ಭಾರತದ ಎನ್.ಜಿ.ಓಗಳು: ಕಾರ್ಯಕ್ಷೇತ್ರಗಳು

ಭಾರತದ ಎನ್.ಜಿ.ಓಗಳು: ಕಾರ್ಯಕ್ಷೇತ್ರಗಳು

ಮೊನ್ನೆ ನಮ್ಮ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿಧ್ಯಾರ್ಥಿ ಸಂಘ 'ಉತ್ಸವ - ೦೫' ಎಂಬ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿತು. ಅದರಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ಒಂದು ವಸ್ತುಪ್ರದರ್ಶನವಿತ್ತು. ಹೋದ ಬೇಸಿಗೆಯಲ್ಲಿ ಭಾರತದಲ್ಲಿ UNICEF ನಲ್ಲಿ ಕೆಲಸ ಮಾಡಿದ್ದಕ್ಕಾಗಿ, ಈ ಪ್ರದರ್ಶನದಲ್ಲಿ ನಮ್ಮ ದೇಶದ ಎನ್.ಜಿ.ಓಗಳ ಬಗ್ಗೆ ನಾನು ಮಾಹಿತಿ ಒದಗಿಸಿದೆ. ಅದರ ಸಂಕ್ಷಿಪ್ತ ವಿವರಣೆ ಇಲ್ಲಿದೆ. ನಾನು ಹೇಳಿದ್ದರಲ್ಲಿ ಯಾವುದಾದರೂ ಮೂಲಭೂತ ದೋಷಗಳಿದ್ದರೆ ಅಥವ ವಿಷಯಗಳು ಬಿಟ್ಟುಹೋಗಿದ್ದರೆ ಓದುಗರು ಖಂಡಿತ ತಿಳಿಸುವುದು.

೧. ಆರೋಗ್ಯ: ವೃದ್ಧಾಪ್ಯ, ದೈಹಿಕ/ಮಾನಸಿಕ ದೋಷಗಳು, ದೌರ್ಬಲ್ಯಗಳು, ಶುಚಿತ್ವ, ಏಡ್ಸ್, ಜನಸಂಖ್ಯಾ ಸ್ಫೋಟ, ನೈರ್ಮಲ್ಯ, infant mortality, ಸ್ರೀ-ಪುರುಷ ಲಿಂಗ ಪ್ರಮಾಣ ಹಾಗು ಅದರ ಮೇಲಿನ ಒತ್ತಡ
೨. ಬಾಲ್ಯ: ಪ್ರಾಥಮಿಕ ಶಿಕ್ಷಣ, ಪೌಷ್ಟಿಕ ಆಹಾರ, ಬಾಲ್ಯಕಾರ್ಮಿಕರು, ಮಕ್ಕಳ ಮೇಲಿನ ದೌರ್ಜನ್ಯ
೩. ಮಹಿಳೆ: ಸ್ತ್ರೀಶಕ್ತಿ, ಮಹಿಳಾ ಸಂಘಗಳು, ದೌರ್ಜನ್ಯ ತಡೆಯುವಿಕೆ, ಪೀಡಿತರಿಗೆ ಆಶ್ರಯ, ಸಾಮಾಜಿಕ ಬದಲಾವಣೆ
೪. ಶೈಕ್ಷಣಿಕ ವಿಷಯಗಳು: ಅನಕ್ಷರತೆ, ಸಾಕ್ಷರತೆಯ ಅನುಕೂಲಗಳ ಅರಿವು, ಶಿಕ್ಷಣದಲ್ಲಿ ಸುಧಾರಣೆ
೫. ಕೃಷಿ: bio-diversity/monoculture, ಸುಸ್ಥಿರ/ಸಾವಯವ ಕೃಷಿ, ಜೈವಿಕ ತಂತ್ರ‍ಜ್ಞಾನ, ಆಹಾರ ವಿತರಣೆ, ಬೀಜಗಳ ಮೇಲಿನ ಹಕ್ಕುಗಳು
೬.ಗ್ರಾಮೀಣಭಿವೃದ್ಧಿ: ಹಸಿವು, ಆರ್ಥಿಕ ಸುಧಾರಣೆಗಳು, ಭೂಸುಧಾರಣೆ, ಕಾರ್ಮಿಕರ ಶೋಷಣೆ,safety nets
೭.ನಗರದಲ್ಲಿ ಬಡತನ: ಕಾರ್ಮಿಕರ ಶೋಷಣೆ, ಕಾರ್ಮಿಕರ ವಲಸೆ, ಜನಸಂಖ್ಯಾ ಒತ್ತಡಗಳು, ನಗರದ ನೈರ್ಮಲ್ಯ
೮. ಪರಿಸರ: ಕಾರ್ಖಾನೆ, ಇಂಧನಗಳಿಂದ ಪರಿಸರ ಮಾಲಿನ್ಯ, ವನಸಂರಕ್ಷಣೆ, sustainability, industrialization, ಪರಿಸರದ ಮೇಲೆ ರಾಸಾಯನಿಕ ಪದಾರ್ಥಗಳ ಒತ್ತಡ, ಬೃಹತ್ ನೀರಾವರಿ ಯೋಜನೆಗಳ ಪರಿಣಾಮಗಳು
೯. ಪ್ರಾಕೃತಿಕ ವಿಕೋಪಗಳು ಮತ್ತಿತರ ಅನಾಹುತಗಳು: ಸಂಪನ್ಮೂಲ ಕ್ರೂಢೀಕರಣೆ/ಹಂಚಿಕೆ,ನಿರಾಶ್ರಿತರ ಸೇವೆ
೧೦. ಬುಡಕಟ್ಟುಗಳು ಮತ್ತು ಗಿರಿಜನ ಕಲ್ಯಾಣ: ಅನಕ್ಷರತೆ, ಆರ್ಥಿಕ ಅಭಿವೃದ್ಧಿ, relocation ಸಾಮಾಜಿಕ ವಿಷಯಗಳು
೧೧: ಸಾಮಾಜಿಕ, ಸಾಂಸ್ಕೃತಿಕ ವಿಷಯಗಳು: ಜಾಗತೀಕರಣ/ಪಾಶ್ಚಿಮಾತ್ಯ ಸಂಸ್ಕೃತಿಯ ಪರಿಣಾಮಗಳು, ಮತೀಯ ಗಲಭೆಗಳು, ಸಾಮಾಜಿಕ - ಆರ್ಥಿಕ - ಸಾಂಸ್ಕೃತಿಕ ಬದುಕುಗಳ ಕೊಂಡಿಗಳು.

Rating
No votes yet

Comments