ಖುಶಬೂ ಮಸಾಲೆ..
ಬರಹ
ಏರಿ ಹಾರುತಿಹುದು ತಮಿಳು
ಸೆರಗು ಲಂಗಪತಾಕೆ
ಖುಶಬೂ ಆಂಟಿ ಕಿತ್ತೊಗೆದಳು
ಸಂಕೋಚದ ಹಳೆ ರವಕೆ
ಯುವಜನತೆ ಕೆಚ್ಚಲ್ಲಿ
ಜಿಪ್ ಎಳೆದು ಹುಚ್ಚಲ್ಲಿ
ಖುಶಿಯಲ್ಲಿ ತಿರುಗಾಡಿ ಹಾಡಿ
ಕುಣಿಯುವ ಚೆಡ್ಡಿ ಲಾಡಿ
ಬೇಡ ಕಿರಿಕಿರಿ ಮದುವೆ
ನಮಗೆ ಜೀವನ ಇದುವೆ
ನಾಳೆ ಉದ್ಯೋಗದಂತೆ
ಇಲ್ಲೂ ಅನುಭವಿಗಳ ಸಂತೆ
ಆಧುನಿಕತೆಯ ಬಿರುಗಾಳಿ
ಸಂಸ್ಕೃತಿಯ ದಿವಾಳಿ
ಕಂಗಾಲು ಹಿರಿಯ ಮನೆಮಂದಿ
ನಾವೂ ನಾಯಿ ಬೆಕ್ಕು ಹಂದಿ!
- ಗೋಪೀನಾಥ ರಾವ್