'ಸಂಪದ'ದ ಸದಸ್ಯರ ಸಂಖ್ಯೆ ಈಗ ೫೦೦!

'ಸಂಪದ'ದ ಸದಸ್ಯರ ಸಂಖ್ಯೆ ಈಗ ೫೦೦!

Comments

ಬರಹ

'ಸಂಪದ'ದಲ್ಲಿ ನೊಂದಾಯಿಸಿರುವ ಸದಸ್ಯರ ಸಂಖ್ಯೆ ಈಗ ೫೦೦ ತಲುಪಿದೆ :)

೫೦೦ನೇ ಸದಸ್ಯರಾದ [:http://sampada.net/user/500|ಅರುಣ್] ರವರಿಗೆ ದಾಖಲೆ ಸೃಷ್ಟಿಸಿದ್ದಕ್ಕಾಗಿ ಅಭಿನಂದಿಸೋಣ. ೫೦೦ ನೋಂದಣಿಗಳಾಗಲು ಕಾರಣರಾದ ಎಲ್ಲ ಸದಸ್ಯರಿಗೂ‌ ಅಭಿನಂದನೆಗಳು. 'ಸಂಪದ'ವನ್ನು ಅಂತರಜಾಲದ ಅತಿದೊಡ್ಡ ಸಾಹಿತ್ಯ, ಬರವಣಿಗೆಗಳಿಗಾಗಿಯೇ ಮುಡುಪಾಗಿಟ್ಟ ಅಚ್ಚ ಕನ್ನಡದ ಸಮುದಾಯವನ್ನಾಗಿಸಿದ್ದೀರಿ ;)

ನಮ್ಮ ಕನ್ನಡಿಗರಿಗಿರುವ ಕನ್ನಡ ಬರವಣಿಗೆ ಹವ್ಯಾಸವನ್ನು ಲೆಕ್ಕ ಹಾಕಿದರೆ ಇಷ್ಟರ ಮಟ್ಟಿಗೆ ಸಂಪದ ಬೆಳೆದಿರುವುದು ಅಚ್ಚರಿಯ ಸಂಗತಿಯೆಂದೇ ಹೇಳಬಹುದು (ಇದರಲ್ಲಿ ಸಂಪದದಲ್ಲಿರುವ ಕನ್ನಡ ಸಾಹಿತ್ಯ ಪ್ರೇಮಿಗಳ ಪಾತ್ರ ಬಹುದೊಡ್ಡದು).

ಈ ಸಂದರ್ಭದಲ್ಲಿ 'ಸಂಪದ'ದಲ್ಲಾಗಲಿರುವ ಹಲವು ಬದಲಾವಣೆಗಳ ಬಗ್ಗೆ ಮುಂಚೆಯೇ ತಿಳಿಸಲು ಬಯಸುತ್ತೇನೆ. ನೀವೂ ಸಂಪದದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, 'ಸಂಪದ'ದಲ್ಲಿ "ಇದು ಬದಲಾಗಬೇಕು" ಎಂದು ಯಾವುದರ ಬಗ್ಗೆಯಾದರೂ ಅನಿಸಿಕೆ ಇದ್ದರೆ ತಪ್ಪದೆ ನಮಗೆ ತಿಳಿಸಿ. ಸಲಹೆ ಸರಿಯೆನಿಸಿದರೆ ಖಂಡಿತ ಅದನ್ನು ಜಾರಿಗೆ ತರುವೆವು.

ಧನ್ಯವಾದಗಳು!

- ಹೆಚ್ ಪಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet