ವಿಧ: ಚರ್ಚೆಯ ವಿಷಯ
September 24, 2005
namaskara..
ವಿಧ: Basic page
September 24, 2005
ಇಂಟರ್‌ನೆಟ್ ಮೂಲಕ ಹರಿದಾಡುವ ಇಮೈಲ್ ಜೋಕುಗಳಲ್ಲಿ ಟಾಪ್‌ಟೆನ್‌ಗಳು ಅತಿ ಜನಪ್ರಿಯ. ಉದಾಹರಣೆಗೆ ಹಿಂದಿ ಚಲನಚಿತ್ರಗಳ ಟಾಪ್‌ಟೆನ್ ಡೈಲಾಗುಗಳು. ಅವೇ ಮಾದರಿಯಲ್ಲಿ ಬೆಂಗಳೂರಿನ ಟಾಪ್‌ಟೆನ್ ಡೈಲಾಗುಗಳು ಇಲ್ಲಿವೆ.
1997ರ ಜುಲೈ ತಿಂಗಳು. ನಾನು ಮುಂಬಯಿಯಿಂದ ಬೆಂಗಳೂರಿಗೆ ಶಾಶ್ವತವಾಗಿ ಬಂದು ನೆಲೆಸಿ ಒಂದು ತಿಂಗಳಾಗಿತ್ತಷ್ಟೆ. ಒಂದು ದಿನ ನನಗೆ ಸತ್ಯನಾರಾಯಣ ಅವರಿಂದ ಫೋನ್ ಬಂತು. “ಸಾರ್, ನಿಮ್ಮ ಆಫೀಸ್ ಎಲ್ಲಿ ಬರುತ್ತೆ?”. ನಾನು ಮೊದಲೇ ಸ್ವಲ್ಪ ತರಲೆ. ಇಂತಹ ಅವಕಾಶ ಬಿಡುತ್ತೇನೆಯೇ? “ನಮ್ಮ…
ವಿಧ: ಬ್ಲಾಗ್ ಬರಹ
September 24, 2005
ಸಂಪದದಲ್ಲಿ ಸದಸ್ಯರಾಗಿರುವ [http://sampada.net/user/262|ಬೇಳೂರು ಸುದರ್ಶನ]ರನ್ನು ಲಕ್ನೋದ ಪ್ರತಾಪ ನಾರಾಯಣ ಮಿಶ್ರಾ ಸ್ಮಾರಕ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಇಂದಿನ (ಸಪ್ಟೆಂಬರ್ 24, 2005) [http://www.kannadaprabha.com/NewsItems.asp?ID=KPD20050923130652&Title=District+Page&lTitle=%C1%DBd%C0+%C8%DB%7D%E6%25&Topic=0&dName=%86%E6MV%DA%D7%DA%E0%C1%DA%DF&Dist=1|ಕನ್ನಡಪ್ರಭದಲ್ಲಿ] ಸುದ್ದಿ ಬಂದಿದೆ.…
ವಿಧ: Basic page
September 24, 2005
೬ ಸಾಗಿಸಿದ್ದು ಏನು?
ಮುಲ್ಲಾ ದಿನವೂ ತನ್ನ ಕತ್ತೆಯನ್ನು ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಒಣ ಹುಲ್ಲಿನ ಮೂಟೆಗಳಿರುತ್ತಿದ್ದವು. ಗಡಿಯ ಕಾವಲು ಕಾಯುವವರ ಬಳಿ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ನಿಜ ಹೇಳುತ್ತಿದ್ದ. ಅವರು ಮೂಟೆಯ ಹುಲ್ಲನ್ನೆಲ್ಲ ಪರೀಕ್ಷಿಸುತ್ತಿದ್ದರು. ಅವನನ್ನೂ ತಪಾಸಣೆ ಮಾಡುತ್ತಿದ್ದರು. ಏನೂ ಇರುತ್ತಿರಲಿಲ್ಲ. ಮುಲ್ಲಾ ತಾನು ಕಳ್ಳಸಾಗಾಣಿಕೆ ಮಾಡುತ್ತಿದ್ದೇನೆ ಎಂದು ಹೇಳುವುದನ್ನೂ ಬಿಡಲಿಲ್ಲ. ಕೆಲವೊಮ್ಮೆ ಹುಲ್ಲನ್ನು ನೀರಲ್ಲಿ ಮುಳುಗಿಸಿ,…
ವಿಧ: Basic page
September 23, 2005
ಬೆಳೆದಷ್ಟೂ ಮತ್ತೆ ಮತ್ತೆ ಬೆಳೆಯುವ ಹಂಬಲ
ಬೇರು ಕೆಳಗಿಳಿದಷ್ಟೂ ಹೆಚ್ಚುತಿದೆ ಮರಕೆ ಬಲ
ವನ್ಯರಾಶಿಯ ತೂಕ ಹೊತ್ತಿಹ ತಾಯಿ
ಅವಳ ತೂಕ, ಒಡಲ ಶಕ್ತಿ ಬಲ್ಲವರಾರು
ಮಾನವನ ಉಳುಮೆಗಾಗಿ ಮರಗಳ ಕಡಿಯುವ ಕಾಲ
ಎಂದಿಗೂ ಯಾರೂ ತಡೆಯಲಾಗದು ಈ ಜಾಲ
ಜಾಲದ ಮೋಸ ವಂಚನೆಗಳ ನೋಡಿಯೂ ನೋಡದಂತಿಹಳು
ಇವಳು ಒಮ್ಮೆ ಹೂಂಕರಿಸಲು ವಂಚಕರು ಉಳಿದಾರೇನು?
ತಾಯಿಯ ಮಡಿಲಲ್ಲಿಹರು ಬಗೆ ಬಗೆಯ ಮಕ್ಕಳು
ನಿಸರ್ಗ, ಗಣಿಗಳು, ಪ್ರಾಣಿ ಪಕ್ಷಿಗಳು
ಎಲ್ಲರಲು ಉದಯೋನ್ಮುಖ ಬೆಳವಣಿಗೆಯ ಕಾಣುತಿರಲು
ಒಡಲು ಬಿರಿಯುತಿರಲೂ ತಲೆ ಎತ್ತಿ…
ವಿಧ: Basic page
September 23, 2005
ಸಂಸಾರವೇ ಮೊಬೈಲು
ಸಂಸಾರವೆಂಬ ಮೊಬೈಲಿನಲ್ಲಿ ಗಂಡ ಸಿಮ್ಮು ಹೆಂಡತಿ ಕರೆನ್ಸಿ ಇವರಿಬ್ಬರ ರೀಚಾರ್ಜಿನಿಂದ ಗಂಡು ಹುಟ್ಟಿದರೆ ಇನ್ ಕಮ್ಮಿಂಗ್ ಹೆಣ್ಣು ಹುಟ್ಟಿದರೆ ಔಟ್ ಗೋಯಿಂಗ್
ಕಿನ್ನಿಗೋಳಿಯಲ್ಲಿ ನಡೆದ ದಕ್ಷಿನ ಕನ್ನಡ ಚುಟುಕ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿ ಬಂದ ಪ್ರಸನ್ನ ಸಚ್ಚೆರಿಪೇಟೆ ಅವರ ಈ ಚುಟುಕ ಎಷ್ಟೊಂದು ವಿಡಂಬನೆಯೊಂದಿಗೆ ಅರ್ಥವತ್ತಾಗಿದೆಯಲ್ಲವೇ?
ವಿಧ: Basic page
September 23, 2005
ಗೀತ ರಚನಕಾರರು: ಪುರಂದರದಾಸರು
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮ
ಹೆಜ್ಜೆಯ ಮೇಲೆ ಹೆಜ್ಜೆಯ ನಿಕ್ಕುತ,
ಗೆಜ್ಜೆಯ ಕಾಲ್ಗಳ ನಾದವ ತೋರುತ,
ಸಜ್ಜನ ಸಾಧು ಪೂಜೆಯ ವೇಳೆಗೆ,
ಮಜ್ಜಿಗೆಯೊಳಗಿನ ಬೆಣ್ಣೆಯಂತೆ,
ಭಾಗ್ಯದ ||
ಕನಕ ವೃಷ್ಟಿಯ ಕರೆಯುತ ಬಾರೇ,
ಮನ ಕಾಮನೆಯ ಸಿದ್ಧಿಯ ತೋರೇ,
ದಿನಕರ ಕೋಟಿ ತೇಜದಿ ಹೊಳೆವ,
ಜನಕ ರಾಯನ ಕುಮಾರಿ ಬಾರೇ,
ಭಾಗ್ಯದ ||
ಅತ್ತಿತ್ತಗಲದೆ ಭಕ್ತರ ಮನೆಯಲಿ,
ನಿತ್ಯ ಮಹೋತ್ಸವ ನಿತ್ಯ ಸುಮಂಗಲ ಸತ್ಯವ ತೋರುತ
ಸಾಧು ಸಜ್ಜನರ ಚಿತ್ತದಿ ಹೊಳೆವ…
ವಿಧ: ಬ್ಲಾಗ್ ಬರಹ
September 23, 2005
ಇವು ಅಲ್ಲಲ್ಲಿ ಕಿವಿಗೆ, ಕಣ್ಣಿಗೆ ಬಿದ್ದ ಮಾತಿನ ಹುರಿಗಾಳು. ಕಚಗುಳಿ ಇಡುತ್ತವೆ, ನಮ್ಮ ಪರಿಚಿತ ಕಲ್ಪನೆಗಳನ್ನು ಕೆಣಕುತ್ತವೆ, ಗೊತ್ತಿರುವ ಸಂಗತಿಗಳಿಗೆ ಹೊಸ ಡೆಫೆನಿಶನ್ ಕೊಡುತ್ತವೆ. ಇಷ್ಟವಾದರೆ ತಿಳಿಸಿ. ಆಗಾಗ ಇನ್ನಷ್ಟು ಹುರಿಗಾಳು ಸಪ್ಲೈ ಮಾಡುತ್ತೇನೆ.
1) ನನ್ನದು ಪರಿಶುದ್ಧವಾದ ಮನಸ್ಸು ಅನ್ನುವವರ ನೆನಪಿನ ಶಕ್ತಿ ದುರ್ಬಲವಾಗಿರುತ್ತದೆ.
2) ಪ್ರಬುದ್ಧ ವ್ಯಕ್ತಿ ಎಂದರೆ ಜವಾಬ್ದಾರಿಗಳಿಂದ ನರಳುತ್ತಿರುವ ವ್ಯಕ್ತಿ.
3) ಯಾರಿಂದ ಇನ್ನೂ ನೀವು ಇನ್ನೂ ಸಾಲ ಪಡೆದಿಲ್ಲವೋ ಅವನೇ ಆತ್ಮೀಯ…
ವಿಧ: Basic page
September 23, 2005
ಪತಂಜಲಿಯ ಯೋಗ ಅಂತಿಮ ಭಾಗ
ಕೊನೆಯ ಲೇಖನ
ಪತಂಜಲಿಯ ಯೋಗದ ಚತುರ್ಥ ಕೈವಲ್ಯಪಾದ
ನಿರಂತರವಾಗಿ ವೃತ್ತಿಗಳು ಏಳುವ ಸ್ಥಿತಿಯಿಂದ, ಮನಸ್ಸಿನಲ್ಲಿ ನಿರಂತರವಾಗಿ ಏಕಪ್ರಕಾರದ ವೃತ್ತಿ/ವೃತ್ತಿಗಳಿಂದ ಬರುವ ಜ್ಞಾನದ ಸ್ಥಿತಿಯನ್ನು ತಲುಪುದು ಹೇಗೆ ಎಂಬುದನ್ನು ವಿವರಿಸಿದ್ದಾಯಿತು. ಮನಸ್ಸಿನ ಏಕಪ್ರಕಾರದ ಬದಲಾವಣೆಯಿಂದ ಬದಲಾವಣೆ ಇಲ್ಲದ ಸ್ಥಿತಿಯನ್ನು ಹೊಂದುವುದೇ ಕೈವಲ್ಯ.
ಜನ್ಮ, ಔಷಧಿ, ಮಂತ್ರ, ತಪಸ್ಸು ಮತ್ತು ಸಮಾಧಿಯಿಂದ ಸಿಧ್ಧಿಗಳು ಹುಟ್ಟುತ್ತವೆ.ಯೋ.ಸೂ.ಪಾದ ೪. ಸೂತ್ರ.೧
ಧ್ಯಾನದಿಂದ ಹುಟ್ಟಿದವು…
ವಿಧ: ಚರ್ಚೆಯ ವಿಷಯ
September 23, 2005
ಹೆಚ್ ಆರ್ ಚಂದ್ರಶೇಖರರ ಪುಟದಲ್ಲಿ ನಿಮಗೆ ಭಾವಗೀತೆಗಳು, ಜಾನಪದ, ದಾಸರ ಕೃತಿಗಳು, ಸರ್ವಜ್ಞನ ವಚನಗಳೂ ಸೇರಿದಂತೆ ಮತ್ತು ಹಲವು [:http://www.missouri.edu/~physchan/kannada/kannada.html|ಸಂಗ್ರಹಗಳು ಓದಲು ಸಿಗುವುದು]. ಆದರೆ ಕನ್ನಡವಿರುವುದು ಚಿತ್ರದ ರೂಪದಲ್ಲಿ. :)