ಕನ್ನಡಿಗನಾಗಿ ಹೆಮ್ಮೆ...

ಕನ್ನಡಿಗನಾಗಿ ಹೆಮ್ಮೆ...

ಬರಹ

ಕನ್ನಡ ಭಾಷೆಯ ಬಗ್ಗೆ

ಸುಮಾರು ೨೦೦೦ ವರ್ಷದ ಇತಿಹಾಸವುಳ್ಳ ಭಾರತದ ಮೂರನೇ ಅತೀ ಪ್ರಾಚೀನ ಭಾಷೆ ಕನ್ನಡ (ಸಂಸ್ಕೃತ ಮತ್ತು ತಮಿಳಿನ ನಂತರದ ಸ್ಥಾನ)

ವೈಜ್ಞಾನಿಕವಾಗಿಯೂ ಸುಸಂಬದ್ಧವಾಗಿಯೂ 99.99 % ಸಂಪೂರ್ಣ ಭಾಷೆ ಕನ್ನಡ

ಕನ್ನಡಿಗರು ೭ ಜ್ಞಾನ ಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ (ಹಿಂದಿ -೬ , ಮಲಯಾಳಮ್ ೩, ತೆಲುಗು - ೨, ತಮಿಳು ೨(೨೦೦೫ರಲ್ಲೊಂದು)

ಶ್ರೀ ವಿನೋಭಾ ಭಾವೆಯವರು ಕನ್ನಡವನ್ನು 'ವಿಶ್ವ ಲಿಪಿಗಳ ರಾಣಿ' ಎಂದಿದ್ದಾರೆ.

ಅಂತರಾಷ್ಟ್ರೀಯ ಭಾಷೆಯೆನಿಸಿಕೊಳ್ಳುವ ಇಂಗ್ಲಿಷ್ ತನ್ನದೇ ಆದ ಲಿಪಿಯನ್ನು ಹೊಂದಿಲ್ಲ.. ಬದಲಾಗಿ ರೋಮನ್ ಲಿಪಿಯನ್ನು ಉಪಯೋಗಿಸಲಾಗುತ್ತಿದೆ.

ರಾಷ್ಟ್ರೀಯ ಭಾಷೆಯಾದ ಹಿಂದಿಯೂ ದೇವನಾಗರಿ ಲಿಪಿಯನ್ನು ಬಳಸುತ್ತಿದೆ.

ಒಂದು ಹೇಳಿಕೆಯ ಪ್ರಕಾರ ತಮಿಳಿಗೆ ಲಿಪಿಯಿದ್ದರೂ ಅದು ಸಮರ್ಪಕವಾಗಿಲ್ಲ ಕೆಲವೊಂದು ಅಕ್ಷರಗಳನ್ನು ಕೆಲವೊಂದು ಸಂದರ್ಭಗಳಲ್ಲಿ ಬೇರೆ ಬೇರೆ ಉಛ್ಛಾರಗಳಿಂದ ನುಡಿಯಲಾಗುತ್ತಿದೆ.

ಅಮೋಘವರ್ಷ ನೃಪತುಂಗ 'ಕವಿರಾಜ ಮಾರ್ಗ'ವನ್ನು ಬರೆಯುವಾಗ ಹಿಂದಿ ಇನ್ನೂ ಹುಟ್ಟಿಲ್ಲ , ಇಂಗ್ಲಿಷ್ ಆಗಿನ್ನೂ ಶೈಶವಾವಸ್ಥೆಯಲ್ಲಿತ್ತು.

ವಿದೇಶೀಯನೊಬ್ಬ (ಕಿಟ್ಟೆಲ್) ಶಬ್ದಕೋಶವನ್ನು ರಚಿಸಿದ್ದು ಏಕೈಕ ಭಾರತೀಯ ಭಾಷೆಯಾದ ಕನ್ನಡಕ್ಕೆ

ಕುವೆಂಪುರವರು ಪಡೆದಷ್ಟು ಸಾಹಿತ್ಯಿಕ ಪ್ರಶಸ್ತಿಯನ್ನು ಬೇರೊಬ್ಬ ಬಾರತೀಯ ಪಡೆದಿಲ್ಲ

ಹೀಗೆ ಪಟ್ಟಿ ಮಾಡಿದರೆ ಎಣಿಕೆಗೆ ಸಿಗದಷ್ಟು ಬೆಳೆಯಬಹುದೇನೋ.. ಆದ್ದರಿಂದ ಕನ್ನಡಿಗನಾಗಿರುವುದಕ್ಕೆ ನಾವೆಲ್ಲರೂ ಹೆಮ್ಮೆ ಪಡೋಣ..

__________________
ಕನ್ನಡದ ಕುವರ : ಪ್ರಕಾಶ್ ಶೆಟ್ಟಿ ಉಳೆಪಾಡಿ