ಎಲ್ಲ ಪುಟಗಳು

ಲೇಖಕರು: hpn
ವಿಧ: ಚರ್ಚೆಯ ವಿಷಯ
October 12, 2005
ಪೆಪ್ಸಿ ಮತ್ತು ಕೊಕಾ ಕೋಲ ಗಳಲ್ಲಿ ಡಿಡಿಟಿ ಇದೆಯೆಂಬ ಸುದ್ದಿ ಹೊರಬಂದಾಗ ಬರೆದದ್ದು. ;)
ಲೇಖಕರು: olnswamy
ವಿಧ: Basic page
October 11, 2005
ಈಗ ನೀವು ಓದುತ್ತಿರುವ ಕತೆ ಹತ್ತೊಂಬತ್ತನೆಯ ಶತಮಾನದ್ದು. ಒಬ್ಬ ಹೆಂಗಸು ತನ್ನ ಗೆಳೆಯನಿಗೆ ಬರೆದ ಪತ್ರದ ರೂಪದಲ್ಲಿದೆ. ವಿವರಗಳನ್ನು ಆಮೇಲೆ ಹೇಳುತ್ತೇನೆ. ಗೆಳೆಯಾ, ನನ್ನ ಬದುಕಿನ ಸುಂದರ ನೆನಪುಗಳನ್ನು ಹೇಳುವಂತೆ ಕೇಳಿದ್ದೀಯ. ನನಗೀಗ ವಯಸ್ಸಾಗಿದೆ. ನಂಟರಿಲ್ಲ. ಮಕ್ಕಳೂ ಇಲ್ಲ. ನನ್ನ ನೆನಪುಗಳನ್ನು ಈಗ ನಿಜವಾಗಿ ಹೇಳಬಹುದು. ಆದರೆ ಹೆಸರುಗಳನ್ನು ಹೇಳುವ ಧೈರ್ಯವಿಲ್ಲ. ಎಲ್ಲರೂ ನನ್ನ ಬಗ್ಗೆ ಪ್ರೀತಿ ತೋರಿಸುತ್ತಿದ್ದರು. ಅದು ನಿನಗೂ ಗೊತ್ತು. ನೋಡುವುದಕ್ಕೆ ನಾನು ತುಂಬ ಚೆನ್ನಾಗಿದ್ದೆ.…
ಲೇಖಕರು: prakashaka
ವಿಧ: Basic page
October 11, 2005
ಯಾನ್ ಕೋಡೆ ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಮೆರೆನ ಒಂಜಿ ಬೂಕು ಓದಿಯೆ ಅಯಿಟ್ ಇತ್ತಿನ ಒಂಜಿ ಕವನ ಎಂಕ್ ಮಸ್ತ್ ಇಷ್ಟ ಆಂಡ್ ಎನ್ನ ಆಸೆ : ಎಂಕುಂಡು ಸಾರ ಸಾರ ಆಸೆ ಬಾನೊಡು ಪಕ್ಕಿಯಾದ್ ರಾಪುನ ಆಸೆ ದೇಶದ ಪ್ರಧಾನಿಯಾದ್ ಮೆರೆಪುನ ಆಸೆ ಭೂಮಿನೇ ಅಡಿಮೇಲ್ ಮಲ್ಪುನ ಆಸೆ ಆಂಡ ಅಪಗಪಗ ಎನ್ನುಂಡು ಎಂಕೇಪ ಪಾಡುವೆರಾ ದೇಸೆ ನನ್ನ ಆಸೆ ನನಗಿದೆ ಸಾವಿರ ಸಾವಿರ ಆಸೆ ಬಾನಲ್ಲಿ ಹಕ್ಕಿಯಾಗಿ ಹಾರುವ ಆಸೆ ದೇಶದ ಪ್ರಧಾನಿಯಾಗಿ ಮೆರೆಯುವ ಆಸೆ ಭೂಮಿಯನ್ನೇ ಬುಡಮೇಲು ಮಾಡುವಾಸೆ ಆದರೂ ಆವಾಗಾವಾಗ ಎಣಿಸುತ್ತದೆ…
ಲೇಖಕರು: pnag1003
ವಿಧ: ರುಚಿ
October 11, 2005
ಮೊದಲು ತರಕಾರಿ ಪಲ್ಯ- ಎಲ್ಲಾ ತರಕಾರಿಯನ್ನು ಮತ್ತೊಮ್ಮೆ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ ,ಅದಕ್ಕೆ ಉಪ್ಪು ಕಾರ ಒಗ್ಗರಣ್ಣೆ ಸೇರಿಸಿ ..ಬಾಣಲೆಯಿಂದ ಇಳಿಸಿ. ಬ್ರೆಡ್ ಸ್ಲೈಸ್ ನ ಹೊರ ಚರ್ಮ (ಗೋಲ್ದನ್ ಬ್ರೊವ್ನ ಭಾಗ)ತೆಗೆಯಿರಿ.ಬಿಳಿ ಭಾಗದ ಬ್ರೆಡ್ ಸ್ಲೈಸ್ ಅನ್ನು ಸ್ವಲ್ಪ ನೀರಿನಲ್ಲಿ ಅದ್ದಿ ತೆಗೆದು ಆ ತರಕಾರಿ ಪಲ್ಲ್ಯವನ್ನು ತುಂಬಿ .ಬೋಂಡದ ಅಕ್ರುತಿ ಮಾಡಿಕೊಳ್ಳೀ .ಅದನ್ನು ಬ್ರೆಡ್ ಪುಡಿಯಲ್ಲಿ ಉರುಳಿಸಿ ಕಂದು ಬಣ್ಣ ಬರುವರೆಗೂ ಎಣ್ಣೆಯಲ್ಲಿ ಕರೆಯಿರಿ.. ಬೊಂಡ ತಯಾರು.ಪುದಿನಾ ಚಟ್ನಿ…
ಲೇಖಕರು: muralihr
ವಿಧ: Basic page
October 11, 2005
ನಿತ್ಯ ಆತ್ಮ ಹತ್ಯೆ ನಾವು ನಿತ್ಯ ರಸ ಅ೦ದ್ಕೊ೦ಡೂ ಮಾಡೋ ಊಟ ರಸಾಯನ ಗೊಬ್ಬರ. ನಾವು ನಿತ್ಯ ಅವಸರದಲ್ಲಿ ಉಸಿರಾಡೋ ಗಾಳಿ ಧೂಳೂ. ನಾವು ನಿತ್ಯ ಯವಗಾದರೂ ಕುಡಿಯುವ ನೀರು ವಿಷ. ನಾವು ನಿತ್ಯ ಆಡೋ ಮಾತು ಬರೀ ಮಾತು ಮತ್ತೇನಿಲ್ಲಾ. ನಾವು ನಿತ್ಯ ಹತ್ತ್ತುಘ್೦ಟೆ ಮಾಡೋ ಕರ್ಮ ಶ್ರದ್ಧಾ ಶೂನ್ಯ .. ನಿತ್ಯ ಹತ್ಯೆ ನಡೆ ವುದಿಲ್ಲಿ ಸಾಮಾನ್ಯ ಹತ್ಯೆಯಲ್ಲವಿದು ಆತ್ಮಹತ್ಯೆ. ಪೊಲಿಸ್ ನವರೆಗೂ ಸುಳಿವ್ ಇಲ್ಲಾ... ರಕ್ತ ಚೂರಿ ಏನೂ ಇಲ್ಲಾ... ಆದರೆ ಅತೀ ಭಯ೦ಕರ ಹತ್ಯೆ ಆತ್ಮಹತ್ಯೆ.
ಲೇಖಕರು: hpn
ವಿಧ: ಚರ್ಚೆಯ ವಿಷಯ
October 11, 2005
ಸುಮಾರು ಎರಡು ವರ್ಷ ಹಿಂದೆ ಬರೆದದ್ದು. ಆಗ ನನ್ನ ಬಳಿ ಸ್ಕ್ಯಾನರ್ ಇರಲಿಲ್ಲ. ಸ್ನೇಹಿತನೊಬ್ಬನ ಮನೆಯಲ್ಲಿ ಸರ್ಕಸ್ ಮಾಡಿ ಸ್ಕ್ಯಾನ್ ಮಾಡಿದ್ದಾದ್ದರಿಂದ ನೀಲಿ ಬಣ್ಣದ ರೇಖೆಗಳೂ ಚಿತ್ರದೊಡನೆ ಸೇರಿಕೊಂಡು ಬಿಟ್ಟಿವೆ. :)
ಲೇಖಕರು: koumodiki
ವಿಧ: ಚರ್ಚೆಯ ವಿಷಯ
October 10, 2005
ಮೊನ್ನೆ ನಡೆದ ಸೂರ್ಯಗ್ರಹಣ ನನ್ನಲಿ ರಾಹು ಮತ್ತು ಕೇತುಗಳ ಬಗ್ಗೆ ಕುತೂಹಲ ಮೂಡಿಸಿತು. ರಾಹು ಮತ್ತು ಕೇತುಗಳೆಂದರೇನು? ಅವುಗಳು ಎಲ್ಲಿ ಇರುತ್ತವೆ? ಈ ಗ್ರಹಗಳು ಏಕೆ ಪ್ರಾಮುಖ್ಯತೆ ಪಡೆದವು? ಈ ಪ್ರಶ್ನೆಗಳಿಗೆ ನನಗೆ [:http://www.sanskrit.org/Astronomy/Rahu.html|ಈ ವೆಬ್-ಪುಟ] ಉತ್ತರ ಕೊಟ್ಟಿತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಲೇಖಕರು: prakashaka
ವಿಧ: ಚರ್ಚೆಯ ವಿಷಯ
October 10, 2005
ಕರಾವಳಿ ಜಿಲ್ಲೆಯಲ್ಲಿ ಪ್ರಚಲಿತವಿರುವ 'ತುಳು' ಭಾಷೆ ಈಗ ವಿಶ್ವದೆಲ್ಲೆಡೆ ಪಸರಿಸಿರುವ ತುಳುವರಿಂದಾಗಿ ಮಾನ್ಯತೆ ಪಡೆದಿದೆ. ಕರಾವಳಿಯಲ್ಲಿರುವ ಸಾಮಾನ್ಯ ಎಲ್ಲಾ ಪತ್ರಿಕೆಗಳಲ್ಲೂ ತುಳು ವಿಭಾಗವಿದೆ.. ಹಾಗೂ ನಾನು ನೋಡಿದಂತೆ.. ಮುಂಬಯಿಯ ಜನಪ್ರಿಯ ಪತ್ರಿಕೆ 'ಕರ್ನಾಟಕ ಮಲ್ಲ' ದಲ್ಲಿಯೂ ತುಳುವಿಗೆ ವಿಷೇಶ ಸ್ಥಾನವಿದೆ. ನನ್ನ ಪ್ರಶ್ನೆಯೇನೆಂದರೆ.. ಒಂದು ವೇಳೆ ತುಳು ಬರಹಗಾರರಿದ್ದಲ್ಲಿ.. ಅವರಿಗಾಗಿ ಸಂಪದದಲ್ಲಿ ಜಾಗವಿದೆಯೇ? ಸಂಪದ ಓದುಗರು ಇದನ್ನ ಸ್ವೀಕರಿಸುವಿರಾ? ತುಳುವಿಗೆ 'ಮಲಯಾಳ' ಸ್ವರೂಪದ…
ಲೇಖಕರು: tvsrinivas41
ವಿಧ: Basic page
October 10, 2005
ನೋಡಬನ್ನಿ ಅಣ್ಣೋರೇ ಅಕ್ಕೋರೇ ಎಲ್ಲೂ ನೋಡಲಾಗದ ನೋಡಿರದ ಕೈಲಾಸ ವೈಕುಂಠ ದೇವ ಲೋಕ ಮೂರು ಲೋಕಗಳನ್ನೆಲಾ ಒಂದೇ ಕಡೆ ಒಮ್ಮೆಲೇ ನೋಡುವ ಸೌಭಾಗ್ಯ ನಿಮ್ಮದಾಗಲಿ ಬನ್ನಿ ನಮ್ಮ ಕೈಲಾಸಪಾಳ್ಯಕ್ಕೆ ಇದಿರುವುದು ನನ್ನೂರ ಹೃದಯದಲಿ ಎಲ್ಲ ಖಾಸಗೀ ಬಸ್ಸುಗಳ ಸೌಲಭ್ಯದ ತಾಣ ಮೂಗಿರದವರಿಗೂ ಮೂಗು ಮುಚ್ಚಿಸುವ ದುರ್ಗಂಧದ ನಾಡು ಸೊಳ್ಳೆ ಹಂದಿ ನಾಯಿ ಕತ್ತೆ ಕೋತಿಗಳ ನೆಲೆವೀಡು ಮೊದಲಿಗೇ ನಿಮ್ಮ ಮೂಗಿಗೆ ಬಡಿವುದು ಘೌಸಿಯಾ ಹೊಟೆಲ್ಲಿನ ಅಮಲೇರಿಸುವ ವಾಸನೆ ಪ್ರದೀಪ ಸಿನೆಮಾದಲ್ಲಿನ ಅಶ್ಲೀಲ ಭಿತ್ತಿಪತ್ರ…
ಲೇಖಕರು: olnswamy
ವಿಧ: ಬ್ಲಾಗ್ ಬರಹ
October 08, 2005
ಹಾಯ್ಕು ಜಪಾನಿನ ಸಾಹಿತ್ಯದ ಒಂದು ವಿಶಿಷ್ಟ ಕವಿತಾ ರೂಪ. ಕೇವಲ ಹದಿನಾರು ಸಿಲಬಲ್ ಅಥವ ಅಕ್ಷರಗಳ ಜೋಡಣೆಯಲ್ಲಿ ಒಂದು ಮನೋಭಾವ-ಚಿತ್ರದ ನಿರೂಪಣೆ ಮಾಡುತ್ತವೆ ಹಾಯ್ಕುಗಳು. ಸಂಸ್ಕೃತದ ಅನುಷ್ಟುಭ್ ಎಂಬ ಒಂದು ಸಾಲಿಗೆ ಹದಿನಾರು ಅಕ್ಷರಗಳ ಛಂದಸ್ಸಿನಂತೆ ಇದು. ಆದರೆ ಸಂಸ್ಕೃತದ ಈ ಪ್ರಸಿದ್ಧ ಶ್ಲೋಕದಲ್ಲಿ ಹದಿನಾರು ಅಕ್ಷರಗಳ ಎರಡು ಸಾಲು ಇರುತ್ತವೆ, ಹಾಯ್ಕುಗಳಲ್ಲಿ ಒಟ್ಟಾಗಿ ಇರುವುದೇ ಹದಿನಾರು ಅಕ್ಷರ. ಅದನ್ನು ಅದೇ ರೂಪದಲ್ಲಿ ಕನ್ನಡಕ್ಕೆ, ಇಂಗ್ಲಿಷಿಗೂ ತರುವುದು ಕಷ್ಟ. ಸಾಧ್ಯವಾದಷ್ಟೂ ಮಿತವಾಗಿ…