ್ದಿತ್ತು ಕಡಿವಾಣ
ಪಾದಚಾರಿಗಳ ತಳ್ಳಿದರು ರಸ್ತೆಗೆ
ಪಾರ್ಕಿಗೆಂದು ಬಿಟ್ಟಿದ್ದ ಸಾರ್ವತ್ರಿಕ ಜಾಗ
ಮನೆ ಕಟ್ಟದೇ ಬಿಟ್ಟ ಪಾಳು ನಿವೇಶನ
ಯಾರೂ ಸೊಲ್ಲೆತ್ತದಂತೆ ನಿರ್ವಿಣ್ಣ ಮಾಡಿಹ ಪಾಲಕರು
ರಾತ್ರೋ ರಾತ್ರಿ ಎಬ್ಬಿಸಿದರಲ್ಲೇ ಗರ್ಭಗುಡಿ
ಗೋರ್ಕಲ್ಲ ದೇವರೂಪಕೆ ಮಾಡಿಹರು
ನೀರು ಪಂಚಾಮೃತದಭಿಷೇಕ
ಪಠಿಸಿಹರು ಅರ್ಥ ತಿಳಿಯದಾ ಮಂತ್ರ
ಕಣ್ಣೊಂದು ಕಡೆ ಮನ ಇನ್ನೊಂದೆಡೆ…
ವಿಧ: ಚರ್ಚೆಯ ವಿಷಯ
October 03, 2005
(ಅರುಣ್ ಶರ್ಮರವರ ಬ್ಲಾಗಿನಿಂದ)
ಮೈಕ್ರೊಸಾಫ್ಟ್ ಭಾರತಕ್ಕಾಗಿಯೇ ಒಂದು ಕಡಿಮೆ ಬೆಲೆಯ ವಿಂಡೋಸ್ ತಂತ್ರಾಂಶ ತರಲಿದೆ ಎಂದು [:http://news.yahoo.com/s/nm/20051001/tc_nm/india_microsoft_dc|ಯಾಹೂ ವರದಿ ಮಾಡಿದೆ]. ಹೊರದೇಶದಲ್ಲಿ ತುಟ್ಟಿಯಾದ ಪುಸ್ತಕಗಳು ಭಾರತದಲ್ಲಿ ಕಡೆಮೆ ಬೆಲೆಗೆ ಲಭ್ಯವಿರುವಂತೆ ಇದೂ ಕೂಡ ಎನ್ನುತ್ತದೆ, ವರದಿ.
ಈ ಕಡಿಮೆ ಬೆಲೆಯ ಆಪರೇಟಿಂಗ್ ಸಿಸ್ಟಮ್ ಇಂಗ್ಲೀಷ್ ಮತ್ತು ಹಿಂದಿ ಆವೃತ್ತಿಗಳಲ್ಲಿ ೧,೦೦೦ ರೂ ಗಳಿಗೆ ದೊರೆಯಲಿದೆಯಂತೆ.