ವಿಧ: ಬ್ಲಾಗ್ ಬರಹ
October 26, 2005
ಗೂಗ್ಲ್‌ನಲ್ಲಿ bendre ಎಂದು ಬೆರಳಚ್ಚು ಮಾಡಿ I am feeling lucky ಅಥವಾ ಕನ್ನಡ ಭಾಷೆಯ ಇಂಟರ್‌ಫೇಸ್ ಬಳಸುವವರಾದರೆ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿ ನೋಡಿದರೆ ದ ರಾ ಬೇಂದ್ರೆ ಅಲ್ಲ ಸೊನಾಲಿ ಬೇಂದ್ರೆ ಸಿಗುತ್ತಾಳೆ ಅಂಬ ಹಳೆಯ ಜೋಕು ನಿಮಗೆಲ್ಲ ಗೊತ್ತಿರಬೇಕು. ಇದನ್ನೇ ಸ್ವಲ್ಪ ಮುಂದುವರಿಸೋಣ ಎಂದು ಗೂಗ್ಲ್ ತೆರೆದೆ. ಕನ್ನಡ ಲಿಪಿಯಲ್ಲಿ (ಯುನಿಕೋಡ್) ಕೆಲವು ಪದಗಳನ್ನು ಬೆರಳಚ್ಚು ಮಾಡಿ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿದೆ. ಅದರ ಫಲಿತಾಂಶ ಇಲ್ಲಿದೆ-
ಹುಡುಕಿದ…
ವಿಧ: ಚರ್ಚೆಯ ವಿಷಯ
October 23, 2005
I am on Ubuntu hoary. This is related to kannada-unicode content display.
In firefox and mozilla, I see some characters being rendered in telugu script and some in kannada script.
I removed the Sampige.ttf that comes with ubuntu and installed the Sampige.ttf from the SALRC website. (I also ran fc-cache)
I don't understand the reason for this problem. Please help.
This happens with sampada.net…
ವಿಧ: Basic page
October 22, 2005
ಅದೊ೦ದು ರಾಷ್ಟ್ರೀಯ ಹೆದ್ದಾರಿ. ಕಣ್ಣು ಹಾಯುವವರೆಗೂ ಕಪ್ಪಗೆ, ಹೊಟ್ಟೆ ತು೦ಬಿ ಸಾಕಾದ ಹೆಬ್ಬಾವಿನ ಹಾಗೆ ಮಲಗಿತ್ತು. ದೂರದಿ೦ದ ನೋಡುವವರಿಗೆ ಆಚೆಯ ತುದಿ ಆಕಾಶದಲ್ಲಿ ತೂರಿಹೋಗಿದೇಯೇನೋ ಎ೦ಬ೦ತೆ ಭಾಸವಾಗುತ್ತಿತ್ತು. ದಾರಿಯ ಇಕ್ಕೆಡೆಗಳಲ್ಲಿ ಅಲ್ಲಲ್ಲಿ ಒ೦ದೊ೦ದು ಒಣಗಿದ ಮರಗಳು, ಎಲೆಯನ್ನೇ ಕಾಣದೆ ಬರಡಾಗಿದ್ದವು. ಆ ಮರಗಳ ಹಿ೦ದೆ ದೂರ ದೂರದವರೆಗೂ ಬರೀ ಬೆ೦ಗಾಡು, ಕರಕಲು, ಕುರುಚಲು ಗಿಡಗ೦ಟೆಗಳು, ಹಳ್ಳ - ದಿಣ್ಣೆಗಳು, ಹತ್ತಿರದಲ್ಲೆಲ್ಲೂ ಹಸಿರಿನ ಸುಳಿವಿರಲಿಲ್ಲ. ವರುಷಾನುಗಟ್ಟಲೆ ನೀರಿನ…
ವಿಧ: Basic page
October 21, 2005
ಅದೇನೋ ನಿಜ
ಮಹಡಿ ಮೆಟ್ಟಿಲನ್ನೇರಿ ಮೇಲೆ ನಿಂತವರಿಗೆ
ಎಲ್ಲಾ ಗೊತ್ತಾಗುತ್ತದೆ
ಎಲ್ಲಾ ಕಾಣುತ್ತದೆ
ನಮ್ಮ ಕತೆ ಬೇರೆ
ನಾವೋ ಸುಂದರ ಭವಿಷ್ಯದ ಒತ್ತೆಯಾಳುಗಳು
ಬೀದಿಯ ಕಸ ಗುಡಿಸುವವರು
ಮೆಟ್ಟಿಲನ್ನೇರಿದವರು ನಮ್ಮ ಕಣ್ಣಿಗೆ ಆಗಾಗ ಬೀಳುವರು
ಮಾತನಾಡಬೇಡವೆಂಬಂತೆ ತುಟಿಯ ಮೇಲೆ ಬೆರಳಿಟ್ಟುಕೊಂಡಿರುವರು
ನಮಗೋ ತಾಳ್ಮೆ ಹೆಚ್ಚು
ಭಾನವಾರ ಬಂದರೆ ಸಾಕು
ನಮ್ಮ ಹೆಂಡಿರು ಅಂಗಿಗೆ ತೇಪೆ ಹಾಕುತ್ತಾರೆ
ಈ ವಾರ ಸೀಮೆ ಎಣ್ಣೆ ಸಿಗುವುದೋ ಎಂದು ಪರದಾಡುತ್ತಾರೆ
ಉಪೇಂದ್ರ ರವಿಚಂದ್ರರ ಬಗ್ಗೆ ಕನಸು ಕಾಣುತ್ತಾರೆ…
ವಿಧ: Basic page
October 20, 2005
ಮುರಾರಿ ಬಲ್ಲಾಳ ನಮ್ಮ ನಾಡಿನ ಸಾ೦ಸ್ಕೃತಿಕ ಚಿ೦ತಕರು
ಈ ಭೂಮಿ ಯಾರಿಗೂ ಸೇರಿದ್ದಲ್ಲಾ -- -ಮುರಾರಿ ಬಲ್ಲಾಳ.
ಒ೦ದು ಮರವನ್ನು ನೀನು ಪ್ರೀತಿಸಬಲ್ಲೆಯಾದರೆ ಸಮಸ್ತ ಮಾನವ ಜನಾ೦ಗವನ್ನೇ ನೀನು ಪ್ರೀತಿಸುತ್ತಿಯಾ. ಒ೦ದು ಮರದ ಜತೆಗೆ ನಿನಗೆ ಸ೦ಬ೦ಧ ಸಾಧ್ಯವಿಲ್ಲದಿದ್ದರೆ, ಈ ವಿಶ್ವದ ಯಾವ ಸ೦ಗತಿಯ ಜತೆಯೂ ಸಹಜ ಸ೦ಬ೦ಧ ಸಾಧ್ಯವಿಲ್ಲ" ಎ೦ದೂ ಜೆ.ಕೃಷ್ಣಮೂರ್ತಿ ಹೇಳುತ್ತಾರೆ.
ಪ್ರಕೃತಿ ಒ೦ದು ಅಖ೦ಡವಾದ ಜೀವ೦ತ ಪ್ರಕ್ರಿಯೆ. ಅದು ಉಕ್ಕುತ್ತಾ ಹೊಳೆಯುತ್ತಾ, ಕ್ಷಣಕ್ಷಣಕ್ಕೂ ಬದಲಾಗುತ್ತಾ ತನ್ನ ಬಸಿರಿನ ಅನ೦ತ…
ವಿಧ: ಚರ್ಚೆಯ ವಿಷಯ
October 19, 2005
ನನ್ನೀ ಕಾರ್ಟೂನು ನೋಡಿ ಉಗೀಬೇಡಿ ಪ್ಲೀಸ್....
ವಿಧ: Basic page
October 18, 2005
ಅಜ್ಜ ಮುತ್ತಜ್ಜ ಅವರಜ್ಜರಿಗು
ಹೆಜ್ಜೆ ಹೆಜ್ಜೆಗು ಕಾಡಿ ಕನಲಿಸಿದ
ಕಜ್ಜಿಯ ಕಥೆಯಿದನಾಲಿಸಿ ಕೇಳಿರಿ ಜನರೆಲ್ಲ
ಅಜರುದ್ರಾದಿ ದೇವಗಳು
ಕಜ್ಜಿಯುಪಟಳದಿ ನೊಂದು
ಹೆಜ್ಜೇನು ಕಡಿದಂತಾಗಿರಬಹುದು ಹಿಂದಣಲಿ. ೧
ಇದು ಒಂದು ಕ್ರಿಮಿಸೂಕ್ಷ್ಮಾಣು
ಬದುಕುವದ ಕಲಿತಿಹುದು
ಮೇದು ಚರ್ಮದೊಂದು ಪದರ ಹಗಲಿರುಳು
ಪದರ ಪದರವಾಗಿಹ ಚರ್ಮದ
ಹದವಾಗಿಹ ಹೊರಪದರವದು
ಹಾದಿಯಾಗಿಹುದು ಅದರೋಟದಾಟಕೆ. ೨
ಉಣ್ಣೆಯ ಜಾತಿಗೆ ಸೇರಿಹುದು
ಕಣ್ಣಿಗೆ ಕಾಣಿಸದು ಸುಲಭದಲಿ
ಹೆಣ್ಣು ಗಂಡೆಂಬ ಭೇಧವಿರದದರೋಡಾಟಕೆ
ಬಣ್ಣ…
ವಿಧ: ಚರ್ಚೆಯ ವಿಷಯ
October 18, 2005
can anybody explain about SQL...
(I can read kannada,but m sorry I dont know how to write kannada in unicode)
ವಿಧ: Basic page
October 16, 2005
ಅಂದು
ಅಂದು ವಿಜಯದಶಮಿ
ಅಧರ್ಮವ ಹತ್ತಿಕ್ಕಿ ಧರ್ಮಕ್ಕೆ ಇಂಬು ಕೊಟ್ಟ ದಿನ
ಅದು ತ್ರೇತಾಯುಗ
ಶ್ರೀ ರಾಮ ಬಿಲ್ಲಿನ ಹುರಿಯೆಳದು
ರಾವಣನ ಸೊಲ್ಲು ತುಳಿದು
ವಿಭೀಷಣನ ಮೇಲೆಳೆದ ದಿನ
ಇಂದು
ಇಂದು ಕೂಡ ವಿಜಯದಶಮಿ
ಧರ್ಮದ ಸೊಲ್ಲಿಲ್ಲ, ಅಧರ್ಮದ ಹಾಹಾಕಾರ ಎಲ್ಲೆಲ್ಲು
ಇದು ಕಲಿಯುಗ
ಧರ್ಮಿಷ್ಠರ ಕಾಲೆಳೆದು
ದುಷ್ಟರ ಮೇಲೆಳೆದು
ನ್ಯಾಯ ನಿಷ್ಠುರತೆ, ಸತ್ಯ ಅಹಿಂಸೆಯ ತುಳಿವ ದಿನ.
ಧರ್ಮದ ಸೋಗು, ಅಧರ್ಮದ ಕೂಗು
ಸತ್ಯದ ಬೆನ್ನು ಬಾಗು, ಸುಳ್ಳಿಗೆ ಮೃಷ್ಟಾನ್ನದ ತೇಗು
ಅಹಿಂಸೆಯ ನೆಲ ಜವುಗು, ಹಿಂಸಾಚಾರದ ಜಿನುಗು…
ವಿಧ: ಚರ್ಚೆಯ ವಿಷಯ
October 16, 2005
ನಿನ್ನೆ ಮುಂಬೈಯಲ್ಲಿ ಅಮೃತಧಾರೆ ಚಿತ್ರ ವೀಕ್ಷಿಸಿದ ಕೊನೆಗೆ, ಸಬ್ ಟೈಟಲ್ಸ್ ಕ್ರೆಡಿಟ್ಸ್ ನಮ್ಮ ಬಳಗದ ಓಎಲ್ಎನ್ ರವರಿಗೆ ಎಂದು ತಿಳಿದು ಆಶ್ಚರ್ಯವೇನೂ ಆಗಲಿಲ್ಲ ಬದಲಿಗೆ, ಇದು ಅವರು ಅಧ್ಯಕ್ಷರಾಗಿರುವ ಭಾಷಾಂತರ ಅಕಾಡೆಮಿಯ assignment ಇರಬಹುದೇ ಎಂದು ಅನುಮಾನವುಂಟಾಯ್ತು....