ಎಲ್ಲ ಪುಟಗಳು

ಲೇಖಕರು: hpn
ವಿಧ: ಚರ್ಚೆಯ ವಿಷಯ
November 03, 2005
'ಸಂಪದ'ದಲ್ಲಿ ಇಂದಿನಿಂದ [:http://sampada.net/tags|ಕಮ್ಯೂನಿಟಿ ಟ್ಯಾಗ್ಸ್ ಲಭ್ಯ]. ಹೆಚ್ಚು ಜನಪ್ರಿಯ ವರ್ಗಗಳನ್ನು ಜನಪ್ರಿಯತೆಗೆ ತಕ್ಕಂತೆ ದೊಡ್ಡ ಅಕ್ಷರಗಳಲ್ಲಿ ತೋರಿಸುವ ಈ ಪುಟ ನಿಮಗೆ ಸಂಪದವನ್ನು ಓದಲು, ಇದರಲ್ಲಿ ನಿಮಗಿಷ್ಟವಾದ ಲೇಖನಗಳನ್ನು ತಲುಪಲು ಸಹಾಯವಾಗುವುದೆಂದು ನಂಬುತ್ತೇನೆ. ******* ಸಂಪದದಲ್ಲಿ ಮತ್ತಷ್ಟು ಬದಲಾವಣೆಗಳನ್ನು ಮಾಡುತ್ತಿರುವೆ. ಇಂದು ಮತ್ತು ನಾಳೆ ನೀವು ಸಂಪದವನ್ನು ಓದುವಾಗ ಪುಟಗಳಲ್ಲಿ errors ಕಂಡುಬಂದಲ್ಲಿ ಪುಟವನ್ನು ರೆಫ್ರೆಶ್ ಮಾಡಿ ಅಥವಾ ಒಂದೆರಡು…
ಲೇಖಕರು: hpn
ವಿಧ: ಚರ್ಚೆಯ ವಿಷಯ
November 03, 2005
'ಸಂಪದ'ದ ಸದಸ್ಯರು ಇಂದಿನಿಂದ ತಾವು ನೋಡಿದ ಚಿತ್ರದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಬಹುದು. ಚಿತ್ರ ಯಾವುದೇ ಭಾಷೆಯದ್ದಾದರೂ ಆಗಿರಬಹುದು. ಆದರೆ ವಿಮರ್ಶೆ ಮಾತ್ರ ಕನ್ನಡದಲ್ಲಿರಲೇಬೇಕು :) ಚಿತ್ರಗಳ ವಿಮರ್ಶೆಯನ್ನು ಸೇರಿಸಲು: "Add Content to Sampada" -> "movie review" ಕ್ಲಿಕ್ಕಿಸಿ. ಹೀಗೆ ಸೇರಿಸಿದ ಚಿತ್ರ ವಿಮರ್ಶೆಗಳು ಪ್ರತ್ಯೇಕವಾಗಿ [:moviereview|ಒಂದು ಪುಟದಲ್ಲಿ] ಓದುಗರಿಗೆ ಲಭ್ಯವಾಗುವುದು. - ಹೆಚ್ ಪಿ
ಲೇಖಕರು: hpn
ವಿಧ: ಚರ್ಚೆಯ ವಿಷಯ
November 02, 2005
ಬೆಂಗಳೂರಿನಲ್ಲಿ ಇಂದಿನ ಕನ್ನಡದ ಪರಿಸ್ಥಿತಿಯನ್ನು ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ ಒಂದು ಚೆಂದವಾದ, ವಾಸ್ತವವನ್ನು ವಿವರಿಸುವ ಲೇಖನ ಪ್ರಕಟವಾಗಿದೆ... [:http://www.hindu.com/mp/2005/10/31/stories/2005103101640100.htm|ಓದಿ].
ಲೇಖಕರು: hpn
ವಿಧ: Basic page
November 01, 2005
ನಮ್ಮೆಲ್ಲರನ್ನು ಕನ್ನಡ ಪುಸ್ತಕಗಳನ್ನೋದುವಂತೆ ಮಾಡಿದ ತೇಜಸ್ವಿ ಇನ್ನಿಲ್ಲ. ಇವರ ನೆನಪಿನಲ್ಲಿ ಇವರೊಂದಿಗೆ ನಾವು ನಡೆಸಿದ ಸಂದರ್ಶನದ podcast, ಅದರಲ್ಲಿನ ಅವರ ಮಾತುಗಳನ್ನು ಸ್ಮರಣ ಸಂಚಿಕೆಯಾಗಿ ಮತ್ತೆ ಸದಸ್ಯರ ಮುಂದಿಡುತ್ತಿದ್ದೇವೆ. ಈ ಸಂದರ್ಶನ ನಡೆಸಿದ್ದು ೨೦೦೫ರಲ್ಲಿ. ತೇಜಸ್ವಿಯವರೊಂದಿಗಿನ ಸಂದರ್ಶನ ಸಂಪದದ ಮೊದಲ podcast ಕೂಡ ಆಗಿತ್ತು. ನಮಸ್ಕಾರ. ಸಂಪದದ ಸದಸ್ಯರೆಲ್ಲರಿಗೂ ದೀಪಾವಳಿ ಹಾಗೂ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಸಂಪದದಲ್ಲಿ podcasting ಪ್ರಾರಂಭ ಮಾಡಬೇಕೆಂದು…
ಲೇಖಕರು: hpn
ವಿಧ: ಚರ್ಚೆಯ ವಿಷಯ
November 01, 2005
ಹೋದ ವರ್ಷ ಕನ್ನಡ ರಾಜ್ಯೋತ್ಸವದಂದು ಬರೆದದ್ದು. ನಮ್ಮ ಮನೆಯ ಬಳಿ ಆಗ ನಡೆದ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಯಾರೋ ಬಳಸಿದ ಕನ್ನಡ ಹೀಗಿತ್ತು. :)
ಲೇಖಕರು: pavanaja
ವಿಧ: Basic page
October 31, 2005
(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ) ೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು? (ಕ) ತಮಿಳು (ಚ) ಇಂಗ್ಲಿಷ್ (ಟ) ಕಂಗ್ಲಿಷ್ (ತ) ಕನ್ನಡ (ಪ) ಎಲ್ಲವೂ ೨. ಕರ್ನಾಟಕವನ್ನು ಆಳುತ್ತಿರುವವರು ಯಾರು? (ಕ) ದೇವೇಗೌಡ (ಚ) ಮುಖ್ಯಮಂತ್ರಿ ಧರಮ್ ಸಿಂಗ್ (ಟ) ಐ.ಟಿ. ಲಾಬಿ (ತ) ಎಲ್ಲರೂ (ಪ) ಯಾರೂ ಅಲ್ಲ ೩. ಬೆಂಗಳೂರನ್ನು ಈಗ ಆಳುತ್ತಿರುವವರು ಯಾರು? (ಕ) ರಿಕ್ಷಾ ಚಾಲಕರು (ಚ) ತಮಿಳರು (ಟ) ಐ.ಟಿ. ದೊರೆಗಳು (ತ) ಎಲ್ಲರೂ (ಪ) ಯಾರೂ ಅಲ್ಲ ೪. ಕನ್ನಡ…
ಲೇಖಕರು: muralihr
ವಿಧ: Basic page
October 30, 2005
ಸ೦ಪದ ಬಳಗದ ಎಲ್ಲಾ ಮಿತ್ರರಿಗೂ ಈ ದೀಪಾವಳಿ ಬೆಳಕನ್ನು ತರಲಿ.... ಕೆ.ಎಸ್.ನರಸಿ೦ಹಸ್ವಾಮ ಈ ಕವನ ನಿಮ್ಮೊ೦ದಿಗೆ ಹ೦ಚಿ ಕೊಳ್ಳುವ ಆಸೆಯಾಯ್ತು. ಮುರಳಿ. ದೀಪಾವಳಿ ಹೂವು ಬಳ್ಳಿಗೆ ದೀಪ ಹಸಿರು ಬಯಲಿಗೆ ದೀಪ ಹುಲಿಯ ಕಣ್ಣಿನ ದೀಪ ಕಾಡಿನಲ್ಲಿ ! ಮುತ್ತು ಕಡಲಿಗೆ ದೀಪ ಹಕ್ಕಿ ಗಾಳಿಗೆ ದೀಪ ಗ್ರಹತಾರೆಗಳ ದೀಪ ಬಾನಿನಲ್ಲಿ. ಬಲ್ಮೆ ತೋಳಿಗೆ ದೀಪ ದುಡಿಮೆ ಬೆವರಿನ ದೀಪ ಸಹನೆ ಅನುಭವ ದೀಪ ಬದುಕಿನಲ್ಲಿ ! ಮುನಿಸು ಒಲವಿಗೆ ದೀಪ ಉಣಿಸು ಒಡಲಿಗೆ ದೀಪ ಕರುಣೆ ನ೦ದಾ ದೀಪ ಲೋಕದಲ್ಲಿ ತೋರಣನ ತಳಿರಲ್ಲಿ ಹೊಸಿಲ…
ಲೇಖಕರು: bigerck
ವಿಧ: ಚರ್ಚೆಯ ವಿಷಯ
October 29, 2005
ನಿಮ್ಮಯ ಮೆಚ್ಚಿನ ಕನ್ನಡ ಹಾಡುಗಳನ್ನು ಹುಡಿಕಿರಿ [:http://www.geocities.com/bigerck/] ನಿಮ್ಮಯ ಚಂದ್ರಶೇಖರ
ಲೇಖಕರು: hpn
ವಿಧ: ಚರ್ಚೆಯ ವಿಷಯ
October 28, 2005
ಸ್ವಲ್ಪ ಸೀರಿಯಸ್ ಆಗಿ ಕಾಣುವಂತೆ ಬರೆದದ್ದು. ಹ್ಯೂಮರ್ ಇಲ್ಲ, ಐರನಿ ಇದೆ. :) ಎಂದಿನಂತೆ, ಸಂಪೂರ್ಣವಾಗಿ ಕಂಪ್ಯೂಟರಿನಲ್ಲಿಯೇ ಗೀಚಿದ್ದು... ಉಪಯೋಗಿಸಿದ ಸಾಫ್ಟ್ವೇರ್ - ಇಂಕ್ಸ್ಕೇಪ್ ಮತ್ತು ಜಿಂಪ್.
ಲೇಖಕರು: bharath
ವಿಧ: ಬ್ಲಾಗ್ ಬರಹ
October 28, 2005
ಮೊದಲ ಬ್ಲಾಗ್ :) ೨೫ ಪದಗಳಿಲ್ಲದಿದ್ದರೆ ಸಂಪದ ಗಲಾಟೆ ಮಾಡುತ್ತಿದೆ. ಅದಕ್ಕೆಂದೆ ಎನ್ನಷ್ಟು, ಮತ್ತಷ್ಟು ಪದಗಳನ್ನು ಜೋಡಿಸಿ, ಪೋಣಿಸಿ ಬರೆಯುತ್ತಿದ್ದೇನೆ. ಇನ್ನೂ ೨೫ ಮುಟ್ಟಿಲ್ಲವೆ? ಅಯ್ಯೊ ಭಗವಂತ. :) ಕನ್ನಡವನ್ನು ಗಣಕದಲ್ಲಿ ಬರೆಯುವುದು ಕಷ್ಟ. ಆದರೆ ಬಹಳವಲ್ಲ. SCIM/m17n/Linux ಅನ್ನು ನಾನು ಬಳಸುತ್ತಿದ್ದೇನೆ. ಈ ಸಮಯದಲ್ಲಿ ನಾನು hpn ನನ್ನು ನೆನೆಯಬೇಕು. ಅವನು ಬಹಳ ಸಹಾಯ ಮಾಡಿದ್ದಾನೆ.